ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಮಹಮ್ಮದ್ ಫಜಲ್, (23) ತಂದೆ: ಅಬೂಬಕ್ಕರ್, ವಾಸ: # 23-45, ಎಂಜೆಎಂ 678, ಅಸೀಮಾ ಮಂಜಿಲ್, ಬೇಂಗ್ರೆ ಕಸಬಾ, ಮಂಗಳೂರು ಇವರು ದಿನಾಂಕ 13/02/2021 ರಂದು ಉಡುಪಿಯಲ್ಲಿರುವ ತನ್ನ ಚಿಕ್ಕಮ್ಮನ ಮನೆಯ ಕಾರ್ಯಕ್ರಮಕ್ಕೆ ಹೋಗಲು, ಅವರ ಸ್ನೇಹಿತ ಮೊಹಮ್ಮದ್ ಮುಸ್ತಫಾ ಎಂಬುವವರ KA-20-P-4430 ನೇ ನಂಬ್ರದ ಇನ್ನೋವಾ ಕಾರಿನಲ್ಲಿ ತನ್ನ ಅಣ್ಣ ಮೊಹಮ್ಮದ್ ಹಿಲಾಲ್, ತಮ್ಮ ಅನ್ಸಾರ್, ತಾಯಿ ಆಸ್ಮಾ, ಚಿಕ್ಕಮ್ಮ ಹಫ್ಸಾ, ಅಕ್ಕ ಅನ್ಸೀರಾ, ತಂಗಿ ಆಶೀರಾ ರವರ ಜೊತೆ ಕಾರನ್ನು ಚಾಲನೆ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವ ಸಮಯ ಸುಮಾರು 10:00 ಗಂಟೆಗೆ ಕಾಪು ತಾಲೂಕು ಹೆಜಮಾಡಿ ಟೋಲ್‌ಗೇಟಿನ ಲೇನ್ ತಲುಪಿದಾಗ, ಸದ್ರಿ ಲೇನಿನಲ್ಲಿ ಟೋಲ್ ಪಾವತಿಗಾಗಿ ಮಹಮ್ಮದ್ ಫಜಲ್ ರವರ ಕಾರಿನ ಎದುರುಗಡೆ ನಿಂತಿದ್ದ KA-18-B-7995 ನೇ ನಂಬ್ರದ  ಬಸ್ಸನ್ನು ಅದರ ಚಾಲಕ ಜುನೈದ್ ಎಂಬುವರು ಬೇರೆ ಲೇನಿನಲ್ಲಿ ಹೋಗುವ ಉದ್ದೇಶದಿಂದ ಯಾವುದೇ ಸೂಚನೆ ನೀಡದೇ ಬಸ್ಸನ್ನು ಒಮ್ಮಲೇ ಹಿಂದಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಪರಿಣಾಮ, ಕಾರಿನ ಎದುರುಗಡೆಯ ಬಂಪರ್, ಗ್ರಿಲ್ ಮತ್ತು ಬಾನೆಟ್ ಜಖಂಗೊಂಡಿದ್ದು, ಬಸ್ಸಿನ ಹಿಂದಿನ ಏಣಿಯು ಜಖಂಗೊಂಡಿದ್ದು, ಯಾವುದೇ ಗಾಯ ನೋವುಗಳಾಗಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾಧ ಶಾಲಿನಿ ಪೂಜಾರಿ  (40), ಗಂಡ: ಸುರೇಶ ಪೂಜಾರಿ ವಾಸ: ಶೆಟ್ರಕಟ್ಟೆ ಕುದ್ರಿಗುಡ್ಡೆ, ಕೆಂಚನೂರು ಗ್ರಾಮ ಕುಂದಾಪುರ ಇವರ ತಂದೆ ಶೇಷ ಪೂಜಾರಿ  ಎಂಬುವವರು ದಿನಾಂಕ 24/01/2021 ರಂದು ಮಧ್ಯಾಹ್ನ 13:30 ಗಂಟೆಗೆ ಊಟವನ್ನು ಮಾಡಿ ಮನೆಯ ಜಗುಲಿಯಲ್ಲಿ ಮಲಗಿದ್ದು  ಇವರ ತಂದೆ ಸ್ವಲ್ಪ ಸಮಯದ ಬಳಿಕ ವಾಂತಿ ಮಾಡಿತ್ತಿದ್ದುದ್ದನ್ನು ನೋಡಿ ಹತ್ತಿರ ಹೋದಾಗ ಘಾಟು ವಾಸನೇ ಬಂದ್ದಿದ್ದು ನಂತರ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೋಂಡು ಹೋಗಿ ವೈದ್ಯಾದಿಕಾರಿಯವರು ಪರೀಕ್ಷಿಸಿ ನಂತರ ಹೆಚ್ಚಿನ ಚಿಕಿತ್ಸಗೆ ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ  ಮೇರೆಗೆ ಅಜ್ಜರಕಾಡು ಆಸ್ಪತ್ರೆಗೆ ಕರೆದು ಕೂಂಡು ಹೋಗಿ ವೈದ್ಯಾಧಿಕಾರಿಯವರು ಪರೀಕ್ಷೀಸಿದಲ್ಲಿ ವೈದ್ಯಾದಿಕಾರಿಗಳು ಹೆಚ್ಚಿನ ಚಿಕಿತ್ಸೆ ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದು ಕೊಂಡುಹೋಗುವಂತೆ ಸೂಚಿಸಿದ ಮೇರೆಗೆ  ಮಣಿಪಾಲ ಆಸ್ಪತ್ರೆಗೆ ಕರೆದು ಹೋಗಿ ದಾಖಲಿಸಿ ಅಲ್ಲಿನ ವೈದ್ಯಾದಿಕಾರಿಯವರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿ ಕೊಂಡರು ಶಾಲಿನಿ ರವರ ತಂದೆ, ವಯೋವೃದ್ದರಾಗಿದ್ದು ವಿಪರೀತ ಕುಡಿತದಚಟವಿದ್ದು, ವಿಷ ಪದಾರ್ಥ ಸೇವಿಸಿದ್ದಾಗಿದೆ. ಅಲ್ಲಿ ದಿನಾಂಕ 12/02/2021 ರಂದು ಮಧ್ಯಾಹ್ನ 15:45 ಗಂಟೆಗೆ ಚಿಕಿತ್ಸೆ ಪಲಕಾರಿಯಾಗದೆ ಮರಣ ಹೊಂದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 03/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಇವರ ತಾಯಿ ಸುಬ್ಬಿ (70) ಇವರು ಮನೆಯಲ್ಲಿಯೇ ಇದ್ದು ಕೃಷಿ ಮತ್ತು ಹೈನುಗಾರಿಕೆ ಕೆಲಸವನ್ನ ಮಾಡಿಕೊಂಡಿರುತ್ತಾರೆ ದಿನಾಂಕ 10/02/2021 ರಂದು ದನಗಳನ್ನು ಮೇಯಲು ಬಿಟ್ಟಿದ್ದನ್ನು ವಾಪಾಸ್ಸು ಕೊಟ್ಟಿಗೆಗೆ ತಂದು ಕಟ್ಟಿ ಅವುಗಳಿಗೆ ಕುಡಿಯಲು ಬಾಯಾರಿಕೆ ಕೊಟ್ಟು ಅವುಗಳಿಗೆ ಒಣಗಿದ ಹುಲ್ಲನ್ನು ಹಾಕಲು ಕೊಟ್ಟಿಗೆಯ ಅಂಚಿನಿಂದ ಒಣ ಹುಲ್ಲನ್ನು ತೆಗೆಯುತ್ತಿರುವಾಗ, ಹುಲ್ಲು ಕೊಟ್ಟಿಗೆಯ ಅಂಚಿನಿಂದ ಬಚ್ಚಲು ಮನೆಯ ಒಲೆಯ ಬೆಂಕಿಗೆ ತಾಗಿ ಆಕಸ್ಮಿಕವಾಗಿ ಬೆಂಕಿ ಹಿಡಿದುಕೊಂಡು ಹುಲ್ಲು ಹಿಡಿದಿದ್ದ ಸುಬ್ಬಿಯವರಿಗೆ ಬೆಂಕಿ ತಗುಲಿ ಮೈಯಲ್ಲಾ ಸುಟ್ಟುಹೋಗಿದ್ದು  ಅವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೆನಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಸುಬ್ಬಿ ರವರು  ಚಿಕಿತ್ಸೆಯಲ್ಲಿರುತ್ತಾ ದಿನಾಂಕ 12/02/2021 ರಂದು 18:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 03/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಮಹೇಶ್ ಸುವರ್ಣ (30) ತಂದೆ: ದಾಕಯ್ಯ ಅಂಚನ್ ವಾಸ: ಬೋರ್ ದಡ್ಡು ಆಶ್ರಯ ನಿವಾಸ ಇರ್ವತ್ತೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರ ತಂದೆ ದಾಕಯ್ಯ ಅಂಚನ್ (55) ಇವರು ಕಾರ್ಕಳ ತಾಲೂಕು ಇರ್ವತ್ತೂರು  ಗ್ರಾಮದ ಬೋರ್ ದಡ್ಡು ಆಶ್ರಯ  ನಿವಾಸದಲ್ಲಿ ಕುಟುಂಬದೊಂದಿಗೆ ವಾಸ ಮಾಡಿಕೊಂಡಿದ್ದು, ಸುಮಾರು 30 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು,  ಇದೇ ಕಾರಣದಿಂದ ಮನನೊಂದು  ದಿನಾಂಕ 12/02/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 13/02/2021 ಬೆಳಿಗ್ಗೆ 09:30 ಗಂಟೆಯ ನಡುವಿನ ಅವಧಿಯಲ್ಲಿ ಇರ್ವತ್ತೂರು ಗ್ರಾಮದ ಅರಂತಬೆಟ್ಟು ಎಂಬ ಹಾಡಿಯಲ್ಲಿ ಸೊಂಟಕ್ಕೆ ಸುತ್ತಿಕೊಂಡಿರುವ ಕೇಸರಿ ಬಣ್ಣದ ಪಂಚೆಯಿಂದ ಯಾವುದೋ ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 03/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಮಹಾಬಲ ಶೆಟ್ಟಿ (50) ರವರು ತನ್ನ ಹೆಂಡತಿ ಮನೆಯಾದ ಬ್ರಹ್ಮಾವರ ತಾಲೂಕು ಬಿಲ್ಲಾಡಿ ಗ್ರಾಮದ ಒಂದಾಡಿ ಮಕ್ಕಿಮನೆ ಎಂಬಲ್ಲಿ ವಾಸವಾಗಿದ್ದು, ಸದ್ರಿಯವರು ಮನೆಯ ಹತ್ತಿರದ ಜಮೀನಿನಲ್ಲಿ ಬೆಳೆ ಬೆಳೆಯುವ ಹಾಗೂ  ಸುತ್ತಮುತ್ತಲು ಅಡಿಕೆ ಹಾಗೂ ತೆಂಗಿನ ತೋಟವನ್ನು ಹೊಂದಿದ್ದು ಅದರಲ್ಲಿ ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ ದಿನಾಂಕ 13/02/2021 ರಂದು ಬೆಳಿಗ್ಗೆ ಸಮಯ ಮಹಾಬಲ ಶೆಟ್ಟಿಯವರು ಕೃಷಿ ಕೆಲಸ ಮಾಡಿಕೊಂಡಿರುವಾಗ ಬೆಳಿಗ್ಗೆ 10:30 ಗಂಟೆಗೆ ತೆಂಗಿನ ಮರದ ತೆಂಗಿನ ಕಾಯಿ ತೆಗೆಯಲು ತೆಂಗಿನ ಮರ ಹತ್ತಿ ತೆಂಗಿನ ಕಾಯಿಯನ್ನು ತೆಗೆದು ವಾಪಾಸು ಮರದಿಂದ ಕೆಳಗೆ ಇಳಿಯುವ ಸಮಯ, ಸರಿ ಸುಮಾರು ಅರ್ಧ ತೆಂಗಿನ ಮರದಿಂದ ಆಕಸ್ಮಿಕವಾಗಿ ಜಾರಿ ಮರದಿಂದ ಕೆಳಗೆ ತೋಡಿಗೆ ಬಿದ್ದು ಎದೆಗೆ ತೀವ್ರ ಸ್ವರೂಪದ ಗಾಯವಾಗಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಕೋಟೇಶ್ವರ ಎನ್‌ಆರ್‌ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿನ ವೈದ್ಯರ ಸಲಹೆಯಂತೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು,,ಅಲ್ಲಿ ಚಿಕಿತ್ಸೆಯಲ್ಲಿದ್ದ ಮಹಾಬಲ ಶೆಟ್ಟಿಯವರು ಚಿಕಿತ್ಸೆಗೆ ಸ್ಪಂದಿಸದೇ ಮದ್ಯಾಹ್ನ 12:10 ಗಂಟೆಗೆ ಮೃತಪಟ್ಟಿರುವುದಾಗಿದೆ. ಮೃತ ಮಹಾಬಲ ಶೆಟ್ಟಿಯವರು ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದು, ಕೃಷಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ತೆಂಗಿನ ಮರದಿಂದ ಬಿದ್ದು ಎದೆಗೆ ತೀವ್ರ ಸ್ವರೂಪದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವುದಾಗಿದೆ, ಎಂಬುದಾಗಿ ಗಣೇಶ್‌ಶೆಟ್ಟಿ(28) ತಂದೆ; ಭುಜಂಗ ಶೆಟ್ಟಿ ವಾಸ; ಗಣೇಶ್‌ನಿಲಯ ಕೆಲ ಕುಂಜಾಲು ನೀಳಾವರ ಗ್ರಾಮ ಬ್ರಹ್ಮಾವರ ತಾಲೂಕು ಇವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 04/2021, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ರಹಮತ್, (35) ಗಂಡ: ದಿ. ಅಬ್ದುಲ್ ಬಾಷಾ, ವಾಸ: ಶಾನಿಬಾ ಮಂಜಿಲ್, ಭಾಸ್ಕರನಗರ, ಬಡಾ ಗ್ರಾಮ, ಕಾಪು ತಾಲೂಕು. ಉಡುಪಿ ಇವರು ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಭಾಸ್ಕರನಗರದಲ್ಲಿರುವ ತಮ್ಮ ನಿವಾಸದಲ್ಲಿ ತನ್ನ ಮಾವ, ಮೈದುನ ಹಾಗೂ ಮೂರು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 12/02/2021 ರಂದು ತಮ್ಮ ಮಾವನನ್ನು ಅವರ ಮಗನ ಮನೆಯಾದ ಸಾಸ್ತಾನಕ್ಕೆ ಬಿಟ್ಟು ಬಂದು, ರಾತ್ರಿ 21:00 ಗಂಟೆಗೆ ಮನೆಗೆ ಬೀಗ ಹಾಕಿ ತಮ್ಮ ಮನೆಯಿಂದ ಸುಮಾರು 150 ಮೀಟರ್ ದೂರದಲ್ಲಿರುವ ತನ್ನ ಗಂಡನ ಮಾವನ ಮನೆಗೆ ಮಲಗಲು ಹೋಗಿರುತ್ತಾರೆ. ನಂತರ ದಿನಾಂಕ 13/02/2021 ರಂದು ಬೆಳಿಗ್ಗೆ 06:30 ಗಂಟೆಗೆ ಮನೆಗೆ ವಾಪಾಸ್ಸು ಬಂದಾಗ ಯಾರೋ ಕಳ್ಳರು ಯಾವುದೋ ರೀತಿಯಲ್ಲಿ ರಹಮತ್‌ ರವರ ಮನೆಯ ಒಳ ಪ್ರವೇಶಿಸಿ, ರೂಮಿನ ಕಪಾಟಿನಲ್ಲಿದ್ದ 1) 6 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್-01, 2) 2 ಗ್ರಾಂ ತೂಕದ  ಚಿನ್ನದ ಪೆಂಡೆಂಟ್-01, 3) 2 ಗ್ರಾಂ ತೂಕದ ಚಿನ್ನದ ಟಿಕ್ಕಿ-1, 4) 2 ಗ್ರಾಂ ತೂಕದ ಚಿನ್ನದ ಉಂಗುರ-1, 5) 6 ಗ್ರಾಂ ತೂಕದ ಚಿನ್ನದ ಪ್ಲೈನ್ ಬ್ರಾಸ್ ಲೈಟ್-01, 6) 3 ಪವನ್ ತೂಕ ಚಿನ್ನದ ಬಳೆ-1, 7) 3 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್-01 ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಚಿನ್ನದ ಒಟ್ಟು ತೂಕ ಐದೂವರೆ ಪವನ್ ಆಗಿದ್ದು, ಕಳುವಾದ ಸೊತ್ತಿನ ಅಂದಾಜು ಮೌಲ್ಯ 1,40,000/- ರೂಪಾಯಿ  ಆಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಲಕ್ಷ್ಮಣ ಪೂಜಾರಿ (42) ತಂದೆ; ಮಂಜು ಪೂಜಾರಿ, ವಾಸ; ಶಿರೂರು ಗ್ರಾಮ, ಬೈಂದೂರು ಇವರಿಗೆ ಆರೋಪಿಯಾದ ದೇವ (50) ತಾಯಿ: ನಾಗಮ್ಮ ಹೆಂಗ್ಸು, ವಾಸ; ಕರಾವಳಿ ತೆಂಕಮನೆ, ಶಿರೂರು ಗ್ರಾಮ, ಬೈಂದೂರು ಇವರು ದಿನಾಂಕ 17/11/2017 ರಂದು ಬೈಂದೂರು ಉಪನೊಂದಣಾ ಕಛೇರಿಯಲ್ಲಿ ದಸ್ತಾವೇಜು ನಂ 1843/2017-18 ರಂತೆ ಕ್ರಯ ಪತ್ರ ಮಾಡಿಕೊಟ್ಟಿದ್ದು, ಸದ್ರಿ ಸ್ಥಿರಾಸ್ತಿಯು ಶಿರೂರು ಗ್ರಾಮದ ಸರ್ವೆ ನಂ ಸರ್ವೆ ನಂ 300/06 ರಲ್ಲಿ 0.53 ಎಕ್ರೆ ಸ್ಥಳ ನಿಗದಿಯಾಗಿತ್ತು ಸದ್ರಿ ಜಾಗಕ್ಕೆ  ಬೆಲೆ 7,95,000/-ನ್ನು ಲಕ್ಷ್ಮಣ ಪೂಜಾರಿ ರವರಿಗೆ ಕ್ರಯ ಪತ್ರ ಮಾಡುವ ಸಂದರ್ಭದಲ್ಲಿ ನೀಡಿರುತ್ತಾರೆ. ಸದ್ರಿ ಕ್ರಯ ಪತ್ರ ಮಾಡುವಾಗ ಲಕ್ಷ್ಮಣ ಪೂಜಾರಿ ರವರು ಈ ಸ್ಥಿರಾಸ್ತಿಯ ಮೇಲೆ ಯಾವುದೇ ಸಾಲ, ಅಡವು, ಕೋರ್ಟ್ ವ್ಯಾಜ್ಯ, ಜಪ್ತಿ, ಇಂಜೆಕ್ಷನ್‌ಡಿಕ್ರಿ ಯಾವುದೇ ಇರುವುದಿಲ್ಲವೆಂದು ನಂಬಿಸಿ ಆರೋಪಿ ಕ್ರಯ ಪತ್ರ ಮಾಡಿಕೊಟ್ಟಿರುತ್ತಾರೆ. ಲಕ್ಷ್ಮಣ ಪೂಜಾರಿ ರವರು ಸದ್ರಿ ಕ್ರಯ ಪತ್ರದ ಆಧಾರದ ಮೇಲೆ ಖಾತಾ ಬದಲಾವಣೆ ಮಾಡುವ ಸಂಧರ್ಬದಲ್ಲಿ ಶಿರೂರು ಗ್ರಾಮದ ನಾರಾಯಣ ಪೂಜಾರಿಯವರ ಹೆಂಡತಿ ಚೆನ್ನಮ್ಮ ಹಾಗೂ ಅವರ ಮಗ ಪ್ರಭಾಕರ ಪೂಜಾರಿಯವರು ಸದ್ರಿ ಜಾಗದ ವಿಚಾರದಲ್ಲಿ  ನ್ಯಾಯಾಲಯದಲ್ಲಿ ಓಎಸ್‌ನಂ 101/2008 ರಂತೆ ದಾವೆ ದಾಖಲಾದ ಬಗ್ಗೆ ಹಾಗೂ ಸದ್ರಿ ಸ್ಥಿರಾಸ್ತಿಯ ಮೇಲೆ ಮಂಗಳ ಕೋ ಆಪೊರೇಟಿವ್‌ಬ್ಯಾಂಕಿನಲ್ಲಿ ಸ್ಥಿರಾಸ್ತಿಯನ್ನು ಆಧಾರವಾಗಿಟ್ಟು ಸಾಲ ಪಡೆದಿರುವುದು ಲಕ್ಷ್ಮಣ ಪೂಜಾರಿ ರವರ ಗಮನಕ್ಕೆ ಬಂದಿರುತ್ತದೆ, ಆರೋಪಿಯು ಸದ್ರಿ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪೂರ್ವದಲ್ಲಿ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹಾಗೂ ಬ್ಯಾಂಕಿನಲ್ಲಿ ಸಾಲ ಇರುವ ಬಗ್ಗೆ ಆರೋಪಿತನಿಗೆ ತಿಳಿದಿದ್ದರೂ ಸಹ  ಲಕ್ಷ್ಮಣ ಪೂಜಾರಿ ರವರಿಗೆ ಸದರಿ ಸ್ಥಿರಾಸ್ತಿಯನ್ನು ಮಾರಾಟ ಮಾಡಿ ಹಣ ಪಡೆದು ವಂಚನೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 420, 465, 468, 471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-02-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080