ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಬ್ರಹ್ಮಾವರ: ಫಿರ್ಯಾದಿ ರಿಹಾನಾ ಬೇಗಂ ಇವರು ದಿನಾಂಕ: 02.04.2006 ರಂದು 1 ನೇ ಆರೋಪಿಯಾದ ಮೊಹಮ್ಮದ್ ಫಿರೋಜ್ ಎಂಬವರೊಂದಿಗೆ ಮದುವೆಯಾಗಿ ಗಂಡನ ಮನೆಯಾದ ಕುಮ್ರಗೋಡು ಆರ್‌ಎಫ್‌3 ಮೆನ್‌ಶನ್ ಎಂಬಲ್ಲಿ ವಾಸವಾಗಿದ್ದು, ಪ್ರಸ್ತುತ ಅವರಿಗೆ 4 ಜನ ಮಕ್ಕಳು ಇರುತ್ತಾರೆ.  ಫಿರ್ಯಾದಿದಾರರಿಗೆ ಮದುವೆಯಾದ ದಿನದಿಂದಲೂ 1 ನೇ ಆರೋಪಿ ಹಾಗೂ ಆತನ ತಾಯಿ ಕುಲ್ಸುಂಬಿ ಮತ್ತು ಅಕ್ಕಂದಿರಾದ ಶಂಶಾದ್ ಮತ್ತು ಝಾಹಿದಾ ಹಾಗೂ ತಮ್ಮಂದಿರಾದ ಸಲೀಂ & ಸಮೀರ್ ಎಂಬವರು ಸೇರಿ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ಶಗಳಿಂದ ಬೈದು ಫಿರ್ಯಾದಿದಾರರ ತಂದೆ ತಾಯಿಯವರನ್ನು ಕೀಳಾಗಿ ನೋಡುತ್ತಿದ್ದರು. ಫಿರ್ಯಾದಿದಾರರನ್ನು ಮದುವೆಯಾಗುವ ಸಮಯ ಆರೋಪಿಗಳು 100 ಪವನ್ ಚಿನ್ನ ಕೇಳಿದ್ದು, ಆದರೆ ಫಿರ್ಯಾದಿದಾರರ ತಂದೆ ತಾಯಿಯವರು 85 ಪವನ್ ಚಿನ್ನ ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ, ಇದೇ ವಿಚಾರದಲ್ಲಿ ಆರೋಪಿಗಳು ಅಸಮಾಧಾನಗೊಂಡು ಫಿರ್ಯಾದಿದಾರರಿಗೆ ಯಾವಾಗಲೂ ಅವಾಚ್ಯವಾಗಿ ಬೈದು ಮಾನಸಿಕ ಹಿಂಸೆ ನೀಡುತ್ತಿದ್ದುದಲ್ಲದೇ, 1 ನೇ ಆರೋಪಿಯು ಯಾವಾಗಲೂ ಕೆಟ್ಟದಾಗಿ ಬೈದು, ಕೈಯಿಂದ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು. ಫಿರ್ಯಾದಿದಾರರು ಅವರ ತಾಯಿ ಮನೆಯಾದ ಗಂಗೊಳ್ಳಿಗೆ ಮತದಾನ ಮಾಡಲು ಹೋಗಿ ದಿನಾಂಕ: 11.05.2023 ರಂದು ಮಧ್ಯಾಹ್ನ 2.00 ಗಂಟೆಗೆ ವಾಪಾಸ್ಸು ಮನೆಗೆ ಬಂದಾಗ 1 ನೇ ಆರೋಪಿ ಮನೆಯಲ್ಲಿ ಇಲ್ಲದೇ ಇದ್ದು, ಸಂತೆಕಟ್ಟೆಯಲ್ಲಿರುವ ಸಂಗಮ್ ಎಂಬ ಹೆಸರಿನ ಅವರ ರೆಸ್ಟೊರೆಂಟ್ ನಲ್ಲಿ ಇದ್ದು, ಅಲ್ಲಿಂದಲೇ  ಫೋನ್ ಮಾಡಿ ಫಿರ್ಯಾದಿದಾರರಿಗೆ ಅಡುಗೆ ತಯಾರಿಸಲು ಹೇಳಿದ್ದು, ಅದಕ್ಕೆ ಫಿರ್ಯಾದಿದಾರರು ರೆಸ್ಟೊರೆಂಟ್ ನಿಂದಲೆ ಅಡುಗೆ ತರಲು ಹೇಳಿದ್ದಕ್ಕೆ ಆರೋಪಿ ಸಿಟ್ಟಾಗಿ ಕೆಟ್ಟದಾಗಿ ಬೈದಿದ್ದು ಫಿರ್ಯಾದಿದಾರರು ಭಯಗೊಂಡು ಏನಾಗುತ್ತದಯೋ ಎಂದು ಹೆದರಿ ಕುಮ್ರಗೋಡು ಮಸೀದಿ ಬಳಿ ಬಂದಾಗ 1 ನೇ ಆರೋಪಿ ಅಲ್ಲಿಗೆ ಬಂದು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈದು ಬಲಕಣ್ಣಿನ ಬಳಿ ಬಲವಾಗಿ ಹೊಡೆದು ದೂಡಿದ ಪರಿಣಾಮ ಫಿರ್ಯಾದಿದಾರರು ಕೆಳಗೆ ಬಿದ್ದು, ಅವರ ಬಲ ಕಣ್ಣಿಗೆ ಹಾಗೂ ಹಣೆಯ ಬಲಭಾಗಕ್ಕೆ ಮತ್ತು ಬಲಭುಜದ ಗುದ್ದಿನ ನೋವಾಗಿರುತ್ತದೆ. 1 ನೇ ಆರೋಪಿಯು ಫಿರ್ಯಾದಿದಾರರಿಗೆ ಹೊಡೆದ ವಿಚಾರ ತಿಳಿಸಿದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬ್ರಹ್ಮಾವರಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2023 : ಕಲಂ 498A, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಫಿರ್ಯಾದಿ ಸುನೀಲ್ ಗೌಡ  ಇವರು ಪಡುವರಿ ಗ್ರಾಮದ ವೆಂಕಟೇಶ ಕಿಣಿಯವರ ಮಾಲೀಕತ್ವದ ಬೈಂದೂರು ಪ್ಯಾಲೇಸ್ ಬಿಲ್ಡಿಂಗ್ ನಲ್ಲಿ ಸೈಟ್ ಸುಪ್ರವೈಸರ್  ಕೆಲಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರೊಂದಿಗೆ ಸುಮಾರು 150 ಜನ ಕೆಲಸಕ್ಕೆ ಇದ್ದಾರೆ ಅವರಲ್ಲಿ ಬೈಜು ಕರೆಕಟ್ಟೆ ಎಂಬುವರು ಕಂಟ್ರ್ಯಾಕ್ಟರ್ ಶಿವದಾಸನ್ ಎಂಬುವರ ಜೊತೆಯಲ್ಲಿ ಸುಮಾರು ಎರಡು ವಾರಗಳ ಹಿಂದೆ ಕೆಲಸಕ್ಕೆ ಬಂದಿದ್ದರು ಅವರು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ದಿನಾಂಕ 09-05-2023 ರಂದು ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಟೀ ಕುಡಿಯುವ ಸಮಯದಲ್ಲಿ  ಹತ್ತಿರದ ಅಡುಗೆ ರೂಮಗೆ ಬೈಜು ಕರೆಕಟ್ಟೆ , ನವೀನ್, ನಿಖೀಲ್ , ನಿದೇಶ  ಮತ್ತು ಶಿವದಾಸ ಹೋಗಿದ್ದರು. ಶಿವದಾಸನ  ರವರು ಫಿರ್ಯಾದಿದಾರರನ್ನು ಕರೆದು ಬೈಜು ಕರಿಕಟ್ಟೆ ಫೀಡ್ಸ ಬಂದು ಬಿದ್ದು ತಲೆಗೆ ಪೆಟ್ಟಾಗಿದ್ದಾಗಿ ತಿಳಿಸಿದರು ಬೈಜು ಕರಿಕಟ್ಟೆ ಅವರ ತಲೆಯ ಎಡಭಾಗಕ್ಕೆ ಗಾಯವಾಗಿ ರಕ್ತ ಸುರಿಯುತ್ತಿತ್ತು. ಅವರು ಕಾಂಕ್ರೀಟ್ ಮಿಕ್ಸಿಂಗ್ ಯಂತ್ರದ ಚೈನ್ ಮೇಲೆ ಬಿದ್ದ ಪರಿಣಾಮ ತಲೆಗೆ ಗಾಯ ಉಂಟಾಗಿರುತ್ತದೆ. ಕೂಡಲೇ ಅವರನ್ನು ದೇವಿದಾಸರವರು ಹರೀಶ, ರವೀಶ, ನಿಖಿಲ್ ಎಂಬವರ ಜೊತೆಯಲ್ಲಿ ಗಾಯಾಳುವನ್ನು ಅವರ ಕಾರಿನಲ್ಲಿ ಹಾಕಿಕೊಂಡು ಬೈಂದೂರು ಅಂಜಲಿ ಆಸ್ಪತ್ರೆಗೆ ಹೋಗಿದ್ದು. ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ಕಳುಹಿಸಿರುತ್ತಾರೆ, ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಸ್ಕ್ಯಾನಿಂಗ್ ಮಾಡಿಸಿ ರಿಪೋರ್ಟ ನೋಡಿ ತಲೆಯಲ್ಲಿ ರಕ್ತಸ್ರಾವ ಆಗಿದ್ದು ಕೂಡಲೇ ಉಡುಪಿ ಅಥವಾ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದು ಅದರಂತೆ ಗಾಯಾಳುವನ್ನು ಶಿವದಾಸ ಮತ್ತು ನಿಖಿಲ್ ರವರು ಮಂಗಳೂರು ಫಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ದಿನಾಂಕ  11-05-2023 ರಂದು ಗಾಯಾಳುವಿನ ಹೆಂಡತಿಯ ಅಣ್ಣ ಸಂಜೆ 6:00 ಗಂಟೆಗೆ ಡಿಸ್ಜಾರ್ಜ ಮಾಡಿಸಿ ಅಂಬುಲೆನ್ಸ ನಲ್ಲಿ ಕೇರಳಕ್ಕೆ ಕರೆದುಕೊಂಡು ಹೊರಟಿದ್ದರು. ದಾರಿಯಲ್ಲಿ ಅವರನ್ನು ನೋಡಿದಾಗ ಮಾತನಾಡದಿರುವದನ್ನು ನೋಡಿ ಕೇರಳಾ ರಾಜ್ಯದ ಕಣ್ಣೂರು ಜಿಲ್ಲೆಯ ಚಾಳಾ ಈಸ್ಟ್ ಎಂಬಲ್ಲಿ ಮಲಬಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ರಾತ್ರಿ 09:19 ಗಂಟೆಗೆ ವೈದ್ಯರು ಪರೀಕ್ಷಿಸಿ ಗಾಯಾಳು ಬೈಜು ಕರಿಕಟ್ಟೆ ಅವರು ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 29/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-05-2023 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080