ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 11/05/2022 ರಂದು ದಿವಾಕರ ರವರು KA-20-W-7923 ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರರನ್ನಾಗಿ ಶ್ರೀಮತಿ ಸುನಿತಾ(45)  ರವರನ್ನು ಕುಳ್ಳಿರಿಸಿಕೊಂಡು ವರಂಗ ಕಡೆಯಿಂದ ಉಪ್ಪಳ ಕಡೆಗೆ ಹೋಗುತ್ತಿರುವಾಗ ಸಂಜೆ 5:00 ಗಂಟೆಗೆ ವರಂಗ ಗ್ರಾಮದ ಮೈಲುಕಲ್ಲು ಎಂಬಲ್ಲಿ ತಲುಪುವಾಗ ಮೋಟಾರ್ ಸೈಕಲ್ ನ್ನು ದಿವಾಕರರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಸಹಸವಾರರಾದ ಶ್ರೀಮತಿ ಸುನಿತಾ ರವರು ಮೋಟಾರ್ ಸೈಕಲ್ ನಿಂದ ಡಾಮರು ರಸ್ತೆಗೆ ಬಿದ್ದಿರುತ್ತಾರೆ. ಈ ಘಟನೆಯಿಂದ ಶ್ರೀಮತಿ ಸುನಿತಾ ರವರಿಗೆ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ ಅವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ . ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ:  279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕಾರ್ಕಳ: ದಿನಾಂಕ 11/05/2022 ರಂದು 17:20 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪರಪ್ಪಾಡಿ ಎಂಬಲ್ಲಿ ಕಾರ್ಕಳ ಧರ್ಮಸ್ಥಳ  ರಾಜ್ಯ ಹೆದ್ದಾರಿಯಲ್ಲಿ ಕಾರು ನಂಬ್ರ KA-15-N-0267 ನೇಯದರ ಚಾಲಕ ಆತನ  ಕಾರನ್ನು ಧರ್ಮಸ್ಥಳ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಅದೇ ರಸ್ತೆಯಲ್ಲಿ ಧರ್ಮಸ್ಥಳ ಕಡೆಯಿಂದ ಕಾರ್ಕಳ ಕಡೆಗೆ  ಪಿರ್ಯಾದಿದಾರರು ಚಲಾಯಿಸುತ್ತಿದ್ದ KA-70-M-3375 ನೇ  ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಆರೋಪಿಯ KA-15-N-0267 ನೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಪೈಕಿ ಒಬ್ಬರ ಕಾಲಿನ ಮೂಳೆ ಮುರಿತ ವಾಗಿದ್ದು, ಅಲ್ಲದೇ ಇನ್ನೊಬ್ಬರ ಹಣೆ ಭಾಗಕ್ಕೆ ರಕ್ತ ಗಾಯವಾಗಿ, ಎರಡು ಕಾರು ಕೂಡ  ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಪಡುಬಿದ್ರಿ: ಪಿರ್ಯಾದಿದಾರರಾದ ದಾಮೋದರ ಗುಜರಾನ್ (38), ತಂದೆ: ಲೋಕನಾಥ ಜತ್ತನ್, ವಾಸ: ಮನೆ ನಂಬ್ರ: 6-24, ಕನಪು ಕೋಟಿ ಹೌಸ್, ಪಡುಬಿದ್ರಿ, ತಾಲೂಕು, ಉಡುಪಿ ನಡ್ಸಾಲು ಗ್ರಾಮ, ಕಾಪು ಇವರು ದಿನಾಂಕ 11/05/2022 ರಂದು ತಂದೆ ಲೋಕನಾಥ ಜತ್ತನ್ (73) ಎಂಬುವವರೊಂದಿಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬಂಟರ ಭವನದಲ್ಲಿ ನಡೆಯುವ ಸಂಬಂಧಿಕರ ಮದುವೆ ಮೆಹೆಂದಿ ಕಾರ್ಯಕ್ರಮಕ್ಕೆಂದು ಮನೆಯಿಂದ ನಡೆದುಕೊಂಡು ಹೊರಟು 19:45 ಗಂಟೆಗೆ ಪಡುಬಿದ್ರಿಯ ಬಂಟರ ಭವನದ ಎದುರು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯನ್ನು ದಾಟಿ, ಉಡುಪಿ–ಮಂಗಳೂರು ಏಕಮುಖ ಸಂಚಾರ ರಸ್ತೆಯನ್ನು ದಾಟಲು ಡಿವೈಡರ್ ಬಳಿ ನಿಂತುಕೊಂಡಿರುವ ಸಮಯ KA-02-MQ-9862 ನೇ ನಂಬ್ರದ ಕಾರು ಚಾಲಕ ಭರತ್ ಬೆಂಗಳೂರು ತನ್ನ ಕಾರನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯಾದಿದಾರರ ತಂದೆ ಲೋಕನಾಥ ಜತ್ತನ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿಗೆ ಗಂಭೀರ ಗಾಯ ಹಾಗೂ ಎದೆಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು, ಲೋಕನಾಥ ಜತ್ತನ್ ರವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶಿವ ಕುಮಾರ ಮೆಂಡನ್ (48), ತಂದೆ: ದಿ. ಭದ್ರ ಮೊಗವೀರ, ವಾಸ: ಗುಡ್ಡಿಮನೆ, ನಾನಾಸಾಹೇಬ್ ರಸ್ತೆ, ವಡೇರಹೋಬಳಿ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರದಲ್ಲಿ  ವ್ಯವಹಾರ ಕೆಲಸ ಮಾಡಿಕೊಂಡಿದ್ದು, ದಿನಾಂಕ 11/05/2022 ರಂಧು 10:45 ಗಂಟೆಗೆ ಯಾರೋ ವ್ಯಕ್ತಿಗಳು ಕುಂದಾಪುರ ಕೆನರಾ ಬ್ಯಾಂಕ್ ಬಳಿ ಓರ್ವ ಅಪರಿಚಿತ ಗಂಡಸಿನ ಮೃತದೇಹ ಇರುವ ಕುರಿತು ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಭೇಟಿ ನೀಡಿದಾಗ ಕುಂದಾಪುರ ಕಸಬಾ ಗ್ರಾಮದ ಮುನ್ಸಿಪಲ್ ರಸ್ತೆಯಲ್ಲಿರುವ ಕೆನರಾ ಬ್ಯಾಂಕಿನ ಎ.ಟಿ.ಎಂ. ಕಟ್ಟಡದ ಹಿಂಬದಿಯಲ್ಲಿನ ಕಂಪೌಂಡಿನ ಒಳಭಾಗದಲ್ಲಿ ಮೃತ ದೇಹ ಕಂಡುಬಂದಿದ್ದು, ಮೃತದೇಹವು ಊದಿಕೊಂಡಿದ್ದು ಚರ್ಮ ಕಿತ್ತು ಹೋಗಿರುವುದಾಗಿದೆ. ವ್ಯಕ್ತಿಯ ಕುರಿತು ವಿಚಾರಿಸಲಾಗಿ  ವ್ಯಕ್ತಿಯು ಸುಮಾರು 1 ವರ್ಷಗಳಿಂದ ಕುಂದಾಪುರ ನಗರದಲ್ಲಿ ಬಿಕ್ಷಾಟನೆ ಮಾಡುತ್ತಿದ್ದು ದಾವಣಗೆರೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ನಿವಾಸಿ ರಂಗನಾಥ ಎಂಬುದಾಗಿ ತಿಳಿದುಬಂದಿರುತ್ತದೆ. ವ್ಯಕ್ತಿಯು ಸುಮಾರು ಎರಡು ದಿನಗಳ ಹಿಂದೆ ಬಿದ್ದು ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಸುರೇಶ (45),  ತಂದೆ : ದಿ. ಕಾಂಪುರ ಪೂಜಾರಿ, ವಾಸ : ಸ್ವಾಗತ್‌  ನಿಲಯ ಶೀಲಾಪುರ  ಶಂಕರಪುರ ಅಂಚೆ ಇನ್ನಂಜೆ  ಗ್ರಾಮ, ಕಾಪು ತಾಲೂಕು  ಮತ್ತು ಉಡುಪಿ ಜಿಲ್ಲೆ ಇವರ ಅಣ್ಣ  ಸದಾನಂದ ರವರ ಮಗ ಉಮಾಶಂಕರ(26)  ರವರಿಗೆ 3 ದಿನಗಳಿಂದ ವಿಪರೀತ ಕೆಮ್ಮು ಮತ್ತು ಜ್ವರ ಇದ್ದು ಈ ಬಗ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ದಿನಾಂಕ 11/05/2022 ರಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸಂಜೆ 3:30  ಗಂಟೆಗೆ ಪಿರ್ಯಾದಿದಾರರು ಉಮಾಶಂಕರ ರವರನ್ನು ವೈದ್ಯರಲ್ಲಿ ಪರೀಕ್ಷಿಸಲು ಉಡುಪಿ ಲಲಿತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಉಮಾಶಂಕರನಿಗೆ ಸೀರಿಯಸ್ ಇದೆ ಕೂಡಲೇ  ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದಂತೆ, ಪಿರ್ಯಾದಿದಾರರು ಆತನನ್ನು  ಉಡುಪಿಯ ಆದರ್ಶ ಆಸ್ಪತ್ರೆಗೆ ಸಂಜೆ  4:30 ಗಂಟೆಗೆ ಕರೆದುಕೊಂಡು ಹೋಗುವಾಗ  ಮಾತನಾಡದೇ ತುಂಬಾ ಅಸ್ವಸ್ಥನಾಗಿದ್ದು,  ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ  ಸಂಜೆ  5:30 ಗಂಟೆಗೆ ಉಮಾಶಂಕರ ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಜ್ಯಾಕಲೀನ್ ಡೇಸಾ (37), ವಾಸ: ‘ಸುಗಂಧ ವಿಹಾರ’, ಕೋರ್ಟ್‌ ರೋಡ್,  ಜೋಡುಕಟ್ಟೆ,ಉಡುಪಿ ತಾಲೂಕು ಇವರೊಂದಿಗೆ ವಾಸವಿದ್ದ ಪಿರ್ಯಾದಿದಾರರ ತಾಯಿ ಶ್ರೀಮತಿ ಬಿ.ವಿ ಡೇಸಾ (82)ರವರಿಗೆ ದಿನಾಂಕ 08/05/2022 ರಂದು ಬಿ.ವಿ.ಬಲ್ಲಾಳ್ ಹಾಗೂ ಮನೆಯವರು ಕಟ್ಟಿಗೆ ಮತ್ತು ಆಯುಧಗಳಿಂದ ಹಲ್ಲೆ ಮಾಡಿದ್ದು, ಅದರ ಆಘಾತದಿಂದಾಗಿ ದಿನಾಂಕ 11/05/2022 ರಂದು ಬೆಳಿಗ್ಗೆ 06:00 ಗಂಟೆಗೆ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಾಯಿ ಬಿ.ವಿ ಡೇಸಾರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೇಲ್ಕಾಣಿಸಿದ ಆರೋಪಿಗಳಿಗೆ ಮೇಬಲ್‌ ಸುಮಿತ್ರ ಮತ್ತು ಕುಟುಂಬದವರು, ಮೆರ್ಲಿನ್ ಮತ್ತು ಅವಳ ಗಂಡ, ಪರಮೇಶ್ವರ, ಮಲ್ಲಿಕಾ ಭಂಡಾರಿ ಮತ್ತು ಅವರ ಕುಟುಂಬದವರು ಹಾಗೂ ಬಾಡಿಗೆದಾರರು, ಅಬ್ದುಲ್‌ ಅಝೀಝ್‌ ಮತ್ತು ಕುಟುಂಬದವರು, ಉಷಾ ಯೋಗಿಂದ್ರನಾಥ್‌ ಸಂದೀಪ್‌ ಮತ್ತು ಕುಟುಂಬದವರು, ಓರ್ವ ಅಪರಿಚಿತ ರೌಡಿ ಹೆಂಗಸು  ಮತ್ತು ಇತರರು ಸಹಕಾರ ನೀಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  79/2022 ಕಲಂ:  302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ : ಪಿರ್ಯಾದಿದಾರರಾದ ಬಾಬಿ (43), ಗಂಡ :ಶಿವ ಕುಲಾಲ್, ವಾಸ: ಹಳ್ನೀರು  ಗುಡ್ಡೆಯಂಗಡಿ ಯಡಾಡಿ –ಮತ್ಯಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಮಗಳು  ಚೈತ್ರಾ  ಹಾಗೂ  ಮೊಮ್ಮಗ ನಿವೇದ ನ ಜೊತೆಯಲ್ಲಿ  ವಾಸವಾಗಿದ್ದು,  ಪಿರ್ಯಾದಿಯ  ಮಗಳನ್ನು  ವಿಜಯ  ಎಂಬುವವನಿಗೆ  7  ವರ್ಷಗಳ  ಹಿಂದೆ  ಮದುವೆ  ಮಾಡಿ  ಕೊಟ್ಟಿದ್ದು,  ಈ  ಹಿಂದೆ  ಪಿರ್ಯಾದಿದಾರರ  ಮಗಳು ಮನೆಗೆ  ಬಂದಾಗ  ವಿಜಯನು  ಕುಡಿದು  ಬಂದು  ಗಲಾಟೆ  ಮಾಡುತ್ತಿದ್ದನು.  ಅಲ್ಲದೆ  ಮಗಳಿಗೂ  ತೊಂದರೆ  ಕೊಡುತ್ತಿದ್ದನು.  1 ½  ವರ್ಷದಿಂದ   ಮಗಳು ಮನೆಯಲ್ಲಿಯೇ  ಇದ್ದು,  ವಿಜಯನು  ದಾರವಾಢದಲ್ಲಿ  ಹೋಟೇಲ್‌‌‌‌‌‌‌‌‌‌‌‌ ಮಾಡಿಕೊಂಡಿರುತ್ತಾನೆ.   ವಿಜಯನು  ಆಗಾಗ  ಪಿರ್ಯಾದಿದಾರರ  ಮನೆಗೆ  ಪಿರ್ಯಾದಿದಾರರಿಗೆ  ಬೈದು,  ಜೀವ  ಬೆದರಿಕೆ  ಹಾಕುತ್ತಿದ್ದು,  ದಿನಾಂಕ  09/05/2022  ರಂದು  19:30  ಗಂಟೆ  ಸಮಯಕ್ಕೆ  ವಿಜಯನು  ಕುಡಿದು  ಬಂದು  ಪಿರ್ಯಾದಿದಾರರ  ಮನೆಗೆ  ಅಕ್ರಮ  ಪ್ರವೇಶ  ಮಾಡಿ  ಪಿರ್ಯಾದಿದಾರರನ್ನು  ಉದ್ದೇಶಿಸಿ ಅವಾಚ್ಯ  ಶಬ್ದಗಳಿಂದ  ಬೈದು,  ಕೊಲ್ಲದೆ  ಬಿಡುವುದಿಲ್ಲ  ಎಂಬುದಾಗಿ  ಜೀವ  ಬೆದರಿಕೆ  ಹಾಕಿರುತ್ತಾನೆ.  ಅಲ್ಲದೆ ದಿನಾಂಕ  10/05/2022  ರಂದು ಬೆಳಿಗ್ಗೆ  07:00  ಗಂಟೆಗೆ  ಪಿರ್ಯಾದಿದಾರರ ಮನೆಗೆ ಅಕ್ರಮ  ಪ್ರವೇಶ ಮಾಡಿ,  ಅವಾಚ್ಯ  ಶಬ್ದಗಳಿಂದ  ಬೈದು  ಜೀವ  ಬೆದರಿಕೆ  ಹಾಕಿರುವುದಲ್ಲದೆ  ದಿನಾಂಕ  11/05/2022  ರಂದು  17:00  ಗಂಟೆಗೆ  ಇದೇ  ರೀತಿ ಮನೆಗೆ  ಅಕ್ರಮ  ಪ್ರವೇಶ  ಮಾಡಿ  ಅವಾಚ್ಯ  ಶಬ್ದಗಳಿಂದ  ಬೈದು,  ಪಿರ್ಯಾದಿದಾರರನ್ನು ಕೊಲೆ  ಮಾಡುತ್ತೇನೆಂದು ಜೀವ  ಬೆದರಿಕೆ  ಹಾಕಿರುತ್ತಾನೆ.   ಇದರಿಂದ  ಪಿರ್ಯಾದಿದಾರರು ಮನೆಯಲ್ಲಿರಲು  ಭಯಭೀತರಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2022  ಕಲಂ: 504, 506, 448 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಶಿರ್ವಾ: ದಿನಾಂಕ 11/05/2022 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಶಿರ್ವಾ, ಪೊಲೀಸ್‌ ಠಾಣೆ ಇವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ  ಗಣಪನ ಕಟ್ಟೆಯ  ಬಶೀರ್‌ ಎಂಬಾತನು ತನ್ನ  ಮನೆಯ ಬಳಿ ಹಾಡಿಯಲ್ಲಿ ಗಂಡು ಕರುವನ್ನು  ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಟ್ಟಿ ಹಾಕಿರುತ್ತಾನೆ  ಎಂಬುದಾಗಿ ಬಂದ ಮಾಹಿತಿ ಮೇರೆಗೆ  ಸ್ಥಳಕ್ಕ ತಲುಪಿದಾಗ ಒಬ್ಬ ವ್ಯಕ್ತಿ ಸ್ಥಳದಲ್ಲಿ  ಹಾಜರಿದ್ದು ಆಸುಪಾಸು  ನೋಡಿದಾಗ ಒಂದು ಕಪ್ಪು ಬಿಳಿ ಬಣ್ಣದ  ಗಂಡು ಕರುವನ್ನು ಕಟ್ಟಿ ಹಾಕಿರುವುದು ಕಂಡು  ಬಂತು. ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ ಆತನು ತನ್ನ ಹೆಸರು ಬಶೀರ್‌ ಎಂದು ತಿಳಿಸಿದನು. ಈತನಲ್ಲಿ ಕಟ್ಟಿ ಹಾಕಿರುವ ಗಂಡು ಕರುವಿನ ಬಗ್ಗೆ  ಕೂಲಂಕುಷವಾಗಿ   ವಿಚಾರಿಸಿದಾಗ ಆತನು ತನ್ನ ಸ್ನೇಹಿತ ಮೊಹಮ್ಮದ್‌  ಹ್ಯಾರೀಸನು  ತನಗೆ  ಬೆಳಿಗ್ಗೆ  ಕರೆ  ಮಾಡಿ ಎಲ್ಲಿಯಾದರು ಮಾಂಸ ಮಾಡಿ ಮಾರಾಟ ಮಾಡಲು ದನಗಳು  ಇದ್ದಲ್ಲಿ ತಿಳಿಸುವಂತೆ ತಿಳಿಸಿದನು. ತಾನು  ಆ ಸಮಯದಲ್ಲಿ ಅವನಲ್ಲಿ ಕಟ್ಟಿಂಗೇರಿ ರಸ್ತೆ  ಬದಿ  ಬಿಡಾಡಿ ದನಗಳು ಇರುವುದಾಗಿ ತಿಳಿಸಿದೆನು. ಆ  ಸಮಯದಲ್ಲಿ  ಆತನು ನನ್ನಲ್ಲಿ  ತಾನು  ಹಾಗೂ ತನ್ನ ಸ್ನೇಹಿತನನ್ನು ಕರೆದುಕೊಂಡು  ಬರುತ್ತೇನೆ ದನವನ್ನು   ಕಳವು  ಮಾಡಿ  ಮಾಂಸ  ಮಾಡಿ ಮಾರಾಟ ಮಾಡುವ  ಬಂದ ಹಣವನ್ನು  ಸಮಾನವಾಗಿ ಹಂಚಿಕೊಳ್ಳುವ  ಎಂದು  ತಿಳಿಸಿದನು.  ಅವರಿಬ್ಬರು ದಿನಾಂಕ 11/05/2022 ರಂದು ಬೆಳಿಗ್ಗೆ  11:00  ಗಂಟೆಗೆ  ಕಟ್ಟಿಂಗೇರಿ  ಗಣಪನ ಕಟ್ಟೆ  ಬಳಿಗೆ  ಬಂದಿದ್ದು  ನಂತರ  ತಾನು, ಮೊಹಮ್ಮದ್‌ ಹ್ಯಾರೀಸ್‌ ಮತ್ತು ಆತನ ಜೊತೆ ಬಂದಿದ್ದ  ಹೆಸರು ತಿಳಿಯದ  ಇನ್ನೊಬ್ಬ  ವ್ಯಕ್ತಿ  ಸೇರಿ ಬೊಬ್ಬರ್ಯ ಕೆರೆ  ಎಂಬಲ್ಲಿಂದ  ರಸ್ತೆ  ಬದಿಯಲ್ಲಿದ್ದ ಗಂಡು ಕರುವನ್ನು  ಕಳವು ಮಾಡಿ ಬಳಿಕ ತಾವು ಮೂರು ಜನರು ಸೇರಿ ತನ್ನ ಮನೆಯ  ಹತ್ತಿರದ ಹಾಡಿಗೆ ಎಳೆದುಕೊಂಡು ಬಂದು ಕಟ್ಟಿ ಹಾಕಿರುವ  ವಿಚಾರ ತಿಳಿಸಿದ್ದಲ್ಲದೆ,  ಈ ಗಂಡು ಕರುವನ್ನು ರಾತ್ರಿ  ಕಡಿದು ಮಾಂಸ  ಮಾಡುವ  ಬಗ್ಗೆ  ಸಲಕರಣೆಗಳನ್ನು ತರುವುದಾಗಿ ತಿಳಿಸಿ  ಅವರಿಬ್ಬರು ಹೋಗಿರುತ್ತಾರೆ  ಎಂದು  ತಿಳಿಸಿದ್ದಲ್ಲದೆ ತಾನು ಈ ಗಂಡು ಕರುವನ್ನು ಇಲ್ಲಿಯೇ ಕಾಯುತ್ತಿರುವುದಾಗಿ ತಿಳಿಸಿದನು. ಸ್ಥಳದಲ್ಲಿದ್ದ  ಗಂಡು ಕರುವನ್ನು  ಪರಿಶೀಲಿಸಲಾಗಿ  ಕಪ್ಪು  ಬಿಳಿ  ಬಣ್ಣದಿಂದ  ಕೂಡಿದ  ಗಂಡು  ಕರು  ಆಗಿರುತ್ತದೆ. ಈ ಗಂಡು ಕರುವಿನ ಮೌಲ್ಯ 5,000/-  ಆಗಿರುತ್ತದೆ. ಅದರ  ಕುತ್ತಿಗೆಯಲ್ಲಿದ್ದ   ಸುಮಾರು  10 ಅಡಿ ಉದ್ದದ ನೈಲಾನ್‌ ಹಗ್ಗವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022, ಕಲಂ: 4, 5, 12 THE KARNATAKA PREVENTION OF SLAUGHTER AND PRESERVATION OF CATTLE ACT-2020, 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-05-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080