ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಕಾಸೀಂ (53), ತಂದೆ : ದಿ. ಇಸ್ಮಾಯಿಲ್, ವಾಸ: ಸೌಧ ಕಾಂಪ್ಲೇಕ್ಸ್ ಕೆ.ಸಿ. ರೋಡ್, ಸುರತ್ಕಲ್ ಮಂಗಳೂರು ದ.ಕ. ಜಿಲ್ಲೆ ಇವರ ಪರಿಚಯದ ತಮಿಳುನಾಡಿನ ಪಿ. ಶರವಣ ಎಂಬುವವರು ದಿನಾಂಕ 10/10/2021 ರಂದು ರಾತ್ರಿ 10:30 ಗಂಟೆಗೆ ದೂರವಾಣಿ ಕರೆ ಮಾಡಿ ಅವರ KA-01-EF-5856 ನೇ ನಂಬ್ರದ ಟ್ಯಾಂಕರ್ ಕಾಪುವಿನ ದಂಡತೀರ್ಥ ಶಾಲೆಯ ಸಮೀಪ ಅಪಘಾತಗೊಂಡು ಅದರ ಚಾಲಕ ರಾಜು ಎಸ್ ಎಂಬುವವರು ಗಾಯಗೊಂಡು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನೀವು ಅಲ್ಲಿಗೆ ಹೋಗಿ ವಿಚಾರಿಸಿ ಎಂದು ತಿಳಿಸಿದಂತೆ, ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ  ಒಳರೋಗಿಯಾಗಿ ದಾಖಲಾಗಿದ್ದ ರಾಜು ಎಸ್. ರವರನ್ನು ವಿಚಾರಿಸಿದಾಗ ದಿನಾಂಕ 10/10/2021 ರಂದು ರಾತ್ರಿ 9:50  ಗಂಟೆಗೆ ನಾನು ನನ್ನ  ಟ್ಯಾಂಕರನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಉಡುಪಿ ಮಂಗಳೂರು ರಸ್ತೆಯಲ್ಲಿ  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಊಳಿಯಾರಗೋಳಿ ಗ್ರಾಮದ ದಂಡತೀರ್ಥ ಶಾಲೆಯ ಬಳಿ ಅಮರೇಶ ಕುಮಾರ ರವರು  ತನ್ನ ಲಾರಿ ನಂಬ್ರ KA-01-AF- 8676 ನೇದನ್ನು ಯಾವುದೇ ಸೂಚನಾ ಫಲಕ ಹಾಗೂ ಪಾರ್ಕಿಂಗ್ ಲೈಟ್ ಹಾಕದೇ ರಸ್ತೆಯಲ್ಲಿ ನಿಲ್ಲಿಸಿದ್ದು ರಾತ್ರಿಯಾದ ಕಾರಣ ನನಗೆ ಕಾಣದೇ ಇದ್ದು, ನಾನು ಲಾರಿಯ ಹಿಂಭಾಗಕ್ಕೆ ನನ್ನ ಟ್ಯಾಂಕರ ಢಿಕ್ಕಿ ಹೊಡೆದ ಪರಿಣಾಮ ನನಗೆ ಬಲಕೈಗೆ ಗಂಭೀರ ಗಾಯವಾಗಿದ್ದು, ಹಣೆ ಮತ್ತು ಕಾಲುಗಳಿಗೆ ಸಾಮಾನ್ಯ ಗಾಯಗಳಾಗಿದ್ದು, ಹಾಗೂ ಟ್ಯಾಂಕರನ  ಮುಂಭಾಗ ಮತ್ತು ಲಾರಿಯ ಹಿಂಭಾಗ ಜಖಂ ಗೊಂಡಿರುತ್ತದೆ. ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 11/10/2021  ರಂದು ಸಂಜೆ 06:05 ಗಂಟೆಗೆ ಕುಂದಾಪುರ  ತಾಲೂಕಿನ ಕಸಬಾ ಗ್ರಾಮದ ಸಂಗಮ್‌ ‌ಜಂಕ್ಷನ್‌ ಬಳಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ  ಆಪಾದಿತ ಸುದೀನ್‌ ‌ಖಾರ್ವಿ ಎಂಬುವವರು KA-20-AA-7603ನೇ ಮಹೀಂದ್ರ ಬೊಲೆರೋ   ಗೂಡ್ಸ್ ವಾಹನವನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ಗೂಡ್ಸ್ ವಾಹನವನ್ನು ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಕರಿಯ @ ಕರುಣಾಕರ ರವರು ಆನೆಗಳ್ಳಿ ಕಡೆಯಿಂದ ಚಿಕ್ಕನ್‌ಸಾಲ್‌ ರಸ್ತೆಗೆ ಸೈಕಲ್‌ ಸವಾರಿ ಮಾಡಿಕೊಂಡು ಬಂದು ರಸ್ತೆಯ ಪಶ್ಚಿಮ ಅಂಚಿಗೆ ತಲುಪುವಾಗ ಡಿಕ್ಕಿ ಹೊಡೆದ ಪರಿಣಾಮ  ಕರಿಯ @ ಕರುಣಾಕರ ರವರ ತಲೆಗೆ, ಎಡಕಾಲಿಗೆ ರಕ್ತಗಾಯ ಹಾಗೂ ಒಳಜಖಂ ಗಾಯ ಹಾಗೂ ಕೈ ಕಾಲುಗಳಿಗೆ ತರಚಿದ ಗಾಯವಾಗಿ ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ವಿಶ್ವನಾಥ ಕೊಠಾರಿ (51), ತಂದೆ: ಕೃಷ್ಣ ಕೊಠಾರಿ, ವಾಸ:ಮಹಾಗಣಪತಿ ದೇವಸ್ತಾನದ ಹತ್ತಿರ ಆಲಂದೂರು ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 11/10/2021 ರಂದು ಕೆಲಸ ನಿಮಿತ್ತ ಅವರ ಮನೆಯಾದ ಆಲಂದೂರಿನಿಂದ ಮೋಟಾರ್ ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೈಂದೂರಿಗೆ ಬರುತ್ತಿದ್ದು ಅವರ ಮುಂದುಗಡೆಯಿಂದ ವೆಂಕಟೇಶ ಎಂಬುವವರು ಅವರ ಮೋಟಾರ್ ಸೈಕಲ್ ನಂಬ್ರ KA-20-EL-2600ನೇದರಲ್ಲಿ ಬೇಬಿ ರವrನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬೈಂದೂರು ಕಡೆಗೆ ಹೋಗುತ್ತಿದ್ದು 13:00 ಗಂಟೆಗೆ ಬೈಂದೂರು ಹೊಸ ಬಸ್ ನಿಲ್ದಾಣ ಬಳಿ ತಲುಪುವಾಗ ಬೈಂದೂರು ತಾಲೂಕು ಕಛೇರಿ ಕಡೆಯಿಂದ KA-20-MD-4699 ನೇದರ ಕಾರು ಚಾಲಕನು ಆತನ ಕಾರನ್ನು ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪತ ರಸ್ತೆಯ ಯು ಟರ್ನ್ ಬಳಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಬೈಂದೂರು ರೈಲ್ವೆ ಸ್ಟೇಷನ್ ಕಡೆಗೆ ಹೋಗುವ ರಸ್ತೆಗೆ ಚಲಾಯಿಸಿ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ವೆಂಕಟೇಶ ರವರ ಮೋಟಾರ್ ಸೈಕಲ್ ನ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ವೆಂಕಟೇಶ ಹಾಗೂ ಸಹಸವರರಾದ ಬೇಬಿರವರು ರಸ್ತೆಗೆ ಬಿದ್ದಿದ್ದು, ವೆಂಕಟೇಶರವರಿಗೆ ಬಲಕಾಲಿಗೆ, ಎಡಕಣ್ಣಿನ ಬಳಿ ರಕ್ತಗಾಯ, ಎರಡೂ ಕಾಲಿಗೆ ತರಚಿದ ಗಾಯಗಳಾಗಿರುತ್ತದೆ. ಬೇಬಿರವರಿಗೆ ಎಡಕಾಲಿಗೆ ಹಾಗೂ ಎಡಕೈಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ವೆಂಕಟೇಶ ಹಾಗೂ ಬೇಬಿರವರನ್ನು ಪಿರ್ಯಾದಿದಾರರು ಒಂದು ಅಂಬುಲೆನ್ಸ್ ನಲ್ಲಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾದ ಕ್ರಮಾಂಕ 163/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದುದಾರರಾದ ಶೇಖರ್‌(45), ತಂದೆ: ಸೂರಪ್ಪ, ವಾಸ: ಶಿರ್ವ ಪದವು ಹೌಸ್‌, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು,  ಉಡುಪಿ ಜಿಲ್ಲೆ ಇವರ ಚಿಕ್ಕಪ್ಪನ ಮಗ ದಿಲೀಪ್‌ ಕುಮಾರ್‌ (28) ರವರು ಕೋವಿಡ್‌ನಿಂದಾಗಿ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದು, ಪ್ರಸ್ತುತ ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 10/10/2021 ರಂದು ಮಧ್ಯಾಹ್ನ 3:45 ಗಂಟೆಗೆ ಶಿರ್ವ ಗ್ರಾಮದ ನಡಿಬೆಟ್ಟು ಎಂಬಲ್ಲಿ ಹರಿಯುವ ಪಾಪನಾಶಿನಿ ಹೊಳೆಗೆ ಅಡ್ಡವಾಗಿ ನಿರ್ಮಿಸಿದ ಅಣೆಕಟ್ಟಿನ ಕೆಳಗಡೆ ಕಲ್ಲಿನಲ್ಲಿ ನಿಂತು ಗಾಳ ಹಾಕಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದು ಮುಳುಗಿ ಕಾಣೆಯಾಗಿರುತ್ತಾರೆ. ದಿನಾಂಕ 11/10/2021 ರಂದು ಬೆಳಿಗ್ಗೆ 11:30 ಗಂಟೆಗೆ ದಿಲೀಪ್‌ ಕುಮಾರ್‌ ರವರ ಮೃತ ದೇಹ ಪತ್ತೆಯಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ಪಿರ್ಯಾದಿದಾರರಾದ ರಾಜೇಶ್ (23), ತಂದೆ: ರಮೇಶ್ ರಾವ್, ವಾಸ:ಕಮಲ ನಿವಾಸ ಚಿಮುಳ್ಳು ಶಿರ್ಲಾಲು ಗ್ರಾಮ ಕಾರ್ಕಳ ತಾಲೂಕು ಇವರ ತಮ್ಮ ಶಬರೀಶ್ (21) ಎಂಬುವವರು ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮ ಚಿಮುಳ್ಳು ಎಂಬಲ್ಲಿ ತನ್ನ ತಂದೆ ತಾಯಿಯವರೊಂದಿಗೆ ವಾಸಿಸುತ್ತಿದ್ದು, ಕಾರ್ಕಳದ MPM ಕಾಲೇಜಿನಲ್ಲಿ ದ್ವಿತೀಯ ಡಿಗ್ರಿ ವಿದ್ಯಾರ್ಥಿಯಾಗಿದ್ದು ಕಾಲೇಜಿಗೆ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದು ದ್ವಿತೀಯ ಡಿಗ್ರಿಯಲ್ಲಿ ಅಂಕ ಕಡಿಮೆ ಬಂದಿದ್ದರಿಂದ ಮನೆಯಲ್ಲಿ ಬೇಸರಗೊಂಡು ಒಬ್ಬನೇ ಕುಳಿತುಕೊಂಡು ಮೊಬೈಲ್ ನಲ್ಲಿ ಯಾವುದೋ ಆಟ ಆಡುತ್ತಿದ್ದು ಆತನಿಗೆ ಬುದ್ದಿ ಹೇಳಿ ಸಮಾದಾನಪಡಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದೇ ಒಬ್ಬನೇ ಕುಳಿತುಕೊಂಡು ಮನೆಯವರಲ್ಲಿ ಮಾತಾನಾಡದೇ ಮೌನಿಯಾಗಿದ್ದು, ಡಿಗ್ರಿಯಲ್ಲಿ ಅಂಕ ಕಡಿಮೆ ಬಂದಿದ್ದರಿಂದ ಮಾನಸಿಕವಾಗಿ ನೊಂದು ಖಿನ್ನತೆಗೆ ಒಳಗಾಗಿ ದಿನಾಂಕ 11/10/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 17:41 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅಸ್ವಸ್ತಗೊಂಡು ಒದ್ದಾಡುತ್ತಿದ್ದವರನ್ನು ಆಸ್ವತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯ ಮೃತಪಟ್ಟಿದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಮನೋಹರ (36), ತಂದೆ: ಬಾಬು ಇವರ ಅಣ್ಣ ದಿನೇಶ (36) ರವರು ಮೀನುಗಾರಿಕೆ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 10/10/2021 ರಂದು 16:30 ಗಂಟೆಗೆ ಮೀನುಗಾರಿಕೆ ಬಗ್ಗೆ ಪಂಚಗಂಗಾವಳಿ ಹೊಳೆಗೆ ಹೋಗಿದ್ದು ಬಳಿಕ ವಾಪಾಸು ಬಂದಿರುವುದಿಲ್ಲ. ಈ ಬಗ್ಗೆ ಪಿರ್ಯಾದಿದಾರರು ಪಂಚಗಂಗಾವಳಿ ಹೊಳೆಯಲ್ಲಿ ಹುಡುಕಾಡುತ್ತಿದ್ದು ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ. ಹೀಗಿರುತ್ತಾ ದಿನಾಂಕ 11/10/2021 ರಂದು 17:00 ಗಂಟೆ ವೇಳೆಗೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಹಿಂಭಾಗದ ಪಂಚಗಂಗಾವಳಿ ಹೊಳೆಯಲ್ಲಿ ದಿನೇಶರವರ ಮೃತದೇಹ ಪತ್ತೆಯಾಗಿದ್ದು, ಮೀನುಗಾರಿಕೆ ಬಗ್ಗೆ ಹೋದ ದಿನೇಶರವರು 10/10/2021 ರಂದು 16:30 ಗಂಟೆ ಯಿಂದ ದಿನಾಂಕ 11/10/2021 17:00 ಗಂಟೆಯ ಮದ್ಯಾವಧಿಯಲ್ಲಿ ನೀರಿನ ಅಲೆ ಅಪ್ಪಳಿಸಿ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮಟ್ಕಾ ಜುಗಾರಿ ಪ್ರಕರಣ ಪ್ರಕರಣ

  • ಕೊಲ್ಲೂರು: ದಿನಾಂಕ 11/10/ 2021 ರಂದು 10:45 ಗಂಟೆಗೆ ಕುಂದಾಪುರ  ತಾಲೂಕು ಚಿತ್ತೂರು ಗ್ರಾಮದ  ಚಿತ್ತೂರು ಪ್ರಾಥಮಿಕ ಶಾಲೆಯ ಬಳಿ ಅರಣ್ಯ ಇಲಾಖೆಯ ನಡುತೋಪು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸುಧಾಕರ ಶೆಟ್ಟಿ (45), ತಂದೆ:ದಿ. ಗೋವಿಂದ ಶೆಟ್ಟಿ, ವಾಸ: ಮಕ್ಕಿ ಮನೆ, ಚಿತ್ತೂರು  ಗ್ರಾಮ, ಬೈಂದೂರು ತಾಲೂಕು ಎಂಬಾತ ತನ್ನ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಮಾಡಿ ಒಂದು ರೂಪಾಯಿ ಕಟ್ಟಿದರೇ ರೂಪಾಯಿ 70 ಕೊಡುವುದಾಗಿ ಹೇಳಿ ಮಟ್ಕಾ ಚೀಟಿ ಬರದು ಕೊಡುತ್ತಾ ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ನಾಸೀರ್‌ ಹುಸೇನ್‌, ಪೊಲೀಸ್ ಉಪನಿರೀಕ್ಷಕರು ಕೊಲ್ಲೂರು ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್ ಪೆನ್-1 ಮತ್ತು ನಗದು ರೂಪಾಯಿ 1,075/- ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021  ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೊಲ್ಲೂರು: ದಿನಾಂಕ 11/10/2021 ರಂದು 14:15 ಗಂಟೆಗೆ ಬೈಂದೂರು ತಾಲೂಕು ಕೊಲ್ಲೂರು ಗ್ರಾಮ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪಾರ್ಕಿಂಗ್ ಏರಿಯಾದ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅರುಣ ಮೊಗವವೀರ ಹೆಚ್ (43), ತಂದೆ: ದಿ. ಶೇಷು, ವಾಸ: ಹೆಗ್ಡೆಹಕ್ಲು  ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರು ತನ್ನ  ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರನ್ನು ಕರೆಯುತ್ತಾ  ಸಾರ್ವಜನಿಕ ರಿಂದ ಹಣ ಸಂಗ್ರಹ ಮಾಡಿ ಒಂದು ರೂಪಾಯಿ ಕಟ್ಟಿದರೆ ರೂಪಾಯಿ 70 ಕೊಡುವುದಾಗಿ ಹೇಳಿ ಮಟ್ಕಾ ಚೀಟಿ ಬರೆದು ಕೊಡುತ್ತಾ ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಶ್ರೀಕಾಂತ್ ಕೆ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ ಕುಂದಾಪುರ ಇವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ನಂಬ್ರ ಬರೆದ ಚೀಟಿ-1,ಬಾಲ್ ಪೆನ್-1 ಮತ್ತು ನಗದು ರೂಪಾಯಿ 1,620/- ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: 78 (i) (iii) KP ACT  ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೊಲ್ಲೂರು: ದಿನಾಂಕ 11/10/2021 ರಂದು14:45 ಗಂಟೆಗೆ ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ಚಿತ್ತೂರು-ಕೊಲ್ಲೂರು ಮುಖ್ಯ ರಸ್ತೆಯ ಹಾರ್ಮಾಣು ಬ್ರಹ್ಮಲಿಂಗೇಶ್ವರ ಹಾರ್ಡ ವೇರ್ ಬಳಿಯಲ್ಲಿ  ಕಲ್ಲುಕಟ್ಟೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸದಾಶಿವ ಶೆಟ್ಟಿ (50), ತಂದೆ:ದಿ. ಮುತ್ತಯ್ಯ ಶೆಟ್ಟಿ, ವಾಸ: ನಡುಮನೆ.  ಚಿತ್ತೂರು ಗ್ರಾಮ, ಬೈಂದೂರು ತಾಲೂಕು ಇವರು ತನ್ನ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ರಿಂದ ಹಣ ಸಂಗ್ರಹ ಮಾಡಿ ಒಂದು ರೂಪಾಯಿ ಕಟ್ಟಿದರೆ ರೂಪಾಯಿ 70 ಕೊಡುವುದಾಗಿ ಹೇಳಿ ಮಟ್ಕಾ ಚೀಟಿ ಬರೆದು ಕೊಡುತ್ತಾ ಮಟ್ಕಾ ಜೂಜಾಟ ನಡೆಸುತ್ತಿದ್ದಾಗ ಸಂತೋಷ್ ಕಾಯ್ಕಿಣಿ, ಪೊಲೀಸ್ ವೃತ ನಿರೀಕ್ಷಕರು, ಬೈಂದೂರು ವೃತ್ತ ಇವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ನಂಬ್ರ ಬರೆದ ಚೀಟಿ-1,ಬಾಲ್ ಪೆನ್-1 ಮತ್ತು ನಗದು ರೂಪಾಯಿ 625/- ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021  ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 11/10/2021 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಉಡುಪಿ ನಗರ ಠಾಣಾ ಪ್ರಕರಣದಲ್ಲಿ ಆರೋಪಿಯಾದ ಸುರೇಶ ಪೂಜಾರಿ ಯೊಂದಿಗೆ ಇಂದ್ರಾಳಿ ಎಂಬಲ್ಲಿಗೆ ಹೋಗಿ ತನಿಖೆ ನಡೆಸಿ ವಾಪಸ್ಸು ಠಾಣೆಯ ಕಡೆಗೆ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಬರುತ್ತಿರುವಾಗ, ಆರೋಪಿ ತಾನು ಕಳವು ಮಾಡುತ್ತಿದ್ದ ಹಣದ ಪೈಕಿ ಸ್ವಲ್ಪ ಹಣವನ್ನು ತಾನು ಇಸ್ಪೀಟು ಜುಗಾರಿ ಆಟಕ್ಕೆ ಕಟ್ಟುತ್ತಿದ್ದು, ಸಿಟಿ ಬಸ್ ನಿಲ್ದಾಣದ ಒಳಗಡೆ ಇರುವ ಅಂಗಡಿಗಳನ್ನು ತಾನು ತೋರಿಸಿಕೊಡುವುದಾಗಿ ತಿಳಿಸಿದ್ದು,  ಆರೋಪಿ ಸುರೇಶ್ ಪೂಜಾರಿ ಯೊಂದಿಗೆ ಉಡುಪಿ ಸಿಟಿ ಬಸ್ ನಿಲ್ದಾಣದ ಪಶ್ಚಿಮ ಬದಿಯಲ್ಲಿ ಮಲ್ಪೆ ಕಡೆಗೆ ಹೋಗುವ ಸಿಟಿ ಬಸ್ ನಿಲ್ಲುವ ಸ್ಥಳದ ಹತ್ತಿರ ಇರುವ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಕೂಗಿ ಕರೆಯುತ್ತಾ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿಯಲ್ಲಿ ನಂಬ್ರ ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ಓಡಿ ಹೋಗಿದ್ದು, ಈ ಪ್ರಕರಣದ ಆರೋಪಿ ಸಂತೋಷ ವಶಕ್ಕೆ ಪಡೆದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 2,150/- ಮತ್ತು ಮಟ್ಕಾ ಚೀಟಿ- 1, ಬಾಲ್‌ಪೆನ್‌-1 ಮತ್ತು ಕಪ್ಪು ಬಣ್ಣದ ಲಾವಾ ಕೀ ಪ್ಯಾಡ್ ಮೊಬೈಲ್ 1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲಾಗಿ ಚಂದ್ರ, ಕುಕ್ಕಿಕಟ್ಟೆ, ಉಡುಪಿ ಎಂಬುದಾಗಿ ತಿಳಿಸಿದ್ದು, ಇಬ್ಬರೂ ಸೇರಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು, ತಾವು ಸಂಗ್ರಹಿಸುತ್ತಿದ್ದ ಹಣವನ್ನು ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2021 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 11/10/2021 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಉಡುಪಿ ನಗರ ಠಾಣಾ ಪ್ರಕರಣದಲ್ಲಿ ಆರೋಪಿಯಾದ ಸುರೇಶ ಪೂಜಾರಿ ಯೊಂದಿಗೆ ಇಂದ್ರಾಳಿ ಎಂಬಲ್ಲಿಗೆ ಹೋಗಿ ತನಿಖೆ ನಡೆಸಿ ವಾಪಸ್ಸು ಠಾಣೆಯ ಕಡೆಗೆ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಬರುತ್ತಿರುವಾಗ ಆರೋಪಿ ತಾನು ಕಳವು ಮಾಡುತ್ತಿದ್ದ ಹಣದ ಪೈಕಿ ಸ್ವಲ್ಪ ಹಣವನ್ನು ತಾನು ಇಸ್ಪೀಟು ಜುಗಾರಿ ಆಟಕ್ಕೆ ಕಟ್ಟುತ್ತಿದ್ದು, ಸಿಟಿ ಬಸ್ ನಿಲ್ದಾಣದ ಒಳಗಡೆ ಇರುವ ಅಂಗಡಿಗಳನ್ನು ತಾನು ತೋರಿಸಿಕೊಡುವುದಾಗಿ ತಿಳಿಸಿದ್ದು, ಆರೋಪಿ ಸುರೇಶ್ ಪೂಜಾರಿ ಯೊಂದಿಗೆ ಉಡುಪಿ ಸಿಟಿ ಬಸ್ ನಿಲ್ದಾಣದ ದಕ್ಷಿಣ ಬದಿಯಲ್ಲಿ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಕೂಗಿ ಕರೆಯುತ್ತಾ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿಯಲ್ಲಿ ನಂಬ್ರ ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದು, ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ಓಡಿ ಹೋಗಿದ್ದು, ಈ ಪ್ರಕರಣದ ಆರೋಪಿ ಸದಾಶಿವ (35), ತಂದೆ: ಸಂಜೀವ ಶೆಟ್ಟಿ, ವಾಸ: ಆದಿಶಕ್ತಿ ನಿಲಯ, ಅಡಕದಕಟ್ಟೆ ರಸ್ತೆ, ನಿಟ್ಟೂರು ಪುತ್ತೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 2,075/- ಮತ್ತು ಮಟ್ಕಾ ಚೀಟಿ- 1, ಬಾಲ್‌ಪೆನ್‌-1 ಮತ್ತು ಹೀರೋ ಕಂಪೆನಿಯ ಕೀ ಪ್ಯಾಡ್ ಮೊಬೈಲ್ 1 ನ್ನು  ಸ್ವಾಧೀನಪಡಿಸಿಕೊಂಡಿದ್ದು, ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲಾಗಿ ನಿತಿನ್‌, ಅಲೆವೂರು ಎಂಬುದಾಗಿ ತಿಳಿಸಿದ್ದು, ಇಬ್ಬರೂ ಸೇರಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು, ತಾವು ಸಂಗ್ರಹಿಸುತ್ತಿದ್ದ ಹಣವನ್ನು ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 147/2021 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 11/10/2021 ರಂದು ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ಉಡುಪಿ ನಗರ ಠಾಣಾ ಪ್ರಕರಣದಲ್ಲಿ ಆರೋಪಿಯಾದ ಸುರೇಶ ಪೂಜಾರಿ ಯೊಂದಿಗೆ ಇಂದ್ರಾಳಿ ಎಂಬಲ್ಲಿಗೆ ಹೋಗಿ ತನಿಖೆ ನಡೆಸಿ ವಾಪಸ್ಸು ಠಾಣೆಯ ಕಡೆಗೆ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಬರುತ್ತಿರುವಾಗ, ಆರೋಪಿ ತಾನು ಕಳವು ಮಾಡುತ್ತಿದ್ದ ಹಣದ ಪೈಕಿ ಸ್ವಲ್ಪ ಹಣವನ್ನು ತಾನು ಇಸ್ಪೀಟು ಜುಗಾರಿ ಆಟಕ್ಕೆ ಕಟ್ಟುತ್ತಿದ್ದು, ಸಿಟಿ ಬಸ್ ನಿಲ್ದಾಣದ ಒಳಗಡೆ ಇರುವ ಅಂಗಡಿಗಳನ್ನು ತಾನು ತೋರಿಸಿಕೊಡುವುದಾಗಿ ತಿಳಿಸಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದ ದಕ್ಷಿಣ ಬದಿಯಲ್ಲಿ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಕೂಗಿ ಕರೆಯುತ್ತಾ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿಯಲ್ಲಿ ನಂಬ್ರ ಬರೆದು ಕೊಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದು, ಮಟ್ಕಾ ಜುಗಾರಿ ಆಟಕ್ಕೆ ಹಣ ಸಂಗ್ರಹಿಸುತ್ತಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನು ಓಡಿ ಹೋಗಿದ್ದು, ಈ ಪ್ರಕರಣದ ಆರೋಪಿ ಮಲ್ಲಿಕಾರ್ಜುನ (28), ತಂದೆ: ನಿಜಗುಣ, ವಾಸ: ವಿಲೇಜ್ ಇನ್ ಬಾರ್ ಬಳಿ, ಪಂದುಬೆಟ್ಟು, ಉಡುಪಿ ತಾಲೂಕು   ಎಂಬಾತನನ್ನು ವಶಕ್ಕೆ ಪಡೆದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ಹಣ ರೂಪಾಯಿ 2,325/- ಮತ್ತು ಮಟ್ಕಾ ಚೀಟಿ- 1, ಬಾಲ್‌ಪೆನ್‌-1 ಮತ್ತು ಒಪ್ಪೊ ಕಂಪೆನಿಯ 2 ಮೊಬೈಲ್ ಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲಾಗಿ ಯಲ್ಲಪ್ಪ ಎಂಬುದಾಗಿ ತಿಳಿಸಿದ್ದು, ಇಬ್ಬರೂ ಸೇರಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದು, ತಾವು ಸಂಗ್ರಹಿಸುತ್ತಿದ್ದ ಹಣವನ್ನು ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 148/2021 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.      

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ಅರುಣ ಬಿ ದೇವಾಡಿಗ (41), ಗಂಡ: ಭಾಸ್ಕರ ದೇವಾಡಿಗ, ವಾಸ: ಭ್ರಾಮರಿ ಕೃಪಾ, ಸ್ಮಶಾನದ ಬಳಿ, ಕಾಡಿಪಟ್ಣ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ತಮ್ಮನ ಮಗನ ಮಗುವಿನ ನಾಮಕರಣದ ಕಾರ್ಯಕ್ರಮಕ್ಕೆ ದಿನಾಂಕ 09/10/2021 ರಂದು ಮಧ್ಯಾಹ್ನ 14:00 ಗಂಟೆಗೆ ಹೋಗಿದ್ದು, ನಂತರ ಅವರ ಮಕ್ಕಳಾದ ಅಭಿಲಾಷ್ ಮತ್ತು ಅಖಿಲೇಶ್ ರವರು ದಿನಾಂಕ 10/10/2021 ರಂದು 00:45 ಗಂಟೆಗೆ ಮನೆಗೆ ಬೀಗ ಹಾಕಿ ನಾಮಕರಣ ಕಾರ್ಯಕ್ರಮಕ್ಕೆ ಉಡುಪಿಗೆ ಹೋಗಿರುತ್ತಾರೆ. ನಂತರ ಕಾರ್ಯಕ್ರಮ ಮುಗಿಸಿ ದಿನಾಂಕ 11/10/2021 ರಂದು 14:30 ಗಂಟೆಗೆ ಪಿರ್ಯಾದಿದಾರರು ಮಗ ಅಖಿಲೇಶ್ ನೊಂದಿಗೆ ಮನೆಗೆ ಬಂದು ಮನೆಯ ಬಾಗಿಲು ತೆರೆದು ನೋಡಿದಾಗ, ಯಾರೋ ಕಳ್ಳರು ಮನೆಯ ಪಶ್ಚಿಮದ  ಗೋಡೆಯ ಮರದ ಕಿಟಕಿಯನ್ನು ಯಾವುದೋ ಆಯುಧದಿಂದ ಮುರಿದು ಮನೆಯ ಒಳ ಪ್ರವೇಶಿಸಿ, ಟಿವಿ ಶೋಕೇಸ್ ಜಾಲಾಡಿಸಿ, ಕೋಣೆಯಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದು ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಪಶ್ಚಿಮದಲ್ಲಿರುವ ಇನ್ನೊಂದು ಬೆಡ್‌‌ರೂಂ ನಲ್ಲಿದ್ದ ಕಬ್ಬಿಣದ ಕಪಾಟನ್ನುಯಾವುದೋ ಆಯುಧದಿಂದ ಮೀಟಿಸಿ ಅದರ ಬಾಗಿಲು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನಲ್ಲಿದ್ದ, 1996-97 ನೇ ವರ್ಷದಲ್ಲಿ ಪಿರ್ಯಾದಿದಾರರ ಮದುವೆ ಹಾಗೂ ಸೀಮಂತದ  ಸಮಯ ಉಡುಗೊರೆಯಾಗಿ ಬಂದ 1) 4 ಪವನ್ ತೂಕದ ಚಿನ್ನದ ಕರಿಮಣಿ ಸರ-1, 2) 3 ಪವನ್ ತೂಕದ ಚಿನ್ನದ ಹವಳದ ಸರ-1, 3) 1/2 ಪವನ್ ತೂಕದ ಚಿನ್ನದ ಉಂಗುರ-3, 4) ಒಂದೂವರೆ ಪವನ್ ತೂಕದ ಚಿನ್ನದ ಬೆಂಡೋಲೆ-2 ಜೊತೆ, 5)  2 ಗ್ರಾಂ ತೂಕದ ಚಿನ್ನದ ಮೂಗುತಿ-3 ಒಟ್ಟು 9 ಪವನ್ 2 ಗ್ರಾಂ ತೂಕದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಚಿನ್ನಾಭರಣಗಳ ಮೌಲ್ಯ ರೂಪಾಯಿ 1,40,000/-  ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಮಲ್ಪೆ: ಪಿರ್ಯಾದಿದಾರರಾದ ವಾಸು ಬಂಗೇರ (66), ತಂದೆ: ದಿ. ಗಿರಿಯಪ್ಪ ಸಾಲ್ಯಾನ್, ವಾಸ: ಉದ್ದಿನಹಿತ್ಲು  ಕೊಡವೂರು ಗ್ರಾಮ    ಇವರು ಮಲ್ಪೆ ಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಅವರ KA-20-E-0062 ಮೋಟಾರು ಸೈಕಲ್ ನ್ನು ದಿನಾಂಕ 10/10/2021 ರಂದು ಬೆಳಿಗ್ಗೆ 07:15 ಗಂಟೆಗೆ ಮಲ್ಪೆ ಬಂದರಿನ ಮಂಜಿ ಧಕ್ಕೆ ರಸ್ತೆ ಯ ಎಡಬದಿಯಲ್ಲಿ ನಿಲ್ಲಿಸಿ ಮೀನುಗಾರಿಕೆಗೆ ಹೋಗಿದ್ದು ವಾಪಸ್ಸು ಬೆಳಿಗ್ಗೆ 08:00 ಗಂಟೆಗೆ ಬಂದು ನೋಡುವಾಗ ಪಿರ್ಯಾದಿದಾರರ ಬೈಕ್ ಕಾಣಿಸದೆ ಇದ್ದು, ಪಿರ್ಯಾದಿದಾರರು  ಆಸುಪಾಸು ಹಾಗೂ ಇತರ ಕಡೆ ಹುಡುಕಾಡಿದಲ್ಲಿ ಪತ್ತೆಯಾಗದೆ ಇದ್ದು, ದಿನಾಂಕ 10/10/2021 ರಂದು ಬೆಳಿಗ್ಗೆ 07:15 ಗಂಟೆಯಿಂದ   08:00 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ , ಕಳವಾದ ಬೈಕಿನ ಮೌಲ್ಯ 20,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-10-2021 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ