ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಫಿರ್ಯಾದುದಾರರು ಮೊಹಮ್ಮದ್ ಫಹಿಂ  ಪ್ರಾಯ:26 ವರ್ಷ ತಂದೆ: ಮಹಮ್ಮದ್ ಸಲೀಂ, ವಾಸ: ಸಲೀಂ ಮಂಜಿಲ್, ಬುಕಾರಿ ಕಾಲೋನಿ, ಶಿರೂರು ಗ್ರಾಮ ಇವರು ದಿನಾಂಕ 11/11/2021 ರಂದು 17:00 ಗಂಟೆಯ ಸುಮಾರಿಗೆ ಶಿರೂರು ರಾಹೆ 66 ನೇದರ  ಬುಕಾರಿ ಕಾಲೋನಿ ದರ್ಗಾದ ಬಳಿ ಅವರ ಸ್ನೇಹಿತನೊಂದಿಗೆ ಮಾತನಾಡುತ್ತಿರುವಾಗ ಬುಕಾರಿ ಕಾಲೋನಿ ಬಳಿ ರಾಹೆ 66 ನೇದರ ಪೂರ್ವ ಬದಿಯ ರಸ್ತೆಯ ಪೂರ್ವಬದಿಯ ಮಣ್ಣು ರಸ್ತೆಯಲ್ಲಿ ಮಹಮ್ಮದ್ ಸರ್ಫರಾಜ್ ರವರು ನಡೆದುಕೊಂಡು ಬರುವಾಗ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಮಾರುತಿ ಸಿಪ್ಟ್ ಡಿಸೈರ್ ಕಾರು ನಂಬ್ರ KA20D9678 ನೇಯದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಹೆ 66 ನೇದರ ಪೂರ್ವ ಬದಿಯ ರಸ್ತೆಯ ತೀರಾ ಎಡಭಾಗಕ್ಕೆ ಪೂರ್ವ ಬದಿಯ ಮಣ್ಣು ರಸ್ತೆಗೆ ಚಲಾಯಿಸಿ ನಡೆದುಕೊಂಡು ಬರುತ್ತಿದ್ದ ಮಹಮ್ಮದ್ ಸರ್ಫರಾಜ್ ರವರಿಗೆ ಎದುರಿನಿಂದ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಎಡಕೈ ಹಾಗೂ ಎಡಕಾಲಿಗೆ ಜಖಂವುಂಟಾಗಿದ್ದು ಮತ್ತು ಹಣೆ, ಮೂಗು ಹಾಗೂ ಗಲ್ಲಕ್ಕೆ ರಕ್ತಗಾಯವಾಗಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 182/2021 ಕಲಂ. 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದ.


ಕಳವು ಪ್ರಕರಣ

  • ಕಾರ್ಕಳ :ದಿನಾಂಕ 10/06/2021 ರಿಂದ ದಿನಾಂಕ 10/11/2021 ರ ಮಧ್ಯೆ ಕಾರ್ಕಳ ತಾಲೂಕು, ಕಾರ್ಕಳ ಪುರ ಸಭೆಗೆ ಸೇರಿದ, ದುರ್ಗಾ ಗ್ರಾಮದ ಮುಂಡ್ಲಿ ಜಾಕ್ ವೆಲ್‌‌ಗೆ ನೀರು ಒದಗಿಸುವ MS ಗೇಟುಗಳನ್ನು ಜಾಕ್ ವೆಲ್‌‌ನ ಪಂಪು ಹೌಸ್‌‌ನ ಕೆಳಭಾಗದ ದಾಸ್ತಾನಿನ ಕೊಠಡಿಯಲ್ಲಿ ಶೇಖರಿಸಿಟ್ಟಿದ್ದ ಒಟ್ಟು 160 ಸಂಖ್ಯೆಯ MS ಗೇಟುಗಳನ್ನು ಹಾಗೂ ಜಾಕ್ ವೆಲ್ ಗೆ ಬೆಳಕಿಗಾಗಿ ಅಳವಡಿಸಿದ್ದ 3 ಸೋಲಾರ್ ದೀಪಗಳ ಬ್ಯಾಟರಿಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಒಟ್ಟು ಸೊತ್ತಿನ ಅಂದಾಜು ಮೊತ್ತ 4.95 ಲಕ್ಷ ಆಗಿರುತ್ತದೆ.ಈ ಬಗ್ಗೆ ರೂಪಾ ಟಿ. ಶೆಟ್ಟಿ, ಮುಖ್ಯಾಧಿಕಾರಿ, ಪುರ ಸಭೆ, ಕಾರ್ಕಳ ಇವರು ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 130/2021 ಕಲಂ 379 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.


ಇತರ ಪ್ರಕರಣ

  •  ಶಿರ್ವ: ದಿನಾಂಕ 12.11.2021 ರಂದು ಪಿರ್ಯಾದಿ ಶ್ರೀಶೈಲ್‌ಡಿ.ಎಂ. ಪಿಎಸ್‌ಐ. ಶಿರ್ವ ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಯವರಾದ ಸಿಪಿಸಿ 1189 ಸಂತೋಷ್‌ಕುಮಾರ್‌, ಎಪಿಸಿ 1412 ನೇ ಪ್ರಸಾದ್ ರವರೊಂದಿಗೆ ಠಾಣೆಯಿಂದ ಹೊರಟಿದ್ದು, ಮಟ್ಟಾರು ಅಟ್ಟಿಂಜೆ ತಲುಪಿ ಕಟ್ಟಿಂಗೇರಿ ಕಡೆಯಿಂದ ಶಿರ್ವ ಕಡೆಗೆ ಹಾದು ಹೋಗಿರುವ ಸಾರ್ವಜನಿಕ  ರಸ್ತೆಯಲ್ಲಿವಾಹನಗಳನ್ನು ಬೆಳಿಗ್ಗೆ  5:30 ಗಂಟೆಗೆ ಚೆಕ್‌ಮಾಡುತ್ತಿದ್ದ ಸಮಯದಲ್ಲಿ ಒಂದು ಪಿಕಪ್‌ಗೂಡ್ಸ್‌ವಾಹನ ಕಟ್ಟಿಂಗೇರಿ ಕಡೆಯಿಂದ  ಬರುತ್ತಿದ್ದುದ್ದನ್ನು  ನೋಡಿ  ವಾಹನವನ್ನು ಬದಿಗೆ ನಿಲ್ಲಿಸುವಂತೆ ವಾಹನದ ಚಾಲಕನಿಗೆ  ಸೂಚನೆ  ನೀಡಿ ಬಳಿಕ  ಪಿಕಪ್  ವಾಹನವನ್ನು  ಪರಿಶೀಲಿಸಲಾಗಿ  ಕೆಎ 20AA 5646 ನೇ ಪಿಕಪ್‌ಗೂಡ್ಸ್‌ ಆಗಿದ್ದು, ಸದ್ರಿ ವಾಹನದ ಒಳಗಡೆ ಒಂದು ದನ ಮತ್ತು ಎರಡು ಗಂಡು ಕರುಗಳು ಇದ್ದು  ಇವುಗಳ ಕಾಲಿಗೆ  ಹಗ್ಗವನ್ನು  ಕಟ್ಟಿ  ಹಿಂಸ್ಮಾತ್ಮಾಕ ರೀತಿಯಲ್ಲಿ  ತುಂಬಿಸಿರುವುದು  ಕಂಡು  ಬಂದಿರುತ್ತದೆ. ಗೂಡ್ಸ್  ವಾಹನದ  ಒಳಗಡೆ ಚಾಲಕನ  ಜೊತೆಯಲ್ಲಿ ಇನ್ನೊಬ್ಬ ವ್ಯಕ್ತಿ  ಕೂಡ ಇದ್ದನು. ಪಿಕಪ್ ಗೂಡ್ಸ್  ವಾಹನದ ಚಾಲಕನಲ್ಲಿ  ಹೆಸರು ವಿಳಾಸ  ಕೇಳಲಾಗಿ ತನ್ನ  ಹೆಸರು ಜಾರ್ಜ್‌ ಮ್ಯಾಥ್ಯೂ   ಎಂದು  ತಿಳಿಸಿದನು.  ಗೂಡ್ಸ್  ವಾಹನದ   ಒಳಗಡೆ  ಇನ್ನೊಬ್ಬ ವ್ಯಕ್ತಿಯ  ಹೆಸರು  ವಿಳಾಸ  ಕೇಳಲಾಗಿ ತನ್ನ  ಹೆಸರು  ಹುಸೇನ್    ಎಂದು  ತಿಳಿಸಿದ್ದು, ಸದ್ರಿಯವರು ಬೆಳ್ಳೆ ಎಂಬಲ್ಲಿ ರಸ್ತೆ  ಬದಿಯಲ್ಲಿದ್ದ 1 ದನ, ಮತ್ತು 2 ಗಂಡು ಕರುಗಳನ್ನು  ಕಳವು ಮಾಡಿ  ಬಳಿಕ ಇವುಗಳ ಕಾಲಿಗೆ  ಹಗ್ಗವನ್ನು ಕಟ್ಟಿ  ಹಿಂಸ್ಮಾತ್ಮಾಕ  ರೀತಿಯಲ್ಲಿ ಯಾವುದೇ ಪರವಾನಿಗೆ  ಇಲ್ಲದೇ ಅಕ್ರಮವಾಗಿ ಸಾಗಾಟ  ಮಾಡುತ್ತಿದ್ದುದರಿಂದ ಶಿರ್ವ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  65/2021 US 379 IPC & 5, 12 The Karnataka Prevention of slaughter and preservation of cattle ordinance 2020  & SEC  8, 11 The Karnataka Prevention of Cow slaughter and cattle preservation act 1964,ರಂತೆ ಪ್ರಕರಣ ದಾಖಲಾಗಿರುತ್ತದ.

ಇತ್ತೀಚಿನ ನವೀಕರಣ​ : 12-11-2021 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080