ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು: ಪಿರ್ಯಾದಿದಾರರಾದ ರಕ್ಷಿತ್‌ ಬಿ ಆರ್‌ (24), ತಂದೆ: ರಾಘವೇಂದ್ರ ಬಿ ವಿ, ಕಣ್ಕಿ ಬೇಳೂರು  ರ್ಯಾವೆ  ಅಂಚೆ ಬೇಳೂರು ಗ್ರಾಮ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ ಇವರು  ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದು, ದಿನಾಂಕ 12/01/2023 ರಂದು ಬೆಳಿಗ್ಗೆ ಮನೆಯಿಂದ ಉಡುಪಿಗೆ ಹೋಗಲೆಂದು ತನ್ನ ತಂದೆಯKA-20-ED-1803 ನೇ ಮೋಟಾರು ಸೈಕಲಿನಲ್ಲಿ ಸಹ ಸವಾರನಾಗಿ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು  ಹುಲಿಕಲ್‌ಹೊಸಂಗಡಿ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ  08:22 ಗಂಟೆ ಸಮಯಕ್ಕೆ ಹೊಸಂಗಡಿ ಗ್ರಾಮದ ಹುಲಿಕಲ್‌ಘಾಟಿಯ  ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಹೊಸಂಗಡಿ ಕಡೆಯಿಂದ ಹುಲಿಕಲ್‌ಕಡೆಗೆ KA-14-N-2503 ನೇ ಕಾರು ಚಾಲಕ ಬಾಲಕೃಷ್ಣ ಶಾಸ್ತ್ರಿ  ತನ್ನ ಕಾರನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೋಟಾರು ಸೈಕಲ್ಲು ಸಮೇತ ರಸ್ತೆಗಿ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಗಂಟಿಗೆ ಗುದ್ದಿದ ಒಳ ಜಖಂ ಉಂಟಾಗಿ ಪಿರ್ಯಾದಿದಾರರು   ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ  ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಅಣ್ಣಪ್ಪ ಮೆಂಡನ್ (45), ತಂದೆ: ಕುಷ್ಟ ಮರಕಾಲ, ವಾಸ:  ಕೊರವಾಡಿ ಬಾರಾಳಿಬೆಟ್ಟು ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 11/01/2023 ರಂದು  19:00 ಗಂಟೆಗೆ ಮಲ್ಪೆಗೆ ತೆರಳಲು ಮನೆಯಿಂದ ಹೊರಟು ಉಡುಪಿ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟಲು ರಸ್ತೆಯ ಪಶ್ಚಿಮ ಬದಿಯಲ್ಲಿ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್ ಬಳಿ ಆರ್ಯ ಹಾರ್ಡವೇರ್ ಎದುರು ನಿಂತುಕೊಂಡು ರಸ್ತೆ ದಾಟಲು  ತಯಾರಿ ನಡೆಸುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ವಿರುದ್ದ ದಿಕ್ಕಿನಲ್ಲಿ ಮೋಟಾರ್ ಸೈಕಲ್ ಸವಾರ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಮುಖ ಮೂಗು ಬಲ ಕಾಲು ರಕ್ತ ಗಾಯವಾಗಿದ್ದು, ಎಡ ಕಾಲು ಬಲ ಕೈ, ಬೆನ್ನಿಗೆ ತರಚಿದ ಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶಾರದ (67), ಗಂಡ: ನಾಗಪ್ಪ ರುಕ್ಮಯ ಮೇಸ್ತ, ವಾಸ: ರವಳನಾಥ ನಿಲಯ, ಹಡವಿನಕೋಣೆ, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರ 2 ನೇ ಮಗ ಗಣಪತಿ ಮೇಸ್ತನು ಆತನ ಹೆಂಡತಿ ಮಕ್ಕಳೊಂದಿಗೆ ಪಿರ್ಯಾದಿದಾರರ ಮನೆಯ ಪಕ್ಕದಲ್ಲಿಯೇ ಪ್ರತ್ಯೇಕವಾಗಿ ವಾಸವಾಗಿದ್ದು. ದಿನಾಂಕ 11/01/2023 ರಂದು  ಬೆಳಿಗ್ಗೆ  9:00 ಗಂಟೆಗೆ ಆರೋಪಿ  ಕವಿತಾ  ಮನೆಯ ಕರೆಂಟ್ ಸ್ವಿಚ್ ತೆಗೆದ ವಿಚಾರದಲ್ಲಿ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಬಂದು    ಯಾಕೆ ಕರೆಂಟ್ ಸ್ವಿಚ್ ಆಫ್ ಮಾಡಿದ್ದು, ಕರೆಂಟ್ ಬಿಲ್ ನಾವು ಕಟ್ಟುತ್ತೇವೆ ಎಂದು ಹೇಳಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಪಿರ್ಯಾದಿದಾರರ ತಲೆಗೆ ಕಲ್ಲಿನಿಂದ ಹೊಡೆದು  ಪಿರ್ಯಾದಿದಾರರ ಗಂಡನನ್ನು  ಕೈಯಿಂದ ನೆಲಕ್ಕೆ ದೂಡಿ ಹಾಕಿರುತ್ತಾಳೆ. ಪಿರ್ಯಾದಿದಾರರ ತಲೆಗೆ ಕಲ್ಲಿನಿಂದ  ಹೊಡೆದ ಪರಿಣಾಮ ತಲೆಯಲ್ಲಿ ರಕ್ತ ಗಾಯವಾಗಿದ್ದು  ನೆರೆಮನೆಯವರು  ಅಂಬುಲೆನ್ಸ್ ನಲ್ಲಿ  ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ಕರೆದು ಕೊಂಡು ಬಂದಾಗ ವೈದ್ಯರು  ಪರೀಕ್ಷಿಸಿ  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಮೊದಲು ಪಿರ್ಯಾದಿದಾರರ ಮಗ  ಆರೋಪಿ ಗಣಪತಿ ಮೇಸ್ತನು ಕೂಡಾ ಮದ್ಯಪಾನ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ   ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 07/2023 ಕಲಂ : 447, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 13-01-2023 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080