ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ 12/03/2021 ರಂದು ಪಿರ್ಯಾದಿದಾರರಾದ  ಪುಷ್ಪಲತಾ (31), ಗಂಡ: ಸುಭಾಷ್, ವಾಸ: ಬಬ್ಬು ಸ್ವಾಮಿ ದೇವಸ್ಥಾನದ ಬಳಿ, ಸರಸ್ವತಿ ನಗರ, ಅಮ್ಮುಂಜೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ KA-19-EC-8162 ನೇ ನಂಬ್ರದ ಹೊಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ತನ್ನ ತಾಯಿ ನಿರ್ಮಲ (45) ರವರನ್ನು  ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅಮ್ಮುಂಜೆ ಕಡೆಯಿಂದ ಉಡುಪಿಗೆ ಹೋಗಲು ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಬೆಳಿಗ್ಗೆ 10:05 ಗಂಟೆಗೆ ಉಪ್ಪೂರು ಗ್ರಾಮದ, ಕೆ.ಜಿ ರೋಡ್ ಕ್ರಾಸ್‌ ಬಳಿ, ಕೆನರಾ ಬ್ಯಾಂಕ್ ಎದುರು ತಲುಪುವಾಗ ಆರೋಪಿ ಮಲ್ಲೇಶ ಬ್ಯಾಂಕ್‌ನ ಎದುರು ರಸ್ತೆ ಬದಿಯಲ್ಲಿ ಅಮ್ಮುಂಜೆ ಕಡೆಗೆ ನಿಲ್ಲಿಸಿಕೊಂಡಿದ್ದ ತನ್ನ KA-20-D-5711 ನೇ ನಂಬ್ರದ ಪ್ಯಾಸೆಂಜರ್ ಆಟೋರಿಕ್ಷಾವನ್ನು ಯಾವುದೇ ಸೂಚನೆಯನ್ನು ನೀಡದೆ ಒಮ್ಮಲೇ ನಿರ್ಲಕ್ಷತನದಿಂದ ಅತೀವೇಗವಾಗಿ ಮುಖ್ಯ ರಸ್ತೆಗೆ ಚಲಾಯಿಸಿದ ಪರಿಣಾಮ ಆರೋಪಿಯ ಹತೋಟಿ ತಪ್ಪಿ ಪಿರ್ಯಾದಿದಾರರ ಸ್ಕೂಟರ್‌ಗೆ ಆಟೋರಿಕ್ಷಾದ ಬಲಭಾಗ ಡಿಕ್ಕಿಯಾಗಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರು ಹಾಗೂ ನಿರ್ಮಲ ರವರು ಸ್ಕೂಟರ್ ಸಮೇತ ರಸ್ತೆ ಮೇಲೆ ಬಿದ್ದು, ನಿರ್ಮಲ ರವರ ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಒಳ ಜಖಂ ಹಾಗೂ ಮೊಣಗಂಟಿನ ಕೆಳಗೆ ಒಳನೋವು ಆಗಿರುತ್ತದೆ. ಪಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳು ನಿರ್ಮಲರನ್ನು ಚಿಕಿತ್ಸೆ ಬಗ್ಗೆ  ಉಡುಪಿ ಹೈಟೆಕ್‌ ಮೆಡಿಕೇರ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 12/03/2021 ರಂದು ಬೆಳಿಗ್ಗೆ 09:30 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಜಂಕ್ಷನ್‌ನಲ್ಲಿ ಪಿರ್ಯಾದಿದಾರರಾದ ಶೇಕ್ ಮೊಹಮ್ಮದ್‌ ಇಸಾಕ್, ತಂದೆ:ಫೀರ್‌ ಸಾಹೇಬ್‌, ವಾಸ:ಹೀನಾ ಮಂಜಿಲ್ ದಿಡಿಂಬಿಗುಡ್ಡೆ 5 ಸೆಂಟ್ಸ್ ಬಜಗೋಳಿ ಅಂಚೆ ಮುಡಾರು ಗ್ರಾಮ ಕಾರ್ಕಳ ಇವರ ತಮ್ಮ ಟಿ.ವಿ.ಎಸ್ ದ್ವಿಚಕ್ರವಾಹನ ನಂಬ್ರ KA-20-Y-4547  ನೇದರಲ್ಲಿ ಮೋಹನ ಹೆಗ್ಡೆ ಇವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಾರ್ಕಳ ತಾಲೂಕು ಕಛೇರಿ ಕಡೆಯಿಂದ ನಕ್ರೆ ಕಡೆಗೆ ಹೋಗಲು ದ್ವಿಚಕ್ರ ವಾಹನದ ಬಲಬದಿಯ ಇಂಡಿಕೇಟರ್‌ ಹಾಕಿ ನಿಧಾನವಾಗಿ ಸವಾರಿ ಮಾಡಿಕೊಂಡು ಹೋಗುವಾಗ ಬಂಗ್ಲೆಗುಡ್ಡೆ ಕಡೆಯಿಂದ ಪುಲ್ಕೇರಿ ಕಡೆಗೆ KA-19-AB-2893 ನೇ ಮಿನಿಗೂಡ್ಸ್ ವಾಹನದ ಚಾಲಕ ಉಮ್ಮರ್‌ ಫಾರೂಕ್ ಎಂಬುವವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾಲಿನ ಗಂಟಿಗೆ ಮತ್ತು ಎಡಭುಜದ ಬಳಿ ಗುದ್ದಿದ ರೀತಿಯ ನೋವು ಮತ್ತು ಸಹಸವಾರನ ತಲೆಗೆ ಗುದ್ದಿದ ನೋವು ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ:  ದಿನಾಂಕ 12/03/2021 ರಂದು 15:30 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿಯ ಅಸ್ಮಾ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಪಿರ್ಯಾದಿದಾರರಾದ ಸಂಜು ಮಾದರ(26), ತಂದೆ: ಶೇಖರ ಬಿಸ್ನಾಳ್, ವಾಸ: ನಿಟ್ಟೂರು ಪುತ್ತೂರು ಉಡುಪಿ ಇವರು ತನ್ನ ಸಹಾಯಕರಾದ ಹನುಮಂತ ಹಾಗೂ ರವಿಯವರೊಂದಿಗೆ ಕಸ ವಿಲೆವಾರಿ ಮಾಡುವ ಸಂದರ್ಭ ಪಿರ್ಯಾದಿದಾರರು  ಆರೋಪಿತರಾದ 1)ಇಸ್ಮಾಯಿಲ್, 2)ಸುಹೇಲ್ ಇವರಿಗೆ ತ್ಯಾಜ್ಯವು ಮಿಶ್ರಣವಾಗಿದ್ದು  ಅದನ್ನು ಸರಿಯಾಗಿ ವಿಂಗಡನೆ ಮಾಡುವ ಬಗ್ಗೆ ತಿಳಿಸಿದಾಗ ಅಂಗಡಿಯ ಸಿಬ್ಬಂದಿಯವರಾದ ಅರೋಪಿತರುಗಳು  ಪಿರ್ಯಾದಿದಾರರ ತಲೆಗೆ  ಹಲ್ಲೆ ನಡೆಸಿ ಅವಮಾನ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 323, 504, 506 ಜೊತೆಗೆ 34 ಐಪಿಸಿ , ಕಲಂ: 3(1)(C), 3(1)(r)(s), 3(2)(V-a)SC-ST ACT 1989 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸುರೇಶ ಕುಮಾರ (46), ತಂದೆ : ಶ್ರೀ ಮಹಾಬಲ ಗಾಣಿಗ ಕೆಳನೆಜಾರು, ಸೂರ್ಯಬೆಟ್ಟು, ಮೂಡುತೋನ್ಸೆ ಗ್ರಾಮ ಕಲ್ಯಾಣಪುರ ಅಂಚೆ ಇವರು ಪ್ರಸ್ತುತ ಹೆಂಡತಿ ಮನೆಯಾದ ಉದ್ಯಾವರ ಗ್ರಾಮದ ಸಂಪಿಗೆ ನಗರದ ಆರೂರು ತೋಟ ಮನೆ ನಂಬ್ರ 10-3 ಶ್ರೀದೇವಿ ನಿಲಯ ಎಂಬ ಮನೆಯಲ್ಲಿ  ಹೆಂಡತಿ, ಮಕ್ಕಳೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರು ಅವರ ಜಾಗದ ನೀರು ಹೊರಗಡೆ ಹೋಗುವಂತೆ ಒಂದೂವರೆ ಅಡಿ ಜಾಗ ಬಿಟ್ಟು ಕಂಪೌಂಡ ಗೋಡೆ ಕಟ್ಟಿದ್ದು, ದಿನಾಂಕ 12/03/2021 ರಂದು ಪಿರ್ಯಾದಿದಾರರು ಮಧ್ಯಾಹ್ನ ಪೈಪ್‌ನ್ನು  ಅಳವಡಿಸಿದ್ದು  ಸಂಜೆ 4:00 ಗಂಟೆಗೆ ಪಿರ್ಯಾದಿದಾರರು ಅವರ ಜಾಗದಲ್ಲಿ ಇರುವಾಗ ನೆರೆ ಮನೆಯ ಧನರಾಜ ಪೂಜಾರಿ ರವರು ರಾಡ್ ಹಿಡಿದುಕೊಂಡು ಬಂದು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ತಡೆದು  ಅವಾಚ್ಯ ಶಬ್ದದಿಂದ ಬೈದು, ಕೈಯಿಂದ ಕೆನ್ನೆಗೆ ಮತ್ತು ಎದೆಗೆ ಹೊಡೆದು, ದೂಡಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ: 447, 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-03-2021 09:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080