ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಲ್ಪೆ: ಪಿರ್ಯಾದಿ  ಮುಕ್ತ ಕಾಮತ್ (52)ಗಂಡ: ಕೇಶವ  ಕಾಮತ್ ವಾಸ:  ವಿನಾಯಕ್  ನಿವಾಸ , ಹರಿಶ್ಚಂದ್ರ  ಮಾರ್ಗ ಉಡುಪಿ ಇವರ ತಾಯಿ ಪ್ರೇಮಾ ಆರ್ ಕಾಮತ್ (89) ರವರು ನೇಜಾರಿನ ಮನೆಯಲ್ಲಿ ತನ್ನ ಮಗಳು ಶ್ರೀ ದೇವಿಯೊಂದಿಗೆ ವಾಸ ಮಾಡಿಕೊಂಡಿದ್ದು, ದಿನಾಂಕ:24-10-2022 ರಂದು ದೀಪಾವಳಿ ಹಬ್ಬದ ಪ್ರಯುಕ್ತ ಮನೆಯ ಅಂಗಳದಲ್ಲಿ ಹಣತೆಗಳನ್ನು ಇಟ್ಟು ದೀಪ ಬೆಳಗಿಸಿದ್ದು ಸಂಜೆ ಸುಮಾರು 7:00 ಗಂಟೆಯಿಂದ 7:30 ಗಂಟೆಯ ಮಧ್ಯಾವದಿಯಲ್ಲಿ ಪ್ರೇಮಾ ಆರ್ ಕಾಮತ್ ರವರು ಮನೆಯ ಅಂಗಳದಲ್ಲಿ ತಿರುಗಾಡುತ್ತಿರುವ ವೇಳೆ ಆಕಸ್ಮಾತ್ ಆಗಿ ಅವರ ಅರಿವಿಗೆ ಬಾರದೇ ಅವರ ಹಿಂಬಾಗದ ಸೀರೆಗೆ ಹಣತೆಯ ಬೆಂಕಿ ತಾಗಿ ಹೊತ್ತಿಕೊಂಡಿದ್ದ ಪರಿಣಾಮ ಅವರ ತೊಡೆಯ ಭಾಗ,  ಹೊಟ್ಟೆ ಭಾಗ, ಹಾಗೂ ಬೆನ್ನಿಗೆ ಬೆಂಕಿ ತಾಗಿ  ಸುಟ್ಟಗಾಯವಾಗಿ ತೀವ್ರ ಅಸ್ವಸ್ಥ್ಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕೆಎಂಸಿ ಆಸ್ಪತ್ರೆಯ ಐಸಿಯು ಅಲ್ಲಿ 11 ದಿನಗಳ ಕಾಲ ದಾಖಲಿಸಿದ್ದರು ಚೇತರಿಸಿಕೊಳ್ಳದೆ ಇದ್ದವರನ್ನು ಅಲ್ಲಿಂದ ಡಿಸ್ಚಾರ್ಜ್ ಮಾಡಿ ಕಲ್ಯಾಣಪುರದ ಗೊರಟ್ಟಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲು ಮಾಡಿದ್ದು ಈ ದಿನ ದಿನಾಂಕ:11-11-2022 ರಂದು ಬೆಳಿಗ್ಗೆ6-12 ಗಂಟೆ ಸಮಯಕ್ಕೆ ಚಿಕಿತ್ಸೆಫಲಕಾರಿಯಾಗದೇ ಪ್ರೇಮಾ ಆರ್ ಕಾಮತ್ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ  ಠಾಣಾ ಯುಡಿಆರ್ ನಂಬ್ರ 63/2022 . ಕಲಂ- 174ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ರೂಪೇಶ್ (35) ತಂದೆ: ಕೃಷ್ಣ ನಾಯ್ಕ ವಾಸ: ಕೊಳಗುಡ್ಡೆ, ಚಾರ ಗ್ರಾಮ ಇವರು ದಿನಾಂಕ 11/11/2022 ರಂದು ಬೆಳಗ್ಗೆ ತನ್ನ ಬಸ್ಸು ನಂಬ್ರ KA20AB5101 ನೇದನ್ನು ಮುದ್ದೂರು ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಮದ್ಯಾಹ್ನ ಸಮಯ ಸುಮಾರು 12:20 ಗಂಟೆಗೆ  ಉಡುಪಿ ಮೂಡನಿಡಂಬೂರು ಗ್ರಾಮದ ಶಿರಿಬೀಡು ಜಂಕ್ಷನ್ ಬಳಿ ರಾ.ಹೆ 169 ಎ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಹಿಂದಿನಿಂದ ಅಂದರೆ ಕರಾವಳಿ ಕಡೆಯಿಂದ ಸಿಟಿ ಬಸ್ ನಿಲ್ದಾಣದ ಕಡೆಗೆ KA20 AA 2258 ನೇ ಏಸ್ ವಾಹನ ಚಾಲಕ ಹರೀಶ್ ಶೆಟ್ಟಿ ಎಂಬಾತನು ತನ್ನ  ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಬಸ್ಸಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಏಸ್ ವಾಹನದ ಚಾಲಕ ಹರೀಶ್ ಶೇಟ್ಟಿ ಗೆ  ಮೂಗಿಗೆ ಹಣೆಗೆ ಕಾಲುಗಳೀಗೆ ತರಚಿದ ಗಾಯವಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಾಗೂ ಏಸ್ ವಾಹನದಲ್ಲಿ ಕುಳಿತಿದ್ದ ಸಹಾಯಕರಾದ ಪಕ್ರು ಸಾಬ್ ರವರಿಗೆ ಬಲ ಕಾಳಿಗೆ ಗಂಭೀರ ಸ್ವರೂಪದ ಮೂಳೆಮುರಿತ ಹಾಗೂ ಮೂಗಿಗೆ ಮುಖಕ್ಕೆ ತರಚಿದ ಗಾಯವಾಗಿ ಕೆಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ : 91/2022 ಕಲಂ: 279, 337 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು :ಪಿರ್ಯಾದಿ ಹರೀಶ್ (28) ತಂದೆ:  ಗೊವಿಂದ ಪೂಜಾರಿ  ವಾಸ:  ಸೂಲಮೂರ್ತಿ   ಮನೆ  ಸೆಳ್ಕೂಡು   ಜಡ್ಕಲ್   ಗ್ರಾಮ  ಇವರು ದಿನಾಂಕ: 10.11.2022 ರಂದು 16-00 ಗಂಟೆಗೆ ತನ್ನ  ಮೋಟಾರ್ ಸೈಕಲ್ ನಲ್ಲಿ ಜಡ್ಕಲ್ ಕಡೆಯಿಂದ ಮುದೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಜಡ್ಕಲ್ ಗ್ರಾಮದ  ಜಡ್ಕಲ್-ಮುದೂರು ರಸ್ತೆಯ ಜಡ್ಕಲ್ ಚರ್ಚ್ ಸಮೀಪ ತಂಗಚ್ಚನ್ ರವರ ಮನೆಯ ಬಳಿ ತಲುಪಿದಾಗ  ಪಿರ್ಯಾದುದಾರರ  ಎದುರಿನಿಂದ ಮುದೂರು ಕಡೆಯಿಂದ ಜಡ್ಕಲ್ ಕಡೆಗೆ  ಆರೋಪಿ ಮಂಜುನಾಥ ಪೂಜಾರಿ ತನ್ನ   KA20EH 5853 ಸ್ಕೂಟರ್ ನಲ್ಲಿ ಸಹ ಸವಾರನಾದ ಮಂಜು ಪೂಜಾರಿಯವರನ್ನು ಕುಳ್ಳಿರಿಸಿಕೊಂಡು ವೇಗವಾಗಿ ದುಡುಕಿನಿಂದ ಚಲಾಯಿಸಿ ಸ್ಕೂಟರ್ ನ ವೇಗವನ್ನು ನಿಯಂತ್ರಿಸಲಾಗದೇ  ಹತೋಟಿ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ನ ಹಿಂಬದಿ ಸಹಸವಾರರಾದ ಮಂಜು ಪೂಜಾರಿಯವರಿಗೆ ಹಣೆಗೆ, ಬಲ ಕಾಲು, ಬಲಕೈ, ಬಲ ಕಣ್ಣಿನ ಕೆಳಗಡೆ ರಕ್ತಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆಮ್ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿಗೂ ರಕ್ತ ಗಾಯಾವಾಗಿ ಕುಂದಾಫುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 49/2022 ಕಲಂ:279, 337  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-11-2022 10:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080