ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಲಕ್ಷ್ಮಣ ಮೊಗವೀರ (50), ತಂದೆ: ರಾಮ ಮೊಗವೀರ, ವಾಸ: ಕರಾವಳಿ, ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 10/06/2022 ರಂದು ಬೆಳಿಗ್ಗೆ 8:00  ಗಂಟೆಗೆ ಬಾವ ಹರೀಶ ರವರೊಂದಿಗೆ ಶಿರೂರಿನ ಕರಾವಳಿಗೆ ಹೋಗುವ ಸಲುವಾಗಿ ಸೆಳ್ಳೆಕುಳ್ಳಿ ಹರೀಶರವರ ಮನೆಯಿಂದ ನಡೆದುಕೊಂಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಗ್ರಾಮದ  ಗ್ರೀನ್ ವ್ಯಾಲಿ ಶಾಲೆಯ ಬಳಿ ಹೋಗುತ್ತಿರುವಾಗ ಬೈಂದೂರು ಕಡೆಯಿಂದ ಶಿರೂರು ಕಡೆಗೆ KA-20-EW-7157 ನೇ ಬೈಕ್ ಸವಾರ ವಿನೋದ ದೇವಾಡಿಗ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬರುತ್ತಿರುವಾಗ ಏಕಾಏಕಿ ದನವೊಂದು ಬೈಕ್ ಗೆ ಅಡ್ಡ ಬಂದ ಕಾರಣ ಬೈಕ್ ಸವಾರ ಆಯ ತಪ್ಪಿ  ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಬಾವ ಹರೀಶರವರಿಗೆ ಡಿಕ್ಕಿ ಹೊಡೆದ ಪರಿಣಾಮ ಹರೀಶರವರಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಗಾಯಗೊಂಡ ಹರೀಶರವರನ್ನು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 10/06/2022 ರಂದು ಮಧ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರಾದ ಗಂಗಾಧರ ಪೂಜಾರಿ (30), ತಂದೆ:ಮೂಡೂರ ಪೂಜಾರಿ, ವಾಸ ಅಯ್ಯನ ಮನೆ, ತೂದಳ್ಳಿ ಯಡ್ತರೆ ಗ್ರಾಮ. ಬೈಂದೂರು ತಾಲೂಕು ಇವರು ನಾವುಂದ ಬಸ್ ನಿಲ್ದಾಣದ  ಬಳಿ  ತನ್ನ ಸ್ನೇಹಿತ ನೊಂದಿಗೆ ಮಾತನಾಡಿ ಕೊಂಡಿರುವಾಗ  ಆರೋಪಿ KA-20-AA-7519 ನೇ ಎಸ್.ವಿ.ಎಂ.ಎಸ್  ಬಸ್ ಚಾಲಕನು ಬಸ್ಸನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾವುಂದ ಬಸ್ ನಿಲ್ದಾಣದ  ಬಳಿ  ಸ್ವಲ್ಪ  ಮುಂದಕ್ಕೆ  ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಯಾವುದೇ ಸಿಗ್ನಲ್ ನೀಡದೇ ಒಮ್ಮಲೇ ಬ್ರೇಕ್  ಹಾಕಿ ನಿಲ್ಲಿಸಿದ ಕಾರಣ ಬಸ್ಸಿನ ಹಿಂಬದಿಯಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ KA-20-ET-7934 ನೇ  ಮೋಟಾರು ಸೈಕಲಿನಲ್ಲಿ ಸಹಸವಾರಳನ್ನು ಕುಳ್ಳಿರಿಸಿ ಕೊಂಡು ಬರುತ್ತಿದ್ದ  ಸವಾರನು ಮೋಟಾರು ಸೈಕಲ್ ನ್ನು ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ  ಮುಂದಕ್ಕೆ ಹೋಗುವ ಸಮಯ ಬಸ್ಸಿನ ಬಲ ಬದಿಯ ಹಿಂಭಾಗವು ಮೋಟಾರು ಸೈಕಲಿಗೆ ತಾಗಿ ಸವಾರ ಮತ್ತು ಸಹಸವಾರಳೂ ಮೋಟಾರು ಸೈಕಲಿನೊಂದಿಗೆ ರಸ್ತೆಗೆ ಬಿದ್ದು, ಅಪಘಾತದ ಪರಿಣಾಮ ಮೋಟಾರು ಸೈಕಲ್ ಸವಾರ ಮಹಮ್ಮದ್ ರಫಿಕ್ ರವರಿಗೆ ಮುಖದ ಭಾಗಕ್ಕೆ, ಕೈ ಕಾಲುಗಳಿಗೆ ತರಚಿದ ರಕ್ತ ಗಾಯ ಮತ್ತು  ಸಹಸವಾರಳಾದ ಬಿಸ್ಮಿಲ್ಲಾ ಬೀಬಿರವರಿಗೆ  ಬಲಕಾಲಿಗೆ ಒಳ ಜಖಂ  ಆದವರನ್ನು  ಆಂಬುಲೆನ್ಸ್ ನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 116/2022 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸರಳ ಅಮ್ಮನ್ನ (39), ಗಂಡ : ಡಾಲ್ಫಿನ್ ಜೆ. ಅಮ್ಮನ್ನ, ವಾಸ : ಮೆಘಾರಿಯ ಕನ್ಯಾನ ಮೂಡಬೆಟ್ಟು ಗ್ರಾಮ ಕಟಪಾಡಿ  ಉಡುಪಿ  ಜಿಲ್ಲೆ  ಇವರ ತಂಗಿ ಶಮಿಳಾ ಕರ್ಕಡಾ (36) ಸುಮಾರು  ವರ್ಷಗಳಿಂದ ಹೆಗಲು ನೋವು ಇದ್ದು, ಇತ್ತೀಚೆಗೆ 7 ತಿಂಗಳಿನಿಂದ ತಲೆಯಲ್ಲಿ ಒಂದು ತರದಹ ಮಿಂಚು ಬರುವ ರೀತಿಯಲ್ಲಿ ನೋವು  ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 11/06/2022 ರಂದು ಪಿರ್ಯಾದಿದಾರರು ತಂಗಿ ಶಮಿಳಾ ಕರ್ಕಡ ಹಾಗೂ ಮನೆಯ  ಎಲ್ಲರೂ ಸೇರಿ ಎಂದಿನಂತೆ ಮಧ್ಯಾಹ್ನ ಊಟ ಮಾಡಿದ್ದು, ಶಮಿಳಾ ಊಟ ಬೇಗ ಮುಗಿಸಿದ್ದು ತಾನು ಉಳಿದಿದ್ದ ರೂಂನೊಳಗೆ ಹೊಗಿದ್ದು, ನಂತರ ಪಿರ್ಯಾದಿದಾರರು ಕೆಲಸದ ಬಗ್ಗೆ ಮಣಿಪಾದಲ್ಲಿರುವಾಗ ಪಿರ್ಯಾದಿದಾರರ  ತಾಯಿ ಪುಷ್ಪಾ ಸಾಲಿನ್ಸ್ರವ್ರು 16:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಿಗೆ ಕರೆ ಮಾಡಿ ಶಮಿಳಾ ರೂಮ್  ಬಾಗಿಲು ತೆರೆಯುತ್ತಿಲ್ಲಾ ಬೇಗ  ಬನ್ನಿ ಎಂದು ಹೇಳಿದ್ದು, ಪಿರ್ಯಾದಿದಾರರು ಮನೆಗೆ ಬರುವ ಹೊತ್ತಿಗೆ ತಾಯಿ ನೆರೆಕೆರೆಯವರ  ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿದ್ದು, ಶಮಿಳಾ ಕುತ್ತಿಗೆಗೆ ನೇಣು ಬಿಗಿದು ಪರಿಸ್ಥೀತಿಯಲ್ಲಿದ್ದವರನ್ನು ಕೆಳಗೆ ಇಳಿಸಿರುವುದಾಗಿ ಪಿರ್ಯಾದಿದಾರರು ಅವರ  ಗಂಡನೊಂದಿಗೆ ಮನೆಗೆ ತಲುಪಿದ ಕೂಡಲೇ ಅವರ ವಾಹನದಲ್ಲಿ17:30 ಗಂಟೆಗೆ ಮಣಿಪಾಲ  ಕೆ.ಎಮ್.ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು  ಪರೀಕ್ಷಿಸಿದ ಅಲ್ಲಿನ  ವೈದ್ಯರು ಶಮಿಳಾ ರವರು ಈಗಾಗಲೇ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16/2022 ಕಲಂ: 174 ಸಿ.ಆರ್‌.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಕೆ. ಚಂದ್ರ ಶೆಟ್ಟಿ (47), ತಂದೆ: ತೇಜಪ್ಪ ಶೆಟ್ಟಿ, ವಾಸ: ದುರ್ಗಾನುಗ್ರಹ, ಮೂಡಬೆಟ್ಟು 2ನೇ ಅಡ್ಡರಸ್ತೆ, ಕೊಡವೂರು ಗ್ರಾಮ, ಉಡುಪಿ ತಾಲೂಕು ಇವರ ಮಾಲೀಕತ್ವದ HERO CB SHINE ಮೋಟಾರ್‌ ಸೈಕಲ್‌ ನಂಬ್ರ KA-20-EL-5128 (Chassis No: ME4JC652AGT088153, Engine No: JC65ET0272936) ನೇದನ್ನು ದಿನಾಂಕ 03/06/2022 ರಂದು 15:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಮೈತ್ರಿ ಕಾಂಪ್ಲೆಕ್ಸ್‌ ಎದುರು ನಿಲ್ಲಿಸಿದ್ದು, 16:30 ಗಂಟೆಗೆ ನೋಡಲಾಗಿ, ಬೈಕ್‌ ನಿಲ್ಲಿಸಿದ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ಮೌಲ್ಯ ರೂಪಾಯಿ 50,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 11/06/2022 ರಂದು ನೂಜಾಡಿ ಜಂಕ್ಷನ್ ಬಳಿ ಇರುವ ಶ್ರೀನಿವಾಸ ದೇವಾಡಿಗರವರ ಕಟ್ಟಡದ ಹಿಂಭಾಗ ಕೆಲವು ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಬಗ್ಗೆ ಶ್ರೀಕಾಂತ್ ಕೆ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪವಿಭಾಗ ಇವರಿಗೆ ದೊರೆತ ಮಾಹಿತಿಯಂತೆ  ಸಿಬ್ಬಂದಿಯವರೊಂದಿಗೆ ನೂಜಾಡಿ ಜಂಕ್ಷನ್ ಬಳಿ ಒಂದು ಕಟ್ಟಡದ ಹಿಂಭಾಗ ಖಾಲಿ ಸ್ಥಳದಲ್ಲಿ ನೆಲದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿಕೊಂಡು 4 ಜನರು ಸುತ್ತುವರಿದು ಕುಳಿತು ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಆರೋಪಿಗಳಾದ 11 ಶ್ರೀನಿವಾಸ ದೇವಾಡಿಗ (56), ತಂದೆ : ರಾಮ ದೇವಾಡಿಗ, ವಾಸ : ಹೊಟ್ಲಬೈಲ್ ಮಾಧನಮನೆ, ನೂಜಾಡಿ ಗ್ರಾಮ, ಕುಂದಾಪುರ ತಾಲೂಕು, 2. ಅಶ್ವತ್ (35), ತಂದೆ : ಮಂಜುನಾಥ, ವಾಸ : ಕುಂದಬಾರಂದಾಡಿ ಗ್ರಾಮ, ಕುಂದಾಫುರ ತಾಲೂಕು, 3. ಶ್ರೀಕಾಂತ್ (32), ತಂದೆ : ಆನಂದ ಶೆಟ್ಟಿ, ವಾಸ : ಕಂಬಳಗದ್ದೆ ಮನೆ, ಬಗ್ವಾಡಿ, ನೂಜಾಡಿ ಗ್ರಾಮ, ಕುಂದಾಫುರ ತಾಲೂಕು, 4. ದಿನಕರ (54) , ತಂದೆ : ಕುಪ್ಪಯ್ಯ ಶೆಟ್ಟಿ, ವಾಸ : ಹೆರ್ಜಾಡಿ ಮನೆ, ಹೆರ್ಜಾಡಿ, ಕರ್ಕುಂಜೆ ಗ್ರಾಮ, ಕುಂದಾಫುರ ತಾಲೂಕು ಇವರನ್ನು ವಶಕ್ಕೆಪಡೆದು ಇಸ್ಪಿಟ್ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 3,990/ ರೂಪಾಯಿ, ಇಸ್ಪೀಟ್ ಎಲೆ-52, ಆಟಕ್ಕೆ ಉಪಯೋಗಿಸಿದ  ಕೆಂಪು ಬಟ್ಟೆ-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022  ಕಲಂ: 87 ಕೆ.ಪಿ ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರಾದ ಶ್ರೀಮತಿ ಜಿ. ಸುಚಿತಾ ಶೆಣೈ (34), ತಂದೆ: ಜಿ ಸುದನೇಶ ಶ್ಯಾನುಭಾಗ,  ವಾಸ: ಶಾಂತಾ ದುರ್ಗ, ಕೆನರಾ ಬ್ಯಾಂಕ್  ಹತ್ತಿರ, ಮುಖ್ಯ ರಸ್ತೆ, ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ಹಾಗೂ 1 ನೇ  ಆರೋಪಿತ ವಿಜೇತ ಕುಲಾಲ್ (35), ತಂದೆ: ಕೆ.ಎಸ್.ರಾಜು ಕುಲಾಲ ಇವರು ಪರಸ್ಪರ ಪ್ರೀತಿಸಿ ಎರಡೂ ಕುಟುಂಬದವರ ಒಪ್ಪಿಗೆ ಪಡೆದು ದಿನಾಂಕ 08/05/2017 ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆಯ ಮಾತುಕತೆಯು ಪಿರ್ಯಾದಿದಾರರ ಮನೆಯಾದ ಗಂಗೊಳ್ಳಿಯಲ್ಲಿ ನಡೆದಿದ್ದು ಆ ಸಮಯದಲ್ಲಿ  ಆರೋಪಿತರಾದ 1) ವಿಜೇತ ಕುಲಾಲ್, 2) ಕೆ.ಎಸ್. ರಾಜು ಕುಲಾಲ್, 3) ಸರೋಜ ಕುಲಾಲ್, 4) ಪ್ರದೀಪ ಕುಲಾಲ್‌ ಎಲ್ಲರ  ವಾಸ: 10, 5 ನೇ ಕ್ರಾಸ್, ಸೈಂಟ್ ಮೇರಿ ಶಾಲೆಯ ಹತ್ತಿರ, ಕಲ್ಯಾಣ ನಗರ, ಟಿ.ದಾಸರಹಳ್ಳಿ, ಬೆಂಗಳೂರು -57 ಇವರು ಪಿರ್ಯಾದಿದಾರರ ತಂದೆಯವರಲ್ಲಿ ಚಿನ್ನಾಭರಣ ಹಾಗೂ 25 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದು ಪಿರ್ಯಾದಿದಾರರ ತಂದೆ ನಿರಾಕರಿಸಿದ್ದು ಆರೋಪಿತರು ಮದುವೆ ಮುರಿದುಕೊಳ್ಳುವುದಾಗಿ ಹೇಳಿದ್ದರಿಂದ ಪಿರ್ಯಾದಿದಾರರ ತಂದೆ ಬೇರೆ ದಾರಿ ಕಾಣದೆ 25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವರದಕ್ಷಿಣೆ ರೂಪದಲ್ಲಿ ಪಿರ್ಯಾದಿದಾರರಿಗೆ ಹಾಗೂ 67 ಗ್ರಾಂ ಚಿನ್ನಾಭರಣವನ್ನು ಆರೋಪಿ 1 ನೇಯವರಿಗೆ ನೀಡಿ ಮದುವೆಯ ಸಂಪೂರ್ಣ ಖರ್ಚುವೆಚ್ಚವನ್ನು ಪಿರ್ಯಾದಿದಾರರ ತಂದೆಯವರೇ ಭರಿಸಿ ಮದುವೆ ಮಾಡಿ ಕೊಟ್ಟಿದ್ದು ಮದುವೆ ನಂತರ ಪಿರ್ಯಾದಿದಾರರು ಆರೋಪಿತರೊಂದಿಗೆ ಬೆಂಗಳೂರಿನ ತುರುಬರಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ಸಮಯದಲ್ಲಿ ಆರೋಪಿತರು ಪಿರ್ಯಾದಿದಾರಿಗೆ  ಚಿನ್ನಾಭರಣ,ಆಸ್ತಿ, ಕಾರು ಹಾಗೂ ನಾವು ಕೇಳಿದಷ್ಟು ವರದಕ್ಷಿಣೆ ನೀಡಿಲ್ಲವಾಗಿ ಪದೇ ಪದೇ ಹಂಗಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೆ 1 ನೇ ಆರೋಪಿತನು ಪಿರ್ಯಾದಿದಾರರಲ್ಲಿರುವ 25 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಹಾಗೂ ಪಿರ್ಯಾದಿದಾರರ ಉಳಿತಾಯದ ಹಣವನ್ನು ನೀಡುವಂತೆ ಮಾನಸಿಕ ಕಿರುಕುಳ ನೀಡಿ ಬಲಾತ್ಕಾರವಾಗಿ ಹಣವನ್ನು ತೆಗೆದುಕೊಂಡಿರುತ್ತಾನೆ. ನಂತರ ಗರ್ಭಿಣಿಯಾಗಿದ್ದು ಆಸಮಯದಲ್ಲಿಯೂ ಆರೋಪಿತರು ಪಿರ್ಯಾದಿದಾರರಿಗೆ ಮಾನಸಿಕವಾಗಿ ಕಿರುಕುಳ ನೀಡಿರುತ್ತಾನೆ. ದಿನಾಂಕ 23/08/2018 ರಂದು ಪಿರ್ಯಾದಿದಾರರಿಗೆ ಹೆಣ್ಣು ಮಗು ಜನಿಸಿದ್ದು ಪಿರ್ಯಾದಿದಾರರು ಹೆರಿಗೆ ರಜೆಯಲ್ಲಿ ಇರುವ ಸಮಯದಲ್ಲಿಯೂ 1 ನೇ ಆರೋಪಿತನು ಪಿರ್ಯಾದಿದಾರರಿಗೆ ಕೆಲಸಕ್ಕೆ ಹೋಗು ಹೋಗದಿದ್ದಲ್ಲಿ ಡೈಪೋರ್ಸ್‌ ಕೊಡುವುದಾಗಿ ಬೆದರಿಕೆ ಹಾಕಿರುತ್ತಾನೆ. ಅಲ್ಲದೇ 1 ನೇ ಆರೋಪಿತನು ವಿದೇಶಕ್ಕೆ ಕೆಲಸಕ್ಕೆ ಹೋದ ಸಮಯದಲ್ಲಿ ಆರೋಪಿ 2 ರಿಂದ 4  ನೇಯವರು ಪಿರ್ಯಾದಿದಾರರಿಗೆ ಮನೆಬಿಟ್ಟು ಹೋಗುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ. ನಂತರ ಪಿರ್ಯಾದಿದಾರರು ಆರೋಪಿತರು ನೀಡುವ ಹಿಂಸೆಯನ್ನು ತಾಳಲಾರದೆ 2020 ನೇ ಇಸವಿಯ ಸೆಪ್ಟೆಂಬರ್‌ ತಿಂಗಳಲ್ಲಿ ತವರು ಮನೆಯಾದ ಗಂಗೊಳ್ಳಿಗೆ ಬಂದು ವಾಸಮಾಡಿಕೊಂಡಿದ್ದು ಆ ಸಮಯದಲ್ಲಿಯೂ ಸಹ 1ನೇ ಆಪಾದಿತನು ಪಿರ್ಯಾದಿದಾರರ ತಂದೆಗೆ ಫೋನ್‌ ಕರೆ ಮಾಡಿ ಕಿರುಕುಳ ನೀಡಿದ್ದಲ್ಲದೇ 2020 ನೇ ಡಿಸೆಂಬರ್‌ ಹಾಗೂ 2021 ನೇ ಜನವರಿ ತಿಂಗಳಲ್ಲಿ ಪಿರ್ಯಾದಿದಾರರ ಮನೆಯಾದ ಗಂಗೊಳ್ಳಿಗೆ ಬಂದು ಪಿರ್ಯಾದಿದಾರರಿಗೆ ಅವಾಚ್ಯಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾನೆ. ನಂತರ ದಿನಾಂಕ 04/06/2022 ರಂದು ಸುಮಾರು 11:30 ಗಂಟೆಗೆ ಪಿರ್ಯಾದಿದಾರರ ತಂದೆಯವರು ಗಂಗೊಳ್ಳಿ ಕಾಲೇಜು ರಸ್ತೆಯಲ್ಲಿ ಹೋಗುತ್ತಿರುವಾಗ 1ನೇ ಆರೋಪಿತನು ಪಿರ್ಯಾದಿದಾರರ ತಂದೆಗೆ ಅವಾಚ್ಯ ಶಬ್ಧಗಳಿಂದ ಬೈದು ಮಗುವನ್ನು ನನ್ನೊಂದಿಗೆ ಕಳುಹಿಸದಿದ್ದಲ್ಲಿ ಪಿರ್ಯಾದಿದಾರರನ್ನು ಹಾಗೂ ಅವರ ತಂದೆಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ತೀವೃ ಮಾನಸಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 498(ಎ) , 504, 506 ಜೊತೆಗೆ 34 ಐಪಿಸಿ & ಕಲಂ:3, 4, 6 ವರದಕ್ಷಿಣೆ ನಿಷೇಧ ಕಾಯ್ದೆ-1961 ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 12-06-2022 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080