ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಗೊದ್ದನ ಕಟ್ಟೆ, ರಾಮ ಭಜನ ಮಂದಿರದ ಎದುರು ಇರುವ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ನಿತ್ಯಾನಂದ ಪ್ರಭು ಇವರು ಮನೆಯ ಮುಂದೆ ನಿಲ್ಲಿಸಿದ್ದ ಅವರು ಬಾಬ್ತು KA.20.ER.1149 ನೇ ನಂಬ್ರದ ಟಿವಿಎಸ್‌ ಎಕ್ಸೆಲ್‌ 100 BSIV ನೇ ಸ್ಕೂಟರನ್ನು   ದಿನಾಂಕ 10.02.2023 ರಂದು ಬೆಳಿಗ್ಗೆ 09:45 ಗಂಟೆಯಿಂದ ಅದೇ ದಿನ ಬೆಳಿಗ್ಗೆ 11:15 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸದ್ರಿ ಸ್ಕೂಟರ್‌ ನ ಅಂದಾಜು ಮೌಲ್ಯ ರೂ 25,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 24/2023, ಕಲಂ 379   ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ: 12.02.2023 ರಂದು ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ಸಿಬ್ಬಂದಿಯವರೊಂದಿಗೆ  ರೌಂಡ್ಸ್‌ ನಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಪಾರ್ಕ್ ಬಳಿ ಓರ್ವ ವ್ಯಕ್ತಿ ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 17:15 ಗಂಟೆಗೆ ಹೋಗಿ  ಪರಿಶೀಲಿಸಲಾಗಿ ಓರ್ವ ವ್ಯಕ್ತಿಯು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಅಮನ್‌ ಕಶಬ್‌, ಪ್ರಾಯ:  22 ವರ್ಷ, ತಂದೆ: ಶ್ಯಾಮ್‌ ಕಿಶೋರ್‌, ಪ್ರಸ್ತುತ ವಿಳಾಸ:  ರೂಮ್‌ ನಂಬ್ರ A -415  ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲೋಜಿ,  ಸುರತ್ಕಲ್‌, ದಕ್ಷಿಣಕನ್ನಡ ಜಿಲ್ಲೆ , ಖಾಯಂ ವಿಳಾಸ: ವಸುಂಧರ ಪ್ಯಾಲೇಸ್‌ , ರಾಮನಗರಿ ಮೋರ್‌ ಹತ್ತಿರ, ಆಶಿಯಾನ, ಪಾಟ್ನಾ, ಬಿಹಾರ ರಾಜ್ಯ ಎಂಬುವುದಾಗಿ ತಿಳಿಸಿದ್ದು ಆತನು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಆತನನ್ನು  ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 18/2023, ಕಲಂ: 27(B) NDPS Act ನಂತೆ ಪ್ರಕರಣದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ ದಿನಾಂಕ: 12.02.2023 ರಂದು ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ಸಿಬ್ಬಂದಿಯವರೊಂದಿಗೆ  ರೌಂಡ್ಸ್‌ ನಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಪಾರ್ಕ್ ಬಳಿ ಓರ್ವ ವ್ಯಕ್ತಿ ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 17:15 ಗಂಟೆಗೆ ಹೋಗಿ  ಪರಿಶೀಲಿಸಲಾಗಿ ಓರ್ವ ವ್ಯಕ್ತಿಯು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಹಿಮಾನ್‌ಶು ಚೈಲ್ಕೆ, ಪ್ರಾಯ:  23 ವರ್ಷ, ತಂದೆ: ರಾಮ್‌ ಕುಮಾರ್‌ ಚೈಲ್ಕೆ , ವಾಸ: ರೂಮ್ ನಂಬ್ರ ಡಿ- 315, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಸುರತ್ಕಲ್, ದಕ್ಷಿಣ ಕನ್ನಡ ಜಿಲ್ಲೆ ,  ಖಾಯಂವಿಳಾಸ:ಜಗದಂಬಾ ಕಾಲೋನಿ, ಬಿಲಾಶ್‌ ಪುರ, ಛತ್ತೀಸ್‌ ಗಢ್‌ ರಾಜ್ಯ ಎಂಬುವುದಾಗಿ ತಿಳಿಸಿದ್ದು ಆತನು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಆತನನ್ನು  ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 19/2023, ಕಲಂ: 27(B) NDPS Act ನಂತೆ ಪ್ರಕರಣದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ: ದಿನಾಂಕ: 12.02.2023 ರಂದು ಗಂಗೊಳ್ಳಿ ಠಾಣಾ ಪಿಎಸ್‌ಐ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ಸಿಬ್ಬಂದಿಯವರೊಂದಿಗೆ  ರೌಂಡ್ಸ್‌ ನಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ ಬಳಿ ಓರ್ವ ವ್ಯಕ್ತಿ ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 19:40 ಗಂಟೆಗೆ ಹೋಗಿ  ಪರಿಶೀಲಿಸಲಾಗಿ ಓರ್ವ ವ್ಯಕ್ತಿಯು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಸಮೀರ್‌ ಮುಜಾವರ್‌ ಪ್ರಾಯ:  23 ವರ್ಷ, ತಂದೆ: ಅನಾಸರಮ್ಮದ್, ವಾಸ: ರೂಮ್ ನಂಬ್ರ  ಎ-210, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಸುರತ್ಕಲ್, ದಕ್ಷಿಣ ಕನ್ನಡ ಜಿಲ್ಲೆ ,  ಖಾಯಂವಿಳಾಸ: ತೆಲ್‌ ಸಂಗ್‌ ಗ್ರಾಮ ಅಥಣಿ ತಾಲೂಕು ಬೆಳಗಾವಿ ಜಿಲ್ಲೆ ವೃತ್ತಿ:ಇಂಜಿನೀಯರಿಂಗ್ ವಿದ್ಯಾರ್ಥಿ ಎಂಬುವುದಾಗಿ ತಿಳಿಸಿದ್ದು ಆತನು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಆತನನ್ನು  ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 20/2023, ಕಲಂ: 27(B) NDPS Act ನಂತೆ ಪ್ರಕರಣದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕಮರಣಪ್ರಕರಣ

  • ಕೋಟ: ಪಿರ್ಯಾದಿ ಎ ಪರೇಶ್ ಕುಮಾರ್ ಶೆಟ್ಟಿ ಇವರ ಅಣ್ಣ ಪುಷ್ಪರಾಜ ಶೆಟ್ಟಿ(ಪ್ರಾಯ 54 ವರ್ಷ) ರವರು ಕೃಷಿ ಕೆಲಸ ಮಾಡಿಕೊಂಡಿದ್ದು ಆವರ್ಸೆ ಗ್ರಾಮದ ಇಸಾರಮಕ್ಕಿ ಎಂಬಲ್ಲಿ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದು ದಿನಾಂಕ: 07-02-2023 ರಂದು 15:00 ಗಂಟೆಯಿಂದ ದಿನಾಂಕ:12-02-2023 ರಂದು 11:00 ಗಂಟೆ ಮಧ್ಯಾವಧಿಯಲ್ಲಿ ಅವನು ವಾಸವಿದ್ದ ಮನೆಯ ಬಳಿಯ ಆವರಣ ಇಲ್ಲದ ಬಾವಿಗೆ ಆಯ ತಪ್ಪಿ ಅಥವಾ ಬೇರೆ ಯಾವುದೋ ಕಾರಣದಿಂದ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ  ಬಗ್ಗೆ ಕೋಟ ಠಾಣೆ ಯುಡಿಆರ್‌  03/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಪುಟ್ಟಮ್ಮ ಇವರ ಅಣ್ಣ ರಾಮಾಂಜನೇಯ(35 ವರ್ಷ) ಎಂಬುವವರು ಮಾನಸಿಕವಾಗಿ ವರ್ತಿಸುತ್ತಿದ್ದು  ಬೇಳೂರು ಗ್ರಾಮದ ಕರಾಣಿ ಎಂಬಲ್ಲಿ ಪಿರ್ಯಾದಿದಾರರ ಮನೆಯಲ್ಲಿ ಮಲಗಿದ್ದು ದಿನಾಂಕ:11-02-2023 ರಂದು ಬೆಳಗ್ಗಿನ ಜಾವ 03:00 ಗಂಟೆಗೆ ಮೂತ್ರಮಾಡಿ ಬರುತ್ತೇನೆಂದು ಹೇಳಿ ಹೋದವರು ವಾಪಸು ಬಾರದೇ ಇದ್ದು ದಿನಾಂಕ:12-02-2023 ರಂದು ಮದ್ಯಾಹ್ನ 01:00 ಗಂಟೆಯ ಮಧ್ಯಾವದಿಯಲ್ಲಿ ಪಿರ್ಯಾದಿದಾರರ ಮನೆಯಿಂದ ಸುಮಾರು  1 ಕಿ. ಮೀ. ದೂರದಲ್ಲಿ ಇರುವ ಎಮ್ ಕೆ ಕೃಷ್ಣಯ್ಯ ಶೆಟ್ಟಿಯವರ ಕೆರೆಯಲ್ಲಿ  ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿದೆ. ಈ  ಬಗ್ಗೆ ಕೋಟ ಠಾಣೆ ಯುಡಿಆರ್‌  04/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಅಜೆಕಾರು: ಪಿರ್ಯಾದಿ ಅರವಿಂದ ಶೇರ್ವೆಗಾರ್ ಇವರ ಮಗನಾದ ರಾಘವೇಂದ್ರ(26) ಎಂಬುವವರು ಕಳೆದ 1 ವರ್ಷದಿಂದ ಕೆಲಸವಿಲ್ಲದೇ ಮನೆಯಲ್ಲೇ ಇದ್ದು, ದಿನಾಂಕ 12/02/2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 13/02/2023 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ಮರ್ಣೆ ಗ್ರಾಮದ ಕಾಡುಹೊಳೆ ಬಳಿಯಲ್ಲಿರುವ ಹೊಸಮನೆ ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ  ಬಗ್ಗೆ ಅಜೆಕಾರು ಠಾಣೆ ಯುಡಿಆರ್‌  08/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ಸವಿನಯ  ಇವರ ತಮ್ಮ ಸಂಕೇತ್‌ ಪ್ರಾಯ 23 ವರ್ಷ ಎಂಬವರು ಬಾಂಬೆಯಲ್ಲಿ ಹೋಟೇಲ್‌ ಕೆಲಸದಲ್ಲಿದ್ದು, 2 ವಾರಗಳ ಹಿಂದೆ ಊರಿಗೆ ಬಂದು ಮಣಿಪಾಲ ಪ್ರೆಸ್‌ ನಲ್ಲಿ ಕೆಲಸ ಮಾಡಿಕೊಂಡಿದ್ದವನು, ಸರಿಯಾದ ಕೆಲಸ ಇಲ್ಲದೆ ಹಣಕಾಸಿನ ಸಮಸ್ಯೆಯಿಂದ ಅಥವಾ ಇತರ ಇನ್ನಾವುದೋ ಕಾರಣದಿಂದ ದಿನಾಂಕ 12/02/2023 ರಂದು 20:35 ಗಂಟೆಯಿಂದ 21:06 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಬನ್ನಂಜೆ ಹಳೆ ಡಿಸಿ ಕಛೇರಿ ಬಳಿ ಬಾಡಿಗೆ ಮನೆಯಲ್ಲಿನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ  ಬಗ್ಗೆ ಉಡುಪಿ ನಗರ ಠಾಣೆ ಯುಡಿಆರ್‌  07/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಪಿರ್ಯಾಸಿ ದೇವಿ ಇವರ ತಾಯಿ ಸಾಧು ಪೂಜಾರ್ತಿ  71 ವರ್ಷ ಇವರಿಗೆ  ವಿಳ್ಯದೆಲೆ ಸೇವಿಸುವ ಅಭ್ಯಾಸವಿದ್ದು ಎಂದಿನಂತೆ  ದಿನಾಂಕ:06/02/2023 ರಂದು ಬೆಳಗ್ಗೆ 06-00 ಗಂಟೆಗೆ ಎದ್ದು ವಿಳ್ಯದೆಲೆ ಸೇವಿಸುತ್ತಿರುವಾಗ ವಿಳ್ಯದೆಲೆಗೆ  ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ವೀಳ್ಯದೆಲೆಗೆ ಸೇರಿಸಿ ತಿಂದು ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ  ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್‌  ಆಸ್ಪತ್ರೆಗೆ  ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ  ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ:12/02/2023 ರಂದು ಸಂಜೆ 07-49 ಗಂಟೆಗೆ ಮೃತಪಟ್ಟಿರುತ್ತಾರೆ. ಈ  ಬಗ್ಗೆ ಗಂಗೊಳ್ಳಿ ಠಾಣೆ ಯುಡಿಆರ್‌  02/2023, ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 13-02-2023 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080