ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ  ವನಿತಾ  ಶೆಡ್ತಿ (47), ಗಂಡ:  ಉಮೇಶ  ತೋಳಾರ,  ವಾಸ: ಆತ್ಮೀಯ  ನಿಲಯ  ಬೆಳ್ವೆ  ಗ್ರಾಮ  ಹೆಬ್ರಿ  ತಾಲೂಕು ಇವರು ದಿನಾಂಕ 11/06/2022  ರಂದು 14:15 ಗಂಟೆಗೆ KA-20-EM-5322  ನೇ  ನಂಬ್ರದ ಹೊಂಡಾ   ಸ್ಕೂಟಿಯಲ್ಲಿ    ಹೆಬ್ರಿ ತಾಲೂಕಿನ ಬೆಳ್ಬೆ  ಗ್ರಾಮದ  ಬೆಳ್ಬೆ ಅಂತು ಮದಗದ  ಬಳಿ  ಬರುತ್ತಿರುವಾಗ  ಆರೋಪಿ ಸ್ಕೂಟಿಯನ್ನು  ಅತೀ ವೇಗ  ಹಾಗೂ  ಅಜಾರೂಕತೆಯಿಂದ  ಚಲಾಯಿಸಿದ್ದು, ಈ ಸಮಯ  ದನವನ್ನು ತಪ್ಪಿಸಲು  ಹೋಗಿ  ಒಮ್ಮೆಲೇ ಬ್ರೇಕ್ ಹಾಕಿದ   ಪರಿಣಾಮ ಸ್ಕೂಟಿ  ಆರೋಪಿಯ  ಹತೋಟಿ  ತಪ್ಪಿ  ರಸ್ತೆಯ  ಬದಿಯ ಮಾವಿನ  ಮರಕ್ಕೆ  ಡಿಕ್ಕಿ  ಹೊಡೆದ ಪರಿಣಾಮ   ಹಿಂಬದಿ   ಸವಾರೆ  ಪಿರ್ಯಾದಿದಾರರ  ತುಟಿ ಸೀಳಿ ಆರು  ಹಲ್ಲುಗಳು  ಜಾರಿ  ಹೋಗಿರುತ್ತದೆ ಹಾಗೂ ತುಟಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2022  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಿರ್ವಾ: ದಿನಾಂಕ 12/06/2022 ರಂದು 00:15 ಗಂಟೆಗೆ ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಶಿರ್ವ ಪೊಲೀಸ್‌ ಠಾಣೆ ಇವರಿಗೆ ಚಂದ್ರನಗರ ನಿವಾಸಿ ಅಬೂಬಕ್ಕರ್‌ ಎಂಬುವವರ ಮನೆಯ ಸಮೀಪ ಇರುವ  ಖಾಲಿ  ಜಾಗದಲ್ಲಿ ಟರ್ಪಾಲ್‌  ಹಾಕಿ ‌‌‌‌‌‌ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ದನವನ್ನು ಕಡಿಯಲು ತಯಾರು ನಡೆಸುತ್ತಿದ್ಧಾರೆಂಬ ಬಂದ ಮಾಹಿತಿ  ಮೇರೆಗೆ ಸ್ಥಳಕ್ಕೆ ತಲುಪಿದಾಗ ಒಂದು ಮನೆಯ ವಿದ್ಯುತ್ ದೀಪ ಉರಿಯುತ್ತಿದ್ದು ಬೆಳಕಿನಲ್ಲಿ ದೂರದಲ್ಲಿ ನಿಂತು ನೋಡಿದಾಗ ಖಾಲಿ ಜಾಗದಲ್ಲಿ ತಾತ್ಕಲಿಕವಾಗಿ ಕಂಬಗಳನ್ನು ನೆಟ್ಟು ಮೆಲ್ಗಡೆ  ತಗಡಿನ ಶೀಟ್‌ಗಳನ್ನು ಅಳವಡಿಸಿದ್ದು   ಸದ್ರಿ ಸ್ಥಳದಲ್ಲಿ  ಮೂರರಿಂದ ನಾಲ್ಕು  ಜನರು  ಇದ್ದು ಸದ್ರಿಯವರು ದನವನ್ನು  ಕಡಿದು ಮಾಂಸ  ಮಾಡುತ್ತಿರುವುದು  ಕಂಡು  ಬಂದಿದ್ದು, ದಾಳಿ ನಡೆಸಿದಾಗ  ಅವರೆಲ್ಲರೂ ಮಾಂಸದ ಚೀಲವನ್ನು ಹಿಡಿದುಕೊಂಡು  ಕತ್ತಲಿನ ಪ್ರದೇಶಕ್ಕೆ ಚೆಲ್ಲಾಪಿಲ್ಲಿಯಾಗಿ  ಓಡಿ ಹೋಗಿದ್ದು ಅವರ  ಪೈಕಿ ಒಬ್ಬಾತನನ್ನು ವರು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ಕೇಳಲಾಗಿ ಸಂಶುದ್ದೀನ್‌ (53), ತಂದೆ: ದಿವಂಗತ ಶೇಖಬ್ಬ, ವಾಸ:ಸೂರ್ಯಗುಡ್ಡೆ, ಕಳತ್ತೂರು ಗ್ರಾಮ  ಮತ್ತುಅಂಚೆ, ಕಾಫು ತಾಲೂಕು ಎಂದು ತಿಳಿಸಿದನು, ಸ್ಥಳದಿಂದ  ಓಡಿ  ಹೋದವರ ಹೆಸರು ವಿಳಾಸ ಕೇಳಲಾಗಿ  ಚಂದ್ರನಗರ ನಿವಾಸಿ ಅಬೂಬಕ್ಕರ್‌, ಕಳತ್ತೂರು ಪೈಯ್ಯಾರು ನಿವಾಸಿ ನಜೀರ್‌ರನ ಮಗ ಆಶೀರ್‌, ಉಮ್ಮರಬ್ಬನ ಮಗ ಆಶ್ರಫ್‌   ಎಂದು  ತಿಳಿಸಿದನು. ಕಡಿದು ಮಾಂಸ  ಮಾಡಿದ ದನದ ಬಗ್ಗೆ ವಿಚಾರಿಸಿದಾಗ  ನಾವು ನಾಲ್ಕು ಜನರು ಸೇರಿ ನಮ್ಮ ಸ್ವಂತ ಲಾಭಕ್ಕಾಗಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ   ದಿನಾಂಕ  11/06/2022  ರಂದು   ಆಶ್ರಫ್‌ ಮತ್ತು ಆಶೀರ್‌ನು ಎಲ್ಲಿಂದಲೋ ಕಳವು ಮಾಡಿ  ಈ ಸ್ಥಳಕ್ಕೆ ತಂದಿದ್ದಾಗಿಯೂ ನಾವೆಲ್ಲರೂ ಸೇರಿ  ಕಡಿದು ಮಾಂಸ ಮಾಡಿರುವುದಾಗಿ ತಿಳಿಸಿದನು. ನಂತರ ಸಂಶುದ್ದೀನ್‌  ತೋರಿಸಿಕೊಟ್ಟಂತೆ ಪರಿಶೀಲಿಸಲಾಗಿ ಕೃತ್ಯ  ಸ್ಥಳವು ಕಾಪು  ತಾಲೂಕು ಪಾದೂರು  ಗ್ರಾಮದ  ಚಂದ್ರನಗರ  ಶ್ರೀಮತಿ ಪರ್ವಿನ್‌  ಎಂಬವರ  ಮನೆಯ ಸಮೀಪ  ಖಾಲಿ ಸ್ಥಳದಲ್ಲಿ  ಹಾಕಿದ್ದ ತಗಡು ಶೀಟ್‌ನ ಒಳಗಡೆ  ಆಗಿರುತ್ತದೆ. ಸ್ಥಳದಲ್ಲಿ  ತಗಡ್‌ ಶೀಟ್‌ನ ಸುತ್ತ ಟರ್ಪಾಲ್‌   ಹಾಕಿ   ನೆಲದ ಮೇಲೆ  ನೀಲಿ ಬಣ್ಣದ  ಟರ್ಪಾಲ್‌  ಹಾಸಿದ್ದು ನೆಲದ ಮೇಲಿನ ಟರ್ಪಾಲ್‌  ಮೇಲೆ ದನವನ್ನು  ಕಡಿದು ಮಾಂಸವನ್ನು   ಎರಡು ಪ್ಲಾಸ್ಟಿಕ್‌ ಬಕೆಟ್‌ ಒಳಗಡೆ  ಇಟ್ಟಿದ್ದಲ್ಲದೆ  ದನದ  ತಲೆ, ಕಾಲುಗಳು  ಕೂಡ  ಇರುತ್ತದೆ.ಅಲ್ಲದೆ ಮಾಂಸ ಮಾಡಲು  ಉಪಯೋಗಿಸಿದ  ಒಂದು ಮರದ ತುಂಡು, ಆರು ಕತ್ತಿಗಳು, ತೂಕದ ಇಲೆಕ್ಟ್ರಾನಿಕ್‌ ಯಂತ್ರ  ಇರುವುದು  ಕಂಡು  ಬಂತು.   ಈ ಎಲ್ಲಾ  ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2022, ಕಲಂ: 4, 12 THE KARNATAKA PREVENTION OF SLAUGHTER AND PRESERVATION OF CATTLE ACT-2020, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-06-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080