ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಟಿ.ಕೆ.ನಾಗರಾಜ (45) ತಂದೆ: ದಿ.ಕಾಳು ಶೆಟ್ಟಿಗಾರ ವಾಸ: ತಲ್ಲೂರು ಅಂಗಡಿ ಹೊಸಗದ್ದೆ ಅಂಚೆ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಇವರು ದಿನಾಂಕ 12/07/2021 ರಂದು KA-20-P-5696 ನೇ ಕಾರನ್ನು ಚಲಾಯಿಸಿಕೊಂಡು ಹೆಬ್ರಿ ಕಡೆಗೆ ಬರುತ್ತಿರುವಾಗ ಬೆಳಿಗ್ಗೆ ಸಮಯ ಸುಮಾರು 09:00 ಗಂಟೆಗೆ ಹೆಬ್ರಿ ಗ್ರಾಮದ ಜರವತ್ತು ತಿರುವಿನ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ವರಂಗ ಕಡೆಗೆ KA-20-B-7288 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಸತೀಶ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಟಿಪ್ಪರ್ ಲಾರಿಯ ಮುಂದಿನ ಬಲಭಾಗದ ಟೈರ್ ಒಡೆದು ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಬಲಬದಿಗೆ ಬಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ರಸ್ತೆಯ ಬದಿಯಲ್ಲಿದ್ದ ಚರಂಡಿಗೆ ಬಿದ್ದಿರುವುದಾಗಿದೆ. ಈ ಘಟನೆಯಿಂದ ಕಾರಿನ ಬಲಭಾಗದ ಡೊರ್ ಜಖಂಗೊಂಡಿದ್ದು ಯಾವುದೇ ಗಾಯ ನೋವುಗಳು ಸಂಭವಿಸಿರುವುದಿಲ್ಲ, ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 47/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಬೈಂದೂರು: ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ತಿಮ್ಮ ಪೂಜಾರಿ ಮನೆಯಿಂದ ಪಿರ್ಯಾದಿದಾರರಾದ ಶ್ರೀಮತಿ ನೀಲು (50) ತಂದೆ; ಶೇಷು ಪೂಜಾರಿ, ವಾಸ; ಬಡಯನಬಾಳಿ, ಮಸ್ಕಿ, ನಾವುಂದ ಗ್ರಾಮ, ಬೈಂದೂರು ಇವರ ಮನೆಯವರೆಗಿನ ನಾವುಂದ ಗ್ರಾಮ ಪಂಚಾಯತ್ ನ 14 ನೇ ಹಣಕಾಸು ಅನುದಾನದಲ್ಲಿ ಪಾದಚಾರಿ ರಸ್ತೆಯಾಗಿ ಅಭಿವೃದ್ದಿಪಡಿಸಿದ್ದು, ಆಪಾದಿತರು 1) ತಿಮ್ಮಪ್ಪ ಪೂಜಾರಿ 2)ರವೀಂದ್ರ 3) ರಾಜೆಂದ್ರ 4) ಶೇಷಿ ಇವರಲ್ಲರೂ ವಾಸ; ಗುಜ್ಜಾಡಿಮನೆ, ನಾವುಂದ ಗ್ರಾಮ, ಬೈಂದೂರು ತಾಲೂಕು ಇವರುಗಳು ಸಂಚು ರೂಪಿಸಿ, ಸಾರ್ವಜನಿಕರ ರಸ್ತೆಯ ಜಮೀನಿನನ್ನು ಕಬಳಿಸುವ ದುರುದ್ದೇಶದಿಂದ ಸಾರ್ವಜನಿಕರ ರಸ್ತೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿರ್ಮಿಸಿರುವ ಗಡಿ ಗುರುತು ಬೇಲಿಯನ್ನು ದಿನಾಂಕ 04/08/2020 ರ ರಾತ್ರಿ ಕಿತ್ತು ಹಾಕಿ ಬೇಲಿ ಹಾಗೂ ಗಡಿ ಗುರುತು ಕಂಬ ಹಾಗೂ ಮುಳ್ಳು ತಂತಿಗಳನ್ನು ಕದ್ದೊಯ್ದು, ಸಾರ್ವಜನಿಕರ ರಸ್ತೆಗೆ ಹಾನಿ ಮಾಡಿರುವುದಲ್ಲದೆ, ಸಾರ್ವಜನಿಕರ ಸ್ವತ್ತುಗಳನ್ನು ತೆಗೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 117/2021 ಕಲಂ: 379, 120(ಬಿ), 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-07-2021 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ