ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮೀನಾಕ್ಷಿ ಶೆಟ್ಟಿ (60), ಗಂಡ:ಶೇಖರ ಶೆಟ್ಟಿ, ವಾಸ: ದುರ್ಗಯ್ಯ ಶೆಟ್ರ ಮನೆ, ಕರಾವಳಿ, ಶಿರೂರು ಗ್ರಾಮ , ಬೈಂದೂರು ತಾಲೂಕು ಇವರು ದಿನಾಂಕ 11/01/2022 ರಂದು ಅವರ ತಂಗಿ ಮಗ ಕಿರಣ ಶೆಟ್ಟಿಯವರೊಂದಿಗೆ ಆತನ KA-20-ER-4894 ನೇ ಮೋಟಾರು  ಸೈಕಲ್ ನಲ್ಲಿ ಹಿಂಬದಿ  ಸಹ ಸವಾರಳಾಗಿ ಕುಳಿತುಕೊಂಡು ಶಿರೂರು ಪೇಟೆಗೆ ಹೋಗಿ ಮನಗೆ ಬೇಕಾಗುವ ಸಾಮಾನುಗಳನ್ನು ಖರೀದಿಸಿ ವಾಪಾಸು  ಮನೆಗೆ ಬರುತ್ತಿರುವಾಗ ಸಂಜೆ 5:30 ಗಂಟೆಗೆ ಶಿರೂರು ಗ್ರಾಮದ ಶಿರೂರು ಕರಾವಳಿ ಬಳಿ ಯುವ ಶಕ್ತಿ ವೇದಿಕೆ ಎದುರು ಕಿರಣನು ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ  ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ದನವೊಂದು ಮೋಟಾರ್ ಸೈಕಲ್ ಗೆ ಅಡ್ಡ ಬಂದ ಕಾರಣ ಕಿರಣನು ಮೋಟಾರು ಸೈಕಲ್ ಗೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸವಾರ ನ ನಿಯಂತ್ರಣ ತಪ್ಪಿ  ಸವಾರ  ಹಾಗೂ ಪಿರ್ಯಾದಿದಾರರು ಮೊಟಾರು ಸೈಕಲ್ ಸಮೇತ ರಸ್ತೆ ಬಿದ್ದಿದ್ದು, ಪರಿಣಾಮ ಪಿರ್ಯಾದುದಾರರಿಗೆ ಬಲ ಕಾಲಿಗೆ ತೀವ್ರ ಒಳಜಖಂ ಉಂಟಾಗಿದ್ದು ಸವಾರ ಕಿರಣನಿಗೆ ಭುಜಕ್ಕೆ ಸೊಂಟಕ್ಕೆ ಒಳಜಖಂ ಉಂಟಾಗಿರುತ್ತದೆ.  ಗಾಯಗೊಂಡ ಪಿರ್ಯಾದಿದಾರರು ಹಾಗೂ  ಮೋಟಾರು ಸೈಕಲ್ ಸವಾರ ಕಿರಣ ರವರು ಚಿಕಿತ್ಸೆ ಬಗ್ಗೆ ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ರಾಘವೇಂದ್ರ (19), ತಂದೆ: ಮಾಧವ ಆಚಾರ್, ವಾಸ: ಬೇಗಾರು, ಬೇಗಾರು ಅಂಚೆ ಶೃಂಗೇರಿ ತಾಲೂಕು ಚಿಕ್ಕಮಗಳೂರು ಜಿಲ್ಲೆ ಇವರು ದಿನಾಂಕ 12/01/2022 ರಂದು ಸ್ನೇಹಿತ ನಕೇಶ.ಹೆಚ್.ಆರ್ ರವರು ಚಲಾಯಿಸುತ್ತಿದ್ದ  KA-40-M-4309 ನೇ ಕಾರಿನಲ್ಲಿ ಅಭಿಷೇಕ, ನವನ ಮತ್ತು ಪ್ರನೋತ ರವರೊಂದಿಗೆ ಶೃಂಗೇರಿಯಿಂದ ಮಲ್ಪೆ ಕಡೆಗೆ ಆಗುಂಬೆ-ಹೆಬ್ರಿ ಮಾರ್ಗವಾಗಿ ಹೋಗುತ್ತಿರುವಾಗ ಮಧ್ಯಾಹ್ನ 01:30 ಗಂಟೆಗೆ ಶಿವಪುರ ಗ್ರಾಮದ ಬ್ಯಾಣ ವಿಠಲ ಕುಲಾಲ ರವರ ಅಂಗಡಿ ಬಳಿ ತಲುಪುವಾಗ ನಕೇಶ.ಹೆಚ್.ಆರ್ ರವರು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಕಾರು ಪಲ್ಟಿಯಾಗಿ ಪಕ್ಕದಲ್ಲಿರುವ ಚರಂಡಿಗೆ ಬಿದ್ದು ಕಾರು ಜಖಂಗೊಂಡಿರುತ್ತದೆ. ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ  ಬಲಭುಜಕ್ಕೆ ಗುದ್ದಿದ ನೋವಾಗಿದ್ದು ಅಭಿಷೇಕ ರವರಿಗೆ ಕುತ್ತಿಗೆಗೆ ಗುದ್ದಿದ ನೋವಾಗಿರುತ್ತದೆ , ನವನ ರವರಿಗೆ ಬೆನ್ನು ಮೂಳೆ ಮುರಿತವಾಗಿರುತ್ತದೆ. ಪ್ರನೋತ ರವರಿಗೆ ಸೊಂಟದ ಮೂಳೆ ಮುರಿತವಾಗಿರುತ್ತದೆ, ಚಾಲಕ ನಕೇಶ.ಹೆಚ್.ಆರ್ ರವರಿಗೆ ಬಲಕೈ ಮೊಣಗಂಟಿನ ಬಳಿ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಿರ್ವಾ: ದಿನಾಂಕ 12/01/2022 ರಂದು ಶ್ರೀಶೈಲ್‌ ಡಿ.ಎಂ, ಪೊಲೀಸ್ ಉಪನಿರೀಕ್ಷಕರು, ಶಿರ್ವಾ ಪೊಲೀಸ್ ಠಾಣೆ ಇವರಿಗೆ ಬೆಳಗ್ಗಿನ ಜಾವದಲ್ಲಿ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಯವರ ಜೊತೆಯಲ್ಲಿ ಠಾಣೆಯಿಂದ ಹೊರಟು ಕಟ್ಟಿಂಗೇರಿ ಜಂಕ್ಷನ್‌ ತಲುಪಿ ಎಡ್ಮೇರ್‌ ದ್ವಾರದಿಂದಾಗಿ ಕೋಚರಪ್ಪು ಸೇತುವೆ ಬಳಿಗೆ ತಲುಪಿದಾಗ ಅಂಗಾರಕಟ್ಟೆ ಕಡೆಯಿಂದ ಎಡ್ಮೇರ್‌ ಕಡೆಗೆ  ಪಿಕಪ್‌  ಗೂಡ್ಸ್  ವಾಹನ ಬರುತ್ತಿದ್ದು ಅದರ ಚಾಲಕನು  ಇಲಾಖಾ  ಜೀಪನ್ನು  ನೋಡಿ ಪಿಕಪ್‌  ವಾಹನವನ್ನು  ಆ ಕೂಡಲೇ ರಸ್ತೆ ಬದಿಯಲ್ಲಿದ್ದ ಕಲ್ಲಿಗೆ ತಾಗಿಸಿ ನಿಲ್ಲಿಸಿ  ಬಳಿಕ ಪಿಕಪ್‌ ವಾಹನದಲ್ಲಿದ್ದ ಚಾಲಕ ಸೇರಿ  ನಾಲ್ಕು ಜನರು ವಾಹನವನ್ನು ಸ್ಥಳದಲ್ಲಿಯೇ  ನಿಲ್ಲಿಸಿ  ಹಾಡಿ  ಕಡೆಗೆ ಓಡಿ ಹೋಗಿದ್ದು  ಆ  ಸಮಯಕ್ಕೆ   ಪಿಕಪ್‌  ವಾಹನದ ಹಿಂದಿನಿಂದಲೇ ಬಿಳಿ ಬಣ್ಣದ ಇನ್ನೋವಾ ಕಾರು  ಬಂದಿದ್ದು ಕಾರನ್ನು  ಅದರ ಚಾಲಕನು ಕೂಡ ಇಲಾಖಾ ಜೀಪನ್ನು ನೋಡಿ ರಸ್ತೆಯಲ್ಲಿಯೇ ನಿಲ್ಲಿಸಿ ಚಾಲಕ ಸೇರಿ ಕಾರಿನಲ್ಲಿದ್ದ  ನಾಲ್ಕು  ಜನರು ಹಾಡಿ  ಕಡೆಗೆ ಓಡಿ ಹೋಗಿದ್ದು  KA-19-AC-3739 ನೇ ನೊಂದಣಿ ಸಂಖ್ಯೆಯ ಪಿಕಪ್‌ ವಾಹನದ ಒಳಗಡೆ ಆರು  ದನ  ಮತ್ತು  ಏಳು ಗಂಡು ಕರುಗಳ ಕಾಲಿಗೆ ಹಗ್ಗವನ್ನು ಕಟ್ಟಿ ಹಿಂಸಾತ್ಮಾತಕ  ರೀತಿಯಲ್ಲಿ ತುಂಬಿಸಿದ್ದು  KA-19-MF- 1879  ನೇ  ನೊಂದಣಿ ಸಂಖ್ಯೆಯ ಕಾರಿನ ಒಳಗಡೆ  ಎರಡು ಗಂಡು ಕರುಗಳನ್ನು ತುಂಬಿಸಿದ್ದು  ಕಂಡು ಬಂದಿದ್ದು ಆಪಾದಿತರುಗಳು ದನ ಮತ್ತು ಗಂಡು ಕರುಗಳನ್ನು  ವಧೆ  ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಅವುಗಳ ಕಾಲಿಗೆ ಹಗ್ಗವನ್ನು ಕಟ್ಟಿ ಹಿಂಸಾತ್ಮಾಕ  ರೀತಿಯಲ್ಲಿ ಪಿಕಪ್‌ ಗೂಡ್ಸ್‌ ವಾಹನ  ಮತ್ತು ಕಾರಿಗೆ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 379 ಐಪಿಸಿ & 5, 12 The Karnataka Prevention of slaughter and preservation of cattle ordinance 2020 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸುಮನ ಆಚಾರ್ಯ (40), ತಂದೆ: ಅನಂತಯ್ಯ ಆಚಾರ್ಯ, ವಾಸ: ನಂಬ್ರ-315, 3 ನೇ ಮಹಡಿ, ಸುವಿಧಾ ಅಪಾರ್ಟ್‌ಮೆಂಟ್, ಪೆರ್ವಾಜೆ ರೋಡ್, ಕಸಬಾ ಕಾರ್ಕಳ ತಾಲೂಕು ಇವರು ಕಾರ್ಕಳ ಕಸಬಾದ ಪೆರ್ವಾಜೆಯಲ್ಲಿರುವ ಸುವಿಧಾ ಅಪಾರ್ಟ್‌ ಮೆಂಟ್‌ನಲ್ಲಿ 3 ನೇ ಮಹಡಿಯಲ್ಲಿ ನಾಲ್ಕೂವರೆ ವರ್ಷಗಳಿಂದ  ವಾಸವಾಗಿದ್ದು ದಿನಾಂಕ 12/01/2022 ರಂದು ಬೆಳಿಗ್ಗೆ 09:00 ಗಂಟೆಗೆ ಮಿಕ್ಸಿ ರಿಪೇರಿ ಅಂಗಡಿಗೆ ಪೆರ್ವಾಜೆಗೆ ಹೋಗಿ ವಾಪಾಸು ಬಂದು ಅಪಾರ್ಟ್‌ ಮೆಂಟ್‌ನ ಮೂರನೇ ಮಹಡಿಯಲ್ಲಿರುವ ತನ್ನ ಮನೆಗೆ ಹೋಗುವ ಸಮಯ ಲಿಫ್ಟ್ ಅರ್ಧದಲ್ಲಿಯೇ ನಿಂತಿದ್ದು ಲಿಪ್ಟ್‌ ನ ತುರ್ತು ಗಂಟೆ ಒತ್ತಿದಾಗ ಪರಿಚಯದ ದಿಶಾ ಮತ್ತು ಆಕೃತಿ ಬಟ್ಟೆ ಅಂಗಡಿಯವರು ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಆಗದ ಕಾರಣ 4 ನೇ ಮಹಡಿಯ ಯುವಕನೊಬ್ಬ  ಬಂದು ಅಪಾರ್ಟ್‌ಮೆಂಟ್‌ನ ಅಧ್ಯಕ್ಷರಾದ ಅಪಾದಿತ ಮಹೇಶ ಎಂಬಾತನಿಗೆ ಫೋನ್ ಮಾಡಿ ಬಾಗಿಲು ತೆರೆಯಲು ತಿಳಿಸಿದ್ದು, ಮಹೇಶನು ಬಾರದ ಕಾರಣ ನಂತರ 4 ನೇ ಮಹಡಿಯಲ್ಲಿ ಬಾಡಿಗೆಗೆ ಇರುವ ಯುವಕ  ಮತ್ತು  ಆಕೃತಿ ಬಟ್ಟೆ ಅಂಗಡಿಯವರು  ಸೇರಿ  ಬಾಗಿಲು ತೆರೆದಿದ್ದು ಪಿರ್ಯಾದಿದಾರರು ಲಿಪ್ಟ್ ನಿಂದ  ಹೊರಬರುವ ಸಮಯ  09:35 ಗಂಟೆಗೆ ಅಪಾದಿತ ಮಹೇಶ ಮತ್ತು ಆತನ ಹೆಂಡತಿ ರಶ್ಮಿರವರು ಲಿಫ್ಟ್ ಹತ್ತಿರ ಬಂದು ಲಿಪ್ಟ್ ಬಾಗಿಲು ತೆರೆಯಲು ನಿಮಗೆ ಯಾರು ಅನುಮತಿ ನೀಡಿದ್ದು, ಸಿಕ್ಕಿಕೊಂಡವರು ಬೇಕಾದರೆ ಸಾಯಲಿ ಎಂದು ಹೇಳಿ ಹೇಳಿದ್ದಲ್ಲದೇ, ನಂತರ ಪಿರ್ಯಾದಿದಾರರು ಬಜಾಜ್ ಫೈನಾನ್ಸ್ ಬಳಿ ಮೆಟ್ಟಿಲು ಹತ್ತಿ ಹೋಗುತ್ತಿರುವಾಗ ಅಪಾದಿತರು ನಿಮ್ಮಂತವರು ಅಪಾರ್ಟ್‌ಮೆಂಟ್‌ನಲ್ಲಿರಬಾರದು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು ಅಪಾದಿತ  ಮಹೇಶನು ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ಪರಿಣಾಮ ಬಲಭುಜಕ್ಕೆ ಒಳನೋವು ಆಗಿದ್ದು  ಕಾರ್ಕಳ ಸ್ಪಂದನ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 08/2022  ಕಲಂ: 354,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಆಪಾದಿತ ಫರಾಜ್ ಸಾಹೇಬ್ (38) , ತಂದೆ: ಚೇಮನ್ ಸಾಹೇಬ್, ವಾಸ: ಮಾವಿನಕಟ್ಟೆ ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರದ ಗೋಲ್ಡ್ ಜ್ಯೂವೆಲ್ಲರಿ ಅಂಗಡಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿ ಪಿರ್ಯಾದಿದಾರರಾದ ಶ್ರೀಮತಿ ನಗೀನಾ (33), ತಂದೆ:ಮೊಹಮ್ಮದ್ ಮಜೀಜು, ವಾಸ:  ಜೆ ಎಮ್ ರಸ್ತೆ ಕಾವ್ರಾಡಿ ಪೋಸ್ಟ್, ಕಂಡ್ಲೂರು   ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲೆ ಇವರರಿಗೆ ಚಿನ್ನದ ಅಂಗಡಿಯಲ್ಲಿ ಹಣ ಹಾಗೂ ಚಿನ್ನ ಹೂಡಿಕೆ ಮಾಡಿದರೆ ಲಾಭಾಂಶವನ್ನು ನೀಡುವುದಾಗಿ ನಂಬಿಸಿದ್ದು ಅದರಂತೆ ಪಿರ್ಯಾದಿದಾರರು ನಗದು ಹಣ ರೂಪಾಯಿ 4,00,000/- ಹಾಗೂ 488 ಗ್ರಾಂ ಚಿನ್ನ ಹೂಡಿಕೆ ಮಾಡಿದ್ದು  ಬಳಿಕ ಆರೋಪಿತನು 400 ಗ್ರಾಂ ಚಿನ್ನವನ್ನು ಪಿರ್ಯಾದಿದಾರರಿಗೆ ವಾಪಾಸ್ಸು ನೀಡಿ ಉಳಿದ ರೂಪಾಯಿ 4,00,000/- ಹಣ ಹಾಗೂ 88 ಗ್ರಾಂ ಚಿನ್ನವನ್ನು ದಿನಾಂಕ 16/02/2021ರ ಒಳಗಾಗಿ ನೀಡುವುದಾಗಿ ದಿನಾಂಕ 17/12/2020 ರಂದು ಎಗ್ರಿಮೆಂಟ್ ಮಾಡಿಕೊಂಡಿದ್ದು ಆದರೆ ಎಗ್ರಿಮೆಂಟ್ ಪ್ರಕಾರ 88 ಗ್ರಾಂ ಚಿನ್ನ ಹಾಗೂ 4,00,000/- ರೂ ನಗದನ್ನು ಆರೋಪಿತನು ಪಿರ್ಯಾದಿದಾರರಿಗೆ ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಯಲದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2021 ಕಲಂ: 406,417,  420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       
      

ಇತ್ತೀಚಿನ ನವೀಕರಣ​ : 13-01-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080