ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿ ಟ್ರೀಶಾ ಡಿಸೋಜಾ (20), ತಂದೆ: ಥೋಮಸ್‌  ಡಿಸೋಜಾ, ವಾಸ: ಟ್ರಿನಿಟಿ ಹೌಸ್‌, ಗೊಳಿಕಟ್ಟೆ, ಹಾವಂಜೆ ಗ್ರಾಮ,  ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮದ ಗೊಳಿಕಟ್ಟೆ ಎಂಬಲ್ಲಿರುವ ಟ್ರಿನಿಟಿ ಹೌಸ್‌ ನಲ್ಲಿ    ವಾಸವಾಗಿದ್ದು ಇವರು ಹಾಗೂ ಅವರ ತಾಯಿ ಮನೆಗೆ ಬೀಗ ಹಾಕಿ ಪೇತ್ರಿಯಲ್ಲಿರುವ ಅವರ ಅಜ್ಜಿ ಮನೆಯ ಗೃಹ ಪ್ರವೇಶಕ್ಕೆ  ಹೋದ ಸಮಯ ದಿನಾಂಕ 08.07.2022 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 12.07.2022ಬೆಳಿಗ್ಗೆ 07:50 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಮನೆಯ ಎದುರು ಬಾಗಿಲನ್ನು ಕಬ್ಬಿಣದ ಸಲಕೆಯಿಂದ ಮೀಟಿ  ಒಡೆದು ಮನೆಯ ಒಳಗೆ ಹೋಗಿ ಎರಡೂ ಬೆಡ್‌ ರೂಮ್‌, ಅಡುಗೆ ಕೋಣೆ , ಹಾಲ್‌ನ ಸೆಲ್ಪನ್ನು ಜಾಲಾಡಿ , ಬೆಡ್‌ ರೂಮ್‌ನ ಲೋಕರ್‌ನ್ನು ಒಡೆದು, ತೆರೆದು ಅದರೊಳಗಿದ್ದ 2 ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಉಂಗುರವು 15 ಗ್ರಾಮ್‌ ಆಗಿದ್ದು ಅಂದಾಜು ಮೌಲ್ಯ ಸುಮಾರು ರೂ. 60,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 116/2022 ಕಲಂ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಲುವಿಸ್ ಡಿಸೋಜಾ  57 ವರ್ಷ ತಂದೆ:ಮಾರ್ಸೆಲ್ ಡಿಸೋಜಾ  ವಾಸಳ ಬುಡುಕುಬೆಟ್ಟು  ಸಾಸ್ತಾನ ಇವರು ಬ್ರಹ್ಮಾವರ ತಾಲೂಕು ಪಾಂಡೇಶ್ವರ  ಗ್ರಾಮದ ಸಾಸ್ತಾನ  ಸೈಂಟ್ ಆಂಟನಿ ಆಂಗ್ಲ ಮಾಧ್ಯಮ ಶಾಲೆಯ ಮ್ಯಾನೇಜರ್ ಆಗಿರುತ್ತಾರೆ. ಸದ್ರಿ ಶಾಲೆಗೆ ದಿನಾಂಕ 11/07/2022 ರಂದು ಸಂಜೆ 5.30 ಗಂಟೆಗೆ  ಎಂದಿನಂತೆ ಶಾಲಾ ಸಿಬ್ಬಂದಿಯವರು ಬೀಗ ಹಾಕಿ ಹೋಗಿದ್ದು, ಬೆಳಿಗ್ಗೆ ಬಂದು ನೋಡುವಾಗ ಬೀಗ ಒಡೆದಿರುವುದು ಕಂಡು ಬಂದಿರುತ್ತದೆ. ದಿನಾಂಕ 11/07/2022 ರಂದು ಸಂಜೆ 5.30 ಗಂಟೆಯಿಂದ ದಿನಾಂಕ 12/07/2022 ರಂದು ಬೆಳಿಗ್ಗೆ 07.30 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು  ಶಾಲೆಯ ಬೀಗ ಒಡೆದು ಹಾಗೂ ಕಛೇರಿಯಲ್ಲಿರುವ ಅಲ್ಮೇರಾ ಗಳನ್ನು  ಒಡೆದು ಡ್ರಾವರ್ ನಲ್ಲಿದ್ದ  ಅಂದಾಜು ಸುಮಾರು 30000 ಹಣ ಹಾಗೂ ಮೇಜಿನ ಮೇಲಿದ್ದ ಸ್ಯಾಮ್ ಸಂಗ್ ಮೊಬೈಲ್  ಅಂದಾಜು ಮೌಲ್ಯ 10000 ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ ಈ ಬಗ್ಗೆ ಕೋಟ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 110 /2022 ಕಲಂ: 454.457.380  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕಾರ್ಕಳ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ 341/2021 ರಂತೆ ಪಿರ್ಯಾದಿ ಶ್ರೀ ತಿಲಕ್ ರಾಜ್ ತಂದೆ: ದಿ: ಬಿ ಸುಂದರ್ ಪ್ರಾಯ:50 ವರ್ಷ ವಾಸ: ದುರ್ಗಾಶಿವಗುರು, ಕಿಂಗ್ಸ್ ಲೇಔಟ್, ಕಾವೂರು ಅಂಚೆ ಮತ್ತು ಗ್ರಾಮ ಕಾರ್ಕಳ ಇವರು  ನಂದಿಳಿಕೆ ಗ್ರಾಮದ ಸರ್ವೆ ನಂಬ್ರ 102-05 ರಲ್ಲಿ 69 ಸೆಂಟ್ಸ್ ಜಾಗವನ್ನು ಹೊಂದಿದ್ದು ಅವರ ಸ್ನೇಹಿತರಾದ ಶ್ರೀ ಸತೀಶ್ ಆಚಾರ್ಯ ರವರಿಗೆ ಹೊಟೆಲ್ ಉದ್ಯಮದಲ್ಲಿ ಹಣಕಾಸಿನ ಅಡಚಣೆ ಉಂಟಾಗಿದ್ದರಿಂದ ಪಿರ್ಯಾದುದಾರರು ಎರಡನೇ ಆರೋಪಿ ಶ್ರೀನಾಥ್ ಅಡ್ಯಂತಾಯ ಇವರನ್ನು ಸಂಪರ್ಕಿಸಿ 500000/- ರೂ ಹಣವನ್ನು ಸಾಲ ನೀಡುವಂತೆ ಕೋರಿಕೊಂಡಾಗ ಆರೋಫಿತನು ಸೂಕ್ತ ಸ್ಥಿರಾಸ್ತಿಯ ದಾಖಲೆಗಳನ್ನು ಅಡವಿಟ್ಟಲ್ಲಿ ನೀಡುವುದಾಗಿ ಹೇಳಿದ್ದು. ಅದಕ್ಕೆ ಒಪ್ಪಕೊಂಡ ಪಿರ್ಯಾದುದಾರರು ನಂದಳಿಕೆ ಗ್ರಾಮದ ಜಾಗವನ್ನು ಅಡಮಾನವಿರಿಸಿ 500000/- ರೂ ಹಣವನ್ನು ಸಾಲವಾಗಿ ಪಡೆದುಕೊಂಡು ಈ ಬಗ್ಗೆ ಜಾಗದ ದಾಖಲಾತಿಗೆ ಒಂದನೇ ಆರೋಪಿ ಶ್ರೀಮತಿ ಪ್ರಶೀಲಾ ಅಡ್ಯಂತಾಯ ಇವರ ಹೆಸರಿಗೆ ಜಿ,ಪಿ,ಏ ಮಾಡಿಸಿ ಮೂಲ ದಾಖಲಾತಿಗಳನ್ನು ಪಡೆದು ಸಾಲವನ್ನು ಪಡೆದುಕೊಂಡಿದ್ದು ಸಾಲ ಮರುಸಂದಾಯ ಆದ ಬಳಿಕ ಕೂಡಾ ಆರೋಫಿತರು ಜಾಗದ ದಾಖಲಾತಿಗಳನ್ನು ಪಿರ್ಯಾದುದಾರರಿಗೆ ವಾಪಾಸ್ಸು ನೀಡದೇ ಪಿರ್ಯಾದುದಾರರು ಮಾಡಿಕೊಟ್ಟ ಜಿ,ಪಿ,ಎ ಯನ್ನು ದುರುಪಯೋಗಪಡಿಸಿ ಪಿರ್ಯಾದುದಾರರ ನಂದಳಿಕೆ ಜಾಗದಲ್ಲಿ 30 ಸೆಂಟ್ಸ್ ಜಾಗವನ್ನು ಆರೋಫಿ 01 ನೇಯವರು ತನ್ನ ಹೆಸರಿಗೆ ಮಾಡಿಕೊಂಡು ಆ ಜಾಗವನ್ನುಬೇರೆಯವರಿಗೆ ಮಾರಾಟ ಮಾಡಿ ಪಿರ್ಯಾದುದಾರರಿಗೆ ವಂಚನೆ ಮಾಡಿರುವುದು ಅಲ್ಲದೇ ಜಾಗದ ದಾಖಲಾತಿಯನ್ನು ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2022 ಕಲಂ 406,409,420,504,506  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

   ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿ ದುರ್ಗವ್ವ (33) ಗಂಡ: ಕನಕಪ್ಪ ದಂಡಿನ ವಾಸ: ಕೆಂಚಮ್ಮ ದೇವಿ ಗುಡಿಯ ಹತ್ತಿರ ಮುಗಳಿ ಗ್ರಾಮ ರೋಣ ತಾಲೂಕು ಗದಗ ಜಿಲ್ಲೆ ಇವರು ಅವರ ಗಂಡನಾದ ಕನಕಪ್ಪ ದಂಡಿನ ಪ್ರಾಯ 38 ವರ್ಷ ಎಂಬುವರೊಂದಿಗೆ ಕಳೆದ 2 ತಿಂಗಳಿನಿಂದ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಬಂದು ಮಂಗಳೂರಿನ ಪಂಪ್ ವೆಲ್ ಬಳಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಮಳೆಯಾದ ಕಾರಣ ಸ್ವಂತ ಊರಿನಲ್ಲಿ ಕೃಷಿ ಕೆಲಸ ಆರಂಭವಾದ ಕಾರಣ ಊರಿಗೆ ಹೋಗುವರೇ ನಿನ್ನೆ ದಿನ ದಿನಾಂಕ 11-07-2022 ರಂದು ರಾತ್ರಿ 7:30 ಗಂಟೆಗೆ ಮಂಗಳೂರಿನಿಂದ ಬಸ್ಸಿನಲ್ಲಿ ಊರಿಗೆ ಹೊರಟು ಕಾಪುವಿನ ಉದ್ಯಾವರ ಸಮೀಪ ರಾತ್ರಿ ಸುಮಾರು 9:00 ಗಂಟೆಗೆ ಹೋಗುತ್ತಿರುವಾಗ ಪಿರ್ಯಾದಿದಾರರ ಗಂಡನಿಗೆ ಎದೆನೋವು ಕಾಣಿಸಿಕೊಂಡಿದ್ದು ಈ ಬಸ್ಸಿನ ಕಂಡೆಕ್ಟರ್ ಗೆ ತಿಳಿಸಿ ಅವರು ಚಾಲಕರಿಗೆ ತಿಳಿಸಿ ನಂತರ ಜಿಲ್ಲಾ ಸರಕಾರಿ ಆಸ್ಪತ್ರೆ ಅಜ್ಜರಕಾಡು ಉಡುಪಿಯ ವೈದ್ಯಾಧಿಕಾರಿಯವರಿಗೆ ತೋರಿಸಿ ಪರೀಕ್ಷಿಸಿದಾಗ ವೈದ್ಯರು ರಾತ್ರಿ 9:30 ಗಂಟೆಗೆ ಪಿರ್ಯಾದಿದಾರರ ಗಂಡನಾದ ಕನಕಪ್ಪ ದಂಡಿನ ಎಂಬುವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಗಂಡನವರಿಗೆ ಮಂಗಳೂರಿನಿಂದ ಸ್ವಂತ ಊರಾದ ಗುಲ್ಬರ್ಗಕ್ಕೆ  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾಗಿದ್ದು ಅವರ ಮರಣದಲ್ಲಿ ಬೇರೆ ಯಾವುದೇ ಕಾರಣ ಇರುವುದಿಲ್ಲ  ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 23/2022 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ ತರುಣ್ ಶೆಟ್ಟಿ (20) ತಂದೆ: ರಮೇಶ್  ಶೆಟ್ಟಿ ವಾಸ: ರತ್ನ ನಿಲಯ ಕುಕ್ಕುತೋಟ ಶೆಟ್ಟಿ ಮನೆ, ಕೊಪ್ಪಲಂಗಡಿ, ಮಲ್ಲಾರು ಗ್ರಾಮ ಇವರ ತಂದೆ ರಮೇಶ್ ಶೆಟ್ಟಿ (57)  ದಿನಾಂಕ 11/07/2022 ರಂದು ರಾತ್ರಿ 10:30 ಗಂಟೆಗೆ  ಊಟ ಮಾಡಿ ಮನೆಯವರೊಂದಿಗೆ ಮಾತನಾಡಿಕೊಂಡಿರುವಾಗ ಎದೆನೋವು ಆಗುತ್ತದೆ ಎಂದು ಹೇಳಿ ತೀವ್ರವಾಗಿ ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರ ತಾಯಿ ಮತ್ತು ನೆರೆಕರೆಯವರು ಸೇರಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುವುದಾಗಿ ತನ್ನ ಅಜ್ಜಿ ಮನೆ ಕೆಮ್ತೂರಿನಲ್ಲಿದ್ದ ಪಿರ್ಯಾದಿದಾರರಿಗೆ ಅವರ ತಾಯಿ ಪೋನ್ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋದಲ್ಲಿ ಅಲ್ಲಿನ ವೈದ್ಯರು ರಾತ್ರಿ 11:45 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂದೆ ರಮೇಶ್ ಶೆಟ್ಟಿ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ  ತಂದೆಯವರಿಗೆ ಬಿಪಿ, ಕಿಡ್ನಿ, ಹಾಗೂ ಹರ್ನಿಯಾದ ಸಮಸ್ಯೆ ಇದ್ದು, ಅವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಅವರ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 24/2022 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.

     

ಇತ್ತೀಚಿನ ನವೀಕರಣ​ : 12-07-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080