ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 13/03/2022 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಕುಂದಾಪುರ ತಾಲೂಕು, ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್‌‌ ಬಳಿ NH 66 ರಸ್ತೆಯಲ್ಲಿ, ಆಪಾದಿತ ಮಂಜುನಾಥ ಪುಜೇರ್‌ ಎಂಬವರು KA-03-C-9023ನೇ ಟಿಪ್ಪರ್‌ ಲಾರಿಯನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಶರತ್‌ ಕುಮಾರ್‌ ಶಟ್ಟಿ (45) ತಂದೆ ಗೋವಿಂದ ಶೆಟ್ಟಿ ವಾಸ: ರಾಗಿಹಕ್ಲು, ಹೆರೂರು ಗ್ರಾಮ, ಬೈಂದೂರು ತಾಲೂಕು ರವರು KA-05-HZ-9875 ನೇ ಹೊಂಡಾ ಆಕ್ವಿವ್‌ ಮೋಟಾರ್ ಸೈಕಲ್‌ ನಲ್ಲಿ ಅವರ ಪತ್ನಿ ಶ್ರೀಮತಿ ಜ್ಯೋತಿ 35 ವರ್ಷ ಹಾಗೂ ಮಗಳಾದ 7 ವರ್ಷದ ಸನ್ನಿಧಿಳನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸದ್ರಿ ಮೋಟಾರ್‌ ಸೈಕಲ್‌‌ ಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಜ್ಯೋತಿಯವರ ಹೊಟ್ಟೆಯ ಮೇಲೆ ಟಿಪ್ಪರ್‌ ಲಾರಿಯ ಚಕ್ರ ಹಾದು ಹೋಗಿ ಸ್ಥಳದಲ್ಲಿಯೇ ಮೃಪಟ್ಟಿದ್ದು, ಹಾಗೂ ಸನ್ನಿಧಿಳಿಗೆ ಬಲ ಕೈಗೆ ತರಚಿದ ಗಾಯವಾಗಿ ಕುಂದಾಪುರ ನ್ಯೂ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು. ಆಪಾದಿತನು ಅಪಘಾತ ಸ್ಥಳದಿಂದ ಓಡಿ ಹೋಗಿ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 37/2022 ಕಲಂ: 279, 337, 304 (ಎ) ಐಪಿಸಿ. & 134 (A) & (B) R/W 187 IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 12/03/2022 ರಂದು ಪಿರ್ಯಾದಿದಾರರಾದ ಅಬ್ದುಲ್ ರಹೀಮ್, (58), ತಂದೆ: ದಿ. ಮೊಹಮ್ಮದ್ ಇಬ್ರಾಹಿಂ, ವಾಸ: ರುಬ್ನಾ ಕೋಟೇಜ್, 2 ನೇ ಎಮ್.ಐ.ಜಿ, ಹುಡ್ಕೋ ಕಾಲೋನಿ, ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ಇವರು KA-20 X- 6315 ನೇ ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ತಾಲೂಕು ಕಛೇರಿ ಜಂಕ್ಷನ್ ಕಡೆಯಿಂದ ಬಂಗ್ಲೆಗುಡ್ಡೆ ಹೋಗುವ ರಸ್ತೆಯಲ್ಲಿ ಬಂಗ್ಲೆಗುಡ್ಡೆ ಕಡೆಗೆ ಸವಾರಿ ಮಾಡಿಕೊಂಡು ಹೋಗಿ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಬಂಗ್ಲೆಗುಡ್ಡೆ ಜಂಕ್ಷನ್ ಸಮೀಪ ರಸ್ತೆ ಎಡ ಬದಿಯಲ್ಲಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿಕೊಂಡು ಪಿರ್ಯಾದಿದಾರರ ಪರಿಚಯದ ನಜೀರ್ ಎಂಬುವವರೊಂದಿಗೆ ಮಾತನಾಡುತ್ತಿರುವಾಗ ಪಿರ್ಯಾದಿದಾರರ ಹಿಂಬದಿ ಅಂದರೆ ತಾಲೂಕು ಜಂಕ್ಷನ್ ಕಡೆಯಿಂದ ಬಂಗ್ಲೆಗುಡ್ಡೆ ಜಂಕ್ಷನ್ ಕಡೆಗೆ KA-05 MC-9865 ನೇ ನೊಂದಣಿ ಸಂಖ್ಯೆಯ ಮಾರುತಿ ಕಂಪೆನಿ ತಯಾರಿಕೆಯ ಸ್ವಿಪ್ಟ್ ಕಾರಿನ ಚಾಲಕ ಶಿವರಾಮ ನಾಯಕ್ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ನಿಲ್ಲಿಸಿಕೊಂಡು ಮಾತನಾಡುತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿಚಕ್ರ ವಾಹನ ಸಮೇತ ಮಗುಚಿ ಬಿದ್ದಿದ್ದು ಪಿರ್ಯಾದಿದಾರರ ಎಡಕೈ ಮೂಳೆ ಮುರಿತಗೊಂಡಿದ್ದು, ಎಡಕಾಲು ಪಾದಕ್ಕೆ ತರಚಿದ ಗಾಯ ಹಾಗೂ ಬೆನ್ನಿಗೆ ಗುದ್ದಿದ ಒಳ ಜಖಂ ಆಗಿರುತ್ತದೆ. ಬಳಿಕ ಕಾರಿನ ಚಾಲಕ ಶಿವರಾಮ ನಾಯಕ್ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಸಿಟಿ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಬಂದು ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 35/2022 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಸುರೇಶ ದೇವಾಡಿಗ (31) ತಂದೆ: ಬಾಬು ದೇವಾಡಿಗ ವಾಸ:ಕಕ್ಕುಂಜೆ ಶಾಲೆಯ ಹತ್ತಿರ ಬ್ರಹ್ಮಾವರ ತಾಲೂಕು ಇವರು ರಿಕ್ಷಾ ಚಾಲಕರಾಗಿದ್ದು, ಅವರು ದಿನಾಂಕ 12/03/2022 ರಂದು ಸಂಜೆ ಸಮಯ ರಿಕ್ಷಾ ಬಾಡಿಗೆ ಮುಗಿಸಿ ವಾಪಾಸು ಕಕ್ಕುಂಜೆ - ಗಾವಳಿ ರಸ್ತೆಯಲ್ಲಿ ಕಕ್ಕುಂಜೆ ಕಡೆಯಿಂದ ಗಾವಳಿ ಕಡೆಗೆ ಹೋಗುತ್ತಿರುವಾಗ ಅವರ ಮುಂದೆ ಅದೇ ರಸ್ತೆಯಲ್ಲಿ ಗಾವಳಿ ಕಡೆಗೆ KA-20 EL-3500 ನೇ ಸ್ಕೂಟಿಯಲ್ಲಿ ರವೀಂದ್ರ ಶೆಟ್ಟಿ ಎಂಬವರು ತಮ್ಮ ಹಿಂಬದಿ ತನ್ನ ತಾಯಿ ಶ್ರೀಮತಿ. ಪಾರ್ವತಿ ಶೆಡ್ತಿ ಎಂಬವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದು ಸಂಜೆ 4 ಗಂಟೆಗೆ ಅವರು ಮಕ್ಕಿಮನೆ ಎಂಬಲ್ಲಿ ತಲುಪುವಾಗ ಆ ಸವಾರನು ಎತ್ತರವಾಗಿರುವ ರಸ್ತೆಯಲ್ಲಿ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಹಿಂಬದಿ ಕುಳಿತಿದ್ದ ಪಾರ್ವತಿ ಶೆಡ್ತಿ ರವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ತದನಂತರ ಸ್ಕೂಟಿ ಸವಾರನೂ ಕೂಡಾ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಅಪಘಾತದಲ್ಲಿ ಸ್ಕೂಟಿ ಸವಾರನಿಗೆ ಸಣ್ಣ ಪುಟ್ಟ ಒಳನೋವು ಆಗಿದ್ದು, ಹಿಂಬದಿ ಸವಾರಿಣಿ ಪಾರ್ವತಿ ಶೆಡ್ತಿ ರವರ ಬಲತೊಡೆಗೆ ತೀವ್ರ ಒಳನೋವು ಆಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ ಸ್ಕೂಟಿ ಸವಾರ ರವೀಂದ್ರ ಶೆಟ್ಟಿ ರವರ ಅತೀವೇಗ ಹಾಗೂ ಅಜಾಗರೂಕತೆಯ ಸ್ಕೂಟಿ ಸವಾರಿಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 33/2022 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರಕಾಶ್ (36) ತಂದೆ: ದಿ|| ಸೋಮ ವಾಸ: ಪ್ರಾಥಮಿಕ ಶಾಲೆಯ ಬಳಿ ಕೆಳರ್ಕಾಳ ಬೆಟ್ಟು , ತೆಂಕನಿಡಿಯೂರು ಗ್ರಾಮ ಉಡುಪಿ ಇವರು ದಿನಾಂಕ 13/03/2022 ರಂದು ತನ್ನ ಕೆಎ-20 ಇಎನ್-4956 ನೇ ಎಕ್ಟಿವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಸಹ ಸವಾರನ್ನಳಾಗಿ ಕುಸುಮ ಎಂಬವರನ್ನು ಕುಳ್ಳಿರಿಸಿಕೊಂಡು ಹೆಬ್ರಿಯ ಶಿವಪುರದಿಂದ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ಹೋಗುತ್ತಿರುವಾಗ ಸಮಯ ಸುಮಾರು 12:50 ಗಂಟೆಗೆ ಹಿರಿಯಡ್ಕದ ಓಯಸಿಸ್ ಬಿಲ್ಡಿಂಗ್ ಎಂದುರ ರಾ.ಹೆ 169( ಎ) ತಲುಪುವಾಗ  ತನ್ನ ಎದುರಿನಿಂದ ಹಿರಿಯಡ್ಕ ಕಡೆಯಿಂದ ಉಡುಪಿ ಕಡೆಗೆ  ಹೋಗುವ ಬಸ್ ನಿಂತಿದ್ದು, ಪ್ರಕಾಶ್‌ ಇವರು ರಸ್ತೆಯ ಬಲಬದಿಗೆ ತಿರುಗಿ ಹೋಗಲು ಅನುವಾದಾಗ ಅತ್ರಾಡಿ ಕಡೆಯಿಂದ ಕಾರು ನಂಬ್ರ KA-20 MA-6862 ನೇದರ ಚಾಲಕ ಒಮ್ಮೇಲೆ ರಸ್ತೆಯ ಎಡಕ್ಕೆ ತಿರುಗಿಸಿದ ಪರಿಣಾಮ ಕಾರಿನ ಬಲಬದಿ ಸ್ಕೂಟಿಗೆ ತಾಗಿ ಇವರು ಹಾಗೂ ಸಹಸವಾರಳು ರಸ್ತೆಗೆ ಬಿದ್ದು ಸದಾಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ ೦9/2022 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀನಿಧಿ (22), ತಂದೆ: ಶಿವಾನಂದ ಆಚಾರ್ಯ, ವಾಸ: ನೀರ್ಕೆರೆ ಪೋಸ್ಟ್, ಮೂಡುಮಠ, ಉಳ್ಳೂರು 11 ನೇ ಗ್ರಾಮ, ಬೈಂದೂರು ಇವರು ದಿನಾಂಕ 12/03/2022 ರಂದು ತನ್ನ ತಂದೆಯ KA-20 MA-7300 ನೇ ಹುಂಡೈ ಕಾರಿನಲ್ಲಿ ಅರ್ಜುನ್ ಶೆಟ್ಟಿಯವರನ್ನು ಕುಳ್ಳಿರಿಸಿಕೊಂಡು ಕುಂದಾಪುರಕ್ಕೆ ಹೋಗಿದ್ದು ಕೆಲಸ ಮುಗಿಸಿ ವಾಪಾಸು ಕುಂದಾಪುರದಿಂದ ಅರೆಹೊಳೆ ಬೈಪಾಸ್ ಕಡೆಗೆ ರಾ.ಹೆ 66 ರಸ್ತೆಯಲ್ಲಿ ಬರುತ್ತಿರುವಾಗ ದಿನಾಂಕ 13/03/2022 ರಂದು ಬೆಳಗಿನ ಜಾವ 2:30 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಬೀಚ್ ಬಳಿ ತಲುಪುವಾಗ ಮುಂದಿನಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಲಾರಿ ನಂಬ್ರ KA-01 AL-2516   ನೇದನ್ನು  ಅದರ ಚಾಲಕ ರಾಬಿನ್ ಮ್ಯಾಥ್ಯೂ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೆಲೇ ಬಲಕ್ಕೆ ಚಲಾಯಿಸಿದಾಗ ಲಾರಿಯ ಹಿಂಭಾಗವು ಕಾರಿಗೆ ಡಿಕ್ಕಿ ಹೊಡೆದ  ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 23/2022 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ ಶ್ರೀಮತಿ ದೀಪಾ ಮೊಗವೀರ (35), ಗಂಡ: ಗಂಗಾಧರ, ವಾಸ: ದೊಡ್ಡಹಿತ್ಲು, ಬಂದರ್ ಗಂಗೊಳ್ಳಿ ಇವರ ತಮ್ಮ ಪ್ರದೀಪ್ (32) ರವರು ದಿನಾಂಕ 12/03/2022 ರಂದು ರಾತ್ರಿ 8:00 ಗಂಟೆ ಸಮಯಕ್ಕೆ ಮನೆಯಿಂದ ಗಾಳ ಹಿಡಿದುಕೊಂಡು ಮೀನು ಹಿಡಿಯುವ ಬಗ್ಗೆ ಗಂಗೊಳ್ಳಿ ಬಂದರಿಗೆ ಹೋಗಿದ್ದು ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಬಂದರಿನ ಬೋಟ್ ನಿಲ್ಲಿಸುವ ಸ್ಥಳದಲ್ಲಿ ಪಂಚ ಗಂಗಾವಳಿ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿರುವಾಗ ರಾತ್ರಿ ಸಮಯ ಸುಮಾರು ರಾತ್ರಿ 9:15 ಗಂಟೆಗೆ ದೋಣಿಯಿಂದ ಆಯತಪ್ಪಿ ಹೊಳೆಯ ನೀರಿಗೆ ಬಿದ್ದಿರುವುದಾಗಿ ಫಿರ್ಯಾದಿದಾರರಿಗೆ ವರ್ತಮಾನ ಬಂದಂತೆ ಫಿರ್ಯಾದಿದಾರರು ಹೊಳೆಯ ಬದಿಗೆ ಹೋದಾಗ ಮುಳುಗು ತಜ್ಞರು ನೀರಿನಲ್ಲಿ ಮುಳುಗಿ ಪ್ರದೀಪ್ ನನ್ನು ಮೇಲಕ್ಕೆ ಎತ್ತಿದ್ದು ನೋಡಲಾಗಿ ಪ್ರದೀಪನು ಮೃತಪಟ್ಟಿರುವುದಾಗಿದೆ. ಪ್ರದೀಪನು ಪಂಚಗಂಗಾವಳಿ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವಾಗ ಆಕಸ್ಮಿಕವಾಗಿಆಯತಪ್ಪಿ ದೋಣಿಯಿಂದ ಹೊಳೆಯ ನೀರಿಗೆಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಯು ಡಿ ಆರ್ ಕ್ರಮಾಂಕ 04/2022 ಕಲಂ: 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾಧ ಸಂದೇಶ (25) ತಂದೆ: ಶ್ರೀಧರ ಆಚಾರ್ಯ ವಾಸ: ಶಾಂತಿನಗರ ಮಧುವನ, ಕಾವಡಿ  ಗ್ರಾಮ ಬ್ರಹ್ಮಾವರ ಇವರ ತಂಗಿ ಸ್ವಾತಿ (22),ಇವರು ಪದವಿ ವಿಧ್ಯಾಭ್ಯಾಸ ಮುಗಿಸಿ ಎರಡು ತಿಂಗಳಿನಿಂದ ಬ್ರಹ್ಮಾವರದ ಪ್ರಭಾತ್ ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಬ್ರಹ್ಮಾವರದ ದೊಡ್ಡಮ್ಮನ ಮನೆಯಲ್ಲಿಯೇ ಉಳಿದುಕೊಂಡು ಶನಿವಾರ ಮನೆಗೆ ಬರುತ್ತಿದ್ದಳು  ದಿನಾಂಕ 12/03/2022 ರಂದು ಸಂಜೆ ಮನೆಗೆ ಬಂದಿದ್ದು ರಾತ್ರಿ ಊಟ ಮಾಡಿ 11:00 ಗಂಟೆಗೆ ಮನೆಯಲ್ಲಿ ಎಲ್ಲರೂ ಮಲಗಿರುತ್ತೇವೆ. ದಿನಾಂಕ 13/03/2022 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿದಾರರ ಅಮ್ಮ  ಸುಲೋಚನಾ ಎದ್ದು ಹೊರಗೆ ಬಂದು ನೋಡುವಾಗ ಸ್ವಾತಿ ಮನೆಯ ಎದುರಿನ ಪೇರಳೆ ಮರಕ್ಕೆ ಚೂಡಿದಾರ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಸ್ವಾತಿಯೂ ಮನೆಯಲ್ಲಿದ್ದ ಸಣ್ಣಪುಟ್ಟ ಸಮಸ್ಯೆಗಳಿಗೆ  ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 12/03/2022 ರ ರಾತ್ರಿ 11:00 ಗಂಟೆಯಿಂದ ದಿನಾಂಕ 13/03/2022 ರ ಬೆಳಿಗ್ಗೆ 06:00 ಗಂಟೆ ಮಧ್ಯಾವಧಿಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಯು ಡಿ ಆರ್ ಕ್ರಮಾಂಕ 10/2022 ಕಲಂ: 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶಮಂತ್ ಜೆ.ಎಂ, (37), ತಂದೆ :ಮಂಜುನಾಥ ಜೆ.ಎಂ ವಾಸ: ಮನೆ ನಂಬ್ರ 5-2-66B1 ಕೊಳಂಬೆ ಮೇನ್ ರಸ್ತೆ, 76 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ವಾಸವಿರುವ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಕೊಳಂಬೆ ಎಂಬಲ್ಲಿರುವ ಮನೆಗೆ ಯಾರೋ ಕಳ್ಳರು  ದಿನಾಂಕ 12/03/2022 ರಂದು ಮಧ್ಯಾಹ್ನ ಸಮಯ 3:00 ಗಂಟೆಯಿಂದ ದಿನಾಂಕ: 13/03/2022ರ ಬೆಳಿಗ್ಗೆ 09:30 ಗಂಟೆಯ ಮಧ್ಯಾವದಿಯಲ್ಲಿ ಇವರು ತನ್ನ ಹೆಂಡತಿ ಮಗನೊಂದಿಗೆ  ಅಂಪಾರಿಗೆ ಹೋಗಿದ್ದು, ಮನೆಯ ಮೇಲಂತಸ್ತಿನ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ  ಮನೆಯ ಮೇಲಂತಸ್ತಿನ ಬೆಡ್ ರೂಂನಲ್ಲಿಟ್ಟಿದ್ದ ನಗದು 25000/- ರೂಪಾಯಿ ಹಣ ಹಾಗೂಕೆಳ ಅಂತಸ್ತಿನ ಒಂದು ಬೆಡ್‌ರೂಂನಲ್ಲಿಟ್ಟಿದ್ದ ಬೆಳ್ಳಿ ಆರತಿ-1, ಸಣ್ಣ ಬೆಳ್ಳಿ ದೀಪದ ಕಂಬ-2, ಸಣ್ಣ ಬೆಳ್ಳಿ ತಟ್ಟೆ-1 ಅರಿಶಿನ ಕುಂಕುಮ ಬಟ್ಟಲು-2, ನಗದು ಹಣ-6000/-,  ಹಳೆಯ ಮೊಬೈಲ್-2, ಟೈಟಾನ್ ವಾಚ್-1, ಕರ್ನಾಟಕ ಬ್ಯಾಂಕ್ ಲಾಕರ್ ಕೀ-1, ಕೆನರಾ ಬ್ಯಾಂಕ್ ಲಾಕರ್ ಕೀ-1, ನಗದುಹಣ ಸೇರಿ ಇದರ ಮೌಲ್ಯ 45000/- ಆಗಿದ್ದು, ಮೇಲಿನ ಸ್ವತ್ತುಗಳಿದ್ದ ಲಾಕರ್ ನ್ನು ಮತ್ತು ಇನ್ನೊಂದು ಬೆಡ್‌ರೂಂನಲ್ಲಿಟ್ಟಿದ್ದ ನಗದು ಹಣ 10,000/-,ಬೆಳ್ಳಿ ನೇವಳ-2, ಬೆಳ್ಳಿ ಕಡಗ-2, ಬೆಳ್ಳಿ ಅರಿಶಿನ ಕುಂಕುಮ ಬಟ್ಟಲು-3,Fossil ಕಂಪೆನಿಯ ವಾಚ್‌ನಗದು ಹಣ ಸೇರಿ  ಇದರ ಮೌಲ್ಯ 35,000/- ಬೆಡ್‌ರೂಂ ನಲ್ಲಿಟ್ಟಿದ್ದ ಸಿಸಿ ಕ್ಯಾಮೇರಾದ ಡಿವಿ ಆರ್‌ಮೌಲ್ಯ15000/- ರೂ. ನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಹಾಗೂ ನಗದು ಹಣ ಒಟ್ಟು ಮೌಲ್ಯ 1,05,000/- ಸಾವಿರ ರೂಪಾಯಿ ಆಗಬಹುದುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 47/2022, ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ ಸಂತೋಷ ಪೂಜಾರಿ (36) ತಂದೆ: ದಿ: ನಾರಾಯಣ ಪೂಜಾರಿ, ವಾಸ: ನಾಗಮ್ಮ ನಿಲಯ, ಆಚಾರಿಮಕ್ಕಿ, ಪಡುಕೋಣೆ ನಾಡ ಗ್ರಾಮ ಬೈಂದೂರು ಇವರು ತನ್ನ ತಾಯಿ ಹಾಗೂ ಅಕ್ಕ ವೈಶಾಲಿಯೊಂದಿಗೆ ಬೈಂದೂರು ತಾಲೂಕು ನಾಡ ಗ್ರಾಮದ ಪಡುಕೋಣೆ ಆಚಾರಿಮಕ್ಕಿ ಎಂಬಲ್ಲಿ ವಾಸ ಮಾಡಿಕೊಂಡಿದ್ದು ದಿನಾಂಕ 12/03/2022 ರಂದು ಮದ್ಯಾಹ್ನ 2:00 ಗಂಟೆಗೆ ಗಿರಿಜಾರವರ ಮನೆಯ ಕೋಳಿ ಸತ್ತುಹೋಗಿದ್ದು ಅದೇ ವಿಚಾರದಲ್ಲಿ ಗಿರಿಜಾ ಹಾಗೂ ಅವರ ಮನೆಯವರು ಸಂತೋಷ ಪೂಜಾರಿ ರವರ ತಾಯಿ ಹಾಗೂ ಅಕ್ಕನ ಬಳಿ ಜಗಳ ಮಾಡಿ ಹೋಗಿರುತ್ತಾರೆ. ದಿನಾಂಕ 13/03/2022  ರಂದು ಬೆಳಿಗ್ಗೆ 7:00 ಗಂಟೆಗೆ ಇವರು ಹಾಗೂ ಅವರ ತಾಯಿ ಮನೆಯ ಬಳಿ ಇರುವ ಅವರ ತೋಟಕ್ಕೆ ಹೋಗಿ ನೋಡಿದಾಗ ತೋಟದಲ್ಲಿದ್ದ ಬಾಳೆಗಿಡ ಹಾಗೂ ಅಡಿಕೆ ಗಿಡವನ್ನು ತುಂಡರಿಸಿ ತೋಟವನ್ನು ಹಾಳು ಮಾಡಿರುವುದನ್ನು ನೋಡಿ ಗಿರಿಜಾ ಹಾಗೂ ಅವರ ಮಗ ರವಿಯವರ ಬಳಿ ವಿಚಾರಿಸಿದಾಗ ಸಂತೋಷ ಪೂಜಾರಿ ರವರಿಗೆ ಹಾಗೂ ಅವರ ತಾಯಿಗೆ ಜೀವ ಬೆದರಿಕೆ ಹಾಕಿರುತ್ತಾರೆ. ಗಿರಿಜಾ ಹಾಗೂ ರವಿಯವರು ಸಂತೋಷ ಪೂಜಾರಿ ರವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ತೋಟವನ್ನು ಹಾಳು ಮಾಡಿದ್ದಲ್ಲದೇ ವಿಚಾರಿಸಿದಾಗ ಇವರಿಗೆ ಹಾಗೂ ಇವರ ತಾಯಿಗೆ  ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 22/2022 ಕಲಂ: 447, 427, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-03-2022 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080