ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೋಟ: ಪಿರ್ಯಾದಿದಾರರಾದ ರವಿಚಂದ್ರ ಎನ್ (36) ,ತಂದೆ: ಶೀನಪ್ಪ ಗೌಡ ಎನ್ , ನಡ್ತೋಟ ಮನೆ ಬಿಳಿನೆಲೆ ಕೈಕಂಬ ಅಂಚೆ ಬಿಳಿನೆಲೆ ಗ್ರಾಮ ಕಡಬ ತಾಲೂಕು ದ.ಕ ಜಿಲ್ಲೆ ಇವರು ದಿನಾಂಕ 12/06/2021 ರಂದು ಮುಂಜಾವಿನಲ್ಲಿ ತನ್ನ ಮಾರುತಿ ಸುಜುಕಿ ಆಲ್ಟೋ -800 ಕಾರು KA-19-6835 ನೇದರಲ್ಲಿ ಚಾಲಕ ಸುರೇಶ ರವರೊಂದಿಗೆ ವಿಟ್ಲದಿಂದ ಗೋಕಾಕ್ ಗೆ ಹೊರಟಿದ್ದು ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಏಖಮುಖ ಡಾಮರು ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಳಿಗ್ಗೆ 07:50 ಗಂಟೆಗೆ ಸಾಸ್ತಾನ ಜಂಕ್ಷನ್ ಬಳಿ ತಲುಪುವಷ್ಟರಲ್ಲಿ KA-20-AA-7855 ನೇ ಬೊಲೆರೋ ಪಿಕಪ್ ವಾಹನದ ಚಾಲಕ ಮಧುಸೂದನ ಪಿಕಪ್ ವಾಹನವನ್ನು ಕುಂದಾಪುರ ಉಡುಪಿ ಏಖ ಮುಖ ರಸ್ತೆಯ ವಿರುದ್ದ ದಿಕ್ಕಿನಿಂದ ಪಾಂಡೇಶ್ವರ ಕಡೆಯಿಂದ ಸಾಸ್ತಾನ ಜಂಕ್ಷನ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಏಖಮುಖ ರಸ್ತೆಗೆ ನುಗ್ಗಿ ಕ್ರಮದಂತೆ ಕುಂದಾಪುರ ಕಡೆಗೆ ಹೋಗುತ್ತಿದ್ದ ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸುರೇಶ ರವರ ಬಲ ಕೈಗೆ ಒಳ ಗಾಯವಾಗಿದ್ದು, ಪಿರ್ಯಾದಿದಾರರಿಗೆ ತಲೆಯ ಹಣೆಯ ಬಲ ಬದಿಗೆ ಹಾಗೂ ಬಲ ಕಾಲಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ :ಪಿರ್ಯಾದಿದಾರರಾದ ಸುಕೇಶ್ ನಾಯ್ಕ (28), ತಂದೆ: ದಿ| ಸೀತಾರಾಮ ನಾಯ್ಕ, ವಾಸ: ಕಮಲ ನಿಲಯ, ನೂಜಿನ ಬೈಲು, ಪೇತ್ರಿ , ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ತಾಯಿ ಲತಾ ಭಾಯಿ (50) ಹಾಗೂ ತಮ್ಮ ನೊಂದಿಗೆ ವಾಸವಾಗಿರುವುದಾಗಿದೆ. ಪಿರ್ಯಾದಿದಾರರ ತಂದೆ ಜೀವಂತ ಕಾಲದಲ್ಲಿ ಅವರ ಆಸ್ತಿಯನ್ನು ಸೊಸೈಟಿಯಲ್ಲಿ ಅಡವಿಟ್ಟು ಸಾಲ ಮಾಡಿದ್ದು, ಸಾಲ ತೀರಿಸದೇ ಈಗ ಅದು ಏಲಂಗೆ ಬಂದಿರುತ್ತದೆ. ಇದರಿರಿಂದ ಲತಾ ಭಾಯಿಯವರು ತುಂಬಾ ಮನನೊಂದಿರುತ್ತಾರೆ, ದಿನಾಂಕ 05/06/2021 ರಂದು ರಾತ್ರಿ 8:45 ಗಂಟೆಗೆ ಪಿರ್ಯಾದಿದಾರರು ಪಕ್ಕದ ಮನೆಯಲ್ಲಿ ಇದ್ದಾಗ ಲತಾ ಭಾಯಿಯವರು ಮದ್ಯಪಾನದಲ್ಲಿಇಲಿಪಾಷಣ ಸೇವಿಸಿ ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 06/06/2021 ರಂದು ಲತಾ ಭಾಯಿಯವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಿಸಿ ಮನಗೆ ಕರೆದುಕೊಂಡು ಬಂದಿರುವುದಾಗಿದೆ. ದಿನಾಂಕ: 09/06/2021 ರಂದು ಬೆಳಿಗ್ಗೆ 08:00 ಗಂಟೆಗೆ ಲತಾ ಭಾಯಿಯವರು ಮನೆಯಲ್ಲಿದ್ದಾಗ ವಾಂತಿ ಮಾಡಲು ಪ್ರಾರಂಭಿಸಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಜೀವನ ಜ್ಯೊತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಅಜ್ಜರಕಾಡು ಆಸ್ಪತ್ರೆಗೆ, ಪುನಃ ಅಲ್ಲಿಂದ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದದುಕೊಂಡು ಹೋಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಲತಾ ಭಾಯಿಯವರು ದಿನಾಂಕ: 11/06/2021 ರಂದು ಸಂಜೆ 6:55 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-06-2021 05:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ