ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಮಣಿಪಾಲ: ದಿನಾಂಕ 11/08/2021  ರಂದು  ಮಧ್ಯಾಹ್ನ 3:00 ಗಂಟೆ ಸಮಯಕ್ಕೆ   ಬಂಟ್ವಾಳ್‌ ಅಬ್ದುಲ್ ಅಬ್ಬಾಸ್‌ ರವರು   KA 20 EM 3992 ನೇ  ಕಾರ್‌‌ ನಲ್ಲಿ  ಅಲೆವೂರು- ಮಣಿಪಾಲ ಮುಖ್ಯ ರಸ್ತೆಯಲ್ಲಿ ಮಣಿಪಾಲದ ಕಡೆಗೆ ಹೋಗುತ್ತಿದ್ದಾಗ, ದಶರಥನಗರ ಎಂ.ಎಂ ಟವರ್ ಬಳಿ ಮಣಿಪಾಲ ಕಡೆಯಿಂದ ಅಲೆವೂರು ಕಡೆಗೆ  KA19 ME  6114 ನೇ  ಕಾರನ್ನು ಅದರ  ಚಾಲಕಿಯಾದ ಮಾದವಿ ಎಂ.ಆರ್ ರವರು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಭಾಗಕ್ಕೆ ಚಾಲನೆ ಮಾಡಿಕೊಂಡು ಬಂದು  ಬಂಟ್ವಾಳ್‌ ಅಬ್ದುಲ್ ಅಬ್ಬಾಸ್‌ ರವರ ಸ್ಕೂಟರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಬಂಟ್ವಾಳ್‌ ಅಬ್ದುಲ್ ಅಬ್ಬಾಸ್‌ ರವರು  ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಹಲ್ಲು ಮುರಿದು, ಮೈ ಕೈಗೆ ತರಚಿದ ಗಾಯ ಹಾಗೂ  ಎದೆಗೆ ಗುದ್ದಿದ ಗಾಯ ಉಂಟಾಗಿರುತ್ತದೆ,  ಅವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು  ರಾತ್ರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕರೆದುಕೊಂಡು ಹೋಗಲಾಗಿರುತ್ತದೆ. ರಾತ್ರಿ ಸುಮಾರು 10:30 ಗಂಟೆ ಸಮಯಕ್ಕೆ ಬಂಟ್ವಾಳ್‌ ಅಬ್ದುಲ್ ಅಬ್ಬಾಸ್‌ ರವರು ತೀವ್ರವಾಗಿ ಅಸ್ವಸ್ಥಗೊಂಡವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ  ವೈದ್ಯಾಧಿಕಾರಿಯವರು  ಅಬ್ದುಲ್ ಅಬ್ಬಾಸ್‌ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2021 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಫಿರ್ಯಾದಿದಾರರಾದ ರೇವತಿ ಹೆಚ್.ಎಂ ಇವರು ದಿನಾಂಕ 12/08/2021 ರಂದು ಬೆಳಿಗ್ಗೆಯ ಸಮಯ ತನ್ನ ಬಾಬ್ತು KA 20 EL 4617  ನೇ ಸ್ಕೂಟರ್ ನ್ನು ಪೆರ್ಡೂರು ಕಡೆಯಿಂದ ಹೆಬ್ರಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದು. ಅವರು ಸಮಯ ಸುಮಾರು 09:30 ಗಂಟೆಗೆ ಹೆಬ್ರಿ ಗ್ರಾಮದ ಕನ್ಯಾನದ ಬಳಿ ಎಸ್.ಕೆ ಫರ್ನಿಚರ್ಸ್ ಎದುರು ತಲುಪುವಾಗ ಅವರ ಹಿಂದಿನಿಂದ KA 20 MC 7025 ನೇ ಕಾರನ್ನು ಅದರ ಚಾಲಕ ತ್ರಿವಿಕ್ರಮ ರಾವ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಓವರ್ ಟೇಕ್ ಮಾಡಿ ಸ್ಕೂಟರ್ ನ ಬಲಬದಿಗೆ ಢಿಕ್ಕಿ ಪಡಿಸಿದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು. ಅವರ ಬಲಕಾಲಿಗೆ, ಬಲಕೈ ಹಾಗೂ ಕಣ್ಣಿನ ಭಾಗಕ್ಕೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಕಾರ್ಕಳ ತಾಲೂಕು, ಬೆಳ್ಮಣ್ ಗ್ರಾಮದ ಬೆಳ್ಮಣ್ ಎಂಬಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಪ್ರಹ್ಲಾದ್ ಸರಕಾರ್, ಪ್ರಾಯ 23 ವರ್ಷ ಎಂಬಾತನು ಎಡ್ವರ್ಡ್ ಮಿಸ್ಕಿತ್ ಎಂಬವರ ಮಾಲಕತ್ವದ ಹಾಗೂ ಚೌಡಪ್ಪ ಗಚ್ಚಣ್ಣನವರ್ ಎಂಬವರು ಕಂಟ್ರಾಕ್ಟರ್ ಆಗಿರುವ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಸದರಿ ನಿರ್ಮಾಣ ಹಂತದಲ್ಲಿ ಇದ್ದ ಕಟ್ಟಡದಲ್ಲಿಯೇ ಕೆಲಸ ಮಾಡುವ  ಕೆಲಸಗಾರರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದು, ಪ್ರಹ್ಲಾದ್ ಸರಕಾರ್ ಈತನು ಸದರಿ ಕಟ್ಟಡದಲ್ಲಿಯೇ ಉಳಕೊಂಡಿದ್ದು, ಇದಕ್ಕೆ ಯಾವುದೇ ರಕ್ಷಣಾ ವ್ಯವಸ್ಥೆ ಮಾಡದ ಕಾರಣ ನಿನ್ನೆ ದಿನಾಂಕ 11/08/2021 ರಂದು ಆತನು ವಾಸ ಮಾಡಿಕೊಂಡಿದ್ದ ನಿರ್ಮಾಣ ಹಂತದ ಕಟ್ಟಡದ ಮೊದಲನೆಯ ಮಹಡಿಯಿಂದ  ಮಧ್ಯಾಹ್ನ 2:30 ಗಂಟೆಗೆ ಕೆಳಕ್ಕೆ ಬಿದ್ದು ಮೃತಪಟ್ಟಿದ್ದು, ಈ ಘಟನೆಗೆ ಕಟ್ಟಡ ಮಾಲೀಕರಾದ ಎಡ್ವರ್ಡ್ ಮಿಸ್ಕಿತ್ ಹಾಗೂ ಕಂಟ್ರಾಕ್ಟರ್ ಚೌಡಪ್ಪ ಗಚ್ಚಣ್ಣನವರ್ ಇವರ ನಿರ್ಲಕ್ಷತನವೇ ಕಾರಣ ಆಗಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ: 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಫಿರ್ಯಾದಿ ಸುಜಾತ ಇವರು ಹಾಗೂ ಅವರ ಗಂಡ ರಾಘವೇಂದ್ರ ಗಾಣಿಗರವರು ಕಾಳಾವರದ ಶಾಲೆಯ ಬಳಿ ನಂದಿಕೇಶ್ವರ ಹೋಟೆಲ್ ನಡೆಸಿಕೊಂಡಿದ್ದು  ದಿನಾಂಕ 11/08/2021 ರಂದು ಮಧ್ಯಾಹ್ನ 03:00 ಗಂಟೆಗೆ ಉಡುಪಿಗೆ ಹೋಗಿ ಬರುತ್ತೇನೆ ಎಂಬುದಾಗಿ ರಾಘವೇಂದ್ರ ಗಾಣಿಗರವರು ಹೆಂಡತಿ ಸುಜಾತ ರವರಿಗೆ ಹೇಳಿ ಹೋಗಿದ್ದು ಸಂಜೆ  06:00 ಗಂಟೆಗೆ ಹೆಂಡತಿಗೆ ಪೋನ್ ಮಾಡಿ  ನೀನು ಹೋಟೆಲ್ ಬಾಗಿಲು ಹಾಕಿ ರಿಕ್ಷಾ ಮಾಡಿಕೊಂಡು ಮನೆಗೆ ಹೋಗು ನಾನು  ಬರಲು ತಡವಾಗುತ್ತದೆ ಎಂಬುದಾಗಿ ಹೇಳಿ ಪೋನ್ ಕಟ್‌ ಮಾಡಿರುತ್ತಾರೆ. ನಂತರ ಮನೆಗೆ ಬಾರದೆ ಇದ್ದು ರಾತ್ರಿ 08:30 ಕ್ಕೆ ಪೋನ್ ಮಾಡಿದಾಗ ಮೊಬೈಲ್ ಸ್ವಿಚ್‌ ಆಫ್‌ ಆಗಿದ್ದು ಈ ಬಗ್ಗೆ ನೆರೆಕೆರೆಯಲ್ಲಿ  ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲ ದಿನಾಂಕ 12/08/2021 ರಂದು ಹುಡುಕಾಡುತ್ತಿರುವಾಗ ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಸ್ವಲ್ಪ ದೂರ ಇರುವ ಹಾಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  20/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-08-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080