ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರಘು ಎಸ್.ಪೂಜಾರಿ (59), ತಂದೆ: ದಿ. ಸಂಜೀವ ಪೂಜಾರಿ, ವಾಸ: ಮನೆ ನಂಬ್ರ 15-43, ರಮ್ಯಾನಿಲಯ, ಕೊಡವೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಕೆಲಸ ಮಾಡುತ್ತಿರುವ ಬಾಳಿಗಾ ಫಿಶ್ ನೆಟ್ ಕೆಲಸ ಮಾಡುತ್ತಿರುವ ಹರೇಂದ್ರ ಮರಾಂಡಿ (53) ರವರು  ದಿನಾಂಕ 11/12/2022 ರಂದು ಸಾಯಾಂಕಾಲ 7:45 ಗಂಟೆಗೆ ಪುತ್ತೂರು ಗ್ರಾಮದ ಬಾಳಿಗ ಫಿಶ್‌ನೆಟ್ ಎದುರುಗಡೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ನೇ ಸಾರ್ವಜನಿಕ ಡಾಮಾರು ರಸ್ತೆ ಅಂದರೆ  ಅಂಬಾಗಿಲು ಕಡೆಯಿಂದ ಉಡುಪಿ  ಕರಾವಳಿ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯ ಅಂಚಿನಲ್ಲಿ ರಸ್ತೆ ದಾಟಲು ನಿಂತಿದ್ದಾಗ ಅಂಬಾಗಿಲು ಕಡೆಯಿಂದ ಉಡುಪಿ ಕರಾವಳಿ ಕಡೆಗೆ  KA-20-AA-7569 ನೇ ಕಾಂಟರ್ ವಾಹನ ಚಾಲಕ ಪ್ರಶಾಂತನು ತಾನು ಚಲಾಯಿಸುತ್ತಿದ್ದ ಕ್ಯಾಂಟರ್ ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆ ದಾಟುವರೇ ರಸ್ತೆ ಬದಿಯಲ್ಲಿ ನಿಂತಿದ್ದ ಹರೇಂದ್ರ ಮರಾಂಡಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ತಲೆಗೆ ಗಂಬೀರ ಸ್ವರೂಪದ ಗಾಯ ಮತ್ತು ಬಲಕಾಲಿಗೆ ಗಂಬೀರ ಸ್ವರೂಪದ ಮೂಳೆ ಮುರಿತದ ಜಖಂ ಆದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ಈಗಾಗಲೇ ಮೃತಪಟ್ಟಿರುವುದಾಗಿದೆ ದೃಡೀಕರಿಸಿರುತ್ತಾರೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 07/12/2022 ರಂದು KA-19-ER-2824 ನೇ ನೋಂದಣಿ ಸಂಖ್ಯೆಯ ಹಿರೋ ಕಂಪೆನಿಯ DUET ಸ್ಕೂಟರ್‌ ನಲ್ಲಿ ಪಿರ್ಯಾದಿದಾರರಾದ ಮಂದಾರ್‌ (18), ತಂದೆ: ಸುಧಾಕರ ಪೂಜಾರಿ, ವಾಸ: ಅಕ್ಷಯಧಾಮ ನಿವಾಸ, ಮಂದಾರ್‌ ಕಾಂಪೌಂಡ್‌, ಒಂಟಿಕಟ್ಟೆ, ಮಾರ್ಪಾಡಿ ಗ್ರಾಮ, ಮೂಡಬಿದ್ರೆ ತಾಲೂಕು ಇವರು ಸವಾರ ಅಶೋಕನೊಂದಿಗೆ ಹಿಂಬದಿ ಸವಾರರಾಗಿ ಕುಳಿತುಕೊಂಡು ಪುಲ್ಕೇರಿ-ಬಂಗ್ಲೆಗುಡ್ಡೆ ರಸ್ತೆಯಲ್ಲಿ ಎಡಬದಿಯಲ್ಲಿ ಮೂಡಬಿದ್ರೆಗೆ ಹೊರಟು ರಾತ್ರಿ 01:45 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ಆನೆಕೆರೆ ಕೃಷ್ಣ ದೇವಸ್ಥಾನ ಬಳಿಯ ರಸ್ತೆಯಲ್ಲಿ ಹೋಗುತ್ತಿರುವಾಗ ಬಂಗ್ಲೆಗುಡ್ಡೆ ಕಡೆಯಿಂದ ಮೂಡಬಿದ್ರೆ ಕಡೆಗೆ ಲಾರಿಯೊಂದು ಬರುವುದನ್ನು ಕಂಡು ಅಶೋಕ ಚಲಾಯಿಸುತ್ತಿದ್ದ ಸ್ಕೂಟರ್‌ ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಅತೀ ವೇಗವಾಗಿ ರಸ್ತೆಯ ಎಡಬದಿಗೆ ಚಲಾಯಿಸಿದ್ದರಿಂದ ಪಿರ್ಯಾದಿದಾರರು ಸ್ಕೂಟರ್‌ ನಿಂದ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಅಲ್ಲಿಯೇ ಇದ್ದ ಒಂದು ಕಲ್ಲು ತಾಗಿ ಬಲಕಾಲಿನ ಮಣಿಗಂಟಿನ ಮೇಲ್ಬಾಗ ರಕ್ತಗಾಯವಾಗಿ ಒಳಜಖಂ ಆಗಿದ್ದು, ಎಡಬದಿಯ ಬೆನ್ನಿನ ಮೇಲೆ ತರಚಿದ ಗಾಯವಾಗಿರುತ್ತದೆ. ಬೈಕ್‌ ಸವಾರ ಅಶೋಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸ್ಕೂಟರ್‌ ಕೂಡ ಜಖಂಗೊಂಡಿರುತ್ತದೆ. ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಅಪಘಾತದ ಬಗ್ಗೆ ಖರ್ಚು ವೆಚ್ಚಗಳನ್ನು ಅಶೋಕನೇ ಭರಿಸುವುದಾಗಿ ತಿಳಿಸಿದ್ದು, ವೈದ್ಯಕೀಯ ಖರ್ಚು ವೆಚ್ಚ ಜಾಸ್ತಿಯಾಗಿರುವುದರಿಂದ ಈವರೆಗೆ ಯಾವುದೇ ವೈದ್ಯಕೀಯ ಖರ್ಚು ವೆಚ್ಚಗಳನ್ನು ನೀಡದೇ ಇರುವುದರಿಂದ ಠಾಣೆಗೆ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 147/2022 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಅಬ್ದುಲ್ ನಾಝಿಮ್ (18), ತಂದೆ: ಮೊಹಮ್ಮದ್ ಹನೀಫ್, ವಾಸ: ತೌಫಿಕ್ ಕಾಟೇಜ್, ಹೆಜಮಾಡಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಉಡುಪಿಯ ಕರಾವಳಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ  ಮಾಡಿಕೊಂಡಿದ್ದು, ದಿನಾಂಕ 11/12/2022 ರಂದು ಅವರ ತಂದೆಯ KA-20-EE-3114 ನೇ ನೇ ನಂಬ್ರದ ಸ್ಕೂಟಿಯಲ್ಲಿ ಹೆಜಮಾಡಿಯ ಮನೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ಪಡುಬಿದ್ರಿ ಕಡೆಗೆ  ಬರುತ್ತಾ ಸಂಜೆ 17:15 ಗಂಟೆಗೆ ಕಾಪು ತಾಲೂಕು ನಡ್ಸಾಲು  ಗ್ರಾಮದ ಗೂಡು ಬಳಿ ತಲುಪುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬಿಳಿ ಬಣ್ಣದ ಇನ್ನೋವಾ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ಕಾರನ್ನು ನಿಲ್ಲಿಸದೇ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಪಘಾತದಿಂದ ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು, ಬಲಕಾಲಿನ ಮೊಣಗಂಟು, ಪಾದ, ಬಲಕೈ ಮೊಣಗಂಟು, ಎಡಕಾಳಿನ ಮೊಣಗಂಟು ಮತ್ತು ಕಾಳಿನ ಹೆಬ್ಬೆರಳಿಗೆ ತರಚಿದ ಗಾಯಾಗಳಾಗಿದ್ದು, ನಂತರ ಗಾಯಾಳು ಅಬ್ದುಲ್ ನಝೀಮ್ ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 159/2022 ಕಲಂ: 279,  337 ಐಪಿಸಿ. ಮತ್ತು ಕಲಂ: 134 (ಎ)(ಬಿ) ಜೊತೆಗೆ 187 ಐಎಂವಿ ಆಕ್ಟ್‌‌ ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಶಂಕರನಾರಾಯಣ: ದಿನಾಂಕ 10/12/2022 ರಂದು 22:00 ಗಂಟೆಗೆ ಪಿರ್ಯಾದಿದಾರರಾದ ಕರುಣಾಕರ  ಶೆಟ್ಟಿ (65), ತಂದೆ: ಭುಜಂಗ  ಶೆಟ್ಟಿ, ವಾಸ: ಲಕ್ಷೀ ನಿವಾಸ ಹಿಲಿಯಾಣ  ಗ್ರಾಮ ಬ್ತಹ್ಮಾವರ  ತಾಲೂಕು ಇವರು  ಎಂದಿನಂತೆ ಅವರ ಮಾಲೀಕತ್ವದಲ್ಲಿ ಇರುವ ಹೆಬ್ರಿ ತಾಲೂಕಿನ  ಬೆಳ್ವೆ  ಗ್ರಾಮದ  ಗೋಳಿಯಂಗಡಿ  ಲಕ್ಷೀ ಬಾರ್  & ರೆಸ್ಟೊರೆಂಟ್‌ನ  ಬಾಗಿಲು  ಹಾಕಿ  ಹೋಗಿದ್ದು, ದಿನಾಂಕ 11/12/2022 ರಂದು  ಬೆಳಿಗ್ಗೆ  7:00 ಗಂಟೆಗೆ  ನೋಡುವಾಗ ಯಾರೋ ಕಳ್ಳರು  ಬಾರ್‌ನ ಹಿಂಬದಿಯ ಗೋಡೆ ಹಾಗೂ  ಕಿಟಕಿಯನ್ನು ಒಡೆದು  ಬಾರ್‌ಕಟ್ಟಡದ ಒಳಗಡೆ  ಬಂದು  ಕ್ಯಾಶ್  ಕೌಂಟರ ಇರುವ ಶೇಟ್‌‌‌ರನ ಬೀಗ ಮುರಿದು ಒಳಗಡೆ  ಪ್ರವೇಶಿಸಿ 50,000/- ರೂಪಾಯಿ  ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 134 /2022  ಕಲಂ:454, 457  380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ನಿತ್ಯಾನಂದ ನಾಯರಿ (46), ತಂದೆ: ಶ್ರೀನಿವಾಸ ನಾಯರಿ, ತೃಪ್ತಿ ನಿಲಯ ಕಾರ್ತಟ್ಟು   ಚಿತ್ರಪಾಡಿ ಗ್ರಾಮ  ಸಾಲಿಗ್ರಾಮ ಬ್ರಹ್ಮಾವರ ತಾಲೂಕು ಇವರು   ತರಕಾರಿ ವ್ಯಾಪಾರ ಮಾಡಿಕೊಂಡಿದ್ದು,   ದಿನಾಂಕ 10/12/2022  ರಂದು ತನ್ನ   KA-20-EQ-0989  ಟಿ.ವಿ.ಎಸ್ ಜೂಪಿಟರ್ ಸ್ಕೂಟರನ್ನು  ಕುಂದಾಪುರ ಸಂತೆ ಮಾರ್ಕೆಟಿನಲ್ಲಿ  ಬೆಳಿಗ್ಗೆ 03:00 ಗಂಟೆಯ ಸಮಯಕ್ಕೆ ಇಟ್ಟಿದ್ದು ಮಧ್ಯಾಹ್ನ 14:30 ಗಂಟೆಯ ಸಮಯಕ್ಕೆ  ಬಂದು ನೋಡುವಾಗ   ಸ್ಕೂಟರ್  ಇಲ್ಲದೇ ಇದ್ದು  ಸ್ಕೂಟರನ್ನು  ದಿನಾಂಕ   10/12/2022 ರಂದು ಬಳಿಗ್ಗೆ 03:00 ಗಂಟೆಯಿಂದ  14:30 ಗಂಟೆಯ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.  ಕಳವಾದ ಸ್ಕೂಟರಿನ  ಮೌಲ್ಯ  60,000/- ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  133/2022  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 10/12/2022 ರಂದು ಸದಾಶಿವ ಆರ್. ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ  ಕುಂದಾಪುರ ತಾಲೂಕು ಕುಂಬಾಶಿ ಗ್ರಾಮದ ವಕ್ವಾಡಿ ಹೋಗುವ ರಸ್ತೆಯ ಬಳಿ ಕುಂಭಾಶಿ ದೇವಸ್ಥಾನದ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಬಗ್ಗೆ  ಬಂದ ಮಾಹಿತಿಯಂತೆ  ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 5  ಜನರನ್ನು ಸಿಬ್ಬಂದಿಯವರ  ಸಹಾಯದಿಂದ  ಹಿಡಿದುಕೊಂಡು  ವಿಚಾರಿಸಲಾಗಿ 1) ಮುರಳೀಧರ ಪೈ, 2) ಕೆ ರತ್ನಾಕರ ನಾಯಕ್, 3)  ರಜನ್ ಕುಮಾರ್, 4) ಎಲ್ಸನ್ ಆಂಟನಿ, 5) ಸಂತೋಷ ಕುಮಾರ್ ಎಂದು ತಿಳಿಸಿದ್ದು, ಸ್ಥಳದಲ್ಲಿ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಹಳೆಯ ದಿನಪತ್ರಿಕೆ -1,  2) ಇಸ್ಪೀಟ್ ಎಲೆ  52, 3). ನಗದು ಹಣ ರೂಪಾಯಿ 1,20,500/- ಇವುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022  ಕಲಂ:  87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ .   

ಇತ್ತೀಚಿನ ನವೀಕರಣ​ : 12-12-2022 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080