ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು; ಪಿರ್ಯಾದಿದಾರರಾಧ ರಾಕೇಶ್ ಪೂಜಾರಿ (32) ತಂದೆ :ದಾಮೋದರ  ಪೂಜಾರಿ, ವಾಸ:ಸದಡಿ ಸಿಪಾಯಿ ತೋಟ, ಪಾಂಗಳ ಇನ್ನಂಜೆ ಗ್ರಾಮ  ಉಡುಪಿ ಇವರು ದಿನಾಂಕ 12/12/2021 ರಂದು ಬೆಳಿಗ್ಗೆ  10:45 ಗಂಟೆ ಸುಮಾರಿಗೆ ತನ್ನ ಸನ್ನಿಧಿ ಎಂಬ ಹೆಸರಿನ ಎಲೆಕ್ಟ್ರೀಕಲ್ಸ್ ಅಂಗಡಿಯಲ್ಲಿರುವ ಸಮಯ ಸುಮರು ಬೆಳಿಗ್ಗೆ 10;45 ಗಂಟೆಯ  ಸಮಯಕ್ಕೆ ಪಾಂಗಾಳ ಜನಾರ್ಧನ ದೇವಸ್ಥಾನದ ಸಮೀಪ  ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಕೆಎ-19-ಎನ್-7529 ನೇ ನಂಬ್ರದ ಮಾರುತಿ 800 ಕಾರನ್ನು ಅದರ ಚಾಲಕ ರಸ್ತೆಯ ಪೂರ್ವ ಅಂಚಿನಲ್ಲಿ ಕಾಪು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಎಡಿ-0587 ನೇ ನಂಬ್ರ ಟಾಟಾ ಇಂಟ್ರಾ ವಾಹನವನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಾರುತಿ 800 ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಚಾಲಕ ರಾಕೇಶ್‌ ಪೂಜಾರಿ ರವರ ಸ್ನೇಹಿತ  ಚರಣ್ ಹೆಚ್. ಪೂಜಾರಿ ಎಂಬವರ ತಲೆಗೆ, ಬೆನ್ನಿಗೆ ಎದೆಭಾಗ ಹಾಗೂ ಬಲ ಕೈಗೆ ರಕ್ತ ಗಾಯವಾಗಿದ್ದು, ಕಾರು ಸಂಪೂರ್ಣ ಜಖಂ ಗೊಂಡಿರುತ್ತದೆ. ಗಾಯಗೊಂಡ ಚರಣ್ ಹೆಚ್.ಪೂಜಾರಿ ಯವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ.  ಈ ಅಪಘಾತಕ್ಕೆ ಕೆಎ-19-ಎಡಿ 0587 ನೇ ಟಾಟಾ ಇಂಟ್ರಾ ವಾಹನದ ಚಾಲಕ ಕಾರ್ತಿಕ್ ಎಂಬವರ  ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 182/2021 ಕಲಂ; 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ; ದಿನಾಂಕ 12/12/2021 ರಂದು ಮದ್ಯಾಹ್ನ  ಸುಮಾರು 12:30 ಗಂಟೆಗೆ,ಕುಂದಾಪುರ  ತಾಲೂಕಿನ, ಕೂರ್ಗಿ ಗ್ರಾಮದ  ನೂಜಿಯ ಮರ್ಲಿ ಕುಲಾಲ ಮನೆಯ ಬಳಿ ಬೇಳೂರು–ಹುಣ್ಸೆಮಕ್ಕಿ ರಸ್ತೆಯಲ್ಲಿ,ಆಪಾದಿತ KA-20 MD-2352 ನೇ ಕಾರಿನ ಚಾಲಕ ಅಶೋಕ ಶೆಟ್ಟಿ ರವರು ತನ್ನ ಕಾರನ್ನು ಬೇಳೂರು ಕಡೆಯಿಂದ ಹುಣ್ಸೆಮಕ್ಕಿ ಕಡೆಗೆ ಅತಿವೇಗ ಮತ್ತು  ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರನ್ನು ರಸ್ತೆಯ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರಾದ ಗೋವಿಂದ ಕುಲಾಲ (65) ತಂದೆ: ದಿ.ಬಚ್ಚಕುಲಾಲ ವಾಸ:ಬಡಾಬೆಟ್ಟು ನೂಜಿ,ಕೂರ್ಗಿ ಗ್ರಾಮ ಹೆಸ್ಕತ್ತೂರು ಅಂಚೆ ಕುಂದಾಪುರ ರವರು ತನ್ನ KA-20 EF-1911 TVS XL ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಸನ್ನೆ ಮಾಡಿ ರಸ್ತೆಯ ಬಲ ಬದಿಗೆ ತಿರುಗಿಸಿ ಮಣ್ಣು ರಸ್ತೆಯಲ್ಲಿ ನಿಲ್ಲಿಸುವಷ್ಠರಲ್ಲಿ ಎದುರುಗಡೆಯಿಂದ ಡಿಕ್ಕಿಹೊಡೆದ ಪರಿಣಾಮ ಗೋವಿಂದ ಕುಲಾಲ ದ್ವಿಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದಿದ್ದು ಎಡ ಕಾಲಿನ ಮುಂಗಾಲು ಗಂಟಿನ ಕೆಳಗೆ ಮೂಳೆ ಮೂರಿತದ  ಒಳಜಖಂ ಮತ್ತು ತಲೆಯ ಹಿಂಭಾಗಕ್ಕೆ ತರಚಿದ ರಕ್ತ ಗಾಯ ಉಂಟಾಗಿದ್ದು  ಕೋಟೇಶ್ವರ ಎನ್ ಆರ್ ಆಚಾರ್ಯ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 104/2021 ಕಲಂ; 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ; ಪಿರ್ಯಾದಿದಾರರಾಧ ಹರೀಶ್‌‌(38) ತಂದೆ: ಗಣಪಪೂಜಾರಿ ವಾಸ: ಕಂಪಹನೇಹಳ್ಳಿ ಗ್ರಾಮ ಬಾರಕೂರು ಪೋಸ್ಟ್‌‌ ಬ್ರಹ್ಮಾವರ ತಾಲೂಕು ಇವರುದಿನಾಂಕ 11/12/2021 ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಬಾರ್ಕೂರು ಮಂದರ್ತಿ ರಸ್ತೆಯಲ್ಲಿ ಮನೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 7:50 ಗಂಟೆಗೆ ಬಾರ್ಕೂರು ರೈಲ್ವೆಬ್ರಿಡ್ಜ್‌ನಿಂದ ಸ್ವಲ್ಪ ಮುಂದೆ ಹೇರಾಡಿ ಗ್ರಾಮದ ಧರ್ಮಶಾಲೆ ಮೊಹಮ್ಮದ್‌ ಸಾಹೇಬ್‌ ‌ಮನೆಯ ಎದುರು ಹರೀಶ್‌ ರವರ ಬೈಕ್‌‌ನಿಂದ ಸ್ವಲ್ಪಮುಂದೆ KA-20 EV-5210 ನೇ ಬೈಕ್‌ ಸವಾರ ಶಬರೀಶ್‌ ನಿಧಾನವಾಗಿ ಮಂದರ್ತಿ ಕಡೆಗೆ ಹೋಗುತ್ತಿರುವಾಗ ಮಂದರ್ತಿ ಕಡೆಯಿಂದ ಓರ್ವ ಕಾರು ಚಾಲಕ ಅತೀವೇಗ ಹಾಗೂ ಅಜಾಗರೂಕತಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು ರಭಸವಾಗಿ ಬೈಕ್‌‌ಗೆ ಡಿಕ್ಕಿ ಹೊಡೆದು ಕಾರನ್ನುನಿಲ್ಲಿಸದೇ ಬಾರಕೂರು ಕಡೆಗೆಹೋಗಿರುತ್ತಾನೆ.  ಅಪಘಾತ ದರಭಸಕ್ಕೆಸುಮಾರು 20 ಮೀಟರ್‌ ‌ಬೈಕ್‌ ‌ಸಮೇತ ಜಾರಿಕೊಂಡು ಹೋಗಿ ರಸ್ತೆಯ ಬದಿಯ ಚರಂಡಿಗೆ ಬೈಕ್‌ ಸವಾರ ಬೈಕ್‌ ಸಮೇತ ಬಿದ್ದದ್ದು ಆತನನ್ನು ಎತ್ತಿ ಉಪಚರಿಸಿನೋಡಿದಾಗ ಬೈಕ್‌ ಸವಾರನ ಬಲಕಾಲಿನ ಪಾದದ ಮೇಲಿನ ಗಂಟೆಗೆ ಒಳಜಖಂ, ಎಡಭುಜದ ಬಳಿರಕ್ತಗಾಯ, ಬಲಕೈಯ ಬೆರಳಿಗೆ ತರಚಿದ ಗಾಯ ಎಡಕಣ್ಣಿನ ಹುಬ್ಬಿಗೆ ಹಣೆಗೆ ತರಚಿದಗಾಯವಾಗಿರುತ್ತದ. ಆತನ ಚಿಕಿತ್ಸೆಯ ಬಗ್ಗೆ ಜೀವನ ಜ್ಯೋತಿ ಆಸ್ಪತ್ರೆ ಬ್ರಹ್ಮಾವರಕ್ಕೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಬೈಕ್‌ನ ಮುಂಭಾಗ ಜಖಂಗೊಂಡಿದ್ದು, ಇಂಡಿಕೇಟರ್‌ ‌ಹಾಗೂ ಇತರೇಕಡೆ ತರಚಿದಗಾಯವಾಗಿರುತ್ತದೆ. ಈಅಪಘಾತ ವೆಸಗಿದ ಕಾರು ಚಾಲಕ ಅಪಘಾತವೆಸಗಿ ಕಾರನ್ನು ನಿಲ್ಲಿಸದೇ ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 204/2021 ಕಲಂ; 279, 338 ಐಪಿಸಿ ಮತ್ತು ಸೆಕ್ಷನ್(ಎ)(ಬಿ) ಜೊತೆಗೆ 187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ; ಪಿರ್ಯಾದಿದಾರರಾಧ ಕೆ ಗಿರಿಧರ ಪ್ರಭು (47) ತಂದೆ: ಕೆ ಸುಂದರ ಪ್ರಭು,ವಾಸ: ಪ್ರಭು ನಿವಾಸ, ಶಿರ್ವ ಸೊಸೈಟಿ ಬಳಿ, ಶಿರ್ವ ಗ್ರಾಮ ಮತ್ತು ಅಂಚೆ,ಕಾಪುತಾಲೂಕು. ಇವರು ದಿನಾಂಕ 11/12/2021 ರಂದು ಸಮಯ ಸುಮಾರು ಮಧ್ಯಾಹ್ನ 3:00 ಗಂಟೆಗೆ ಶಿರ್ವ ಮಸೀದಿ ಬಳಿ ನಿಂತು ಕೊಂಡಿರುವಾಗ ಶಿರ್ವ ಪೇಟೆಕಡೆಯಿಂದ ಬಂಟಕಲ್ಲು ಕಡೆಗೆ ಸಾಗಿರುವ ಸಾರ್ವಜನಿಕ ರಸ್ತೆಯಲ್ಲಿ KA-20 EM-1900 ನೇ ನೊಂದಣಿ ಸಂಖ್ಯೆಯ ಸ್ಕೂಟರನ್ನು ಸಂದ್ಯಾ ಕಾಮತ್‌ ಇವರು ಸ್ನೇಹಆಚಾರ್ಯ ಎಂಬವರನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಶಿರ್ವಪೇಟೆ ಕಡೆಯಿಂದ ಬಂಟಕಲ್ಲುಕಡೆಗೆ ಬರುತ್ತಿದ್ದು ಆಸಮಯಕ್ಕೆಅವರ ಹಿಂದಿನಿಂದ KA-20 MB-9987 ನೇ ನೋಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕ ರಾಜೇಶ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರರಿಬ್ಬರು ರಸ್ತೆಗೆ ಬಿದ್ದು ಸಂದ್ಯಾ ಕಾಮತ್‌ ಇವರ ತಲೆಯ ಹಿಂಬದಿ ರಕ್ತಗಾಯ ಮತ್ತು ಕೈಗಳಿಗೆ ತರಚಿದ ಗಾಯವಾಗಿದ್ದು, ಸ್ನೇಹ ಆಚಾರ್ಯ ಇವರ ಕೈಗೆ ಹಾಗೂ ಕುಂಡೆಗೆ ತರಚಿದ ಗಾಯವಾಗಿರುತ್ತದೆ. ಅಪಘಾತದಿಂದ ಸ್ಕೂಟರ್‌ ಮತ್ತು ಕಾರು ಜಖಂಗೊಂಡಿರುತ್ತದೆ. ಈ ಅಘಫಾತಕ್ಕೆ ಕಾರನ್ನು ಅದರ ಚಾಲಕ ರಾಜೇಶರವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 73/2021 ಕಲಂ; 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ; ಪಿರ್ಯಾದಿದಾರರಾಧ ಆದರ್ಶ (19) ತಂದೆ: ದಿ ಶೇಖರ ವಾಸ: ಗೋಪು ನಿಲಯ ಜಟ್ಟಿಗೇಶ್ವರ ದೇವಸ್ಥಾನದ ಹತ್ತಿರ ಮಣೂರು ಪಡುಕೆರೆ ಮಣೂರು ಇವರ ತಂದೆ ಶೇಖರ (50) ಇವರು ಚಾಲಕ ಹಾಗೂ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದವರು,  ಚಾಲಕ ಕೆಲಸಕ್ಕೆ ಹೋದವರು 3-4 ದಿನ ಬಿಟ್ಟು ಮನೆಗೆ ಬರುತ್ತಿದ್ದರು  ಮನೆಯಲ್ಲಿದ್ದಾಗ ಮನೆಯ ಬಳಿಯ ಸಣ್ಣ ಸಾರ ಹೊಳೆಗೆ  ಹೋಗಿ ಬಲೆಯನ್ನು ಹಾಕಿ ಮೀನನ್ನು  ಹಿಡಿದು ಸಿಕ್ಕ ಮೀನನ್ನು  ಮಾರಿ ಜೀವನ ಸಾಗಿಸುತ್ತಿದ್ದರು . ದಿನಾಂಕ 09/12/2021 ರಂದು ಸಂಜೆ 05;00 ಗಂಟೆಯಿಂದ ದಿನಾಂಕ 12/12/2021ರಂದು  10;00ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಬಳಿಯ  ಸಣ್ಣ ಸಾರ ಹೊಳೆಗೆ  ಹೋಗಿ ಮೀನನ್ನು ಹಿಡಿಯುವಾಗ ಆಕಸ್ಮಿಕವಾಗಿ  ನೀರಿನಲ್ಲಿಮುಳುಗಿ  ಅಥವಾ ಬೇರೆ ಯಾವುದೋ ಕಾರಣದಿಂದ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವುದಾಗಿದೆ ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ವಿಲ್ಲದಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 49/2021 ಕಲಂ; 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಅಜೆಕಾರು; ದಿನಾಂಕ 11/12/2021 ರಂದು ಸುದರ್ಶನ ದೊಡಮನಿ ಪೊಲೀಸ್ ಉಪನಿರೀಕ್ಷಕರು  ಅಜೆಕಾರು ಪೊಲೀಸ್ ಠಾಣೆ ರವರು ರಾತ್ರಿ ರೌಂಡ್ಸ್ ಸಲುವಾಗಿ ಸ್ವಾಮಿ ಡಿ.ಎಸ್, ಇಲಾಖಾ ಜೀಪು ಚಾಲಕ ಸತೀಶ ರವರೊಂದಿಗೆ ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ್ ಹೊರಟು ಹೆರ್ಮುಂಡೆ ಕ್ರಾಸ್, ಅಂಡಾರು ಕಡೆ ಸಂಚರಿಸಿ ರಾತ್ರಿ ಸುಮಾರು 00:15 ಗಂಟೆಗೆ ಶಿರ್ಲಾಲು ಗ್ರಾಮದ ಗುಡ್ಡೆಯಂಗಡಿ ಬಳಿ ತಲುಪಿದಾಗ ಗುಡ್ಡೆಯಂಗಡಿಯ ತಿರುವಿನ ಬಳಿ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರೊಂದು ನಿಂತುಕೊಂಡಿದ್ದು, ಇವರು ಗುಡ್ಡೆಯಂಗಡಿಯ ತಿರುವನ್ನು ತಲುಪುವ ವೇಳೆಗೆ ಸದ್ರಿ ಓಮ್ನಿ ವಾಹನದ ಸವಾರನು ಒಮ್ಮೆಲೇ ವಾಹನವನ್ನು ಸ್ಟಾರ್ಟ್‌ಮಾಡಿ ಮುಂದೆ ತರುವಾಗ ಸುದರ್ಶನ ದೊಡಮನಿ ಪೊಲೀಸ್ ಉಪನಿರೀಕ್ಷಕರು ರವರು ನಿಲ್ಲಿಸಲು ಸೂಚನೆ ಕೊಟ್ಟಿದ್ದು, ಓಮ್ನಿ ಚಾಲಕನು  ಓಮ್ನಿ ಕಾರನ್ನು ನಿಲ್ಲಿಸದೇ  ಒಮ್ಮೆಲೇ ಅತೀ ವೇಗ ಮತ್ತು ಅಜಾಗರೂಕತೆಯಿಂದ ಅಂಡಾರು ಕಡೆ  ಚಲಾಯಿಸಿದನು. ಸದ್ರಿ ಓಮ್ನಿ ವಾಹನದ ಹಿಂಭಾಗದಲ್ಲಿ ದನಗಳನ್ನು ತುಂಬಿಸಿರುವುದು ಕಂಡು ಬಂದಿದ್ದು  ಕೂಡಲೇ ಇವರು ತಮ್ಮ ಇಲಾಖಾ ವಾಹನದಲ್ಲಿ  ಸದ್ರಿ ಓಮ್ನಿಯನ್ನು ಹಿಂಬಾಲಿಸಿ  ಅಂಡಾರು,  ಅಜೆಕಾರು , ಕೈಕಂಬ , ಹಂಚಿಕಟ್ಟೆ, ಹೆರ್ಮುಂಡೆ, ಜಾರ್ಕಳ  ಮುಂಡ್ಲಿ  ಮಾರ್ಗವಾಗಿ ಹೋಗಿ  ತೆಳ್ಳಾರು  ಗ್ರಾಮದ ತೆಳ್ಳಾರು  ರೈಸ್ ಮಿಲ್ ಬಳಿ ತಲುಪುವಾಗ್ಗೆ 00:40 ಗಂಟೆಗೆ ಓಮ್ನಿ ಚಾಲಕನು ಓಮ್ನಿಯನ್ನು ಒಮ್ಮೆಲೇ ನಿಲ್ಲಿಸಿ ಅದರೊಳಗಿದ್ದ ಮೂರು ಜನರು  ಹಾಡಿಯಲ್ಲಿ ಓಡಿ ಹೋಗಿದ್ದು ಸುದರ್ಶನ ದೊಡಮನಿ ಪೊಲೀಸ್ ಉಪನಿರೀಕ್ಷಕರು ಇವರು ಜೊತೆಗಿದ್ದ ಸಿಬ್ಬಂದಿಯವರೊಂದಿಗೆ ಮೂರು ಜನರನ್ನು  ಹಿಂಬಾಲಿಸಿದ್ದು  ಸಿಕ್ಕಿರುವುದಿಲ್ಲ. ಓಮ್ನಿ ವಾಹನವನ್ನು ಪರಿಶೀಲಿಸಲಾಗಿ ಅದರ ನಂ KA-12 M-8843 ಆಗಿದ್ದು, ಓಮ್ನಿ ವಾಹನದ ಮಧ್ಯ ಭಾಗದಲ್ಲಿ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಅವುಗಳ ಕಾಲುಗಳನ್ನು ಹುರಿ ಹಗ್ಗದಿಂದ ಕಟ್ಟಿದ್ದು ಅವುಗಳಲ್ಲಿ ಒಂದು ದನದ ಕಾಲಿಗೆ ರಕ್ತಗಾಯವಾಗಿರುವುದು ಕಂಡುಬಂದಿರುತ್ತದೆ. ಸದ್ರಿ ದನಗಳ ಮೇಲೆ ನೀಲಿ ಬಣ್ಣದ ಟರ್ಪಾಲು ಹೊದಿಸಿರುವುದು ಕಂಡು ಬಂದಿರುತ್ತದೆ. ಹಾಗೂ ಓಮ್ನಿ ವಾಹನದ ಡ್ಯಾಶ್ ಬೋರ್ಡ್‌ನಲ್ಲಿ ಒಂದು Vivo ಕಂಪೆನಿಯ ಮೊಬೈಲ್ ಫೋನ್ ಕಂಡುಬಂದಿರುತ್ತದೆ.  2 ದನಗಳ ಒಟ್ಟು ಮೌಲ್ಯ ರೂಪಾಯಿ 45,000/- ಆಗಿರುತ್ತದೆ ಆರೋಪಿತರು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಕಸಾಯಿ ಖಾನೆಗೆ ಇಲ್ಲವೇ ಮಾಂಸ ಮಾಡಿ ಮಾರಾಟ ಮಾಡುವರೇ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿದೆ,  ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 30/2021  ಕಲಂ: 279, 379 ಐ.ಪಿ.ಸಿ ಮತ್ತು ಕಲಂ 4,5,7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-12-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080