ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 11/10/2022  ರಂದು  ಮಧ್ಯಾಹ್ನ  01:35 ಗಂಟೆಗೆ,  ಕುಂದಾಪುರ  ತಾಲೂಕಿನ, ಬೀಜಾಡಿ    ಗ್ರಾಮದ  ಮಲ್ನಾಡ್‌‌ ಪೆಟ್ರೋಲ್‌ ‌ಬಂಕ್‌ ಬಳಿ  ಪೂರ್ವ ಬದಿಯ NH 66 ರಸ್ತೆಯಲ್ಲಿ, ಆಪಾದಿತ ಗೋವರ್ಧನ್‌ KA-20-N-8175ನೇ ಕಾರನ್ನು  ಕುಂಭಾಶಿ  ಕಡೆಯಿಂದ ಕುಂದಾಪುರ ಕಡೆಗೆ NH 66 ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು, NH 66 ರಸ್ತೆ ದಾಟುತ್ತಿದ್ದ  ಪಿರ್ಯಾದಿದಾರರಾದ  ಕೃಷ್ಣ (58), ತಂದೆ:  ದಿ.ಕುಪ್ಪುಸ್ವಾಮಿ , ವಾಸ: ವಿನಾಯಕ ನಗರ 5ನೇ ಕ್ರಾಸ್‌, ಕುಂಭಾಶಿ ಗ್ರಾಮ ಕುಂದಾಪುರ  ತಾಲೂಕು ಇವರಿಗೆ  ಡಿಕ್ಕಿ ಹೊಡೆದ ಪರಿಣಾಮ  ಕೃಷ್ಣ  ರವರ ಬಲಕೈಗೆ ಒಳ ಜಖಂ ಗಾಯ, ತಲೆಗೆ, ಮುಖಕ್ಕೆ ಹಾಗೂ ಬಲಕಾಲಿಗೆ ತರಚಿದ  ರಕ್ತಗಾಯವಾಗಿ ಕೊಟೇಶ್ವರ  ಎನ್‌. ಆರ್‌‌ಆಚಾರ್ಯ   ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 11/10/2022 ರಂದು 18:40 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುಡ್ರಾಲ್ ಕ್ರಾಸ್ ಬಳಿ  ಹಾದು ಹೋಗಿರುವ ಶ್ರಂಗೇರಿ-ಬಜಗೊಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಾಳ ಕಡೆಯಿಂದ ಬಜಗೊಳಿ ಕಡೆಗೆ KA-19-MK-0787 ನೇ ನಂಬ್ರದ ಕಾರಿನ ಚಾಲಕ ಪವನ್ ಆಚಾರ್ಯ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಬಜಗೊಳಿ ಕಡೆಯಿಂದ ಮಾಳ ಕಡೆಗೆ ಕೆರ್ವಾಶೆ ವಾಸಿ ಸುರೇಶ್ ಶೆಟ್ಟಿ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EQ-0255 ನೇ ನಂಬ್ರದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಸುರೇಶ್ ಶೆಟ್ಟಿ ರವರು ಸ್ಕೂಟಿ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 128/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ನಿಂಗ(38), ತಂದೆ:  ದಿ. ಚಿಕ್ಕ, ವಾಸ: ಕೊಳ್ಳೆಹೊಳೆ ಮುದೂರು ಪೋಸ್ಟ್  ಜಡ್ಕಲ್  ಗ್ರಾಮ  ಬೈಂದೂರು ತಾಲೂಕು ಇವರ  ತಾಯಿ ನಿಂಗು (65) ವರ್ಷರವರು ಕೆಲವು ದಿನಗಳಿಂದ ಉಬ್ಬಸ ಖಾಯಿಲೆಯಿಂದ ಬಳಲುತಿದ್ದವರು ವಂಡ್ಸೆ  ಐತಾಳ್ ಕಿನ್ಲಿಕ್ ನಲ್ಲಿ  ಮದ್ದು ಮಾಡುತ್ತಿದ್ದು, ದಿನಾಂಕ 11/10/2022 ರಂದು ಬೆಳಿಗಿನ ಜಾವ 4:00 ಗಂಟೆಗೆ ಮಲಗಿದ ಸಮಯ ವಿಪರೀತ ಕೆಮ್ಮು ಹಾಗೂ ಉಬ್ಬಸ ಉಲ್ಬಣಗೊಂಡು ಉಸಿರಾಡಲು ಕಷ್ಟ ಪಡುತ್ತಿದವರನ್ನು  ಕೂಡಲೇ ಒಂದು ವಾಹನದಲ್ಲಿ ಪಿರ್ಯಾದಿದಾರರು ತನ್ನ  ಅಕ್ಕನ ಮಗ ಅಶೋಕನೊಂದಿಗೆ  ಕುಂದಾಪುರ ಮಂಜುನಾಥ ಆಸ್ಪತ್ರೆಗೆ  ಚಿಕಿತ್ಸೆ ಗೆ ಕರೆದುಕೊಂಡು ಹೋಗಿ  ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಒಳರೋಗಿ  ದಾಖಲು ಮಾಡಿದ್ದು,  ಮದ್ಯಾಹ್ನ 12:20 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ವೈದ್ಯರು ದೃಡೀಕರಿಸಿರುತ್ತಾರೆ.  ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2022 ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಅವಿನಾಶ್ (30), ತಂದೆ: ಚಂದ್ರ,  ವಾಸ: ಶ್ರೀ ಮಾತಾ  ಜೆ.ಎಲ್.ಬಿ  ರೋಡ್. ವಿಠಲ್‌ವಾಡಿ ವಡೇರಹೋಬಳಿ ಕುಂದಾಪುರ ತಾಲೂಕು ಇವರ  ಮಾವ ನರಸಿಂಹ  (53)  ರವರು 3 ವರ್ಷಗಳಿಂದ ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು, ಅವರು ಸೋರಿಯಾಸಿಸ್‌ ಎಂಬ ಚರ್ಮ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು ಅಲ್ಲದೇ ಕಳೆದ 4 ತಿಂಗಳ ಹಿಂದೆ ಅವರಿಗೆ ಪಕ್ಷವಾತ ಖಾಯಿಲೆ ಬಂದಿದ್ದು ಈ ಬಗ್ಗೆನೂ ಕೂಡಾ ಚಿಕಿತ್ಸೆ ಪಡೆಯುತ್ತಿದ್ದು ಇದರಿಂದ ಕೆಲಸಕ್ಕೆ ಹೋಗಲು ಆಗದೇ ಹಣದ ಅಡಚಣೆಯಾಗಿ ಮನನೊಂದು  ದಿನಾಂಕ 10/10/2022 ರಂದು ಮದ್ಯಾಹ್ನ 2:00 ಗಂಟೆಗೆ ಮನೆಯಲ್ಲಿ ಇದ್ದವರು ಮನೆಯ ಯಾರಿಗೂ ಹೇಳದೆ ಕೇಳದೇ ಹೋಗಿದ್ದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದುದರಿಂದ ಪೋನ್‌ ಮಾಡಿದಾಗ ಸಂಪರ್ಕಕ್ಕೆ ಸಿಗದೇ ಇದ್ದು  ಕಾಳಾವಾರದ ಸುಬ್ರಹ್ನಣ್ಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಹಾಡಿಯಲ್ಲಿ ನೇಣು ಹಾಕಿಕೊಂಡಿರುವ ವಿಚಾರ ತಿಳಿದು ಬಂದು ನೋಡಿದಾಗ ಕಾಟು ಮರದ ಕೊಂಬೆಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ 10/10/2022 ರಂದು 16:45 ಗಂಟೆಗೆ  ಪಿರ್ಯಾದಿದಾರರಾದ ಆನಂದ ಪೂಜಾರಿ  (58), ತಂದೆ: ನಾರಾಯಣ ಪೂಜಾರಿ @ ವೇಂಕಟ ಪೂಜಾರಿ,  ವಾಸ: ಕೋಟಗುಳಿ, ಹಳ್ಳಿಹೊಳೆ  ಗ್ರಾಮ ಬೈಂದೂರು  ತಾಲೂಕು  ಇವರ       ಮನೆಯ ಪಕ್ಕದಲ್ಲಿರುವ ಜಮೀನು ಸರ್ವೆ ನಂಬ್ರ 73 ರಲ್ಲಿ ಗುರುದತ್ತ ಚಾತ್ರ ಹಾಗೂ ಅವರ ಕೆಲಸದವರು ಕೆಲಸ ಮಾಡುತ್ತಿದ್ದು ಪಿರ್ಯಾದಿದಾರರು ಅಲ್ಲಿಗೆ ಹೋಗಿ  ಜಾಗದ ವಿಚಾರವು ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ನೀವು ಕೇಲಸ ಮಾಡುವುದು ಸರಿಯಲ್ಲ ಎಂದು ಹೇಳಿದಾಗ  ಅವರು ನನ್ನಲ್ಲಿ ನೀನು ಒಳಗೆ ಬಂದಿರುವುದು ಸರಿಯಲ್ಲ ಎಂದು ಹೇಳಿದರು, ಅದಕ್ಕೆ ನಾನು ನೀವು ಕೆಲಸ ಮಾಡಿದರೆ ನಿಮ್ಮ ಮೇಲೆ ಕಂಪ್ಲೆಂಟು ಮಾಡುತ್ತೆನೆ ಎಂದು ಹೇಳಿ ಅಲ್ಲಿಂದ ಹೊರಟಾಗ,  ಗುರುದತ್ತ ಚಾತ್ರ ಮತ್ತು ರತ್ನಾಕರ ಶೆಟ್ಟಿ ರವರು ಬಂದು ಪಿರ್ಯಾದಿದಾರರನ್ನು ಅಡ್ಡಕಟ್ಟಿ ಒತ್ತಿ ಹಿಡಿದುಕೊಂಡು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದಿರುತ್ತಾರೆ. ಇನ್ನು ಮುಂದಕ್ಕೆ ಈ ಜಾಗದಲ್ಲಿ ಕಾಲು ಹಾಕಿದರೆ ನಿನ್ನನ್ನು ಕೊಂದು  ಜಾಗದಲ್ಲಿ ಹುಗಿದು ಹಾಕುತ್ತೆನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಆ ಬಳಿಕ ಮನೆಗೆ ಹೋದೆನು, ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ ಚಿಕಿತ್ಸೆಗೆ ಹೊಗಿರುವುದಿಲ್ಲ.  ಕೈಯಿಂದ ಹೊಡೆದ ಪರಿಣಾಮ ಬೆನ್ನು ಹಾಗೂ ಹೊಟ್ಟೆ ನೋವು ಜಾಸ್ತಿ ಆಗಿದ್ದು, ದಿನಾಂಕ 11/10/2022 ರಂದು ಚಿಕಿತ್ಸೆಯ ಬಗ್ಗೆ ಕೊಟೇಶ್ವರದ ಸರ್ಜನ್ ಆಸ್ಪತ್ರೆಯಲ್ಲಿಒಳರೋಗಿಯಾಗಿ  ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022  ಕಲಂ:. 341, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಇತ್ತೀಚಿನ ನವೀಕರಣ​ : 12-10-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080