ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 12/10/2021 ರಂದು ಪಿರ್ಯಾದಿದಾರರಾದ ಮಹಾತೆಂಶ ಬೆಳ್ಳಿ (41), ತಂದೆ: ರಾಮಪ್ಪ ಬೆಳ್ಳಿ, ವಾಸ: 51 ಕಲ್‌‌‌ಗೊಣಲ್‌‌,ಕೊಪ್ಪಳ, ಭಂಡರಗಲ್ಲು ಪೋಸ್ಟ್‌‌‌, ಅಂಜರಧಾನಿ ,ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕು ಇವರ ಪರಿಚಯದ ನಾಗರಾಜ ಎಂಬುವವರ KA-20-EN-3226 ನೇ ಸ್ಕೂಟರ್‌‌ನಲ್ಲಿ ಸಹಸವಾರನಾಗಿ ಕುಳಿತು ಉಡುಪಿಯಿಂದ ಸಾಸ್ತಾನಕ್ಕೆ ಹೊರಟು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ-ಕುಂದಾಪುರ ಏಕಮುಖ ರಸ್ತೆಯಲ್ಲಿ ಬರುತ್ತಾ ಬೆಳಿಗ್ಗೆ 8:45 ಗಂಟೆಗೆ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಹೇರಾಯಿಬೆಟ್ಟು ಎಂಬಲ್ಲಿ ತಲುಪುವಾಗ ಸ್ಕೂಟರಿನ ಹಿಂಬದಿಯಿಂದ  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA-20-Z-3689 FORD FIGO ಕಾರಿನ ಚಾಲಕ ಸುಹಾನ್‌‌ ಹೆಗ್ಡೆ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ ಪರಿಣಾಮ ಪಿರ್ಯಾದಿದಾರರು ಹಾಗೂ ನಾಗರಾಜ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ನಾಗರಾಜ ರವರ ತಲೆಗೆ ಭಾಗಕ್ಕೆ ತೀವ್ರ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಪಿರ್ಯಾದಿದಾರರಿಗೂ ಕೂಡಾ ಬಲಕಾಲಿನ ಕಾಲಿನ ಕೋಲು ಕಾಲಿಗೆ ರಕ್ತಗಾಯ ಹಾಗೂ ತಲೆಗೂ ಕೂಡಾ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಹಾಗೂ ನಾಗರಾಜ ರವರನ್ನು ಚಿಕಿತ್ಸೆಯ ಬಗ್ಗೆ ಅಲ್ಲಿದ್ದವರು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ನಾಗರಾಜ ದಾರಿ ಮಧ್ಯೆದಲ್ಲಿ ಮೃತಪಟ್ಟಿದ್ದು, ಪಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲು ಮಡಿಕೊಂಡಿರುತ್ತಾರೆ. ಅಪಘಾತದಿಂಧ ಸ್ಕೂಟರಿನ ಹಿಂಭಾಗ ಮತ್ತು ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 178/2021 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಸಂತೋಷ್ ಕುಮಾರ್, ತಂದೆ: ಶಿವಾನಂದ ಸ್ವಾಮಿ ಯು, ವಾಸ: ಕೆ.ಬಿ ಕ್ರಾಸ್ ಕಿಬ್ಬಣ ಹಳ್ಳಿ ತಿಪಟೂರು ಇವರು ತನ್ನ ಸ್ವಂತ KA-01-AC-8461 ನಂಬ್ರದ ಟೆಂಪೋ ಟ್ರಾವೆಲರ್ ವಾಹನದಲ್ಲಿ ಬಾಡಿಗೆ ಬಗ್ಗೆ ಪ್ರವಾಸಿಗರೊಂದಿಗೆ ದಿನಾಂಕ 11/10/2021 ರಂದು ಮಲ್ಪೆ ಬೀಚ್‌ಗೆ ಬಂದು ಬೀಚ್‌ನ್ನು ನೋಡಿ ಅದೇ ದಿನ ವಾಪಾಸು ತುಮಕೂರಿಗೆ ಹೊರಟಿದ್ದು ರಾತ್ರಿ 9:30 ಗಂಟೆಗೆ ಕೊಡವೂರು ಗ್ರಾಮದ ಮಲ್ಪೆಯ ಕಲ್ಮಾಡಿ ಸೇತುವೆ ಬಳಿ ತಲುಪುವಾಗ ಎದುರಿನಿಂದ ಉಡುಪಿ ಕಡೆಯಿಂದ ಮಲ್ಪೆ ಕಡೆಗೆ  ಬರುತ್ತಿದ್ದ  KA-20-EX-4040 ನೇ ಸ್ಕೂಟರ್ ಸವಾರನು ತನ್ನ ಸ್ಕೂಟರನ್ನು  ಅತಿವೇಗ  ಹಾಗೂ ಅಜಾಗರೂಕತೆಯಿಂದ   ಚಲಾಯಿಸಿಕೊಂಡು ಬಂದು ತನ್ನ ಎದುರು ಹೋಗುತ್ತಿದ್ದ ಕಾರನ್ನು ಓವರ್ ಟೆಕ್ ಮಾಡುವ ಭರದಲ್ಲಿ ರಸ್ತೆಯ ತೀರ ಬಲಕ್ಕೆ ಬಂದು ಪಿರ್ಯಾದಾರರು ಚಲಾಯಿಸುತ್ತಿದ್ದ  ಟೆಂಪೋ ಟ್ರಾವೆಲರ್ ವಾಹನದ ಬಲ ಭಾಗಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸವಾರನ ತಲೆಯ ಹಿಂಬಾಗಕ್ಕೆ ರಕ್ತಗಾಯವಾಗಿರುತ್ತದೆ. ಅಲ್ಲಿ ಸೇರಿದ ಜನರು ಆತನನ್ನು ಉಪಚರಿಸಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಪಿರ್ಯಾದಿದಾರರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 115/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಜುಡಿತ್ ಡಿಸೋಜ (56), ಗಂಡ: ಸೈಮನ್ ಡಿಸೋಜ, ವಾಸ: ನೆಕ್ಕರೆ ಮನೆ, ಶಿರ್ವಾ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಸೈಮನ್ ಡಿಸೋಜ (57) ರವರಿಗೆ  6 ತಿಂಗಳ ಹಿಂದೆ ರಸ್ತೆ ಅಫಘಾತವಾಗಿ ಕುತ್ತಿಗೆಗೆ ಗಂಭೀರ ಸ್ವರೂಪದ ಒಳಜಖಂ ಆಗಿ ಯಾವುದೇ ಕೆಲಸವನ್ನು ಮಾಡಲಾಗದೇ ಮನೆಯಲ್ಲಿಯೇ ಇದ್ದು, ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11/10/2021 ರಂದು ಮದ್ಯಾಹ್ನ 02:00 ಗಂಟೆಯಿಂದ ರಾತ್ರಿ 08:00 ಗಂಟೆಯ ನಡುವಿನ ಅವಧಿಯಲ್ಲಿ ಶಿರ್ವಾ ಗ್ರಾಮದ ನೆಕ್ಕರೆ ಎಂಬಲ್ಲಿನ ಪಿರ್ಯಾದಿದಾರರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀಮತಿ ಮಮತಾ (32), ಗಂಡ: ಮಾಧವ ನಾಯ್ಕ, ವಾಸ: ದುಗ್ಗಬೆಟ್ಟು ಮನೆ, ಹರಿಖಂಡಿಗೆ ಅಂಚೆ, ಬೈರಂಪಳ್ಳೀ  ಗ್ರಾಮ ಉಡುಪಿ ತಾಲೂಕು ಇವರ  ತಂದೆ ರಾಮ ನಾಯ್ಕ (60) ರವರು ಬೈರಂಪಳ್ಳಿ ಗ್ರಾಮದ ಸಾರಂಬೈಲು ಎಂಬಲ್ಲಿ ತನ್ನ ಹೆಂಡತಿ ಯೊಂದಿಗೆ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಮೃತರು ವಿಪರೀತ ಮದ್ಯಪಾನದ ಚಟವನ್ನು ಹೊಂದಿದ್ದು, ಮದ್ಯಪಾನ ಮಾಡುವ ಚಟವನ್ನು ಬಿಡಲು ಆಗದೇ ಮಾನಸಿಕವಾಗಿ ನೊಂದುಕೊಂಡಿದ್ದು,  ದಿನಾಂಕ 11/10/2021 ರಂದು ಬೆಳಿಗ್ಗೆ 07:00 ಗಂಟೆಗೆ  ಹೆಂಡತಿ ಕೆಲಸಕ್ಕೆ ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಂಜೆ 6:00 ಗಂಟೆಯ ಮದ್ಯಾವಧಿಯಲ್ಲಿ ತನ್ನ ಮನೆಯ ಕೊಟ್ಟಿಗೆಯ  ಹುಲ್ಲು ಹಾಕಲು ಮಾಡಿದ ಅಟ್ಟಳಿಗೆಯ ಅಡ್ಡೆಗೆ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಶಂಕರನಾರಾಯಣ: ದಿನಾಂಕ 12/10/2021  ರಂದು 11:00 ಗಂಟೆಗೆ  1 ನೇ   ಆರೋಪಿ ಗಣೇಶ  ಪೂಜಾರಿ (35), ತಂದೆ: ರಘು ಪೂಜಾರಿ, ವಾಸ: ಮೇಲ್ಮನೆ ಗೋವೆ ಹಾಡಿ ಆಜ್ರಿ ಗ್ರಾಮ ಕುಂದಾಪುರ ತಾಲೂಕು ಎಂಬಾತ  ಕಮೀಷನ್ ಗಾಗಿ 2 ನೇ  ಆರೋಪಿ ರಾಘವೇಂದ್ರ ಎಂಬಾತನಿಗೆ ನೀಡಲು  ಕುಂದಾಪುರ ತಾಲೂಕಿನ  ಆಜ್ರಿ ಗ್ರಾಮದ  ಚೌಕುಳಮಕ್ಕಿ  ಎಂಬಲ್ಲಿ  ಕೋಳಿ  ಅಂಗಡಿಯ  ಬಳಿ  ಸಾರ್ವಜನಿಕ   ಸ್ಥಳದಲ್ಲಿ   ಅಕ್ರಮವಾಗಿ  ಮಟ್ಕಾ  ಜುಗಾರಿ  ಆಟದ   ಬಗ್ಗೆ   ಹಣ ಸಂಗ್ರಹ  ಮಾಡುತ್ತಿರುವಾಗ ಶ್ರೀಧರ್ ನಾಯ್ಕ, ಪೊಲೀಸ್ ಉಪನಿರೀಕ್ಷಕರು,   ಶಂಕರನಾರಾಯಣ ಪೊಲೀಸ್ ಠಾಣೆ ಇವರು ದಾಳಿ ನಡೆಸಿ  ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ಹಣ ನಗದು ರೂಪಾಯಿ 450/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ: 78(1) (111) ಕರ್ನಾಟಕ ಪೊಲೀಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ದಿನಾಂಕ 12/10/2021ರಂದು ಲಕ್ಷ್ನಣ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ವರ್ತಮಾನದ ಮೇರೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಇಂಡಸ್ಟ್ರೀಯಲ್‌ ಎರಿಯಾದಲ್ಲಿ ಇರುವ “ ಮೀನ್ದ ವನಸ್‌ ” ಎಂಬ ಹೆಸರಿನ ಹೋಟೆಲ್‌ ನ ಎದುರಿನ ಸಾರ್ವಜನಿಕ ಸ್ಧಳದಲ್ಲಿಮಟ್ಕಾ ಜುಗಾರಿ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಆರೋಪಿ ಪ್ರಶಾಂತ ಆರ್‌ (26), ತಂದೆ: ರಾಜ, ವಾಸ: ಹನುಮಂತ ನಗರ ಶಾಲೆಯ ಎದುರು, ಹೆಚ್ ಪಿ ಪೆಟ್ರೋಲ್‌ ಬಂಕ್‌ ಬಳಿ ನಿಟ್ಟೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು, ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ1,270/- ಮಟ್ಕಾ ಚೀಟಿ, ಬಾಲ್ ಪೆನ್ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 78(1)(111) ಕೆ.ಪಿ.ಆಕ್ಟ್ , Karnataka Police (Amendment) Act 2021 ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ದೀಪಕ್ ಬಾಬು ಸೆಟ್ಟಿ (40), ತಾಯಿ: ಮೀರಾ ಶೆಡ್ತಿ, ವಾಸ: ಮೀರಾ ಸದನ, ಪೆಟೆ ಮನೆ, ಕೆಳಗಿನ ಪೇಟೆ, ನಡ್ಸಾಲು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಇವರ ತಂದೆ  ಬಾಬು ಶೆಟ್ಟಿಯವರು  ಪಾದೆಬೆಟ್ಟು ಗ್ರಾಮದ ಸರ್ವೆ ನಂಬ್ರ 61/4ಹೆಚ್ ಪಿ 1 ರಲ್ಲಿ 48 ಸೆಂಟ್ಸ್ ಹಾಗೂ ಸರ್ವೆ ನಂಬ್ರ 65/06 ರಲ್ಲಿ 28 ಸೆಂಟ್ಸ್ ಜಮೀನು ಹೊಂದಿ, ಬಾಬು ಶೆಟ್ಟಿಯವರು ದಿನಾಂಕ 07 /02/2007 ರಂದು ಮೃತಪಟ್ಟಿರುತ್ತಾರೆ.  ಪಿರ್ಯಾದಿದಾರರ ತಂದೆ ನಿಧನದ ಬಳಿಕ 1 ನೇ ಆರೋಪಿ ನವೀನ್ ಎನ್ ಶೆಟ್ಟಿ (44), ತಂದೆ: ನಾರಾಯಣ ಶೆಟ್ಟಿ, ವಾಸ: ಬಗ್ಗಪ್ಪ ಶೆಟ್ಟಿ ಹೌಸ್, ಪಾದೆಬೆಟ್ಟು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಇವರು ದಿನಾಂಕ 17/04/2007 ರಂದು ನೋಟರಿಯವರಿಂದ ಪ್ರಮಾಣೀಕರಿಸಿ ಪಿರ್ಯಾದಿದಾರರ ತಂದೆಯಿಂದ ಅಧಿಕಾರ ಪತ್ರ ಪಡೆದಿರುತ್ತಾರೆಂದು ಸುಳ್ಳು ಅದಿಕಾರ ಪತ್ರವನ್ನು ತಯಾರಿಸಿ ಆ ಅಧಿಕಾರ ಪತ್ರದ ಮೂಲಕ 1 ನೇ ಆರೋಪಿಯು ದಿನಾಂಕ 08/12/2016 ರಂದು 2 ನೇ ಆರೋಪಿ ಅಪ್ಪಿ ಶೆಡ್ತಿ (68), ವಾಸ: ಬಗ್ಗಪ್ಪ ಶೆಟ್ಟಿ ಹೌಸ್, ಪಾದೆಬೆಟ್ಟು ಗ್ರಾಮ, ಪಡುಬಿದ್ರಿ ಕಾಪು ತಾಲೂಕು ಇವರು ಹಕ್ಕು ಬಿಡುಗಡೆ ಪತ್ರದ ನೋಂದಣಿ ದಾಸ್ತಾವೇಜನ್ನು ಮುಲ್ಕಿ ಉಪ ನೋಂದಣಿ ಕಛೇರಿಯಲ್ಲಿ ಮಾಡಿ, ಅದೇ ಹಕ್ಕು ಬಿಡುಗಡೆ ಪತ್ರದ ಮೂಲಕ 2 ನೇ ಆರೋಪಿಯು 1 ನೇ ಆರೋಪಿಗೆ ದಿನಾಂಕ 06/03/2017 ರಂದು ದಾನಪತ್ರದ ಮೂಲಕ ತನ್ನ ಹೆಸರಿಗೆ ಮಾಡಿಸಿ, ಸುಳ್ಳು ಸೃಷ್ಟನೆ ಮಾಡಿಸಿ ಮೋಸ ಮಾಡಿರುತ್ತಾರೆ. ನಂತರ ದಾನ ಪತ್ರದ ಮೂಲಕ 1 ನೇ ಆರೋಪಿಯು ದಿನಾಂಕ 24/07/2017 ರಂದು 3 ನೇ ಆರೋಪಿ ಸುಶೀಲಾ ನಾರಾಯಣ ಶೆಟ್ಟಿ (70), ವಾಸ: ಬಗ್ಗಪ್ಪ ಶೆಟ್ಟಿ ಹೌಸ್, ಪಾದೆಬೆಟ್ಟು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಇವರಿಗೆ ಕ್ರಯ ಸಾಧನ ಪತ್ರವನ್ನು ಮುಲ್ಕಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ  ನೋದಣಿ ಮಾಡಿಸಿರುತ್ತಾರೆ.  ಜಾಗದ ಕ್ರಯಸಾಧನ ಪತ್ರದ ಮೂಲಕ 3 ನೇ ಆರೋಪಿಯು 4 ನೇ ಆರೋಪಿ ರಮೇಶ್ ಶೆಟ್ಟಿ (48), ತಂದೆ: ಹೊನ್ನಯ್ಯ ಶೆಟ್ಟಿ, ವಾಸ: ಪಾದೆಬೆಟ್ಟು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಇವರಿಗೆ ಕ್ರಯ ಮೂಲ ಸಾಧನವನ್ನು ದಿನಾಂಕ 11/01/2018 ರಂದು ಮುಲ್ಕಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ  ನೋಂದಣಿ ಮಾಡಿರುತ್ತಾರೆ. ಪಿರ್ಯಾದಿದಾರರ ತಂದೆಯವರಾದ ಬಾಬು ಶೆಟ್ಟಿಯವರು ದಿನಾಂಕ:07/02/2007 ರಂದು ಮೃತಪಟ್ಟಿದ್ದು ಅವರು ಮೃತಪಟ್ಟ ಎರಡು ತಿಂಗಳ ನಂತರ ಸುಳ್ಳು ಸೃಷ್ಟನೆ ಮೂಲಕ ಮಾಡಿರುವ ಅಧಿಕಾರ ಪತ್ರದ ಮೂಲಕ ಆರೋಪಿಗಳು ಜತೆಗೂಡಿ ಆಸ್ತಿ ಲಪಟಾಯಿಸಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ: 419, 420, 469, 470, 474, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 12-10-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080