ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ : ದಿನಾಂಕ 11/08/2022 ರಂದು ರಾತ್ರಿ ಸುಮಾರು 08:00 ಗಂಟೆಗೆ ಕುಂದಾಪುರ ತಾಲೂಕು, ಕೊಟೇಶ್ವರ ಗ್ರಾಮದ ಕೆನರಾ  ಬ್ಯಾಂಕಿನ ಬಳಿ, ಕೊಟೇಶ್ವರ ಪೇಟೆ ರಸ್ತೆಯಲ್ಲಿ, ಆಪಾದಿತ ಸುಚೇತನ ಎಂಬವರು KA19-EE-8720 ನೇ ಬೈಕನ್ನು ಕುಂದಾಪುರ ಕಡೆಯಿಂದ ಬೀಜಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಉದಯ ಕೆ ಪ್ರಾಯ 45 ವರ್ಷ ತಂದೆ ದೇವ ಪೂಜಾರಿ ವಾಸ: ಮಲ್ಲನ ಬೆಟ್ಟು ರಸ್ತೆ, ಕೋಣಿ ಗ್ರಾಮ, ಕುಂದಾಪುರ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತವಾದ ಗಾಯ ಹಾಗೂ  ಕೈ ಕಾಲುಗಳಿಗೆ  ತರಚಿದ ಗಾಯವಾಗಿ ಕೊಟೇಶ್ವರ ಎನ್‌. ಆರ್‌ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 89/2022  ಕಲಂ 279, 338  IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿ S.N.ಸಂದೀಪ್‌ ಕುಮಾರ್‌ (38)ತಂದೆ: ದಿ.ಎಸ್‌. ಸತ್ಯನಾರಾಯಣ, ವಾಸ: ನಂ: 65-1-189A ಸತ್ಯ ವರಹ ನಿಲಯಂ, ಶ್ರೀನಿವಾಸ ನಗರ ವೆಸ್ಟ್‌, ಲಿಖಿತ ಥಿಯೇಟರ್‌ ಸಮೀಪ ಮಲಕಪುರಂ, ವಿಶಾಖಪಟ್ಟಣ ನಗರ ಜಿಲ್ಲೆ, 530011 ಆಂದ್ರಪ್ರದೇಶ ರಾಜ್ಯ ಇವರ ಹೆಂಡತಿಯ ತಂದೆ ಪಿ. ಸತ್ಯನಾರಾಯಣ (53) ರವರು ದಿನಾಂಕ 10.08.2022 ರಂದು ವಿಶಾಖಪಟ್ಟಣದಿಂದ ಉಡುಪಿಗೆ ಬಂದಿದ್ದು, ದಿನಾಂಕ 11.08.2022 ರಂದು ಪಿರ್ಯಾದಿದಾರರು ಪಿ. ಸತ್ಯನಾರಾಯಣರವರನ್ನು  ಉಡುಪಿ ಶ್ರೀಕೃಷ್ಣ ಗೆಸ್ಟ್‌ ಹೌಸ್‌ನಿಂದ  ಮಣಿಪಾಲದ ಗ್ರೀನ್‌  ವ್ಯೂ ಅಪಾರ್ಟ್‌ಮೆಂಟ್‌ಗೆ ಬೆಳಿಗ್ಗೆ 09.30 ಗಂಟೆ ಕರೆದುಕೊಕಂಡು ಬಂದಿದ್ದು, ಪಿರ್ಯಾದಿದಾರರು ಅವರನ್ನು  ಕಾರಿಡಾರ್‌ನಲ್ಲಿ ನಿಂತುಕೊಳ್ಳಿ ಎಂದು ಹೇಳಿ ನಿಲ್ಲಿಸಿದ್ದು, ಪಿರ್ಯಾದಿದಾರರ ರೂಂನಲ್ಲಿದ್ದ ಸಾಮಾನುಗಳನ್ನು ಪ್ಯಾಕ್‌ ಮಾಡಿ ಹೊರಗೆ ಬಂದು ನೋಡಲಾಗಿ ಪಿ. ಸತ್ಯನಾರಾಯಣರವರು  ಕಾರಿಡಾರ್‌ನಲ್ಲಿ ಇರಲಿಲ್ಲ, ಅವರಿಗೆ ಮರೆವು ಕಾಯಿಲೆ ಇದ್ದು, ಮಣಿಪಾಲದ ಪರಿಸರಕ್ಕೆ ಅವರು ಹೊಸಬರಾಗಿರುತ್ತಾರೆ.  ಬಳಿಕ ಮಣಿಪಾಲ ಆಸುಪಾಸಿನಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಪಿ. ಸತ್ಯನಾರಾಯಣರವರು ಈವರೆಗೆ ಪತ್ತೆಯಾಗಿರುವುದಿಲ್ಲ. ಕಾಣೆಯಾದರ ವಿವರ : ಹೆಸರು:  ಪಿ. ಸತ್ಯನಾರಾಯಣ, ಪ್ರಾಯ: 53 ವರ್ಷ, ತಂದೆಯ ಹೆಸರು:  ದಿ. ಸೀತರಾಮದಾಸ್‌, ಎತ್ತರ:  5 ಅಡಿ. ಬಣ್ಣ : ಎಣ್ಣೆಕಪ್ಪು  ಮೈ ಬಣ್ಣ, ಚಹರೆ: ಮೂಗಿನ ಬಲ ಬದಿಯಲ್ಲಿ ಕಪ್ಪು ಗುಳ್ಳೆ ಇದೆ. ತಲೆ ಕೂದಲು ಅರೆ ನೆರೆದಿದೆ.  ತಿಳಿನೀಲಿ ಬಣ್ಣದ ತುಂಬು ತೋಳಿನ ಷರ್ಟ್‌ ಧರಿಸಿದ್ದು, ಕಂದು ಬಣ್ಣದ ಪ್ಯಾಂಟ್‌ ಧರಿಸಿರುತ್ತಾರೆ. ಕಂದು ಬಣ್ಣದ ಲೆದರ್‌ ಚಪ್ಪಲ್‌ ಧರಿಸಿರುತ್ತಾರೆ.  ತೆಲುಗು ಭಾಷೆ ಮಾತನಾಡುತ್ತಾರೆ. ಬರೆಯಲು ಬರುವುದಿಲ್ಲ. ಸ್ವಲ್ಪ ಸ್ವಲ್ಪ ತೆಲುಗು ಭಾಷೆ ಓದುತ್ತಾರೆ.  ಅವರಿಗೆ ಮರೆವಿನ ಕಾಯಿಲೆ ಇರುತ್ತದೆ. ಮರೆವಿನ ಕಾಯಿಲೆಯಿಂದ ಸಂದೀಪ್‌ ಮತ್ತು ಕುಸುಮಾ ಎಂದು ಹೇಳುತ್ತಾ ಅವರು ಮುಂದುವರಿದು ಹೋಗಿರುತ್ತಾರೆ ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಮನುಷ್ಯ ಕಾಣೆ ಪ್ರಕರಣ ಸಂಖ್ಯೆ : 104/2022 ಕಲಂ :ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳವು ಪ್ರಕರಣಗಳು

  • ಹಿರಿಯಡ್ಕ  : ಪಿರ್ಯಾದು ಮಂಜುನಾಥ ಕುಂದರ್ ( 46) ತಂದೆ: ದಿ. ಕೃಷ್ಣ ಕುಂದ ರ್ ವಾಸ: ಶಿಲಾ ವನ, ಜೋಗಿಬೆಟ್ಟು ಪೆರ್ಡೂರು ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಇವರು  ಪೆರ್ಡೂರು ಮುತ್ತುರ್ಮೆಯಲ್ಲಿರುವ ಶ್ರೀ ಸಾಯಿ ಪ್ಯುಯೆಲ್ಸ್ ಪೆಟ್ರೋಲ್ ಬಂಕ್ ನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡಿಕೊಂಡಿದ್ದು,ದಿನಾಂಕ:11/08/2022 ರಂದು ಎಂದಿನಂತೆ ರಾತ್ರಿ 10:00 ಗಂಟೆಗೆ ಪೆಟ್ರೋಲ್ ಬಂಕ್ ನ್ನು ಬಂದು ಮಾಡಿ ಹೋಗಿದ್ದು,  ದಿನಾಂಕ 12/08/2022 ರಂದು ಬೆಳಿಗ್ಗೆ 06:30 ಗಂಟೆಗೆ ಪೆಟ್ರೋಲ್ ಬಂಕ್ ಗೆ ಬಂದು ನೋಡಿದಾಗ  ಅದರ ಎದುರಿನ ಕಬ್ಬಿಣದ  ಬಾಗಿಲು ತೆರೆದಿದ್ದು,  ಒಳಗಡೆ ಹೋಗಿ ನೋಡಲಾಗಿ  ಕಛೇರಿಯ ಒಳಗಿನ ಸಿಸಿ ಕ್ಯಾಮರಾವನ್ನು ಮೇಲ್ಮುಖವಾಗಿ ತಿರಿಗಿಸಿದ್ದು ಅಲ್ಲದೇ ಅಲ್ಲಿದ್ದ ಡ್ರಾವರಿನ ಲಾಕ್ ನ್ನು ಕಬ್ಬಿಣದ ರಾಡಿನಿಂದ ಮೀಟಿ ತೆರೆದು  ಫಿರ್ಯಾಧಿದಾರರು ರಾತ್ರಿ ಬಂಕನ್ನು ಮುಚ್ಚುವ ವೇಳೆ ಇಟ್ಟಿದ್ದ ರೂಪಾಯಿ 57,940/- ನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 42/2022 ಕಲಂ:  457,380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು : ಫಿರ್ಯಾದಿ ಟಿ ನಾರಾಯಣ ಹೆಗ್ಡೆ  ಪ್ರಾಯ 74 ವರ್ಷ  ತಂದೆ: ದಿ. ನಾಗಯ್ಯ ಶೆಟ್ಟಿ ಆಡಳಿತ ಮೊಕ್ತೇಸರರು ಶ್ರೀ ಸೋಮಲಿಂಗೇಶ್ವರ ಮತ್ತು ಪರಿವಾರ ದೇವಸ್ಥಾನ ,ಚಂದಣ ತೆಗ್ಗರ್ಸೆ ಗ್ರಾಮ ಬೈಂದೂರು ತಾಲೂಕು ಇವರು ತಗ್ಗರ್ಸೆ ಗ್ರಾಮದ ಚಂದಣ ಶ್ರೀ ಸೋಮಲಿಂಗೇಶ್ವರ ಮತ್ತು ಪರಿವಾರ ದೇವಸ್ಥಾನದ ಆಡಳಿತ ಮೊಕ್ತೇಸರರರಾಗಿದ್ದು, ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ರವರು ದಿನಾಂಕ 27/07/2022 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಪ್ರತಿ ದಿನದಂತೆ ಬೆಳಗಿನ ಪೂಜಾ ಕ್ರಮವನ್ನು ಮುಗಿಸಿ  ಬಾಗಿಲನ್ನು ಭದ್ರಪಡಿಸಿ ಮನೆಗೆ ಹೋಗಿದ್ದು, ದಿನಾಂಕ 28/07/2022 ರಂದು ಬೆಳಿಗ್ಗೆ 8:00 ಗಂಟೆ ಸುಮಾರಿಗೆ ಅರ್ಚಕರು ಪೂಜೆ ಮಾಡಲು  ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಗರ್ಭಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಮುರಿದು ಒಳಗೆ ಪ್ರವೇಶಿಸಿ ದುರ್ಗಾಪರಮೇಶ್ವರಿ ದೇವರ ಮೂರ್ತಿಗೆ  ಹಾಕಿದ ಚಿನ್ನದ ತಾಳಿ ಇರುವ ಕರಿಮಣಿ ಸರಗಳನ್ನು ಹಾಗೂ ದೇವರ ಕಾಣಿಕೆ ಡಬ್ಬಿಯನ್ನು ಮುರಿದು ಅದರಲ್ಲಿದ್ದ ಕಾಣಿಕೆ  ಹಣವನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ಅರ್ಚಕರು ತಿಳಿಸಿದ ಮೇರೆಗೆ ಫಿರ್ಯಾದಿದಾರರು ದೇವಸ್ಥಾನಕ್ಕೆ ಬಂದು  ನೋಡಿದಲ್ಲಿ ಯಾರೋ ಕಳ್ಳರು ದಿನಾಂಕ 27/07/2022 ರಂದು ಬೆಳಿಗ್ಗೆ 9:00 ಗಂಟೆಯಿಂದ ದಿನಾಂಕ 28/07/2022 ರಂದು ಬೆಳಿಗ್ಗೆ 8:00 ಗಂಟೆಯ ಮಧ್ಯಾವಧಿಯಲ್ಲಿ  ದೇವಸ್ಥಾನದ  ಗರ್ಭಗುಡಿಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ದುರ್ಗಾಪರಮೇಶ್ವರಿ ದೇವರ ಮೂರ್ತಿಗೆ ಹಾಕಿದ ಚಿನ್ನದ ತಾಳಿ  ಇರುವ  4 ಕರಿಮಣಿ ಸರಗಳನ್ನು  ( 8 ಗ್ರಾಂ ಚಿನ್ನ ಅಂದಾಜು ಮೌಲ್ಯ ರೂ 32000/- ) ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10,000/- ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ. 42,000/- ಆಗಿರುತ್ತದೆ ಎಂದು ನೀಡಿದ ದೂರಿನಂತೆ  ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 156 /2022 ಕಲಂ. 454, 457, 380 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ಇತ್ತೀಚಿನ ನವೀಕರಣ​ : 12-08-2022 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080