ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪಾರ್ವತಿ ಸುರೇಶ್ ಮಹಳೆ (46)ಗಂಡ: ದಿ: ಸುರೇಶ್ ವಾಸ: ವಾನಳ್ಳಿ ಪೋಸ್ಟ್ ಗುರುವಳ್ಳಿ ಗ್ರಾಮ, ಶಿರ್ಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರು ಕಿನ್ನಿಮುಲ್ಕಿಯ ರಾಜೇಶ್ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 11/02/2021 ರಂದು ರಾತ್ರಿ ರಾಜೇಶ್ ರವರ ಮನೆಗೆ ಎಲೆ ಅಡಿಕೆ ತರಲು 76 ಬಡಗುಬೆಟ್ಟು ಗ್ರಾಮದ ಕಿನ್ನಿಮುಲ್ಕಿ ಬಳಿ ಅಂಗಡಿಗೆ ಹೋಗಿ ವಾಪಾಸ್ಸು ಬರುವಾಗ ರಸ್ತೆ ದಾಟಲು ಉಡುಪಿಯ ಕಿನ್ನಿಮುಲ್ಕಿಯ ಹಿರನ್ ಬಾರ್ ಎದುರು ನಿಂತುಕೊಂಡಿರುವಾಗ ಸಮಯ ಸುಮಾರು ರಾತ್ರಿ 08:15 ಗಂಟೆಗೆ ಲಯನ್ ಸರ್ಕಲ್ ಕಡೆಯಿಂದ ಕಿನ್ನಿಮುಲ್ಕಿ ಕಡೆಗೆ KA-20-C-8941  ನೇ ರಿಕ್ಷಾ ಚಾಲಕ ಅವಿನಾಶ್ ಎಂಬಾತನು ತನ್ನ ರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಎಡಬದಿಗೆ ಚಲಾಯಿಸಿಕೊಂಡು ಚಲಾಯಿಸಿಕೊಂಡು ಬಂದು ಪಾರ್ವತಿ ಸುರೇಶ್ ಮಹಳೆ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಬಿದ್ದು ತಲೆಗೆ ಮತ್ತು ಮುಖಕ್ಕೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಫು: ದಿನಾಂಕ 12/02/2021 ರಂದು ಬೆಳಗ್ಗೆ 8:30 ಗಂಟೆಯ ಸಮಯಕ್ಕೆ ಕಾಪು ಪಡು ಗ್ರಾಮದ ವಿದ್ಯಾನಿಕೇತನ ಶಾಲೆಯ ಸಮೀಪ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಎ-20-ಎಕ್ಸ್-6870 ನೇದರ ಟಿ.ವಿ.ಎಸ್ ಮೋಟಾರು ಸೈಕಲ್ ನಲ್ಲಿ  ಹರಿಶ್ಚಂದ್ರ ಆಚಾರ್ ರವರು ಸವಾರ ಮಾಡಿಕೊಂಡು ಮಂಗಳೂರು ಕಡೆಯಿಂದ ಕಾಪು ಕಡೆಗೆ ಬರುವಾಗ ಮಂಗಳೂರು ಕಡೆಯಿಂದ ಕೆಎಲ್-20-ಇ-2333 ಟೆಂಪೋ ಟ್ರಾವೇಲ್ಲರ್ ನ ಚಾಲಕ ಹರಿ ಎಂಬವನು ತನ್ನ ಟೆಂಪೋ ಟ್ರಾವೇಲ್ಲರ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹರಿಶ್ಚಂದ್ರ ಆಚಾರ್ ರವರ ಟಿ.ವಿ.ಎಸ್ ಮೋಟಾರು ಸೈಕಲ್ ಗೆ ಢಿಕ್ಕಿ ಹೋಡೆದು ಹರಿಶ್ಚಂದ್ರ ಆಚಾರ್ ರವರು ಟಿ.ವಿ.ಎಸ್ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲ ಕಿವಿಯ ಹತ್ತಿರ  ಬಲಕೈಗೆ ಜಖಂ ಆಗಿದ್ದು ಎರಡು ಕಾಲುಗಳಿಗೆ ತರಚಿದ ಗಾಯವಾಗಿದೆ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಕೋಟ: ಪಿರ್ಯಾದಿದಾರರಾಧ ಅಲ್ತಾಪ್ (37) ತಂದೆ:ಅನ್ವರ್ ಸಾಹೇಬ್ ವಾಸ: ಕೋಡಿ ರೋಡ್ ಸಾಸ್ತಾನ ಗುಂಡ್ಮಿ ಗ್ರಾಮ  ಬ್ರಹ್ಮಾವರ ಇವರು ದಿನಾಂಕ 12/02/2021 ರಂದು ಸಂಜೆ ಸಮಯ ಸುಮಾರು 4:00 ಗಂಟೆಗೆ ಪಾಂಡೇಶ್ವರ ಗ್ರಾಮದ ಮೇಲ್ಪೇಟೆ ಯಲ್ಲಿರುವ ಗುಜರಿ ಅಂಗಡಿಯ ಬಳಿಯಿರುವಾಗ ಅಂಗಡಿಯ ಎದುರು ಕುಂದಾಪುರದಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಡ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ KA-20-D-9566 ನೆ ನಂಬ್ರದ ಬೊಲೆರೋ ಪಿಕಪ್ ವಾಹನದ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೆ  ರಸ್ತೆಯ ಎಡ ಬದಿಗೆ ತಿರುಗಿಸಿದ ಪರಿಣಾಮ ಪಿಕಪ್ ವಾಹನದ ಹಿಂದುಗಡೆ ಬರುತ್ತಿದ್ದ ಅಲ್ತಾಪ್‌ ರವರ ಪರಿಚಯದ KA-19-ES-2691 ನೇ ಮೋಟಾರ್ ಸೈಕಲ್ ಸವಾರ ರೋಹಿತ್ ರೋಡ್ರಿಗಸ್ ನಿಯಂತ್ರಣ ತಪ್ಪಿ ಪಿಕಪ್ ವಾಹನದ ಹಿಂದುಗಡೆ ಗುದ್ದಿರುತ್ತಾನೆ. ಇದರಿಂದ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು ತಲೆಗೆ ತೀವೃ ಸ್ವರೂಪದ ಗಾಯವಾಗಿದ್ದು ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. KA-20-D-9566 ನೆ ನಂಬ್ರದ ಬೊಲೆರೋ ಪಿಕಪ್ ವಾಹನದ ಚಾಲಕ ರವಿಯ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೇಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 12/02/2021 ರಂದು ಬೆಳಿಗ್ಗೆ 10:45 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಬಸ್‌ ನಿಲ್ದಾಣದ ಬಳಿ ಅಯ್ಯಂಗಾರ್‌ ‌ಬೇಕರಿಯ ಹತ್ತಿರದ ಕುಂದಾಪುರ –ಶಿಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಆರೋಪಿ KA-20-S-1271 ನೇ ಮೊಟಾರು ಸೈಕಲ್‌ಸವಾರ ರವಿ ಎಂಬವರು ತನ್ನ ಮೊಟಾರು ಸೈಕಲ್‌‌ನ್ನು ಹೊಸಗಂಗಡಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಶ್ಚಿಮ ಬದಿಯಲ್ಲಿ ಮೊಟಾರು ಸೈಕಲ್‌‌ನೊಂದಿಗೆ ನಿಂತು ಕೊಂಡಿದ್ದ ಪಿರ್ಯಾದಿದಾರರಾಧ ಶ್ರೀಮತಿ ಪುಷ್ಪ (58) ಗಂಡ ದಿವಂಗತ ಶೀನ ನಾಯ್ಕ್ ವಾಸ: ವಿಘ್ನೇಶ್ವರ ನಿಲಯ ವಾರಾಹಿ ರಸ್ತೆ ಸಿದ್ದಾಪುರ ಅಂಚೆ ಮತ್ತು ಗ್ರಾಮ ಕುಂದಾಪುರ ಇವರ ಮೊಟಾರು ಸೈಕಲ್‌ನಂಬ್ರ KA-20-ER-1353 ನೇದಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಈ ಅಪಘಾತದಿಂದ ಇವರ ಎಡ ಕಾಲಿನ ಮೊಣ ಗಂಟಿನ ಬಳಿ ಮೂಳೆ ಮುರಿತದ ಗಾಯ ಮತ್ತು ಎಡ ಕೈಗೆ ರಕ್ತಗಾಯವಾಗಿ ಕುಂದಾಪುರ ಚಿನ್ಮಯೀ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಅಪಘಾತಕ್ಕೆ ಆರೋಪಿ KA-20-S-1271 ನೇ ಮೊಟಾರು ಸೈಕಲ್‌ಸವಾರ ರವಿ ಎಂಬವರು ಅತೀವೇಗ ಮತ್ತು ಅಜಾಗರೂಕತೆಯ ಮೊಟಾರು ಸೈಕಲ್‌ ಸವಾರಿಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾಧ ರವಿ (37) ತಂದೆ: ಗೋವಿಂದ    ಪೂಜಾರಿ,ವಾಸ: ಉಮ್ಮಕ್ಕಿ ಬೈಲು, ಕಾರ್ಕಡ ಗ್ರಾಮ, ಸಾಲಿಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರು ದಿನಾಂಕ 12/02/2021 ರಂದು ಸಂಜೆ ಅವರ  ಪಿಕ್‌ಅಪ್‌ ವಾಹನ  ನಂಬ್ರ KA-20-D-9566 ನೇದನ್ನು ಚಾಲನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ- ಉಡುಪಿ ಏಕಮುಖ ಡಾಮಾರು ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ  ಹೊರಟಿದ್ದು ಸಮಯ ಸುಮಾರು ಸಂಜೆ 4:10 ಗಂಟೆ ಸುಮಾರಿಗೆ ಪಾಂಡೇಶ್ವರ ಗ್ರಾಮದ ಮೇಲ್ಪೇಟೆಯ  ಗುಜರಿ ಅಂಗಡಿ  ಬಳಿ  ಅವರ  ವಾಹನದ  ವೇಗ ಮಿತಿಯನ್ನು  ಕಡಿಮೆಗೊಳಿಸಿ ನಿಲ್ಲಿಸುವ ಸೂಚನೆಯನ್ನು  ಕೊಟ್ಟು ಎಡಕ್ಕೆ ತಿರುಗಿಸುವಾಗ ಹಿಂದುಗಡೆ  ಬರುತ್ತಿದ್ದ  ಮೋಟಾರ್‌ ಸೈಕಲ್‌ ನಂಬ್ರ KA-19-ES-2691 ನೇದರ ಸವಾರ ರವಿ ರವರ  ವಾಹನದ ಹಿಂದೆ  ವೇಗದಿಂದ ಬಂದು ಡಿಕ್ಕಿ ಹೊಡೆದು ಸವಾರನು ರಸ್ತೆಗೆ  ಬಿದ್ದಿರುತ್ತಾನೆ  ಇದರಿಂದ ಆತನ  ತಲೆಗೆ  ತೀವ್ರ  ಸ್ವರೂಪದ  ರಕ್ತಗಾಯವಾಗಿದ್ದು ಆತನನ್ನು ಬ್ರಹ್ಮಾವರ ಪ್ರಣವ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ತದನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ  ತೆಗೆದುಕೊಂಡು ಹೋಗಿರುತ್ತಾರೆ. ಅಪಘಾತ ಸಮಯ ಮೋಟಾರ್ ಸೈಕಲ್‌ ಸವಾರನು ಶಿರಕವಚವನ್ನು  ಕೂಡ  ಧರಿಸಿರುವುದಿಲ್ಲವಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 10/02/2021 ರಂದು ಬೆಳಿಗ್ಗೆ 08:00 ಗಂಟೆಯಿಂದ 13:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿದಾರರಾಧ ಬಾಬು ಕುಲಾಲ್ (67) ತಂದೆ. ದಿವಂಗತ ಮಂಜ ಕುಲಾಲ್ ವಾಸ, ಚೋರಾಡಿ ಕೋಡಿ ಮನೆ 28 ಹಾಲಾಡಿ ಗ್ರಾಮ ಕುಂದಾಪುರ ಇವರ ಸಹೋದರ ಗೋವಿಂದ ಕುಲಾಲ್‌ ಎಂಬುವವರ ಮನೆಯಲ್ಲಿದ್ದ ಬಾಬು ಕುಲಾಲ್‌ ರವರ ತಾಯಿ ಮಂಜಿ ಕುಲಾಲ್ತಿ (80) ಎಂಬುವವರು  ಮನೆಯಲ್ಲಿ ಅಡುಗೆ ಮಾಡಲು ಸೀಮೆ ಎಣ್ಣೆಯನ್ನು ಒಲೆಗೆ ಉಪಯೋಗಿಸುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ ಅವರ ದೇಹದ ಬಹು ಪಾಲು ಸುಟ್ಟು ಹೋಗಿ ಗಂಭೀರ ಗಾಯಗೊಂಡಿರುತ್ತಾರೆ. ಹೀಗೆ ಗಾಯಗೊಂಡಿದ್ದವರು ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ  ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ ದಾಖಲಾಗಿದ್ದವರು ದಿನಾಂಕ 12/02/2021 ರಂದು 14:40 ಘಂಟೆಗೆ ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 04/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಮಲ್ಪೆ: ದಿನಾಂಕ 12/02/2021 ರಂದು ಪಿರ್ಯಾದುದಾರರಾದ  ಗುಂಡಪ್ಪ ಪೂಜಾರಿ (65) ತಂದೆ: ದಿ/ ದೂಮಪ್ಪ ಪೂಜಾರಿ ವಾಸ: ಕೆಮ್ಮಣ್ಣು ಪೋಸ್ಟ್, ಮೂಡುತೋನ್ಸೆ ಗ್ರಾಮ  ಇವರು  ಬೆಳಿಗ್ಗೆ 09:00 ಗಂಟೆಗೆ ತನ್ನ ಕೆಮ್ಮಣ್ಣುವಿನ  ಹಾಲು ಡೈರಿಯಿಂದ  ವಾಪಸ್ಸು ಮನೆಯಾದ  ಮೂಡುತೋನ್ಸೆಗೆ  ನಡೆದುಕೊಂಡು ಹೋಗುವಾಗ ಅವರ ಸಾಕು ನಾಯಿಯು ಅವರನ್ನು  ಹಿಂಬಾಲಿಸಿಕೊಂಡು ಹೋಗುತ್ತಿದ್ದು ಸಮಯ ಸುಮಾರು  ಬೆಳಿಗ್ಗೆ 09:15 ಗಂಟೆಗೆ  ಕೆಮ್ಮಣ್ಣು ನಿಡಂಬಳ್ಳಿ  ಕಲ್ಯಾಣಪುರ ಸಾರ್ವಜಿನಿಕ ರಸ್ತೆಯಲ್ಲಿ ಹೋಗುತ್ತಿರುವಾಗ  ಬ್ರಾನ್ ಡಿಸೋಜಾ ರವರು ಅವರ ಮನೆಯ ಎದುರು ರಸ್ತೆಯ ಬದಿಯಲ್ಲಿ ನಿಂತುಕೊಂಡು ಆವರ ಕೈಯಲ್ಲಿದ್ದ  ಏರ್ ಗನ್ ನಿಂದ ಗುಂಡಪ್ಪ ಪೂಜಾರಿ ರವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಅವರ ಸಾಕು ನಾಯಿಗೆ ಸೂಟ್ ಮಾಡಿದ ಪರಿಣಾಮ ನಾಯಿಯ ಬಲಬದಿಯ ಹೊಟ್ಟೆಗೆ ಗಾಯ ಉಂಟಾಗಿ ನಾಯಿಯು ಬೊಬ್ಬೆ ಹೊಡೆಯುತ್ತಾ ಅಲ್ಲೆ ಸಮೀಪದ ತೆರೇಸಾ ರವರ ಮನೆಯ ಅಂಗಳದಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ: 428, 429 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 12/02/2021 ರಂದು ಬೈಂದೂರು ಸಿ.ಪಿ.ಐ ಸಂತೋಷ ಅ ಕಾಯ್ಕಿಣಿ ಯವರು ಜೀಪ್‌ನಂಬ್ರ  KA-20-G-327 ನೇದರಲ್ಲಿ ಚಾಲಕ ಚಂದ್ರ ರವರ ಜೊತೆಯಲ್ಲಿ ಕುಂದಾಪುರ ಉಪವಿಭಾಗದ ಸರಹದ್ದಿನಲ್ಲಿ ರೌಂಡ್ಸ್‌ಕರ್ತವ್ಯದಲ್ಲಿರುವಾಗ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಭಟ್ಕಳ ಕಡೆಯಿಂದ ಕೇರಳಕ್ಕೆ KA-19-A-1801 ASHOK LEYLAND ಲಾರಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುವ ಬಗ್ಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ರವರು ಖಚಿತ ಮಾಹಿತಿ ಪಡೆದು ಸಿ.ಪಿ.ಐ ರವರಿಗೆ ತ್ರಾಸಿಗೆ ಬರಲು ಸೂಚಿಸಿ, ಅವರು ಸಹ ತ್ರಾಸಿಗೆ ಬಂದಿರುತ್ತಾರೆ. ಅದರಂತೆ ಸಿ.ಪಿ.ಐ ಬೈಂದೂರು ರವರು ಗಂಗೊಳ್ಳಿ ಠಾಣಾ ಎ.ಎಸ್‌.ಐ ವೆಂಕಟೇಶ ಗೊಲ್ಲ ಹಾಗೂ ರಮೇಶ ರವರೊಂದಿಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರ ನಿರ್ದೇಶನದಂತೆ ತ್ರಾಸಿ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಬೆಳಿಗ್ಗಿನ ಜಾವ ಸುಮಾರು 1:30 ಗಂಟೆಗೆ ಬೈಂದೂರು ಕಡೆಯಿಂದ ಕಾಸರಗೋಡು ಚೇರ್ಕಳ ಎಂಬಲ್ಲಿಗೆ KA-19-A-1801 ASHOK LEYLAND ಲಾರಿಯಲ್ಲಿ ಆಪಾದಿತರಾದ ಲಾರಿ ಚಾಲಕ ರಾಘವೇಂದ್ರ ಹಾಗೂ ಕ್ಲೀನರ್  ನಝರುಲ್ಲಾ ಎಂಬುವವರು ಅಕ್ರಮವಾಗಿ 18 ಎತ್ತುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಅವುಗಳ ಕಾಲು, ಕುತ್ತಿಗೆ, ಬಾಲಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ಯಾವುದೇ ಪರವಾನಿಗೆ ಇಲ್ಲದೇ ಮಾಂಸಕ್ಕಾಗಿ ಸಾಗಿಸುತ್ತಿದ್ದುದು ಕಂಡು ಬಂದಿದ್ದು, ಆಪಾದಿತರನ್ನು ಹಾಗೂ ಸೊತ್ತನ್ನು ಗಂಗೊಳ್ಳಿ ಪೊಲೀಸ್ ಠಾಣಾ ಆವರಣಕ್ಕೆ ತಂದು ಪಂಚರ ಸಮಕ್ಷಮ ವಶಪಡಿಸಿಕೊಂಡಿರುವುದಾಗಿದೆ. ಎರಡು ಎತ್ತುಗಳು ವಾಹನದಲ್ಲಿಯೇ ಮೃತಪಟ್ಟಿದ್ದು, ಎತ್ತುಗಳ ಅಂದಾಜು ಮೌಲ್ಯ ತಲಾ 20,000/-ರೂಪಾಯಿ ನಂತೆ 3,60,000/-ರೂಪಾಯಿ ಹಾಗೂ ಲಾರಿಯ ಮೌಲ್ಯ ಅಂದಾಜು 10,00,000/- ರೂಪಾಯಿ ಆಗಿರುವುದಾಗಿದೆ.  ಈ ಬಗ್ಗೆ ಗಂಗೊಳ್ಳಿ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 379, 429, ಐ.ಪಿ.ಸಿ, ಕಲಂ 8, 9, 11 Prevention Of Cow Slaugter And Cattle Prevention Act-1964 ಹಾಗೂ ಕಲಂ 11(1) (ಡಿ) Prevention Of  Cruelity To Animal Act- 1960 ಮತ್ತು ಕಲಂ 66 ಜೊತೆಗೆ 192(ಎ) ಐ.ಎಂ.ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-02-2021 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080