ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಮಣಿಪಾಲ: ಪಿರ್ಯಾದಿದಾರರಾದ ಕರುಣಾಕರ್ (39), ತಂದೆ: ದಿ. ನಾರಾಯಂ ಪೂಜಾರಿ, ವಾಸ: “ ಮಾತೃ ನಿವಾಸ ” ಪರ್ಕಳ ಹೈಸ್ಕೂಲ್ ಬಳಿ,ಹೆರ್ಗಾ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ: 11/09/2021 ರಂದು ಬೆಳಿಗ್ಗೆ 08:20 ಗಂಟೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಪರ್ಕಳ ಹೈಸ್ಕೂಲ್ ಬಳಿರುವ ತಮ್ಮ ಅಂಗಡಿ ಬರುತ್ತಿರುವಾಗ ಉಡುಪಿ – ಆಗುಂಬೆ ರಾಷ್ರ್ಟೀಯ ಹೆದ್ದಾರಿ 169(A) ಯ ಪರ್ಕಳ ಹೈಸ್ಕೂಲ್ ಬಳಿಯ ಸುರಕ್ಷಾ ಹಾಲ್ ನ ಎದುರುಗಡೆಯಲ್ಲಿ ಪರ್ಕಳ ಕಡೆಯಿಂದ ಬಂದ GA-05-T-2966 ನೇ ಟ್ಯಾಂಕರ್ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಯಿಂದ ಬರುತ್ತಿದ್ದ KA-20-EW-1163 ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಕಿರಣ ಸಫಲಿಗ ರವರಿಗೆ ತೀವ್ರ ತರಹದ ರಕ್ತಗಾಯವಾಗಿದ್ದು ಟ್ಯಾಂಕರ್ ನಂಬರ್ GA-05-T-2966 ನ್ನು ಅದರ ಚಾಲಕನು ಚಲಾಯಿಸಿಕೊಂಡು ಪರಾರಿಯಾಗಿರುತ್ತಾನೆ. ಗಾಯಗೊಂಡ ಕಿರಣ ಸಫಲಿಗ ರವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2021 ಕಲಂ:279,338 ಐಪಿಸಿ, 134(A) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಮಲ್ಪೆ : ಪಿರ್ಯಾದಿದಾರರಾದ ರಾಮ ವಿ ಕುಂದರ್,ಪ್ರಾಯ: 34 ವರ್ಷ,ತಂದೆ: ವಿಠ್ಠಲ್ ಕೋಟ್ಯಾನ್,ವಾಸ: ಮೂಡುತೋಟ, ಹೇರೂರು ಬ್ರಹ್ಮಾವರ, ಉಡುಪಿ ಮತ್ತು ಅವರ ಸ್ನೇಹಿತರು ಸೇರಿ 6 ವರ್ಷಗಳಿಂದ ಕಾರ್ತಿಕ್ ಬಿಲ್ಡಿಂಗ್ ನಲ್ಲಿ ಶ್ರೀ ರಸ್ತು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಎಂಬ ಪೈನಾನ್ಸ್ ಸಂಸ್ಥೆಯನ್ನು ನಡೆಸಿಕೊಂಡಿದ್ದು,ಅದರಲ್ಲಿ ದಿವ್ಯ, ಸರಿತಾ, ತನುಶ್ರೀ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ ,ಪಿರ್ಯಾದಿದಾರರು ಕೋ ಆಪರೇಟಿವ್ ಪೈನಾನ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದು ಪ್ರತಿದಿನ ಬೆಳಿಗ್ಗೆ ,ಸಂಜೆ ಕಛೇರಿಗೆ ಬಂದು ವ್ಯವಹಹಾರ ನೋಡಿಕೊಂಡು ಹೋಗುತ್ತಿದ್ದರು , ದಿನಾಂಕ 12/09/2021ರಂದು ಬೆಳಿಗ್ಗೆ 08:30 ಗಂಟೆಗೆ ಕಛೇರಿಯಲ್ಲಿ ಕೆಲಸ ಮಾಡುವ ತನುಶ್ರೀ ರವರು ಕರೆ ಮಾಡಿ ಶ್ರೀ ರಸ್ತು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಪೈನಾನ್ಸ್ ಸಂಸ್ಥೆಯ ಶೇಟರ್ ನ ಬೀಗವನ್ನು ಯಾರೋ ಒಡೆದಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಬಂದು ನೋಡಿದಾಗ ಕಚೇರಿಯ ಒಳಗಡೆ ಡ್ರಾವರ್ ಮತ್ತು ಕೆಲವು ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಡ್ರಾವರ್ ನಲ್ಲಿರುವ 720/- ರೂಪಾಯಿ ಯಾರೋ ಕಳ್ಳರು ತೆಗೆದುಕೊಂಡು ಹೋಗಿದ್ದು , ಕಛೇರಿಯಲ್ಲಿರುವ ಸಿಸಿಟಿವಿಯನ್ನು ವಿಕ್ಷಿಸಿದಾಗ ರಾತ್ರಿ 12:30 ಗಂಟೆಗೆ ಯಾರೋ ಕಳ್ಳರು ಕಛೇರಿಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಶಂಕರನಾರಾಯಣ: ಪಿರ್ಯಾದಿದಾರರಾದ ಸುಧೀರ ಪ್ರಾಯ: 30 ವರ್ಷ, ತಂದೆ: ದಿ: ಶಿವ ಹರಿಜನ ವಾಸ: ತಲ್ಕಾಲು ಗುಡ್ಡೆ, ಅಂಪಾರು ಗ್ರಾಮ ಮತ್ತು ಅಂಚೆ,ಕುಂದಾಪುರ ತಾಲೂಕು ಇವರ ತಾಯಿ ಶ್ರೀಮತಿ ರಾಧ(56) ಇವರು ಮನೆಯಲ್ಲಿ ಒಬ್ಬರೇ ಇದ್ದು ಕಳೆದ 3 ತಿಂಗಳ ಹಿಂದೆ ತನ್ನ ತಂಗಿ ಗುಲಾಬಿ ಹೃದಯಾಘಾತದಿಂದ ಮೃತ ಪಟ್ಟಿದ್ದು ಈ ಬಗ್ಗೆ ಮಾನಸಿಕವಾಗಿ ನೊಂದು ಅದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 05/09/2021 ರಂದು 10:00 ಗಂಟೆಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ತಲ್ಕಾಡು ಗುಡ್ಡೆ ತಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯ ಯಾವುದೋ ವಿಷ ಪದಾರ್ಥ ಸೇವನೆ ಮಾಡಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:11/09/2021 ರಂದು 18:45 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಶಾಂತಿ (38), ಗಂಡ: ಕರುಣಾಕರ ಪೂಜಾರಿ,  ವಾಸ :ಸಬ್ಲಾಡಿ ಮನೆ ಹಟ್ಟಿಕುದ್ರು ಬಸ್ರೂರು  ಗ್ರಾಮ, ಕುಂದಾಪುರ ತಾಲೂಕು ಇವರ ತಾಯಿ ರಾಧಾ (64) ರವರು 06 ತಿಂಗಳಿನಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕುಂದಾಪುರ  ಮಾತಾಶ್ರೀ  ಆಸ್ಪತ್ರಯ ವೈದ್ಯರ ಚಿಕಿತ್ಸೆಯಲ್ಲಿರುತ್ತಾರೆ ದಿನಾಂಕ 11/09/2021 ರಂದು  ಕುಂದಾಪುರದ ಮಾತಾಶ್ರೀ  ಆಸ್ಪತ್ರಯ  ವೈದ್ಯರ  ಚಿಕಿತ್ಸೆ ಪಡಕೊಂಡಿದ್ದು  ರಾತ್ರಿ 10:00 ಗಂಟೆಗೆ ಊಟ ಮಾಡಿ ಔಷಧವನ್ನು ಸೇವಿಸಿ ಮಲಗಿ ಕೊಂಡವರು  ದಿನಾಂಕ 12/09/2021 ರಂದು ಬೆಳಿಗ್ಗೆ ಪಿರ್ಯಾದಿದಾರರು ತಾಯಿಯನ್ನು ಉಪಚರಿಸಲು ಮಲಗಿದ ಕೋಣೆಯಲ್ಲಿ  ಬಂದು ನೋಡಿದಾಗ ರಾಧಾ  ರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ  ಚಿಕಿತ್ಸೆ ಬಗ್ಗೆ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರಗೆ ಕರೆ ತಂದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು  11:30 ಗಂಟೆಗೆ  ದಾರಿ ಮದ್ಯೆ ಮೃತ ಪಟ್ಟಿರುವುದಾಗಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 24/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಶರತ್ ಪೂಜಾರಿ(19), ತಂದೆ: ಕರುಣಾಕರ ಪೂಜಾರಿ, ವಾಸ: ಬೇಲೆ ಮನೆ ಕರಾವಳಿ ಶಿರೂರು ಬೈಂದೂರು ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ  ತಂದೆ ಕರುಣಾಕರ ಪೂಜಾರಿ (60) ರವರ  ಮಲ್ಲಾರಿನಲ್ಲಿ ವಾಸಮಾಡಿಕೊಂಡಿದ್ದು ಸುರತ್ಕಲ್‌‌ನ ಕೈಕಂಬದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 11/09/2021 ರಂದು ಸಂಜೆ 3:00 ಗಂಟೆಯ ಸಮಯಕ್ಕೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ಇದ್ದು ದಿನಾಂಕ 12/09/2021 ರಂದು ಬೆಳಿಗ್ಗೆ 7:30 ಗಂಟೆಗೆ ಮಲ್ಲಾರಿನಲ್ಲಿರುವ ಸಣ್ಣ ಹೊಳೆಯಲ್ಲಿ ಕರುಣಾಕರ ಪೂಜಾರಿಯವರ ಮೃತದೇಹ ದೊರಕಿರುವುದಾಗಿ ಪಿರ್ಯಾದಿದಾರರಿಗೆ ಅವರ ಅತ್ತೆ ಸುಮತಿಯವರು ಪೋನ್ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಹಾಗೂ ಅವರ ತಾಯಿ ಮತ್ತು ಅಕ್ಕನೊಂದಿಗೆ ಮಲ್ಲಾರಿಗೆ ಬಂದು ನೋಡಿ ಮೃತದೇಹವನ್ನು ನೋಡಿ ಗುರುತಿಸಿದ್ದು, ಪಿರ್ಯಾದಿದಾರರ ತಂದೆ ಕರುಣಾಕರ ಪೂಜಾರಿಯವರು ದಿನಾಂಕ 11/09/2021 ರಂದು ಸಂಜೆ 3:00 ಗಂಟೆಯಿಂದ ದಿನಾಂಕ 12/09/2021 ರಂದು ಬೆಳಿಗ್ಗೆ 7:30 ಗಂಟೆಯ ಮದ್ಯಾವಧಿಯಲ್ಲಿ  ಯಾವುದೋ ಕಾರಣಕ್ಕೆ ಮಲ್ಲಾರಿನ ತನ್ನ ಮನೆಯ ಸಮೀಪ ಇರುವ ಹೊಳೆಯ ಬಳಿ ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಪ್ರಮೀಳಾ (29), ತಂದೆ: ಸೀನ, ವಾಸ: ಪೊಸನೊಟ್ಟು, ನಕ್ರೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯವರು ಜೀವನೋಪಾಯಕ್ಕಾಗಿ ದನಗಳನ್ನು ಸಾಕಿಕೊಂಡಿದ್ದು  ದಿನಾಂಕ 11/09/2021 ರಂದು ಸಂಜೆ 18:15 ಗಂಟೆಗೆ ಕುಕ್ಕುಂದೂರು ಗ್ರಾಮದ ನಕ್ರೆ, ಪೊಸನೊಟ್ಟು ಎಂಬಲ್ಲಿರುವ ಅಪಾದಿತ ಡೆಮ್ಮಿ ಡಿಸೋಜಾ ಎಂಬಾತನ ಮನೆಯ ಹಿತ್ತಿಲಿಗೆ ತೆರೆದುಕೊಂಡಿದ್ದ ಗೇಟಿನ  ಮೂಲಕ ಪಿರ್ಯಾದಿದಾರರ ಕಪ್ಪು ಬಣ್ಣದ ದನವೊಂದು ಹೋಗಿದ್ದು, ಅಪಾದಿತನು ದನವನ್ನು ಕೊಲ್ಲುವ ಉದ್ದೇಶದಿಂದ, ದನಕ್ಕೆ  ಕತ್ತಿಯನ್ನು ಎಸೆದಾಗ  ಕತ್ತಿಯು ದನದ  ಕಾಲಿಗೆ ಬಿದ್ದು ದನದ ಹಿಂದಿನ ಬಲಕಾಲಿಗೆ ರಕ್ತ ಗಾಯವಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2021 ಕಲಂ: 429  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   . 

 

ಇತ್ತೀಚಿನ ನವೀಕರಣ​ : 12-09-2021 07:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080