ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಅಭಿಷೇಕ್ (27), ತಂದೆ: ಅಶೋಕ ರಾವ್,  ವಾಸ: ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆ ಬಳಿ, ಉಪ್ಪೂರು ಹೆರೈಬೆಟ್ಟು, ಉಪ್ಪೂರು   ಗ್ರಾಮ, ಬ್ರಹ್ಮಾವರ ತಾಲೂಕು ಇವರು ಉಪ್ಪೂರು ಹೆರಾಯಿಬೆಟ್ಟು  ಕ್ರಾಸ್‌ ಬಳಿ ನಿಂತಿರುವಾಗ ದಿನಾಂಕ 12/02/2023 ರಂದು ಸಂಜೆ 5:15 ಗಂಟೆಗೆ KA-20-ER-1277ನೇ ಬಜಾಜ್‌ ಪಲ್ಸರ್‌ ಬೈಕ್‌ ಸವಾರ  ಹರೀಶ್  ರಾಷ್ಟ್ರೀಯ ಹೆದ್ದಾರಿ 66 ರ ಮಧ್ಯಭಾಗದ  U ತಿರುವು ಕಡೆಯಿಂದ ಬ್ರಹ್ಮಾವರ ಕಡೆಗೆ  ಹೊಗಲು  ಉಡುಪಿ ಕುಂದಾಪುರ ರಸ್ತೆಯಲ್ಲಿ  ಬರುತ್ತಿರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA-70-0565 ಲಾರಿಯ ಚಾಲಕ ಇಲಿಯಾಜ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು ಅದೇ ಸಮಯಕ್ಕೆ  ಈ ಲಾರಿಯ ಹಿಂಭಾಗದಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದ ಇನ್ನೊಂದು KA-30-A-3596 ಲಾರಿಯ ಚಾಲಕ ಮಹೇಶ್ ಎದುರಿನ ಲಾರಿಯ ಹಿಂಭಾಗಕ್ಕೆ  ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66  ಪಶ್ಚಿಮ ಬದಿಯಲ್ಲಿರುವ ಕಬ್ಬಿಣದ ಗಾರ್ಡ್‌ಗೆ ತಾಗಿಕೊಂಡು ನಿಂತಿತ್ತು  ಈ ಅಪಘಾತದ ಪರಿಣಾಮ ಮೋಟಾರ ಸೈಕಲ್‌ ಸವಾರ ಮೋಟಾರ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ  ತೀವ್ರ  ರಕ್ತಗಾಯ ಎರಡು ಕಾಲುಗಳಿಗೆ ರಕ್ತಗಾಯ ಉಂಟಾಗಿರುತ್ತದೆ.  ಹಾಗೂ  KA-30-A-3596 ಲಾರಿಯ ಚಾಲಕ ಮಹೇಶ್‌ ರವರಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 : ಕಲಂ 279,337,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸಂದೀಪ್ ಅಮೀನ್  (36), ತಂದೆ: ಸಂಜೀವ ಪೂಜಾರಿ ವಾಸ: ಶಾಂತ ನಿವಾಸ ಮದನಾಡು ದರ್ಖಾಸು ಕೆಮ್ಮಣ್ಣು , ನಿಟ್ಟೆ  ಅಂಚೆ, ಮತ್ತು  ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಂದೆ ಶ್ರೀ ಸಂಜೀವ ಪೂಜಾರಿ (78) ಇವರಿಗೆ  06 ತಿಂಗಳ ಹಿಂದೆ ನಿಟ್ಟೆಯಲ್ಲಿ ಅಪಘಾತವಾಗಿ ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಕೊಡಿಸಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಬಂದ ಬಳಿಕ ತಲೆಗೆ ಆದ ಗಾಯದಿಂದ ಮಾನಸಿಕವಾಗಿ ನೊಂದುಕೊಂಡಿದ್ದು ಯಾರ ಬಳಿಯೂ ಸರಿಯಾಗಿ ಮಾತನಾಡದೇ ಕೆಲವೊಮ್ಮೆ ಅತಿಯಾಗಿ ಚಿಂತೆ ಮಾಡಿಕೊಂಡಿದ್ದು ಅದೇ ಕಾರಣದಿಂದ ಮನನೊಂದು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಮದನಾಡು ದರ್ಖಾಸು ಕೆಮ್ಮಣ್ಣು ಎಂಬಲ್ಲಿರುವ ಅವರ ಮನೆಯಲ್ಲಿ ದಿನಾಂಕ 12/02/2023 ರಂದು ಮಧ್ಯಾಹ್ನ 2:00 ಗಂಟೆಯಿಂದ ಸಂಜೆ 04:30 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ತನ್ನ ವಾಸ್ತವ್ಯದ ಮನೆಯ ಹಾಲ್ ನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಲ್ಪೆ: ಪಿರ್ಯಾದಿದಾರರಾದ ಲೋಕೇಶ್ ನಾರಾಯಣ ಹರಿಕಾಂತ (35), ತಂದೆ: ನಾರಾಯಣ ಸೋಮಯ್ಯ ಹ್ರಿಕಾಂತ, ವಾಸ: ಸೊಮಯ್ಯನ ಮನೆ, ಬೈಲೂರು, ಗಾಳಿಗಿಡ, ಬಾವಿಹಿತ್ಲು, ಬೈಲೂರು ಗ್ರಾಮ ಭಟ್ಕಳ ತಾಲೂಕು ಉ.ಕ ಇವರು  ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಪ್ರಸ್ತುತ ಅಗಷ್ಟ 2022 ರಿಂದ ಮಲ್ಪೆಯ ಪ್ರತಾಪ್ ಸುವರ್ಣ ರವರ ಮಾಲಕತ್ವದ ಶ್ರೀಕೃಷ್ಣ  ಚಕ್ರ IND KA 02 MM 5605 ನೇ ಲೈಲ್ಯಾಂಡ್ ಮೀನುಗಾರಿಕಾ ಬೋಟ್ ನಲ್ಲಿ ಕಲಾಸಿಯಾಗಿದ್ದು ಸದ್ರಿ ಬೋಟ್ ನಲ್ಲಿ ಲಕ್ಷ್ಮಣ ಹರಿಕಾಂತ ಡ್ರೈವರ್ ಆಗಿ ಹಾಗೂ ಗೋವಿಂದ, ಸಂದೀಪ, ನಾಗರಾಜ, ರಾಜೇಶ ಹಾಗೂ ಪಿರ್ಯಾದಿದಾರರ ಅಳಿಯ ನಾಗರಾಜನ್(27) ಇವರು ಕಲಾಸಿಗಳಾಗಿ ಮೀನುಗಾರಿಕಾ ಕೆಲಸ ಮಾಡಿಕೊಂಡಿರುತ್ತಾರೆ.  ಬೋಟ್ ನಲ್ಲಿ ದಿನಾಂಕ 05/02/2023 ರಂದು ರಾತ್ರಿ 10:00 ಗಂಟೆಗೆ ಮೀನುಗಾರಿಕೆ ಬಗ್ಗೆ ಮಲ್ಪೆ ಬಂದರಿನಿಂದ ಹೊರಟು ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಾ ದಿನಾಂಕ 11/02/2023 ರಂದು ಅರಬ್ಬೀ ಸಮುದ್ರದ 200 ನಾಟಿಕಲ್ ದೂರದಲ್ಲಿ ಮುಂಜಾನೆ 05:45 ಗಂಟೆಗೆ ಸಮುದ್ರದ ಅಲೆಗಳ ಅಬ್ಬರಕ್ಕೆ ಬೋಟ್ ಅಲುಗಾಡಿ ಮೀನುಗಾರಿಕೆ ಕೆಲಸ ಮಾಡುತಿದ್ದ ಪಿರ್ಯಾದಿದಾರರ ಅಳಿಯ ನಾಗರಾಜನ್ ಆಕಸ್ಮಿಕವಾಗಿ ಆಯತಪ್ಪಿ ಬೋಟಿನ ಬಲೆ ಎಳೆಯುವ ಡ್ರಮ್ ವಿಂಚ್ ಗೆ ಬಿದ್ದು ಡ್ರಮ್ ವಿಂಚ್ ಆತನ ತಲೆಯ ಹಿಂಬದಿಗೆ ತಾಗಿ ತೀವ್ರ ರಕ್ತಗಾಯವಾಗಿ ಆತನ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2023  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಪಡುಬಿದ್ರಿ: ದಿನಾಂಕ 12/02/2023 ರಂದು ಪಡುಬಿದ್ರಿ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಪುರುಷೋತ್ತಮ ಎ ರವರಿಗೆ  ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ನವರಂಗ ಬಾರ್‌ಕಟ್ಟಡದ ಬಳಿ ಇರುವ ಓಣಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ  ವ್ಯಕ್ತಿಯು ಮಟ್ಕಾ ಆಟದ ಬಗ್ಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಮಾಹಿತಿಯಂತೆ ದಾಳಿ ನಡೆಸಿ ಅಭಿಷೇಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಒಂದನೇ ಆಪಾದಿತನು 2 ನೇ ಆಪಾದಿತ ಅಬ್ದುಲ್ ರಜಾಕ್ ಎಂಬುವವನ ಸೂಚನೆಯಂತೆ  ಸಾರ್ವಜನಿಕರಿಂದ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಹೇಳುತ್ತಾ ಜನರನ್ನು ಸೇರಿಸಿ ಚೀಟಿ ಬರೆದು ಕೊಡುತ್ತಿದ್ದು, 1 ನೇ ಆರೋಪಿತನು ಸಂಗ್ರಹಿಸಿದ ಹಣವನ್ನು 2 ನೇ ಆರೋಪಿತನಿಗೆ ನೀಡುತ್ತಿದ್ದು, 2 ನೇ ಆರೋಪಿತನು ಡ್ರಾ ನಡೆಸಿ ಬಹುಮಾನ ವಿಜೇತರಿಗೆ ಒಂದನೇ ಆರೋಪಿತ ಅಭಿಷೇಕ್‌‌‌ನ ಮುಖಾಂತರ ಹಣವನ್ನು  ನೀಡುವುದಾಗಿದೆ, ನಂತರ ಅಭಿಷೇಕ್‌‌‌ನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 670/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1, ಮೊಬೈಲ್ ಪೋನ್-01 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ :78 (I) (III) ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಗೋವಿಂದ ರಾಜ (41), ತಂದೆ: ನಾರಾಯಾಣ ಗಾಣಿಗ, ವಾಸ: ಹೊಸಗಮೆ ಉಪ್ಪುಂದ ಗ್ರಾಮಬೈಂದೂರು ತಾಲೂಕು ಇವರ ತಾಯಿ ಅಂತಮ್ಮ ಗಾಣಿಗ ರವರು  ಉಪ್ಪುಂದ ಗ್ರಾಮದ ಜನಾತಾ ಕಾಲೋನಿ ಎಂಬಲ್ಲಿ 5 ಸೆಂಟ್ಸ್ ಜಾಗವನ್ನು ಹೊಂದಿರುತ್ತಾರೆ. ಜಾಗವನ್ನು  ಜನತಾ  ಕಾಲೋನಿಯ ಭಜನಾ ಮಂದಿರಕ್ಕೆ  ಕೊಡುವಂತೆ  ಆರೋಪಿ ಬಾಬು ಖಾರ್ವಿ ಎಂಬಾತನು ಸರಿಯಾದ ಮೌಲ್ಯ ಹೇಳದೇ ಕಡಿಮೆ ದರದಲ್ಲಿ ಕೊಡುವಂತೆ  ಹೇಳುತ್ತಿದ್ದು  ಪಿರ್ಯಾದಿದಾರರು ಹಾಗೂ ಅವರ ತಾಯಿ ಜಾಗವನ್ನು ಕೊಡುವುದಿಲ್ಲವಾಗಿ ತಿಳಿಸಿರುತ್ತಾರೆ. ದಿನಾಂಕ 10/02/2023 ರಂದು ಸಂಜೆ 4:30 ಗಂಟೆಗೆ  ಆರೋಪಿ ಬಾಬು ಖಾರ್ವಿ ಪಿರ್ಯಾದಿದಾರರ ಮನೆ ಬಳಿ ಪಿರ್ಯಾದಿದಾರರನ್ನು ಹಾಗೂ ಅವರ ತಾಯಿಯನ್ನು ಅಡ್ಡಗಟ್ಟಿ  ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ: 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-02-2023 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080