ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 11/05/2023 ರಂದು ಮದ್ಯಾಹ್ನ 12:00 ಗಂಟೆಗೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಹಾದು ಹೋಗುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪಿರ್ಯಾದಿದಾರರಾದ ಗುರುಪಾದಯ್ಯ ಸ್ವಾಮಿ ಹಿರೇಮಠ (42), ತಂದೆ: ರಾಚಯ್ಯ ಸ್ವಾಮಿ, ವಾಸ: ರುಕ್ಮಿಣಿ ಜನರಲ್ ಸ್ಟೋರ್ ಹತ್ತಿರ ಆಶ್ರಯ ಕಾಲನಿ ಕೆ.ಎಸ್ .ರಾವ್ ನಗರ ಕಾರ್ನಡ್, ಮುಲ್ಕಿ ತಾಲೂಕು ಇವರು  ತನ್ನ  KA-19-HJ-1495 ನೇ ನಂಬ್ರದ ಮೋಟಾರ್ ಸೈಕಲ್ ನ್ನು ದೂಪದಕಟ್ಟೆ ಕಡೆಯಿಂದ ಪಡುಬಿದ್ರೆ ಕಡೆಗೆ ಸವಾರಿಕೊಂಡು ಹೋಗುತ್ತಿರುವಾಗ KA-20-MC-3343 ನೇ ಕಾರಿನ ಚಾಲಕ ರಾಮಕೃಷ್ಣ ಶೆಟ್ಟಿ ಕಾರನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನ್ನು  ಹಿಂದಿಕ್ಕಿ ಹೋಗುವ ಸಮಯ ಕಾರನ್ನು ತೀರಾ ಎಡಬದಿಗೆ ಚಲಾಯಿಸಿದ್ದರಿಂದ ಕಾರಿನ ಹಿಂಭಾಗದ ಎಡಬದಿಯ ಬಾಡಿ ಮೋಟಾರ್ ಸೈಕಲ್ ಗೆ ತಾಗಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈಯ ಕೋಲು ಕೈಗೆ ಹಾಗೂ ತಲೆಗೆ ಗುದ್ದಿದ್ದ ನೋವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 05/05/2023 ರಂದು ಬೆಳಿಗ್ಗೆ ಜಾವ 4:45 ಗಂಟೆಗೆ ಕುಂದಾಪುರ  ತಾಲೂಕಿನ,  ಹಂಗಳೂರು ಗ್ರಾಮದ ದುರ್ಗಾಂಭಾ ಗ್ಯಾರೇಜ್‌‌‌ ಬಳಿ NH 66 ರಸ್ತೆಯಲ್ಲಿ, ಆಪಾದಿತ ನೊಂದಣಿ ನಂಬ್ರ ತಿಳಿದು ಬಾರದ ಯಾವುದೋ ಕಾರಿನ ಚಾಲಕ, ಕಾರನ್ನು ಸರ್ವಿಸ್‌ ರಸ್ತೆಯಿಂದ NH 66 ರಸ್ತೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿ, ಮಲ್ಪೆ ಕಡೆಯಿಂದ ಬೈಂದೂರು ಕಿರಿಮಂಜೇಶ್ವರ ಕಡೆಗೆ ಪಿರ್ಯಾದಿದಾರರಾದ ರಾಮಚಂದ್ರ (33),  ತಂದೆ: ಸುಬ್ರಹ್ಮಣ್ಯ ಖಾರ್ವಿ, ವಾಸ: ಮೋಟಿಮನೆ, ಗಂಗೆಬೈಲು  ಕೊಡೇರಿ, ಕಿರಿಮಂಜೇಶ್ವರ  ಗ್ರಾಮ  ಬೈಂದೂರು  ತಾಲೂಕು ಇವರ ಅಣ್ಣ ಕೇಶವ ಖಾರ್ವಿಯವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EP-6666ನೇ ಬುಲೆಟ್‌‌ಗೆ ಡಿಕ್ಕಿ ಹೊಡೆದು ನಿಲ್ಲಿಸದೇ  ಹೋಗಿರುತ್ತಾನೆ. ಈ ಅಪಘಾತದಿಂದ ಕೇಶವ ಖಾರ್ವಿಯವರ ಬೆನ್ನಿಗೆ  ಮೂಳೆ ಮುರಿತವಾಗ ಗಂಭೀರ  ಒಳಜಖಂ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023 ಕಲಂ: 279, 338 ಐಪಿಸಿ & 134 (A) & (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿಯಾ೯ದಿದಾರರಾದ ಗಣೇಶ ಕೆ (48), ತಂದೆ: ಅಣ್ಣು ಮುಖಾರಿ, ವಾಸ:ಸಾಲ್ಯಾನ್ ನಿವಾಸ್, ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ,ಕಳತ್ತೂರು  ಗ್ರಾಮ ಮತ್ತು  ಅಂಚೆ, ಕಾಪು ತಾಲೂಕು ಇವರ ಅಣ್ಣ ಕೃಷ್ಣ ಮುಖಾರಿ(50) ಹಾಗೂ ನೆರೆ ಮನೆಯವರಾದ ಪುಷ್ಪಾ(48) ರವರು ಕಾಪು ಪೇಟೆಯಿಂದ KA0-20-D-5831 ನೇ ಆಟೋರಿಕ್ಷಾದಲ್ಲಿ ಕಾಪು- ಶಿವಾ೯ ರಸ್ತೆಯ ಮೂಲಕ ಮನೆಗೆ ಹೊರಟು ಹೋಗುತ್ತಿರುವಾಗ ಸಂಜೆ 7:15 ಗಂಟೆಗೆ ಮಜೂರು ಗ್ರಾಮದ, ಸ್ವಾಗತ ನಗರದ ಬಳಿ ಅತೀವೇಗವಾಗಿ ಬೀಸಿದ ಗಾಳಿ ಹಾಗೂ ಮಳೆಯಿಂದ ರಸ್ತೆ ಬದಿಯಲ್ಲಿದ್ದ ಮರವು KA-20-D-5831 ನೇ ಆಟೋರಿಕ್ಷಾದ ಮೇಲೆ ಹಾಗೂ ಅದೇ ರಸ್ತೆಯಲ್ಲಿ ಹೋಗುತ್ತಿದ್ದ KA-20-AA-1975 ನೇಯ ರಿಕ್ಷಾದ ಮೇಲೂ ಬಿದ್ದಿರುತ್ತದೆ. ಇದರಿಂದ KA-20-AA-1975 ನೇಯ ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಪ್ರತೀಮಾ (33), ಅವರ ಮಗು ಮಹಿತ್(1.3‌) ಹಾಗೂ  ರಿಕ್ಷಾ ಚಾಲಕ ದಿನೇಶ್‌ ರವರಿಗೆ ಗಾಯಗಳಾಗಿರುತ್ತದೆ. ಅವರನ್ನು ಸ್ಥಳದಲ್ಲಿದ್ದ ಸಾವ೯ಜನಿಕರು ರಿಕ್ಷಾದಿಂದ ಹೊರಗೆ ತೆಗೆದು  ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ  ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಪಿಯಾ೯ದಿದಾರರ ಅಣ್ಣ ಕೃಷ್ಣ ಮುಖಾರಿ ಹಾಗೂ ಪುಷ್ಪಾರವರು ರಿಕ್ಷಾದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಸಾರ್ವಜನಿಕರ ಸಹಾಯದಿಂದ ಹೊರತೆಗೆದು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪರೀಕ್ಷಿಸಿದ ವೈಧ್ಯರು ಇಬ್ಬರೂ ಕೂಡ ಈಗಾಗಲೇ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ರಿಕ್ಷಾ ಚಾಲಕ ಮಹಮ್ಮದ್‌ ಷರೀಪ್‌ ರವರಾಗಿದ್ದು ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಘಟನೆಯು ಪ್ರಕೃತಿ ವಿಕೋಪದಿಂದ ಆಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿಶ್ವನಾಥ. ಎಸ್  ಇವರು 118 - ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಎಫ್.ಎಸ್.ಟಿ -1 ನೇದರ ಅಧಿಕಾರಿಯಾಗಿರುತ್ತಾರೆ. ದಿನಾಂಕ 29/03/2023 ರಿಂದ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಂಡಿದ್ದು ದಿನಾಂಕ 01/04/2023 ರಂದು ಚುನಾವಣಾಧಿಕಾರಿಯವರು 118 ಬೈಂದೂರು  ವಿಧಾನಸಭಾಕ್ಷೇತ್ರಕ್ಕೆ ಸಂಬಂದಿಸಿ  ಮಾದರಿ ನೀತಿ ಸಂಹಿತೆ ಜಾರಿಯಾದ ಬಗ್ಗೆ ರಾಜಕೀಯ ಪಕ್ಷದ ಪ್ರತಿನಿಧಿಗಳನ್ನು ಕರೆದು ಸಭೆಯನ್ನು  ನಡೆಸಿದ್ದು  ಸಭೆಯಲ್ಲಿ  ಚುನಾವಣಾಧಿಕಾರಿಗಳು  ಮಾದರಿ ನೀತಿಸಂಹಿತೆ ದಿನಾಂಕ  29/03/2023 ರಿಂದ ಜ್ಯಾರಿಯಾಗಿದ್ದು ಈ ಹಿನ್ನೆಲೆಯಲ್ಲಿ  ಸಾಮಾಜಿಕ ಜಾಲತಾಣದಲ್ಲಿ ಯಾವುದೇ  ಪ್ರಚಾರ  ಮಾಡುವಂತಿಲ್ಲ, ಸಮೂಹ ಮಾಧ್ಯಮಗಳಲ್ಲಿ ಟಿವಿ ರೇಡಿಯೋ  ಕೇಬಲ್ ನೆಟ್ ವರ್ಕ  ಮತ್ತು ಸಾಮಾಜಿಕ ಜಾಲತಣದಲ್ಲಿ ಯಾವುದೇ ರಾಜಕೀಯ ಜಾಹಿರಾತು ನೀಡುವ ಸಂದರ್ಭದಲ್ಲಿ ಜಿಲ್ಲಾಮಟ್ಟದ MCMC ತಂಡದಿಂದ ಅನುಮತಿ ಪಡೆಯಬೇಕೆಂದು  ತಿಳಿಸಿದ್ದರು. ದಿನಾಂಕ 31/03/2023 ರಂದು ಗಣೇಶ ದಾಸ ಖಾರ್ವಿ ಎಂಬುವವರು ಕರ್ನಾಟಕ ಚುನಾವಣಾ ಆಯೋಗಕ್ಕೆ  ಬೈಂದೂರು ಬಿಜೆಪಿ ಅಭ್ಯರ್ಥಿ ಎನ್ನಲಾದ ಸುಕುಮಾರ ಶೆಟ್ಟಿ ಎಂಬುವವರು ದಿನಾಂಕ 31/03/2023 ರಂದು  ತಮ್ಮ ಬಿ ಎಂ. ಸುಕುಮಾರ ಶೆಟ್ಟಿ  ಅಭಿಮಾನಿ ಸೇನೆ  ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿರುವುದಾಗಿ ದೂರು ನೀಡಿದ್ದು ದೂರನ್ನು  ಮುಂದಿನ ಕ್ರಮದ ಬಗ್ಗೆ  NGRS  ದೂರು ಸಂಖೈ AB590A580607 ರಂತೆ ಬೈಂದೂರು  ವಿಧಾನ ಸಭಾ ಕ್ಷೇತ್ರ  ಚುನಾವಣಾಧಿಕಾರಿ ರವರಿಗೆ ಬಂದಿದ್ದು ಚುನಾವಣಾಧಿಕಾರಿಯವರು 118  ಬೈಂದೂರು ರವರು  ಸದ್ರಿ BM Sukumara Shetty Kollur ಎಂಬ ಫೇಸ್ ಬುಕ್  ನ್ನು ಪರಿಶೀಲನೆ  ಮಾಡಿದ್ದು  ಪೇಜ್ ನ ಪ್ರೊಪೈಲ್ ಚಿತ್ರದಲ್ಲಿ  ಬಿ.ಎಂ ಸುಕುಮಾರ ಶೆಟ್ಟಿ ಯವರ ಬಿ ಜೆ ಪಿ ಪಕ್ಷದ ಕಮಲದ ಚಿಹ್ನೆ ಹಾಗೂ ಕಮಲದ ಚಿಹ್ನೆ ಹೊಂದಿರುವ  ಕೇಸರಿ ಶಾಲನ್ನು ಹಾಕಿಕೊಂಡ ಅವರ ಬಾವಚಿತ್ರ ಇದ್ದಿರುತ್ತದೆ. ಫೆಸ್ಬುಕ್ ಪೇಜ್ ನಲ್ಲಿ ಬಿ ಎಂ ಸುಕುಮಾರ ಶೆಟ್ಟಿಯವರ  ಬಗ್ಗೆ  ಪ್ರಚಾರ  ಮಾಡುವಂತಹ ವಿಡಿಯೋ ತುಣುಕುಗಳು ಇರುವುದು ಕಂಡು ಬಂದಿರುತ್ತದೆ. ದೂರಿಗೆ ಸಂಬಂದಿಸಿದಂತೆ  ಮಾನ್ಯ ಚುನಾವಣಾಧಿಕಾರಿಯವರು  ಸುಕುಮಾರ ಶೆಟ್ಟಿಯವರಿಗೆ ದಿನಾಂಕ 02/04/2023 ರಂದು ಕಾರಣ  ಕೇಳಿ ನೋಟೀಸು ನೀಡಿದ್ದು ನೋಟಿಸಿಗೆ ಸಂಬಂದಪಡದ 3 ನೇ ವ್ಯಕ್ತಿ ಉತ್ತರ ನೀಡಿರುವುದು  ಸಮಂಜಸವಾಗಿರದ ಕಾರಣ ಚುನಾವಣಾಧಿಕಾರಿ 118 ಬೈಂದೂರು ರವರು  2 ನೇ ಕಾರಣ ಕೇಳಿ ನೊಟೀಸನ್ನು  ಕಳುಹಿಸಿದಲ್ಲಿ  ಅವರ ಆಪ್ತ ಕಾರ್ಯದರ್ಶಿ ಸಂತೋಷ್  ರವರು ಪಡೆದುಕೊಂಡಿರುತ್ತಾರೆ. ನೋಟೀಸ್ ಗೆ  ಸ್ವೀಕರಿಸಿದ 1 ಗಂಟೆಯ ಒಳಗೆ ಲಿಖಿತ ಸಮಜಾಯಿಷಿಯನ್ನು ಖುದ್ದಾಗಿ ಸಲ್ಲಿಸಲು  ಸೂಚಿಸಿದ್ದರೂ ಈ ವರೆಗೂ ಉತ್ತರವನ್ನು ನೀಡಿರುವುದಿಲ್ಲ. ಬಿ .ಎಂ ಸುಕುಮಾರ ಶೆಟ್ಟಿ ರವರು ಮಾಜಿ  ವಿಧಾನಸಭಾ ಸದಸ್ಯರಾಗಿದ್ದು ಅವರು ಮಾದರಿ ನೀತಿ ಸಂಹಿತೆಯು  ಜಾರಿಯಲ್ಲಿರುವ ಸಂದರ್ಭ ಪತ್ರಿಕೆ ಮಾಧ್ಯಮ  ಸಾಮಾಜಿಕ ಜಾಲತಾಣ  ಹಾಗೂ ಇನ್ನಿತರ ಮೂಲಗಳಿಂದ  ಯಾವುದೇ ರಾಜಕೀಯ ಪ್ರಚಾರ ಮಾಡಬೇಕಿದ್ದಲ್ಲಿ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದು ಮಾಡಬೇಕೆಂಬ ಪರಿಜ್ಞಾನವನ್ನು ಹೊಂದಿದ್ದರೂ  ಕೂಡಾ ಅನುಮತಿಯನ್ನು ಪಡೆಯದೇ ಬಿಜೆಪಿ ಪಕ್ಷದ ಪ್ರತಿನಿಧಿಯಾಗಿ  ಅವರ ಫೇಸ್ಬುಕ್  ಪೇಜಿನಲ್ಲಿ ಅವರ  ಹಾಗೂ ಪಕ್ಷಕ್ಕೆ ಅನುಕೂಲವಾಗುವ  ರೀತಿಯಲ್ಲಿ  ಜನಾಭಿಪ್ರಾಯಗಳು ಸಂಗ್ರಹಿಸಿ  ಮತದಾನಕ್ಕೆ  ಪ್ರಭಾವ ಬೀರುವ ಅಂಶಗಳನ್ನು ಒಳಗೊಂಡಂತಹ ವಿಡಿಯೋಗಳನ್ನು ಹಾಕಿ ಪ್ರಚಾರ ಮಾಡಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ  2023 ರ ಸಂಬಂದ ಹೊರಡಿಸಲಾದ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2023 ಕಲಂ: 188  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-05-2023 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080