ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಹಿರಿಯಡ್ಕ: ಫಿರ್ಯಾದಿ ದುಲಾಲ್ ಮಂಡೊಲ್ ಇವರು ಕಳೆದ ಒಂದು ತಿಂಗಳಿಂದ ಅವರ ಮಗ ಅಜಯ, ಮಗಳ ಗಂಡ ಸಮೀರ ಬರ್ಮನ್ ಹಾಗೂ ಜತಿನ್ ಕೃಷ್ಣರವರೊಂದಿಗೆ ವಾಸವಾಗಿದ್ದು, 1 ತಿಂಗಳಿನಿಂದ ಅವರು 4 ಮಂದಿ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಕೊಟ್ನಕಟ್ಟೆ ಎಂಬಲ್ಲಿ ಮೆಸ್ಕಾಂ ಕಛೇರಿಯ ಬಳಿಯಲ್ಲಿ ನಿರ್ಮಾಣ ಹಂತದ ನೀರಿನ ಓವರ್ ಟ್ಯಾಂಕ್ ಕೆಲಸದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಹಾಗೂ ಅವರ ಸಂಗಡಿಗರು ಪಶ್ಚಿಮ ಬಂಗಾಳದ ಕೋಲ್ಕತ್ತಾ ನಿವಾಸಿಗಳಾಗಿದ್ದು ಕೆಲಸದ ಬಗ್ಗೆ ಉಡುಪಿಗೆ ಕಳೆದ ನಾಲ್ಕು ತಿಂಗಳಿನ ಹಿಂದೆ ಬಂದಿರುತ್ತಾರೆ . ಬೊಮ್ಮರ ಬೆಟ್ಟು ಗ್ರಾಮದ ನೀರಿನ ಟ್ಯಾಂಕಿನ ಕಲಸ ಮಾಡಿಕೊಂಡಿದ್ದು, ದಿನಾಂಕ 11/09/2021 ರಂದು ಬೆಳಿಗ್ಗೆ 09:00 ಗಂಟೆಗೆ ಫಿರ್ಯಾದಿ, ಅವರ ಮಗ,  ಅಳಿಯ ಸಮೀರ ಬರ್ಮನ್(29)  ರವರು ಕೆಲಸ ಮಾಡಿಕೊಂಡಿರುತ್ತಾರೆ. ಸಮಯ ಸುಮಾರು 10:00 ಗಂಟೆಗೆ ಓವ ರ್ ಟ್ಯಾಂಕಿನ ಕೆಳ ಭಾಗದಲ್ಲಿ ಮರದ ಹಲಗೆಯನ್ನು ಕಟ್ಟಿ ಅಂದರೆ ನೆಲದಿಂದ ಸುಮಾರು 30-35 ಅಡಿ ಎತ್ತರದಲ್ಲಿ ಕಲಸ ಮಾಡಿ ಕೆಳಗೆ ಇಳಿಯುವರೇ ಏಣಿಯಿಂದ ಇಳಿಯಲು ಅಣಿಯಾಗುತ್ತಿರುವಾಗ ಪಿರ್ಯಾದಿ ದಾರರ ಅಳಿಯ ಸಮೀರ ಬರ್ಮನ್ ಆಯಾ ತಪ್ಪಿ ಕೆಳಗೆ ಬಿದ್ದನು.  ಪಿರ್ಯಾದಿದಾರರು ಬಿದ್ದವನ್ನು ಎಬ್ಬಿಸಿ ಉಪಚರಿಸಿದ್ದು ಆತನು ಮುಖ, ತುಟಿ, ತಲೆಯಲ್ಲಿ ರಕ್ತ ಸುರಿಯುತ್ತಿದ್ದು ಆತನು ಮಾತನಾಡುತ್ತಿರಲಿಲ್ಲ . ಬಳಿಕ ಸ್ಥಳದಲ್ಲಿ ಉಪಗುತ್ತಿಗೆದಾರ ಶ್ರೀಧರ ಆಚಾರ್ಯ ಹಾಗೂ ಪಿರ್ಯಾದಿದಾರರು ಸಮೀರ ಬರ್ಮನ್ ನನ್ನು ಅಂಬುಲೆನ್ಸನಲ್ಲಿ ಕುಳ್ಳಿರಿಸಿ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪರೀಕ್ಷಿಸಿ ಸಮೀರ ಬರ್ಮನ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಓವರ್ ಟ್ಯಾಂಕಿಯ ಗುತ್ತಿಗೆದಾರರು ಸುರೇಶ್ ಶೆಟ್ಟಿ ಕರ್ಜೆಯಾಗಿದ್ದು, ಅವರಿಂದ ಉಪ ಗುತ್ತಿಗೆಯನ್ನು ಶ್ರೀಧರ ಆಚಾರ್ಯ ಎಂಬವರು ನಡೆಸುತ್ತಿದ್ದು, ಈ ಕಾಮಗಾರಿ ಕೆಲಸ ಕಾರ್ಯವನ್ನು ನಡೆಸುತ್ತಿರುವಾಗ ಯಾವುದೇ ಸುರಕ್ಷತಾ ಕ್ರಮ ಅಳವಡಿಸದೇ ನಿರ್ಲಕ್ಷಿಸಿದ್ದೇ ಈ ಘಟನೆಗೆ ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021   ಕಲಂ: 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಫಿರ್ಯಾದಿ ಶ್ರೀಮತಿ ಲೀಲಾವತಿ ಇವರು ದಿನಾಂಕ: 09-09-2021 ರಂದು ಮಗಳ ಮದುವೆಯ ಗಡಿಬಿಡಿಯಲ್ಲಿದ್ದು, ಈ ದಿನ ಬೆಳಿಗ್ಗೆ ಫಿರ್ಯಾದಿದಾರರು ಅವರ ಗಂಡ ಹಾಗೂ ಮಗ ಕಾರ್ತಿಕೇಯನೊಂದಿಗೆ ನಾಗಬನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದು ಆ ಸಮಯ ಅವರ ಬಾಬ್ತು ಶಿರೂರು ಸರ್ವೇ ನಂಬ್ರ 298/12ಡಿ ವಿಸ್ತೀರ್ಣ 0.62 ಎಕ್ರೆ ಮತ್ತು ಸರ್ವೆ ನಂಬ್ರ 298/8 ವಿಸ್ತೀರ್ಣ 0.14 ಎಕ್ರೆ ಜಾಗದಲ್ಲಿದ್ದ 7 ತೆಂಗಿನಮರಗಳು, 6  ಮಾವಿನ ಮರಗಳು, 2 ಹಲಸಿನ ಮರಗಳು, 1 ನೆಲ್ಲಿಜಾತಿಯ ಮರ, 1 ಅಮಟೆ ಮರಗಳನ್ನು ಆಪಾದಿತರಾದ ನಾಗೇಶ, ರಾಮ ಪೂಜಾರಿ, ಬುಡ್ಡು ಹೆಂಗ್ಸು, ಪಾರ್ವತಿ, ಚಿಕ್ಕಮ್ಮ , ಮಹಾಬಲ ಗಾಣಿಗ, ರಾಮ ಹಾಗೂ ಇತರರು ಸೇರಿ ಕಡಿದಿದ್ದು ಅಲ್ಲದೆ ಕಡಿದ ಕೆಲ ಮರಗಳ ತುಂಡುಗಳನ್ನು  ತೆಗೆದುಕೊಂಡು ಹೋಗಿ ಅಕ್ರಮವಾಗಿ ಕೂಡಿಟ್ಟುಕೊಂಡು, ಅಲ್ಲದೆ   ಫಿರ್ಯಾದಿದಾರರ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರಿಗೆ ಸುಮಾರು 1,20,000/- ರೂಪಾಯಿ  ನಷ್ಟ ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 151/2021 ಕಲಂ:.447,427 R/W 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ : ಫಿರ್ಯಾದಿ ಇಜ್ಜು ಡಿ’ಸೋಜಾ ಇವರ ಮಗಳು ರೋಸಿ ಡಿ’ಸೋಜಾ (36 ವರ್ಷ) ಎಂಬವರು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು ಕಳೆದ ಆರು ತಿಂಗಳಿನಿಂದ ಊರಿಗೆ ಬಂದು ಗಂಡನ ಮನೆಯಾದ ಬೈಂದೂರು ತಾಲೂಕು ನಾಡ ಗ್ರಾಮ ಚುಂಗಿಗುಡ್ಡೆ ಎಂಬಲ್ಲಿ ಗಂಡ ನೋಯಲ್‌ ಹಾಗೂ 12 ವರ್ಷ ಪ್ರಾಯದ ಶ್ವಾನ್‌ ರಿಚಿಯೊಂದಿಗೆ ವಾಸ ಮಾಡಿಕೊಂಡಿದ್ದು, ದಿನಾಂಕ 11.09.2021 ರಂದು ರೋಸಿ ಡಿಸೋಜಾ ರವರು ತನ್ನ ಮಗ ಶ್ವಾನ್‌ ರಿಚಿ ಯೊಂದಿಗೆ ವಾಕಿಂಗ್‌ ಮಾಡಲು ಮನೆಯಿಂದ ಹೋಗಿದ್ದು, ನಾಡ ಗ್ರಾಮದ ಚುಂಗಿಗುಡ್ಡೆ ಮಹಾಬಲ ಹೆಬ್ಬಾರ್‌ ರವರ ತೋಟದ ಬದಿಯ ಸೌಪರ್ಣಿಕ ಹೊಳೆಯ ಬದಿಯಲ್ಲಿ ವಾಕಿಂಗ್‌ ಮಾಡುವಾಗ ಸಮಯ ಸುಮಾರು 11:00 ಗಂಟೆಯಿಂದ 12:15 ಗಂಟೆಯ ಮಧ್ಯಾವಧಿಯಲ್ಲಿ ರೋಸಿ ಡಿಸೋಜಾ ಹಾಗೂ ಶ್ವಾನ್‌ ರಿಚಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿಕೊಚ್ಚಿ ಹೋಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 26/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ಪಿರ್ಯಾದಿ ಶ್ರೀಮತಿ ಯಶೋದಾ ಇವರ ತಂಗಿ ರೇಖಾ ಪ್ರಾಯ 30 ವರ್ಷ ಇವಳು ಅವಿವಾಹಿತೆಯಾಗಿದ್ದು ದಿನಾಂಕ 11-09-2021 ರಂದು ಬೆಳಿಗ್ಗೆ  07:00 ಗಂಟೆಯಿಂದ 07:30 ಗಂಟೆಯ ಮಧ್ಯೆ ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ತನ್ನ ಮನೆಯ ಕೋಣೆಯಲ್ಲಿ ಚೂಡಿದರ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 08/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿ ಸಂದೀಪ . ಬಿ  ಇವರ  ಹೆಂಡತಿ ಬಿ.ನಾಗಶ್ರೀ ಭಟ್ (32) ಎಂಬುವರು  ದಿನಾಂಕ 11/09/2021 ರಂದು ಮನೆಯ ಕೊಟ್ಟಿಗೆಯನ್ನು ಸ್ವಚ್ಚ ಗೊಳಿಸುತ್ತಿರುವಾಗ ಮದ್ಯಾಹ್ನ12:30 ಗಂಟೆಗೆ ಆಕಸ್ಮಿಕವಾಗಿ ಕಾಲು ಜಾರಿ ಅಂಗಾತನೇ ಬಿದ್ದು ತಲೆಗೆ ಗಂಭೀರ ಒಳ ಜಖಂ ಉಂಟಾದವರನ್ನು ಚಿಕಿತ್ಸೆ ಬಗ್ಗೆ ಕೆ ಎಂ ಸಿ ಮಣಿಪಾಲದಲ್ಲಿ ದಾಖಲಿಸಿದ್ದು,  ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 16:58 ಗಂಟೆಗೆ ಮೃತ ಪಟ್ಟಿರುವುದಾಗಿದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-09-2021 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080