ಅಭಿಪ್ರಾಯ / ಸಲಹೆಗಳು

ಅಪಘಾತ  ಪ್ರಕರಣ:

 • ಬೈಂದೂರು: ಪಿರ್ಯಾದಿ ಸುಧಾಕರ ಗೌಡ ಪ್ರಾಯ 26  ವರ್ಷ ತಂದೆ ಬಾಬು  ಗೌಡ  ವಾಸ ಅರೆಶಿರೂರು,, ಗೋಳಿಹೊಳೆ  ಗ್ರಾಮ ಇವರು ದಿನಾಂಕ: 05/10/2022  ರಂದು  ಅರೆಶಿರೂರಿನಿಂದ  ಕೊಲ್ಲೂರು ಕಡೆಗೆ ಅವರ  ಮೋಟಾರು ಸೈಕಲ್  ನಲ್ಲಿ ಹೋಗುತ್ತಿರುವಾಗ  ಬೆಳಿಗ್ಗೆ 09-45  ಗಂಟೆಗೆ  ಅರೆಶಿರೂರು  ವಿಲ್ಸನ್ ರವರ  ಮನೆಯ ಬಳಿ ತಲುಪುವಾಗ ಪಿರ್ಯಾದುದಾರರ ಎದುರಿನಿಂದ  ಮನೋಜ್ ಶೆಟ್ಟಿ ರವರು KA20EU-3412 ನೇ ಮೋಟಾರು ಸೈಕಲನ್ನುಅತೀವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಫಿರ್ಯಾದುದಾರರು ಮನೋಜ್ ಶೆಟ್ಟಿಯವರನ್ನು ಎತ್ತಿ ಉಪಚರಿಸಿದ್ದು ಅವರ ತಲೆಗೆ ಗಂಭೀರ  ಸ್ವರೂಪದ  ಗಾಯ  ಉಂಟಾಗಿರುತ್ತದೆ. ಫಿರ್ಯಾದುದಾರರು  ಮನೋಜ್  ಶೆಟ್ಟಿ ರವರ  ಮನೆಗೆ ಫೊನ್ ಮಾಡಿ   ತಿಳಿಸಿದ್ದು  ಮನೋಜ  ಶೆಟ್ಟಿ ರವರ ಹೆಂಡತಿ ಸುಮತಿ  ಶೆಟ್ಟಿ ರವರು ಸ್ಥಳಕ್ಕೆ  ಒಂದು ಓಮಿನಿ ತರಿಸಿ ಮನೋಜ  ಶೆಟ್ಟಿ ರವರನ್ನು  ಚಿಕಿತ್ಸೆಯ ಬಗ್ಗೆ ಬೈಂದೂರು  ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿ ವೈದ್ಯರು  ಪರೀಕ್ಷಿಸಿ ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಬೇರೆ  ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದ ಮೇರೆಗೆ 108 ವಾಹನದಲ್ಲಿ ಮಣಿಪಾಲ ಕೆ ಎಂ.ಸಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮನೋಜ ಶೆಟ್ಟಿ ರವರನ್ನು ಒಳರೋಗಿಯಾಗಿ  ದಾಖಲಿಸಿಕೊಂಡಿರುತ್ತಾರೆ. ಮನೋಜ ಶೆಟ್ಟಿ  ರವರು ಪ್ರಜ್ಞಾಹೀನ  ಸ್ಥಿತಿಯಲ್ಲಿದ್ದು ಅಪಘಾತದ  ಬಗ್ಗೆ ಪೊಲೀಸರು  ಮಣಿಪಾಲ ಕೆ ಎಂ.ಸಿ  ಆಸ್ಪತ್ರೆಗೆ  ವಿಚಾರಣೆಯ ಬಗ್ಗೆ ಹೋದಾಗ  ಸುಮತಿ  ಶೆಟ್ಟಿ ರವರು  ಈ ಬಗ್ಗೆ ಕೇಸು ಬೇಡ ಮುಂದಕ್ಕೆ  ಕೇಸು  ಅಗತ್ಯವಿದ್ದಲ್ಲಿ  ತಿಳಿಸುವುದಾಗಿ  ತಿಳಿಸಿರುವ  ವಿಷಯ  ಫಿರ್ಯಾದಿದಾರರಿಗೆ ತಿಳಿಸಿದ್ದರು. ಮನೋಜ್ ಶೆಟ್ಟಿ ರವರು ಪ್ರಜ್ಞಾಹೀನ  ಸ್ಥಿತಿಯಲ್ಲಿ ಇದ್ದವರು ಗುಣಮುಖರಾಗದೇ  ಆರ್ಥಿಕ ಸಮಸ್ಯೆಯಿಂದ ಸುಮಾರು 15  ದಿನಗಳ ಹಿಂದೆ  ಮಣಿಪಾಲ ಕೆ. ಎಂ.ಸಿ  ಆಸ್ಪತ್ರೆಯಿಂದ   ಡಿಸ್ಚಾರ್ಜ್  ಮಾಡಿಸಿಕೊಂಡು  ಬಂದು  ಕುಂದಾಪುರ   ಆದರ್ಶ  ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ  ದಾಖಲಿಸಿದ್ದರು. ಅಲ್ಲಿ ಸುಮಾರು  11 ದಿನಗಳ  ಚಿಕಿತ್ಸೆ ಕೊಡಿಸಿ ನಂತರ ಮನೆಗೆ  ಕರೆದುಕೊಂಡು  ಹೋಗಿದ್ದು ಮನೆಯಲ್ಲಿ  ವೈದ್ಯರ  ಸಲಹೆಯಂತೆ  ಚಿಕಿತ್ಸೆ ಪಡೆಯುತ್ತಿದ್ದರು. ಮನೋಜ  ಶೆಟ್ಟಿ ರವರಿಗೆ  ಗಾಯ ಮರುಕಳಿಸಿದ್ದು ಅದರಂತೆ  ಪನಃ ಮನೋಜ ಶೆಟ್ಟಿ ರವರನ್ನು ಒಂದು  ವಾರದ ಹಿಂದೆ  ಮಣಿಪಾಲ  ಕೆ. ಎಂ.ಸಿ  ಆಸ್ಪತ್ರೆಗೆ  ಚಿಕಿತ್ಸೆಗೆ ದಾಖಲಿಸಿದ್ದು, ಮಣಿಪಾಲ ಕೆ ಎಂ.ಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಮನೋಜ ಶೆಟ್ಟಿ  ರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 11-11-2022  ರಂದು  ರಾತ್ರಿ  9-58  ಗಂಟೆಗೆ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  222/2022 ಕಲಂ 279, 304(ಎ)  ಭಾ.ದಂ. ಸಂ ರಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ ಅಭಿಲಾಶ್‌ಕುಂದರ್‌ಪ್ರಾಯ: 38 ವರ್ಷ ತಂದೆ: ದಿ. ಬೊಗ್ಗು ಬಂಗೇರ ವಾಸ: ಅರ್ಚಕರು, ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನ, ಬೈಲೂರು, ಇವರು 76-ಬಡಗುಬೆಟ್ಟು ಗ್ರಾಮದ ಬೈಲೂರು ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 29/10/2022 ರಂದು 20:00 ಗಂಟೆಯಿಂದ ದಿನಾಂಕ 30/10/2022 ರಂದು ಬೆಳಿಗ್ಗೆ 07:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ದೈವಸ್ಥಾನದ ಎರಡು ಕಾಣಿಕೆ ಡಬ್ಬಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ನಂತರ ದಿನಾಂಕ 11/11/2022 ರಂದು 20:30 ಗಂಟೆಯಿಂದ ದಿನಾಂಕ 12/11/2022 ರಂದು ಬೆಳಿಗ್ಗೆ 07:00 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ದೈವಸ್ಥಾನದ ಒಂದು ಸಣ್ಣ ಕಾಣಿಕೆ ಡಬ್ಬವನ್ನು ಕಳವು ಮಾಡಿಕೊಂಡು ಹೋಗಿದ್ದು,ಕಳವಾದ 3 ಡಬ್ಬಗಳಲ್ಲಿ ಒಟ್ಟು ರೂ. 900/- ಹಣ ಇರಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ   165/2022 ಕಲಂ:  454, 457, 380 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ಪಿರ್ಯಾದಿ ಹರಿದಾಸ (29) ತಂದೆ:ಜಗನ್ನಾಥ ವಾಸ: ಶ್ರೀ ದೇವಿ ಕೃಪಾ , ಕೆಮ್ಮಣ್ಣು, ಪಡುತೋನ್ಸೆ ಗ್ರಾಮ ಇವರ ಮನೆಯಲ್ಲಿ  ಹಸು ಸಾಕಾಣಿಕೆ  ಮಾಡುತ್ತಿದ್ದು , ಪಿರ್ಯಾದಿದಾರರ ಅತ್ತೆ ಸಂಪಾ (53 ವರ್ಷ)  ರವರು ದಿನಾಲೂ ಹಸುಗಳಿಗೆ ಹುಲ್ಲು ತರಲು  ಕುದ್ರುವಿನಲ್ಲಿರುವ   ವಾಜೀದ್  ರವರ ತೋಟಕ್ಕೆ  ಹೋಗಿ  ಹುಲ್ಲು ತರುತ್ತಿದ್ದರು .  ಎಂದಿನಂತೆ ನಿನ್ನೆ ದಿನ ದಿನಾಂಕ: 11-11-2022  ರಂದು  ಹಸುಗಳಿಗೆ  ಹುಲ್ಲು ತರಲು ಬೆಳಿಗ್ಗೆ 10:00 ಗಂಟೆಗೆ  ಹೋಗಿದ್ದು  ಹುಲ್ಲು ಕೊಯ್ಯುವಾಗ  ಸುಮಾರು ಸಮಯ 11:00 ಗಂಟೆಗೆ ಅವರಿಗೆ   ಜೇನು ಕಚ್ಚಿರುವುದಾಗಿ ಅವರು ಮನೆಗೆ ಬಂದು ತಿಳಿಸಿದಂತೆ , ಸಂಪಾ ರವರನ್ನು ಹತ್ತಿರದ  ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಪಡೆದು ಮನೆಗೆ ಬಂದಿರುತ್ತಾರೆ. ಮನೆಯಲ್ಲಿ  ಇರುವಾಗ ಸಂಪಾರರು ತೀವ್ರ ಅಸ್ವಸ್ಥಗೊಂಡಿದ್ದು ,ಅವರನ್ನು ಚಿಕಿತ್ಸೆ ಯ ಬಗ್ಗೆ ಉಡುಪಿಯ ಸಿಎಸ್ಐ ಲಂಬಾರ್ಡೋ  ಮೆಮೊರಿಯಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪಿರ್ಯಾದಿದಾರರ  ಅತ್ತೆ ಸಂಪಾರವರಿಗೆ ಚಿಕಿತ್ಸೆ ನೀಡಿ ಒಳರೋಗಿಯಾಗಿ  ದಾಖಲು ಮಾಡಿರುತ್ತಾರೆ. ಸಂಪಾ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿರುತ್ತಾ ಚಿಕಿತ್ಸೆಫಲಕಾರಿ ಆಗದೇ ರಾತ್ರಿ 7:30 ಗಂಟೆ ಸಮಯಕ್ಕೆ  ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ  ಠಾಣಾ ಯುಡಿಆರ್ ನಂಬ್ರ 64 -2022 . ಕಲಂ- 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ: ಪಿರ್ಯಾದಿ ಸಂತೋಷ್ ಆಚಾರ್ಯ ಪ್ರಾಯ : 46 ವರ್ಷ  ತಂದೆ: ನಾರಾಯಣ ಆಚಾರ್ಯ ವಾಸ: ಫ್ಲ್ಯಾಟ್‌ನಂಬ್ರ 008, ಸಾಯಿರಾಧ ಗೋಕುಲಧಾಮ, ಬೈಲಕೆರೆ, ಇವರ ಅಣ್ಣನಾದ ನಾಗೇಶ ಪ್ರಾಯ 54 ವರ್ಷ ರವರು  ಉಡುಪಿಯ  ಚಿತ್ತರಂಜನ್‌ ಸರ್ಕಲ್‌ನಲ್ಲಿ  ಚಿನ್ನದ  ಕೆಲಸವನ್ನು  ಮಾಡಿಕೊಂಡಿದ್ದವರು,  ದಿನಾಂಕ: 11/11/2022 ರಂದು  16:00  ಗಂಟೆಯ  ಸುಮಾರಿಗೆ  ಉಡುಪಿ  ತಾಲ್ಲೂಕು  76ನೇ  ಬಡಗುಬೆಟ್ಟು  ಗ್ರಾಮದ  ಚಿಟ್ಪಾಡಿಯ  ಹೋಟೆಲ್‌ ಗಜಾನನದ  ಬಳಿಯ  ಬಸ್‌ ನಿಲ್ದಾಣದಲ್ಲಿ  ಕುಸಿದು  ಬಿದ್ದವರನ್ನು  ಚಿಕಿತ್ಸೆಯ  ಬಗ್ಗೆ  ಅಜ್ಜರಕಾಡು ಜಿಲ್ಲಾಸ್ಪತ್ರೆಗೆ  ಕರೆತರುವಾಗಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿ ಆರ್  43/2022 ಕಲಂ 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ ಪ್ರಕರಣ

 • ಕುಂದಾಪುರ:  ಪಿರ್ಯಾದಿ : ಆಶಾ ಪ್ರಾಯ: 31 ವರ್ಷ, ಗಂಡ: ವಿಜಯ ಬಿ ಕಾಂಚನ್, ವಾಸ: ಶ್ರೀ ನಿಧಿ ನಿಲಯ, ಅಜ್ರಾಡಿ ಬೆಟ್ಟು, ಗೋಪಾಡಿ ಗ್ರಾಮ, ಇವರ ತಂದೆಯಾದ ರಾಜು ಪ್ರಾಯ:(62) ಎನ್ನುವವರು ಉಪ್ಪಿನಕುದ್ರು ಗ್ರಾಮದ ಬೊಬ್ಬರ್ಯ ದೇವಸ್ಥಾನದ ಬಳಿ ವಾಸವಾಗಿದ್ದು, ಕೇರಳದಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುವುದಾಗಿದೆ. ಕಳೆದ 3 ತಿಂಗಳಿನಿಂದ ಕೆಲಸವಿಲ್ಲದೇ ಮನೆಯಲ್ಲೇ ಇದ್ದು,   ದಿನಾಂಕ 09/11/20222 ರಂದು ಬೆಳಿಗ್ಗೆ 09:00 ಗಂಟೆಗೆ ಮೀನುಗಾರಿಕೆ ಬಗ್ಗೆ ಕೇರಳ ರಾಜ್ಯದ ಮಾಹಿಯ ಚೆಂಬೇಲ್ ಎಂಬಲ್ಲಿಗೆ  ಹೋಗುತ್ತೇನೆಂದು ಮನೆಯಿಂದ ಹೊರಟು, ಕೋಟೆಶ್ವರದ ತನ್ನ ತಮ್ಮನಾದ ಶೇಖರ್ ಕಾಂಚನ್ ರವರ ಮನೆಗೆ ಹೋಗಿ, ಅಲ್ಲಿಂದ ಕೇರಳಕ್ಕೆ ಹೋಗುತ್ತೆನೆಂದು ತೆರಳಿದವರು, ಇವರೆಗೂ ವಾಪಾಸು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ, ಕೇರಳದ ಕೆಲಸ ಮಾಡುವ ಸ್ಥಳಕ್ಕೂ ತೆರಳದೇ, ಕಾಣೆಯಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  Cr No 121-2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-11-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080