ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರವೀಂದ್ರ ಭಟ್ (63), ತಂದೆ: ಕೃಷ್ಣ ಭಟ್, ವಾಸ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ವಸತಿಗೃಹ ತೆಂಕಪೇಟೆ ಉಡುಪಿ ಜಿಲ್ಲೆ ಇವರು ದಿನಾಂಕ 08/09/2022 ರಂದು ತನ್ನ ಸ್ಕೂಟರ್ ನಂಬ್ರ KA-20-S-1155 ನೇದರಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಹೋಗಿ ವಾಪಾಸು ತನ್ನ ಮನೆಗೆ ಹೋಗುವಾಗ ಮಧ್ಯಾಹ್ನ 12:30 ಗಂಟೆಗೆ ಅಜ್ಜರಕಾಡು ಆಸ್ಪತ್ರೆಯ ಮುಂಭಾಗ ತಲುಪುವಾಗ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಜೋಡುಕಟ್ಟೆ ಕಡೆಯಿಂದ ಬ್ರಹ್ಮಗಿರಿ ಕಡೆಗೆ  KA-20-L-1359 ನೇ ಮೋಟಾರ್ ಸೈಕಲ್ ಸವಾರ ಓರ್ವ ಹಿಂಬದಿ ಸವಾರರನ್ನು ಕುಳ್ಳಿರಿಸಿಕೊಂಡು  ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ  ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಕೆಎಂಸಿ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ದಿನಾಂಕ 11/09/2022 ರಂದು ಬೆಳಿಗ್ಗೆ 4:30 ಗಂಟೆಯಿಂದ 6:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಜನನಿ ಲಾಡ್ಜ್‌ ಮುಂಭಾಗದ ಪ್ಯಾಸೇಜ್‌ನಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ  ಮಲಗಿದ್ದಲ್ಲೆ ಮೃಪಟ್ಟಿದ್ದು, ಆತನು ಯಾವುದೋ ಖಾಯಿಲೆಯಿಂದಲೋ ಅಥವಾ ವಿಪರೀತ ಕುಡಿತದ ಚಟದಿಂದಲೋ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 32/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ (44), ಗಂಡ: ರಾಧಾಕೃಷ್ಣ, ವಾಸ: ಮ ನಂ 7/67 ನಾಡ ನರಸಿಂಗ ಹೌಸ್ ಪರ್ಕಳ ಅಂಚೆ,   ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರ ಗಂಡ ರಾಧಾಕೃಷ್ಣ (58) ರವರಿಗೆ ಕೆಲವು ವರ್ಷಗಳಿಂದ ಸಕ್ಕರೆ ಖಾಯಿಲೆ, ಬಿ.ಪಿ ಖಾಯಿಲೆ ಇದ್ದು  ಮತ್ತು ಕುಡಿತದ ಚಟವಿದ್ದು ಅದೇ ಕಾರಣಕ್ಕೂ ಇನ್ಯಾವೂದೋ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 10/09/2022 ರಾತ್ರಿ 10:00 ಗಂಟೆಯಿಂದ ದಿನಾಂಕ 11/09/2022 ರಂದು ಬೆಳಿಗ್ಗೆ 06:45 ಗಂಟೆಯ ಮಧ್ಯಾವಧಿಯಲ್ಲಿ ರಾಧಾಕೃಷ್ಣ ರವರು ಮನೆಯಲ್ಲಿ  ಮಲಗುವ ಕೊಣೆಯ ಮಾಡಿನ ಪಕ್ಕಾಸಿಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 31/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಚಂದ್ರ ಶೇಖರ್ (37), ತಂದೆ:  ದಿ. ಚಂದ್ರ ಶೇಖರ್ ಎ, ವಾಸ:  ಕಾವಡಿ  ವಲಕಂ ಕೆ ಎಮ್ ಆರ್ ಎ -16  ಜಗತಿ  ತಾಯಕಾಡ್ ಅಂಚೆ  ತಿರುವನಂತಪುರಂ ತಾಲೂಕು  ಮತ್ತು ಜಿಲ್ಲೆ ಇವರ ಅಕ್ಕ ಚಾಂದಿಶೇಖರ್(42) ಇವರು  ತನ್ನ  ಗಂಡ ಮುರಗನ್  ಮಗ ಆದಿತ್ಯನ್ ಹಾಗೂ  ಕುಟುಂಬದವರೊಂದಿಗೆ ಒಣಂ ಹಬ್ಬದ ಪ್ರಯುಕ್ತ ದಿನಾಂಕ 08/09/2022 ರಂದು ಕೇರಳ ರಾಜ್ಯದಿಂದ  ಹೊರಟು ದಿನಾಂಕ 10/09/2022 ರಂದು ಕೊಲ್ಲೂರು ಶ್ರೀ.ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು  ದರ್ಶನ ಮಾಡಿ ಸಂಜೆ 5:15 ಗಂಟೆಗೆ  ಕೊಲ್ಲೂರು ಗ್ರಾಮದ ಸೌರ್ಪಾಣಿಕ ಸ್ನಾನ ಘಟ್ಟದಲ್ಲಿ ಚಾಂದಿ ಶೇಖರ್ ಗಂಡ ಮುರಗನ್ ನದಿಯ ನೀರಿನಲ್ಲಿ ಸ್ನಾನ ಮಾಡಲು ಇಳಿದಾಗ ಕಾಲು ಜಾರಿ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋದವರನ್ನು  ರಕ್ಷಣೆ ಮಾಡಲು ಆದಿತ್ಯನ್  ನದಿಯ ನೀರಿಗೆ ಇಳಿದಾಗ  ಆತನು  ಸಹ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು  ಆದಿತ್ಯ ನನ್ನು  ರಕ್ಷಣೆ ಮಾಡಲು  ಈಜುಬಾರದ  ಚಾಂದಿ ಶೇಖರ್ ನೀರಿಗೆ ಧುಮುಕಿದ್ದು ನೀರಿನ ಸೆಳತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾದವರು ದಿನಾಂಕ  11/09/2022 ರಂದು ಸಂಜೆ 6:00 ಗಂಟೆಗೆ ಚಾಂದಿ ಶೇಖರ್ ರವರ ಮೃತ ಶರೀರ ಕೊಲ್ಲೂರು ಗ್ರಾಮ ಸಂಪ್ರೆ ಎಂಬಲ್ಲಿ  ಹರಿಯುವ ಸೌರ್ಪಾಣಿಕ ನದಿಯ ಗಿಡಗಂಟೆಗಳ ನಡುವೆ ಸಿಕ್ಕಿಹಾಕಿಕೊಂಡು ಪತ್ತೆಯಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 10/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಅಮಾಸೆಬೈಲು: ದಿನಾಂಕ 11/09/2022 ರಂದು ಶೇಡಿಮನೆ ಗ್ರಾಮದ ಮೈಲುಗೋಡು ರಘುರಾಮ ಶೆಟ್ರ ಮನೆಯಲ್ಲಿ ಧರ್ಮಸ್ಥಳ ಯೋಜನೆಯ ಮೀಟಿಂಗ್ ಇದ್ದು ಅದಕ್ಕಾಗಿ ಸಂಯೋಜಕಿ ಜ್ಯೋತಿ ಎಂಬುವವರು ಪಿರ್ಯಾದಿದಾರರಾದ ರತ್ನ ಶೆಟ್ಟಿ (39), ಗಂಡ: ರತ್ನಾಕರ ಶೆಟ್ಟಿ, ವಾಸ: ಮೈಲುಗೋಡು ಅರಸಮ್ಮಕಾನು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಇವರಿಗೆ ಬರಲು ತಿಳಿಸಿದಂತೆ ಪಿರ್ಯಾದಿದಾರರು ಮೀಟಿಂಗ್ ಬಗ್ಗೆ ಮೈಲು ಗೋಡು ರಘುರಾಮ ಶೆಟ್ರ ಮನೆಗೆ ಹೋಗಿದ್ದು ಆರೋಪಿತ ಶಶಿಧರ ಹೆಗ್ಡೆ ಕೂಡಾ ಅಲ್ಲಿಗೆ ಬಂದಿದ್ದು  ಮೀಟಿಂಗ್ ಮುಗಿದ ನಂತರ ಪಿರ್ಯಾದಿದಾರರು ಗಂಡನ ಜೊತೆಯಲ್ಲಿ ಮನೆಗೆ ಹೊರಡಲು ತಯಾರಾಗುತ್ತಿದ್ದಾಗ ಮಧ್ಯಾಹ್ನ 13:30 ಗಂಟೆ ಸಮಯಕ್ಕೆ ರಘುರಾಮ ಶೆಟ್ರ ಮನೆಯ ಸಿಟೌಟ್ ನಲ್ಲಿ ಆರೋಪಿತನು ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಬಂದಿದ್ದು , ಪಿರ್ಯಾದಿದಾರರ ಗಂಡ ತಪ್ಪಿಸಲು ಬಂದಾಗ ಆರೋಪಿತನು  ಜೀವ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: 354, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
     

ಇತ್ತೀಚಿನ ನವೀಕರಣ​ : 12-09-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080