ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 11/08/2021 ರಂದು ಮಧ್ಯಾಹ್ನ 12:30 ಗಂಟೆಗೆ ಕುಂದಾಪುರ  ತಾಲೂಕಿನ ತಲ್ಲೂರು ಗ್ರಾಮದ ತಲ್ಲೂರು ಜಂಕ್ಷನ್‌ ಬಳಿಯ ಪೂರ್ವ ಬದಿಯ  NH 66 ರಸ್ತೆಯಲ್ಲಿ ಆಪಾದಿತ ಮಂಜುನಾಥ ಎನ್‌‌ ‌‌‌‌‌‌‌‌ನಾಯ್ಕ ಎಂಬುವವರು KA-47-A-1049ನೇ ಗೂಡ್ಸ್‌ ವಾಹನವನ್ನು  ಬೈಂದೂರು  ಕಡೆಯಿಂದ ಕುಂದಾಪುರ  ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು  ಬಂದು, ಪೂರ್ವ ಬದಿಯ  NH 66 ರಸ್ತೆಯ ಪೂರ್ವ ಬದಿಯಲ್ಲಿ ರಸ್ತೆದಾಟಲು ನಿಂತುಕೊಂಡಿದ್ದ ಪಿಯಾದಿದಾರರಾದ ಕರಿಯಣ್ಣ ಶೆಟ್ಟಿ (38), ತಂದೆ :ನಾರಾಯಣ  ಶೆಟ್ಟಿ, ವಾಸ: ಕೆಂಚನೂರು ಶಾಲೆಯ  ಬಳಿ, ಶೆಟ್ರಕಟ್ಟೆ, ಕೆಂಚನೂರು ಗ್ರಾಮ, ಕುಂದಾಪುರ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಯಾದಿದಾರರ ಎದೆಗೆ, ಎಡಹೆಣೆಗೆ, ಎಡಕೆನ್ನೆಗೆ,  ಕೆಳತುಟಿಗೆ,  ಹಾಗೂ ಬಲಕಾಲಿನ ಪಾದದ ಮೇಲೆ  ರಕ್ತಗಾಯ  ಹಾಗೂ  ಒಳನೋವು ಉಂಟಾಗಿ  ಕುಂದಾಪುರ  ಆದರ್ಶ   ಆಸ್ಪತ್ರೆಯಲ್ಲಿ  ಒಳ  ರೋಗಿಯಾಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹೆಬ್ರಿ: ಪಿರ್ಯಾದಿದಾರರಾದ ದಿನೇಶ್ ಪೂಜಾರಿ (36), ತಂದೆ:ಪುಟ್ಟಪ್ಪ ಪೂಜಾರಿ, ವಾಸ: ದಿನೇಶ್ ನಿಲಯ ಮೂಡುಕುಡೂರು ವರಂಗ ಗ್ರಾಮ ಹೆಬ್ರಿ ತಾಲೂಕು ಇವರ ಅಣ್ಣ ಅಶೋಕ ಪೂಜಾರಿ (38) ರವರು ಟೈಲರ್ ವೃತ್ತಿ ಮಾಡಿಕೊಂಡಿದ್ದು,  ಕೋವಿಡ್  ಕಾರಣದಿಂದ 3 ತಿಂಗಳಿಂದ ಕೆಲಸವಿಲ್ಲದೇ ಮನೆಯಲ್ಲೇ ಇದ್ದುದಲ್ಲದೇ ಕೆಲವು ಕಡೆಗಳಲ್ಲಿ ಕೈಸಾಲವನ್ನು ಮಾಡಿಕೊಂಡಿದ್ದು. ಅದನ್ನು ತೀರಿಸಲಾಗದ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 11/08/2021 ರಂದು ಮಧ್ಯಾಹ್ನ 15:30 ಗಂಟೆಯಿಂದ 16:00 ಗಂಟೆಯ ಮದ್ಯಾವಧಿಯಲ್ಲಿ ವರಂಗ ಗ್ರಾಮದ ಮೂಡುಕುಡೂರು ಎಂಬಲ್ಲಿ ಮನೆಯ ಹಿಂದುಗಡೆಯಲ್ಲಿರುವ ಹಟ್ಟಿಯಲ್ಲಿ ಮೇಲಿನ ಜಂತಿಗೆ ಬೈರಾಸ್ ನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಂಚಿ ಕುಮೇರಿ ಎಂಬಲ್ಲಿ ವಿಪರೀತ ಮದ್ಯಪಾನ ಮಾಡುತ್ತಿದ್ದ  ಶೇಖರ ನಾಯ್ಕ (49) ಎಂಬುವವರು ಇದರಿಂದಾಗಿ ಈ ಹಿಂದೆ 3 ಸಲ ಅಸೌಖ್ಯಗೊಂಡಿದ್ದು, ಈ ಕಾರಣದಿಂದ  ಅವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11/08/2021 ರಂದು ಬೆಳಿಗ್ಗೆ 07:00 ಗಂಟೆಯಿಂದ ಸಂಜೆ 05:15 ಗಂಟೆಯ ನಡುವೆ ಮನೆಯ ಮಾಡಿನ ಕಬ್ಬಿಣದ ಬೀಮ್‌ಗೆ ಚೂಡಿದಾರ್‌ ವೇಲ್‌ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 29/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

 ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಗಿರೀಶ್‌ (40), ತಂದೆ: ಸಂಜೀವ ಮರಕಾಲ, ವಾಸ  ಕೊಮೆ ಬೊಬ್ಬರ್ಯ ದೇವಸ್ಥಾನ ಬಳಿ  ಕೊಮೆ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ಹೆಂಡತಿ ನಾಗರತ್ನ ಎಂಬುವವರ ಮನೆಯಾದ ಕೊಮೆಗೆ ಬಂದಿದ್ದು, ಮನೆಯಲ್ಲಿರುವಾಗ ಹೆಂಡತಿಯ  ತಮ್ಮ ಜಗನ್ನಾಥ ಎಂಬುವವರು ಯಾವಾಗಲೂ ಬಂದಾಗಲೆಲ್ಲಾ ಗಲಾಟೆ ಮಾಡುತ್ತಿದ್ದು, ದಿನಾಂಕ 11/08/2021 ರಂದು ಬೆಳಿಗ್ಗೆ ಕೂಡಾ ಗಲಾಟೆ ಮಾಡಿ ಅವಾಚ್ಯವಾಗಿ ಬೈದು ಹೋಗಿದ್ದು, ಸಂಜೆ 6:30 ಗಂಟೆ ಸಮಯಕ್ಕೆ ಮನೆಗೆ ಬಂದವನು ಮತ್ತೆ ಗಲಾಟೆ ಮಾಡಿ ಹೊಡೆಯಲು ಬಂದಾಗ ಪಿರ್ಯಾದಿದಾರರು ಅಲ್ಲಿಂದ ಹೋಗಲು ನೋಡಿದಾಗ ತಡೆದು ನಿಲ್ಲಿಸಿ ಕೈಯಿಂದ ಹೊಡೆದು ದೂಡಿ ಅಲ್ಲಿದ್ದ ಕತ್ತಿಯಿಂದ ಹೊಡೆಯಲು ಬಂದಾಗ ಪಿರ್ಯಾದಿದಾರರ ಹೆಂಡತಿ ಮತ್ತು ಆತ್ತೆ ರಾಧಾರವರು ತಪ್ಪಿಸಲು ಬಂದಾಗ ಪಿರ್ಯಾದಿದಾರರ ಎಡ ಕಾಲಿಗೆ ಕತ್ತಿ ತಾಗಿದ್ದು, ಅಲ್ಲಿದ್ದ ಹೆಂಡತಿ ಮತ್ತು ಆತ್ತೆ ರಾಧಾರವರು ಹೊಡೆಯುವುದನ್ನು ತಪ್ಪಿಸಿದಾಗ ಅವಚ್ಯವಾಗಿ ಬೈದು ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 150/2021 ಕಲಂ: 341, 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
     

ಇತ್ತೀಚಿನ ನವೀಕರಣ​ : 12-08-2021 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080