ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಕಾರ್ತಿಕ್ ರಾವ್ (25), ತಂದೆ: ಗಣೇಶ ರಾವ್ ವಾಸ: 1-146 (ಸಿ) ವಿದ್ಯುಲತಾ ನಿವಾಸ, ರಾಮನಗರ ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ನಂದಿಕೂರು ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ನವದುರ್ಗಾ ಫುಡ್ ಪ್ರೋಡಕ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು  ಅವರ ಸಹೊದ್ಯೋಗಿ ಅಶ್ಲಿನ್ ಎಂಬುವವರು ಮುಂಬೈಗೆ ಹೋಗಲಿದ್ದುದರಿಂದ ಅವರನ್ನು ಬೀಳ್ಕೊಡಲು ಪಿರ್ಯಾದಿದಾರರ KA-20-EW-9801  ಹೋಂಡಾ ಡಿಯೋ ಸ್ಕೂಟರ್ ನಲ್ಲಿ ರಾಜ್ ಕಿಶೋರ್ ರವರೊಂದಿಗೆ ಬೆಳ್ಮಣ್ ಗೆ ಹೋಗಿ ಸಹೋದ್ಯೋಗಿ ಆಶ್ವಿನ್ ರವರನ್ನು ಬೀಳ್ಕೊಟ್ಟು, ವಾಪಾಸ್ಸು ಬರುವಾಗ ಅದೇ ಸ್ಕೂಟರನ್ನು ರಾಜ್‌ ಕಿಶೋರನು ಚಲಾಯಿಸಿಕೊಂಡು ಹಾಗೂ ಪಿರ್ಯಾದಿದಾರರು ಹಿಂಬದಿ ಸವಾರರಾಗಿ ಕುಳಿತುಕೊಂಡು ಬೆಳ್ಮಣ್ ಕಡೆಯಿಂದ ಪಡುಬಿದ್ರಿ ಕಡೆಗೆ ರಾಜ್ಯ ಹೆದ್ದಾರಿ-01 ರಲ್ಲಿ ಬರುತ್ತಾ ರಾಜ್‌ ಕಿಶೋರ  ಸ್ಕೂಟರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಸಿದ್ದರಿಂದ 14:00 ಗಂಟೆಗೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಕಾಂಜರಕಟ್ಟೆ ಡಿಸೋಜಾ ವಿಲ್ಲಾ ಎಂಬುವವರ ಮನೆಯಿಂದ ಸ್ವಲ್ಪ ಮುಂದೆ ರಸ್ತೆ ತಿರುವಿನಲ್ಲಿ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಎಡಕ್ಕೆ ಚಲಿಸಿ ರಸ್ತೆ ಬದಿಗೆ ಅಳವಡಿಸಿದ್ದ, ಕಬ್ಬಿಣದ ಗಾರ್ಡ್‌ ಗೆ ಡಿಕ್ಕಿ ಹೊಡೆದು, ಸ್ಕೂಟರ್ ಸಮೇತ ಇಬ್ಬರೂ ಕೆಳಗೆ ಬಿದ್ದ ಪರಿಣಾಮ, ಪಿರ್ಯಾದಿದಾರರ ಕಣ್ಣಿನ ಬಳಿ ಸಾಧಾರಣ ಸ್ವರೂಪದ ಗಾಯ ಮತ್ತು ಸ್ಕೂಟರ್ ಸವಾರ ರಾಜ್ ಕಿಶೋರ್‌ ರವರ ಎದೆಗೆ, ಹೊಟ್ಟೆಗೆ ಗುದ್ದಿದ ಗಂಭೀರ ಗಾಯವುಂಟಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದವರನ್ನು ಸೇರಿದ ಜನರ ಸಹಕಾರದೊಂದಿಗೆ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ 108 ಅಂಬ್ಯುಲೆನ್ಸ್‌‌ ನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು ಪರೀಕ್ಷಿಸಿ 14:55 ಗಂಟೆಗೆ ರಾಜ್‌ ಕಿಶೋರ್‌‌ನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಮತ್ತು ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕೊಲ್ಲೂರು: ಪಿರ್ಯಾದಿದಾರರಾದ ರಾಜೇಂದ್ರ ಹೆಚ್ (35),  ತಂದೆ: ಮಹಾಬಲ ದೇವಾಡಿಗ, ವಾಸ: ಹೆಗ್ಡೆಗದ್ದೆ ಮಾರಣಕಟ್ಟೆ  ಅಂಚೆ  ಚಿತ್ತೂರು  ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 11/08/2022 ರಂದು ಬೆಳಿಗ್ಗೆ 09:00 ಗಂಟೆಗೆ  ವಂಡ್ಸೆ ಮೇಲ್ ಪೇಟೆ  ರಾಜೇಶ್ವರಿ ಕಾಂಪ್ಲೇಕ್ಸ್  ನಲ್ಲಿರುವ ತಮ್ಮ ಶ್ರೀ ಬ್ರಹ್ಮಲಿಂಗೇಶ್ವರ ವರ್ಕ್ಸ್ ಶಾಪ್ ನ ಎದುಗಡೆ ನಿಂತುಕೊಂಡಿದಾಗ ರಾಜ್ಯ ಹೆದ್ದಾರಿಯಲ್ಲಿ ಚಿತ್ತೂರು ಕಡೆಯಿಂದ ವಂಡ್ಸೆ ಕಡೆಗೆ KA-20-EH-3516 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಆರೋಪಿ ಶ್ರೀಕಾಂತ್ ಸಹ ಸವಾರರಾಗಿ ಅಂಬಿರವರನ್ನು ಕುಳ್ಳಿರಿಸಿಕೊಂಡು ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿ  ವಂಡ್ಸೆ ಗ್ರಾಮದ ರಾಜೇಶ್ವರಿ ಕಾಪ್ಲೇಕ್ಸ್  ಎದುಗಡೆ ರಸ್ತೆಯಲ್ಲಿ  ಅಡ್ಡ ಬಂದ  ದನವನ್ನು ತಪ್ಪಿಸಲು ಹೋಗಿ ಗಲಿಬಿಗೊಂಡು ವೇಗವನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ ರಸ್ತೆಗೆ ಬಿದ್ದ  ಪರಿಣಾಮ ಮೋಟಾರ್ ಹಿಂಬದಿ ಸಹಸವಾರರಾದ ಅಂಬಿಕಾರವರಿಗೆ ತಲೆಗೆ ರಕ್ತಗಾಯ ಮತ್ತು ಎರಡು ಕಾಲುಗಳಿಗೆ ರಕ್ತಗಾಯ ಉಂಟಾಗಿರುತ್ತದೆ. ಗಾಯಾಳು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ:279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ  ಮನೋಜ್ (22), ತಂದೆ: ಮಂಜುನಾಥ, ವಾಸ: ಮಂಜುಶ್ರೀ ನಿಲಯ, ಹೊಸಪೇಟೆ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಶ್ರೀ ಸೌಪರ್ಣಿಕ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ಮೆನೇಜರ್ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ದಿನಾಂಕ 19/06/2022 ರಂದು ಸಂಜೆ 4:40 ಗಂಟೆಗೆ ಪೆಟ್ರೋಲ್ ಬಂಕ್ ನ ಕ್ಯಾಶ್ ಕೌಂಟರ್ ಕಟ್ಟಡದ ಒಳಗೆ ಕ್ಯಾಶ್ ಕೌಂಟರ್ ನಲ್ಲಿ  ಇರುವಾಗ Honda Amaze ಸಿಲ್ವರ್ ಕಲರ್ ಕಾರಿನಲ್ಲಿ ವಿದೇಶದ ವ್ಯಕ್ತಿಯಂತೆ ಕಾಣುವ ಓರ್ವ ಅಪರಿಚಿತ ವ್ಯಕ್ತಿ   ಪೆಟ್ರೋಲ್ ಬಂಕ್ ಗೆ ಬಂದು ಕಾರಿನಿಂದ ಇಳಿದು ಕಾರಿಗೆ 500 ರೂಪಾಯಿ ಡೀಸೆಲ್ ಹಾಕಿಸಿಕೊಂಡು ಹಣವನ್ನು ಡೀಸೆಲ್ ಹಾಕಿದ ಸಿಬ್ಬಂದಿಗೆ ಕೊಟ್ಟು ನಂತರ ಪೆಟ್ರೋಲ್ ಬಂಕ್ ನ ಕ್ಯಾಶ್ ಕೌಂಟರ್ ಬಳಿ ಬಂದು ಪಿರ್ಯಾದಿದಾರರ ಬಳಿ ಇಂಗ್ಲಿಷ್ ನಲ್ಲಿ  ಮಾತನಾಡಿ 2,000/- ರೂ ನೋಟು ಇದೆಯಾ ಎಂದು ಕೇಳಿದ್ದು ಆ ಸಮಯ ಪಿರ್ಯಾದಿದಾರರು ಕ್ಯಾಶ್ ಡ್ರಾವರ್ ನಲ್ಲಿ ನೋಡಿ 1 ನೋಟು ಇದೆ ಎಂದು ಹೇಳಿದಾಗ  ಅಪರಿಚಿತ ವ್ಯಕ್ತಿಯು ಬೇರೆ ಕಡೆ ಡ್ರಾವರ್ ನಲ್ಲಿ ಇದೆಯಾ ಎಂದು ನೋಡಿ ಎಂದು ಹೇಳಿ ಪಿರ್ಯಾದಿದಾರರು ಬೇರೆ ಕಡೆ ನೋಡುವಂತೆ  ಗಮನ ಬೇರೆ ಕಡೆ ಹರಿಸುವಂತೆ ಮಾಡಿ ಕ್ಯಾಶ್ ಕೌಂಟರ್ ಡ್ರಾವರ್ ನಲ್ಲಿರುವ 52,000/- ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಆತನು ಬಂದ ಕಾರಿನಲ್ಲಿ ಹೋಗಿರುತ್ತಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಗಂಗೊಳ್ಳಿ: ಪಿರ್ಯಾದಿದಾರರಾದ ಮಹಮ್ಮದ್‌ ನಾಜೀಮ್‌ (33), ತಂದೆ: ಮಹಮ್ಮದ್‌ ಆಲಿ ಬಾಷಾ, ವಾಸ: ಜರೀನಾ ಮಂಜಿಳ್‌, ನ್ಯೂ ಕಾಲೋನಿ, ಕೇಸರ್‌ಕೋಡಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರು ತ್ರಾಸಿ ಪೇಟೆಯಲ್ಲಿ ನಿಮ್ರಾ ಸೂಪರ್ ಮಾರ್ಕೆಟ್ ಅಂಗಡಿ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 23/06/2022 ರಂದು 20:30 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಪೇಟೆಯಲ್ಲಿ  ನಿಮ್ರಾ  ಸೂಪರ್  ಮಾರ್ಕೆಟ್  ಅಂಗಡಿ ಬಳಿ KA-20-EK-3084 ನೇ ಹೋಂಡಾ  ಆ್ಯಕ್ಟೀವ್‌ ಮೋಟಾರು ಸೈಕಲ್‌ನ್ನು ನಿಲ್ಲಿಸಿ ಮನೆಗೆ ಹೋಗಿದ್ದು ದಿನಾಂಕ 24/06/2022 ರಂದು ಬೆಳಿಗ್ಗೆ 09:00 ಗಂಟೆಗೆ ಮನೆಯಿಂದ ಅಂಗಡಿಗೆ ಬಂದು ನೋಡಲಾಗಿ ಸ್ಥಳದಲ್ಲಿ ಮೋಟಾರು ಸೈಕಲ್‌ ಇದ್ದಿರುವುದಿಲ್ಲ. ಯಾರೋ ಕಳ್ಳರು ಮೋಟಾರು ಸೈಕಲ್‌ನ್ನು ದಿನಾಂಕ 23/06/2022 ರಂದು  20:30 ಗಂಟೆಯಿಂದ ದಿನಾಂಕ 24/06/2022 ರಂದು ಬೆಳಿಗ್ಗೆ 09:00 ಗಂಟೆಯ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಮೋಟಾರ್ ಸೈಕಲ್ ನ ಮೌಲ್ಯ 40,000/- ರೂಪಾಯಿ ಆಗಿರುತ್ತದೆ.   ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಗಣೇಶ್ ಪೂಜಾರಿ (48), ತಂದೆ: ನಾಗ ಪೂಜಾರಿ, ವಾಸ: ಸಿಂಗಾರ ಬಡಾ ಮನೆ, ನಾಗೂರು ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಇವರ ಕುಟುಂಬದವರು ಕಿರಿಮಂಜೇಶ್ವರ  ಗ್ರಾಮದ ನಾಗೂರಿನ ಸಿಂಗಾರ ಗರಡಿ ದೈವದ ಮನೆಯ ಪೂಜೆಯನ್ನು ನಡೆಸಿಕೊಂಡು ಬಂದಿದ್ದು ಅದರಂತೆ ಪಿರ್ಯಾದಿದಾರರು ಕಳೆದ 10 ವರ್ಷಗಳಿಂದ ದೈವದ ಮನೆಯ ಪೂಜೆಯನ್ನು ಮಾಡಿಕೊಂಡು ಬಂದಿದ್ದು, ದಿನಾಂಕ 16/07/2022 ರಿಂದ ಆಷಾಡ ಮಾಸ ಪ್ರಾರಂಭವಾಗಿರುವುದರಿಂದ  ಆಷಾಡ ಮಾಸದಲ್ಲಿ ದೈವದ ಮನೆಯಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯದೇ ಇದ್ದ  ಕಾರಣ ದೈವದ ಮನೆ ಕಡೆಗೆ ಹೋಗದೇ ಇದ್ದು ದಿನಾಂಕ 10/08/2022 ರಂದು ಸಂಜೆ 4:00 ಗಂಟೆ ಸಮಯ ದೈವದ ಮನೆಗೆ ಹೋದಲ್ಲಿ ದೈವದ ಮನೆಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗಡೆ ಹಾಗೂ ಹೊರಗಡೆ ಇಟ್ಟಿರುವ ಕಾಣಿಕೆ ಹುಂಡಿಯನ್ನು ಒಡೆದು ಹುಂಡಿಯಲ್ಲಿರುವ ಸುಮಾರು ರೂಪಾಯಿ 30,000 ದಿಂದ 35,000 ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 155 /2022 ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರಜ್ಞಾ ಶೆಟ್ಟಿಗಾರ್‌ (18), ತಂದೆ: ಸತೀಶ್‌ ಶೆಟ್ಟಿಗಾರ್‌ ವಾಸ:  ಮನೆ ನಂಬ್ರ: 1/83, ಪ್ರಥ್ವಿ, ಕಾಳಿಕಾಂಬ ವರ್ಕ ಶಾಪ್‌ ಬಳಿ, ವೈಷ್ಣವಿ ಲೇಔಟ್‌ ರಸ್ತೆ, ಕೊರಂಗ್ರಪಾಡಿ, ಅಲೆವೂರು ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 11/08/2022 ರಂದು ಉಡುಪಿಯಲ್ಲಿ ಕಂಪ್ಯೂಟರ್‌ ತರಗತಿ ಮುಗಿಸಿಕೊಂಡು ವಾಪಾಸು ಮನೆ ಕಡೆಗೆ ಬರುತ್ತಿರುವಾಗ 13:30 ಗಂಟೆಗೆ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕಾಳಿಕಾಂಬ ಗ್ಯಾರೇಜ್‌ ಬಳಿ ತಲುಪಿದಾಗ ಓರ್ವ ಅಪರಿಚಿತ ವ್ಯಕ್ತಿ ಕಪ್ಪು ಬಣ್ಣದ ಎಫ್‌ ಝಡ್‌ ಬೈಕ್‌ ನಲ್ಲಿ ಉದ್ಯಾವರ ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಹೋಗಿ, ಪುನಃ ವಾಪಾಸು ಪಿರ್ಯಾದಿದಾರರ ಎದುರಿನಿಂದ ಬಂದು, ಏಕಾಏಕಿಯಾಗಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆಯಲು ಪ್ರಯತ್ನಿಸಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿ, ಸರ ಆತನ ಕೈಗೆ ಸಿಗದಂತೆ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿದ್ದು, ಪಿರ್ಯಾದುದಾರರ ಬೊಬ್ಬೆ ಕೇಳಿ ಆರೋಪಿತನು ಬೈಕ್‌ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 125/2022 ಕಲಂ:  393 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-08-2022 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080