ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ದಾವಲಾಬಿ ನದಾಫ್‌ (21) ಗಂಡ: ಹುಸೇನ್‌ ಸಾಬ್‌ ನದಾಫ್‌ ವಾಸ: ಬಾಡಿಗೆ ಮನೆ, ಕೇರ್‌ ಆಫ್‌ ಮುರಳಿಧರರಾವ್‌, ಗುಂಡಿಬೈಲು ಶಾಲೆಯ ಬಳಿ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಗಂಡನಾದ ಹುಸೇನ್‌ ಸಾಬ್‌ ನದಾಫ್‌ (22) ರವರು ಕಳೆದ ಆರು ವರ್ಷಗಳಿಂದ ಆದಿ ಉಡುಪಿಯ ಪ್ರವೀಣ್‌ ಡಿ. ಪೂಜಾರಿ ಎಂಬುವರೊಂದಿಗೆ ಕೋರ್‌ ಕಟ್ಟಿಂಗ್‌ ಕೆಲಸ ಮಾಡಿಕೊಂಡಿದ್ದವರು ದಿನಾಂಕ 11/12/2021 ರಂದು ಪುತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದ ಭಗವತಿ ಹಾಲ್‌ನ ಒಂದನೇ ಮಹಡಿಯ ಓವರ್‌ ಹೆಡ್‌ ಟ್ಯಾಂಕಿನ ಕೋರ್‌ ಕಟ್ಟಿಂಗ್‌ ಕೆಲಸ ಮುಗಿಸಿದವರು, ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ಒಮ್ಮೆಲೇ ಹಠಾತ್ತನೇ ಕುಸಿದು ಬಿದ್ದವರನ್ನು ಸಹ ಕೆಲಸಗಾರರು ಕೂಡಲೇ ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆತಂದಲ್ಲಿ, 13:30 ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಹುಸೇನ್‌ ಸಾಬ್‌ ನದಾಫ್‌ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ 56/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಯಶೋದ, (48)ಗಂಡ:ಲಕ್ಷ್ಮಣ ಪೂಜಾರಿ, ವಾಸ:ಕಟ್ಟಿಮಾರು, ಮೇಲಿನ ಕಾಬೆಟ್ಟು,ಕಸಬ ಗ್ರಾಮ, ಕಾರ್ಕಳ ಇವರ ಗಂಡ ಲಕ್ಷ್ಮಣ ಪೂಜಾರಿ (60) ರವರು ದಿನಾಂಕ 11/12/2021 ರಂದು ಮದ್ಯಾಹ್ನ 12:00 ಗಂಟೆಗೆ ಮನೆಯ ಹಾಲ್‌‌ನಲ್ಲಿ ಮಲಗಿದ್ದು, ಶ್ರೀಮತಿ ಯಶೋದ ಇವರು ಮಾತನಾಡಿಸಿದರು ಮಾತಾನಾಡದೇ ಇದ್ದು, ಅಸ್ವಸ್ಥಗೊಂಡವರಂತೆ ಕಂಡುಬಂದಿರುತ್ತಾರೆ. ಅಲ್ಲದೇ ಕೋಣೆಯಲ್ಲಿ ವಿಪರೀತ ಘಾಟುವಾಸನೆ ಬರುತ್ತಿತ್ತು. ನಂತರ ರಿಕ್ಷಾವೊಂದರಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತಂದಿದ್ದು, ಪರೀಕ್ಷಿಸಿದ ವೈದ್ಯರು ಲಕ್ಷ್ಮಣ ಪೂಜಾರಿ ರವರು ವಿಷ ಪದಾರ್ಥ ಸೇವಿಸಿದ್ದು, ಮಂಗಳೂರು ವೆನ್‌‌ಲಾಕ್‌‌ ಆಸ್ಪತ್ರೆ ಚಿಕಿತ್ಸೆ ದಾಖಲಿಸುವಂತೆ ತಿಳಿಸಿದಂತೆ ಕೂಡಲೇ ಅಂಬುಲೆನ್ಸ್‌ ಮೂಲಕ ಚಿಕಿತ್ಸೆ ಬಗ್ಗೆ ಸಂಜೆ ಸುಮಾರು 4:00 ಗಂಟೆಗೆ ಮಂಗಳೂರು ವೆನ್‌‌ಲಾಕ್‌‌ ಆಸ್ಪತ್ರೆಯಲ್ಲಿ ದಾಖಲಿಸಿದ್ದು. ಅಲ್ಲಿನ ವೈದ್ಯರು ಸಂಜೆ 5:30 ಗಂಟೆಗೆ ಲಕ್ಷ್ಮಣ ಪೂಜಾರಿ ರವರು ವಿಷ ಸೇವನೆಯಿಂದ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಲಕ್ಷ್ಮಣ ಪೂಜಾರಿ ರವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11/12/2021 ರಂದು ಬೆಳಿಗ್ಗೆ 09:30 ಗಂಟೆಯಿಂದ 12:00 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ನಹತ್ಯೆ ಮಾಡಿಕೊಂಡಿದ್ದು, ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ 48/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-12-2021 08:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080