ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರತ್ನಾಕರ (45), ತಂದೆ: ಗೋವಿಂದ, ವಾಸ: ಮನೋಡು ಗುಂಡ್ಮಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಸುಧಾಕರ ಪೂಜಾರಿ (43) ಇವರು ಕಾರ್ಕಡ ಭಟ್ರಕಟ್ಟೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಪರೋಟ ವ್ಯಾಪಾರ ಮಾಡಿಕೊಂಡಿರುತ್ತಾರೆ . ಪರೋಟ ವ್ಯಾಪಾರಕ್ಕೆ ದೊಡ್ಡ ಪ್ರಮಾಣದ  ಬಂಡವಾಳ ಹೂಡಿದ್ದು ಇತ್ತೀಚೆಗೆ 3 ವರ್ಷಗಳಿಂದ  ವ್ಯಾಪಾರ ಸರಿಯಾಗಿ ಆಗದೇ  ಸಾಲದಿಂದ  ತೊಂದರೆ ಅನುಭವಿಸುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು 15:30 ಗಂಟೆಯಿಂದ 16:30 ಗಂಟೆಯ ಮಧ್ಯಾವಧಿಯಲ್ಲಿ ಪರೋಟ  ಮಾಡುವ  ಶಡ್ ನಲ್ಲಿರುವ ಕಿಟಕಿಯ ಸರಳಿಗೆ ಗೋಣಿ ಹಗ್ಗ ಮತ್ತು  ನೈಲಾನ್ ರೋಪ್ ಕಟ್ಟಿ ಕುತ್ತಿಗೆಗೆ  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಗಣೇಶ್ ನಾಯಕ್ (22), ತಂದೆ: ಪಾಂಡುರಂಗ ನಾಯಕ್, ವಾಸ: ಮಜಲು ಹೌಸ್ 80 ಬಡಗುಬೆಟ್ಟು, ಪರ್ಕಳ ಪೋಸ್ಟ್ , ಉಡುಪಿ ತಾಲೂಕು ಇವರ ತಂದೆ ಪಾಂಡುರಂಗ ನಾಯಕ್ (54) ಇವರು ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 09/07/2022 ರಂದು ರಾತ್ರಿ ತಮ್ಮ ಮೂಲಮನೆಯಲ್ಲಿ ದೈದದ ಪೂಜಾ ಕಾರ್ಯವನ್ನು ಮುಗಿಸಿ 09:15 ಗಂಟೆಗೆ ತಮ್ಮ ಮನೆಯ ಅಂಗಳ ತಲುಪಿದಾಗ ಪಾಂಡುರಂಗ ನಾಯಕ್ ರವರು ಒಮ್ಮೆಲೇ ಸುಸ್ತಾಗಿ  ಕುಸಿದು ಬಿದ್ದಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯ ಕ್ಯಾಜ್ವಲಟಿ ಐಸಿಯು ಗೆ ದಾಖಲಿಸಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ  ಪಾಂಡು ರಂಗ ನಾಯಕ್ ರವರು ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 11/07/2022 ರಂದು ಸಂಜೆ 06:05 ಗಂಟೆಗೆ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ, ಪಾಂಡುರಂಗ ನಾಯಕ್ ರವರಿಗೆ ಅವರ ಮನೆಯ ತೋಟದಲ್ಲಿ ಯಾವುದೋ ವಿಷದ ಹಾವು ಕಚ್ಚಿಯೋ ಅಥವಾ ಅನಾರೋಗ್ಯದಿಂದಲೋ ಮೃತಪಟ್ಟಿರ ಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 24/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 11/07/2022 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರಿಗೆ ಕುಂದಾಪುರ ತಾಲೂಕು ಕಸಬ ಗ್ರಾಮ ವ್ಯಾಪ್ತಿಯ ಶಾಸ್ತ್ರೀ ವೃತ್ತದ ಬಳಿ ಫ್ಲೈ ಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ  ಬಂದ ಮಾಹಿತಿಯಂತೆ ದಾಳಿ ಮಾಡಿ ಮಟ್ಕಾ ಬರೆಯುತ್ತಿದ್ದ ಸುರೇಶ ದೇವಾಡಿಗ (48), ತಂದೆ: ದಿ. ನಾರಾಯಣ ದೇವಾಡಿಗ, ವಾಸ: ಮದ್ದುಗುಡ್ಡೆ ಹೊಸಕೇರಿ ಕುಂದಾಪುರ ಕಸಬಾ ಗ್ರಾಮ  ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ಎಂಬಾತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 500/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶಾಹಿದ ಬಾನು (25). ತಂದೆ: ಮೊಹಮ್ಮದ್ ಶಾರೀಕ್, ಮನೆ ನಂಬ್ರ:  1-4-183 ಎ, ಕೌಸರ್ ಮಂಜಿಲ್, ಮಸೀದಿಯ ಬಳಿ, ದೊಡ್ಡಣಗುಡ್ಡೆ ಅಂಚೆ,ಕುಂಜಿಬೆಟ್ಟು ಉಡುಪಿ ತಾಲೂಕು, ಮತ್ತು ಜಿಲ್ಲೆ ಇವರು 1 ನೇ  ಅಪಾದಿತ ಮೊಹಮ್ಮದ್ ಶಾರೀಕ್, ತಂದೆ:ಅಬೂಬಕ್ಕರ್ ಎಂಬಾತನೊಂದಿಗೆ ಪ್ರೀತಿಸಿ ಗುರು ಹಿರಿಯರು ನಿಶ್ಚಯಿಸಿದಂತೆ ದಿನಾಂಕ 23/10/2020 ರಂದು  ಮುಸ್ಲಿಂ ಸಂಪ್ರದಾಯದಂತೆ 10 ಪವನ್ ಚಿನ್ನಾಭರಣ ಹಾಗೂ 3,00,000/- ಹಣವನ್ನು  ಪಿರ್ಯಾದಿದಾರರ ಮನೆಯವರೇ ಖರ್ಚು  ಮಾಡಿ ಮದುವೆಯನ್ನು ಮಾಡಿದ್ದು, ಮದುವೆಯ ನಂತರ  ಪಿರ್ಯಾದಿದಾರರು  1ನೇ ಆಪಾದಿತನ ಮನೆಯಾದ  ಕುಕ್ಕುಡೆಯಲ್ಲಿ  ವಾಸಮಾಡಿಕೊಂಡಿದ್ದು, ಇವರ ವೈವಾಹಿಕ ಜೀವನದಲ್ಲಿ 10 ತಿಂಗಳ ಹೆಣ್ಣು ಮಗು  ಇರುತ್ತದೆ. ಅಪಾದಿತನು ಪಿರ್ಯಾದಿದಾರರು ತಂದ ವರದಕ್ಷಿಣೆ ಕಡಿಮೆ ಆಯಿತೆಂದು  ಹಾಗೂ ಇನ್ನೂ ಹೆಚ್ಚಿನ ಚಿನ್ನಾಭರಣಕ್ಕಾಗಿ ಹಾಗೂ ಹಣಕ್ಕೆ  ಬೇಡಿಕೆ ಇಟ್ಟು ಇದಕ್ಕೆ ಪಿರ್ಯಾದಿದಾರರು ಒಪ್ಪದಿದ್ದಾಗ ಆಪಾದಿತರಾದ 1. ಮೊಹಮ್ಮದ್ ಶಾರೀಕ್,  2.ಅಬೂಬಕ್ಕರ್ ,3.ಜುಬೇದ(45), ಗಂಡ: ಅಬೂಬಕ್ಕರ್, 4. ಅಲ್  ಸುಹೇಬ್ (30), ತಂದೆ: ಅಬೂಬಕ್ಕರ್, 5.ಅಲ್ ಸುಹಾನ್ (28), ತಂದೆ: ಅಬೂಬಕ್ಕರ್, 6. ಅಲ್ ಸಿಮಾನ್ (26), ತಂದೆ: ಅಬೂಬಕ್ಕರ್, ಮೇಲಿನ ಎಲ್ಲರ ವಾಸ: ಮನೆ ನಂಬ್ರ: 1/107/7 ಸೊಯಾಬ್ ಮಂಜಿಲ್, ಕುಕ್ಕುಡೆ, ಹಾರಾಡಿ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು  ಹಲ್ಲೆ ಮಾಡಿ  ಅವಾಚ್ಯ ಶಬ್ದದಿಂದ ಬೈದು ಕೊಲೆ ಬೆದರಿಕೆಯನ್ನು  ಹಾಕಿ ದೈಹಿಕ ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಮದುವೆಯ ಮುಂಚೆಯೇ  1 ನೆ ಆರೋಪಿ ಸುಳ್ಳು ಹೇಳಿ ನಂಬಿಸಿ ಪಿರ್ಯಾದಿದಾರರಿಂದ 2 ಚೈನ್ ಮತ್ತು 2 ಕಿವಿ ಓಲೆಯನ್ನು   ಹಾಗೂ ಮದುವೆಯ ನಂತರ ಎಲ್ಲಾ ಚಿನ್ನಾಭರಣಗಳನ್ನು ತೆಗೆದುಕೊಂಡಿರುತ್ತಾರೆ. 7  ನೇ ಆಪಾದಿತ ಸುಬಾನ್(48), ತಂದೆ: ಜಮೀಲಾ, ವಾಸ:ಹೊನ್ನಾಳ, ಹಾರಾಡಿ,ಬ್ರಹ್ಮಾವರ  ತಾಲೂಕು, ಉಡುಪಿ ಜಿಲ್ಲೆ ಇತರ ಆಪಾದಿತರಿಗೆ ಪಿರ್ಯಾದಿದಾರರೊಂದಿಗೆ ಗಲಾಟೆ ಮಾಡಲು ಪ್ರಚೋದನೆಯನ್ನು  ನೀಡುತ್ತಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಹಿಳಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022  ಕಲಂ: 498(ಎ), 406,323,504,506, ,109,ಜೊತೆಗೆ 149  ಐ.ಪಿ.ಸಿ ಮತ್ತು ಕಲಂ: 3, 4 ಡಿಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 08/06/2022 ರಂದು ಪಿರ್ಯಾದಿದಾರರಾದ ವಿರೇಶ್ (55), ತಂದೆ: ರಾಜೀವಪ್ಪ, ವಾಸ: ಜನವರ ಕಟ್ಟೆ, ಪ್ರಸಾದ್ ನಗರ, ಬೆಳಪು, ಕಾಪು ತಾಲೂಕು ಇವರಿಗೆ P.M. Business Loan Yojna ಅಡಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಸಂದೇಶ ಬಂದಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಸಂದೇಶದಲ್ಲಿದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಲ್ಲಿ ಅಪರಿಚಿತ ವ್ಯಕ್ತಿಗಳು ತಾವು P.M. Business Loan Yojna ಸಂಸ್ಥೆಯವರು ಎಂದು ನಂಬಿಸಿ, ಕ್ಲಿಯರೆನ್ಸ್ ಹಾಗೂ ಇತರೇ ಕಾರಣಗಳಿಗಾಗಿ ಪಿರ್ಯಾದಿದಾರರಿಂದ ರೂಪಾಯಿ 2,62,700/- ಹಣವನ್ನು ಆರೋಪಿಗಳ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಪಿರ್ಯಾದಿದಾರರಿಗೆ ಸಾಲವನ್ನೂ ನೀಡದೇ ನೀಡಿದ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ : 66(c), 66(d) ಐ.ಟಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 12-07-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080