ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ: ದಿನಾಂಕ 11/07/2021 ರಂದು ಬೆಳಗ್ಗೆ 11:00 ಗಂಟೆಗೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಮಿಯಾರು ಹೊಳೆಯ ಬದಿ ಪಿಕಫ್ ಟೆಂಪೋ ನಂಬ್ರ KA-20-A-9603 ನೇಯದರ ಚಾಲಕ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಿಯಾರು ಹೊಳೆಯ ಬದಿಯಲ್ಲಿರುವ 11 ಕೆವಿ ಹಾಗೂ ಎಲ್ ಟಿ ಮಾರ್ಗದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 9M PSC- 2 ಕಂಬಗಳು ತುಂಡಾಗಿದ್ದು 65,000/- ನಷ್ಠ ಸಂಭವಿಸಿರುತ್ತದೆ. ಅಪಘಾತದಿಂದ ಯಾರಿಗೂ ಯಾವುದೇ ಗಾಯ ನೋವು ಆಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 11/07/2021 ರಂದು 15:45  ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಫಾಲ್ಸ್ ಹೋಗುವ ರಸ್ತೆಯ ತಿರುವಿನಲ್ಲಿ ಪಿರ್ಯಾದಿದಾರರಾದ ಬೊಗ್ಗು (60), ತಂದೆ: ದಿ. ದಾದು, ವಾಸ: ಮತ್ತವು ಮನೆ ಕೆಮ್ಮಣ್ಣು ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ರಸ್ತೆಯನ್ನು ದಾಟುವ ಉದ್ದೇಶದಿಂದ ಎಡಭಾಗದ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ KA-20-EM-9946 ನೇ    ಸ್ಕೂಟಿ ಸವಾರನು ಆತನ ಸ್ಕೂಟಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಬಲಕೈ ಮೂಳೆ ಮುರಿತವಾಗಿ ಹಾಗೂ ತಲೆಯ ಹಿಂಭಾಗಕ್ಕೆ ರಕ್ತ ಗಾಯ ಆಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 11/07/2021 ರಂದು 17:30 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟ್ ನಲ್ಲಿ ಎಸ್ ಕೆ ಬಾರ್ಡರ್ ನಿಂದ ಸುಮಾರು 6 ಕಿ.ಮೀ ಕೆಳಗೆ ಪಿರ್ಯಾದಿದಾರರಾದ ದರ್ನಪ್ಪ (38), ತಂದೆ: ಬಾಬು, ವಾಸ: ಪೊಯ್ಯ ಗುಡ್ಡೆ ಮನೆ ಪಡಂಗಡಿ ಗ್ರಾಮ ಮತ್ತು  ಅಂಚೆ    ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರು ತನ್ನ KA-19-AC-2919ನೇ ಕಾರಿನಲ್ಲಿ ಜಯಪುರ ಕಡೆಯಿಂದ ಬರುತ್ತಿರುವಾಗ ಎದುರಿನಿಂದ KA-18-C-0410 ನೇ ಟೆಂಪೋ ಟ್ರಾವೆಲ್ಸ್ ವಾಹನದ ಚಾಲಕನು ಆತನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಬಿದ್ದ ಮರವನ್ನು ತಪ್ಪಿಸಲು ಹೋಗಿ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಚೆನ್ನರವರ ಎಡ ಭುಜ ಮೂಳೆ ಮುರಿತದ ಗಾಯ, ಕಲ್ಯಾಣಿಯವರಿಗೆ ಎಡ ಮಣಿಗಂಟು ಮೂಳೆ ಮುರಿತದ ಗಾಯ, ಪಿರ್ಯಾದಿದಾರರಿಗೂ  ಹಾಗೂ ಇತರರಿಗೆ ಗುದ್ದಿದ ಗಾಯವಾಗಿದ್ದು, ಮತ್ತು ಟೆಂಪೋ ಟ್ರಾವೆಲ್ಸ್ ನಲ್ಲಿರುವ ಕೆಲವರಿಗೆ ಚಿಕ್ಕ ಪುಟ್ಟ ಗಾಯ ಹಾಗೂ ಟ್ರಾವೆಲ್ಸ್ ಡ್ರೈವರ್ ನ ತಲೆಗೆ ಗಾಯವಾಗಿರುತ್ತದೆ, ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸ್ವಂದನಾ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 10/07/2021  ರಂದು  ಪಿರ್ಯಾದಿದಾರರಾದ ಶಿವಪ್ಪ (44), ತಂದೆ:ಸಂಗಪ್ಪ, ವಾಸ: ಗಂಗೂರು  ಗ್ರಾಮ ಕುಂಚನನೂರು ಅಂಚೆ ಮುದ್ದೆ ಬಿಹಾಲ್ ತಾಲೂಕು  ವಿಜಯಪುರ  ಜಿಲ್ಲೆ ಇವರು ಉಡುಪಿಯ  ಕೆ.ಎಸ್.ಆರ್.ಟಿ.ಸಿ  ಬಸ್ ನಿಲ್ದಾಣದ  ಬಳಿ ಮದ್ಯಾಹ್ನ 12:00 ಗಂಟೆಗೆ ನಿಂತಿರುವಾಗ KA-20-MC- 5859 ನೇ ಕಾರು ಚಾಲಕ ಆಖಿಲೇಶ ತನ್ನ  ಕಾರನ್ನು   ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳಗೆ ಚಲಾಯಿಸಿ ನಿಂತಿದ್ದ ಪಿರ್ಯಾದಿದಾರರಿಗೆ  ಡಿಕ್ಕಿ  ಹೊಡೆದ  ಪರೀಣಾಮ  ಪಿರ್ಯಾದಿದಾರರು  ರಸ್ತೆಗೆ  ಬಿದ್ದು  ಬಲಕಾಲಿನ ಮೊಳೆ ಮುರಿತ  ಉಂಟಾಗಿ  ಮಣೀಪಾಲ  ಕೆಎಂಸಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.         

ಇತ್ತೀಚಿನ ನವೀಕರಣ​ : 12-07-2021 09:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080