ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ 

  • ಶಿರ್ವಾ:ಶಿರ್ವಾ ಗ್ರಾಮದ ನಿವಾಸಿಯಾಗಿರುವ ರೈಮಂಡ್‌ ಡಿಸೋಜರವರು ವ್ಯವಸಾಯೇತರ/ವಸತಿ ವೈಯಕ್ತಿಕ ಉದ್ದೆಶಕ್ಕಾಗಿ ಶಿರ್ವ ಗ್ರಾಮದ ಸರ್ವೇ ನಂಬರ್‌ 364/39 ರಲ್ಲಿ 0.10 ಎಕರೆ ಭೂವರಿವರ್ತನೆ ಕೋರಿ ಸಲ್ಲಿಸಿದ ಅರ್ಜಿಯ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಯವರು ಉಡುಪಿ ಜಿಲ್ಲೆ ಇವರು ಸಂಖ್ಯೆ LAND10013079 ರಂತೆ ಭೂ ಪರವರ್ತನಾ ಆದೇಶವನ್ನು ನೀಡಿರುತ್ತಾರೆ. ಶಿರ್ವ ಗ್ರಾಮದ ಸರ್ವೇ ನಂಬ್ರ 364/28 ರ ಸ್ಥಳವು ಸರಕಾರಿ ಸ್ಥಳವಾಗಿದ್ದು ಪಹಣಿಯಲ್ಲಿ ಸರಕಾರಿ ಪೊರಂಬೋಕು ತೋಡು ಎಂದು ನಮೂದು ಇರುತ್ತದೆ. ಆದರೆ ಭೂ ಪರಿವರ್ತನಾ ಆದೇಶವನ್ನು ಕಾನೂನು ಬಾಹಿರ ರೀತಿಯಿಂದ ಪಡೆಯುವ ಸಲುವಾಗಿ ರೈಮಂಡ್‌ ಡಿಸೋಜ ಇವರು ಶಿರ್ವ ಗ್ರಾಮದ ಸರ್ವೇ ನಂಬ್ರ್ರ 364/28 ರಲ್ಲಿ 0.30 ಎಕ್ರೆ ವಿಸ್ತೀರ್ಣ ಸ್ಥಳವನ್ನು ಅಕ್ಕು ಮೂಲ್ಯ ಇವರು ಹೊಂದಿದ್ದು ಇವರ ಸ್ಥಳದಲ್ಲಿ 15 ಪೀಟ್‌ ಅಗಲದ ಖಾಸಗಿ ಸಂಪರ್ಕ ರಸ್ತೆಯನ್ನು ಸದ್ರಿ ರೈಮಂಡ್‌ ಡಿಸೋಜ ಇವರು ಉಪಯೋಗಿಸುವರೇ ಒಪ್ಪಿಗೆ ನೀಡಿದ್ದಾರೆ ಎಂದು ಬಿಂಬಿಸಿ ಸುಳ್ಳು ಒಪ್ಪಿಗೆ ಪತ್ರ ತಯಾರಿಸಿ ನೀಡಿರುತ್ತಾರೆ. ಸಲ್ಲಿಸಿರುವ ಒಪ್ಪಿಗೆ ಪತ್ರವು ಸುಳ್ಳು ದಾಖಲೆಯಾಗಿದ್ದು ಒಪ್ಪಿಗೆ ಪತ್ರದಲ್ಲಿ ಹೇಳಿರುವ ಸರ್ವೇ ನಂಬರ್‌ ಪೊರಂಬೋಕು ತೋಡಾಗಿದ್ದು ಪಹಣಿಯಲ್ಲಿ ಸರಕಾರದ ಹೆಸರು ಇರುತ್ತದೆ. ಆದರೆ ರೈಮಂಡ್‌ ಡಿಸೋಜ ಇವರು ಭೂರಿವರ್ತನೆಯನ್ನು ಪಡೆಯುವ ಉದ್ದೇಶದಿಂದ ಅಕ್ಕುಮೂಲ್ಯ ಇವರ ಹೆಸರಿನ ಸುಳ್ಳು ಒಪ್ಪಿಗೆ ಪತ್ರವನ್ನು ಸೃಷ್ಟಿ ಮಾಡಿದ್ದು ಮಾತ್ರವಲ್ಲ ಸರಕಾರಕ್ಕೆ ಸುಳ್ಳು ಮಾಹಿತಿನೀಡಿ ಸರಕಾರಿ ನೌಕರರಿಗೆ ತಪ್ಪು ಮಾಹಿತಿ ನೀಡಿ ಅವರ ದಾರಿ ತಪ್ಪಿಸಿದ್ದಾರೆ ಆದುದರಿಂದ ರೈಮಂಡ್‌ ಡಿಸೋಜ ಇವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಆರ್ಥರ್‌ ಮಿನೇಜಸ್‌ ಪ್ರಾಯ 50 ವರ್ಷ ,ತಂದೆ: ದಿವಂಗತ ಮಥಾಯಸ್‌ ಮಿನೇಜಸ್‌, ವಾಸ: ಜ್ಯೂಲಿಯೆಟ್‌ ವಿಲ್ಲಾ,ಶಿರ್ವ ಪೊಲೀಸ್‌ ಠಾಣೆ ಬಳಿ, ಶಿರ್ವ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 465,468, 471 ಐಪಿಸಿಯಂತೆ ಪ್ರಕರಣ ದಾಖಲಾಗಿರಿತ್ತದೆ.

 

ಇತ್ತೀಚಿನ ನವೀಕರಣ​ : 13-02-2022 06:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080