ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಮಂಜುನಾಥ (32), ತಂದೆ: ಮುತ್ತಪ್ಪ, ವಾಸ: ಮನೆ ನಂಬ್ರ 118, ಕೆಲವಡಿ ಅಂಚೆ, ಲಿಂಗಾಪುರ ಗ್ರಾಮ, ಬಾಗಲಕೋಟೆ ಜಿಲ್ಲೆ ಇವರು ದಿನಾಂಕ 11/05/2021 ರಂದು ತನ್ನ ಸ್ವಂತ ಊರಾದ ಬಾಗಲಕೋಟೆಯಲ್ಲಿ ತನ್ನ ತಮ್ಮನ ಮದುವೆ ಇರುವ ಕಾರಣ ಊರಿಗೆ ತನ್ನ KA-19-MA-4783 ನೇ Maruthi A-Star ಕಾರಿನಲ್ಲಿ ತನ್ನ ಸ್ನೇಹಿತರುಗಳಾದ ಅನಿಲ್‌, ಅರ್ಜುನ ಮತ್ತು ಯತಿರಾಜ್‌ನೊಂದಿಗೆ ಹೊರಟಿದ್ದು ಕಾರನ್ನು ಯತಿರಾಜ್‌ನು ಚಲಾಯಿಸುತ್ತಿದ್ದು ಚಾಲಕ ಪಕ್ಕದಲ್ಲಿ ಸೀಟಿನಲ್ಲಿ ಅರ್ಜುನ್‌ ಕುಳಿತಿದ್ದು, ಹಿಂಬದಿ ಸೀಟಿನಲ್ಲಿ ಅನಿಲ್‌ ಮತ್ತು ಪಿರ್ಯಾದಿದಾರರು ಕುಳಿತು ಸವಾರಿ ಮಾಡಿಕೊಂಡು ಮಂಗಳೂರಿನ ಕದ್ರಿಯಿಂದ ಮದ್ಯಾಹ್ನ 12:00 ಗಂಟೆಗೆ ಹೊರಟು ಉಡುಪಿ ಮಾರ್ಗವಾಗಿ ಬರುತ್ತಿರುವಾಗ ಕಾರನ್ನು ಚಲಾಯಿಸುತ್ತಿದ್ದ ಯತೀರಾಜ್‌ನು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಪರಿಣಾಮ ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ ಕೋಟ ಮೂರಕೈ ಬಳಿ ಇರುವ ಕೋಟ ಹೈಸ್ಕೂಲ್‌ ಎದುರು ತಲುಪುವಾಗ ಕಾರು ಚಾಲಕನ ಹತೋಟಿ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ತೀರ ಎಡಭಾಗಕ್ಕೆ ಚಲಾಯಿಸಿ ರಸ್ತೆಯ ಎಡಭಾಗದಲ್ಲಿರುವ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಕೋಟ ವಿವೇಕ್‌ ಹೈಸ್ಕೂಲ್‌ ಕಂಪೌಂಡ್‌ಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾದ ಪರಿಣಾಮ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿದಾರರಿಗೆ ಮೂಗಿನ ಬಳಿ ಮತ್ತು ಹಣೆಯ ಬಳಿ ರಕ್ತ ಗಾಯ ಹಾಗೂ ಬೆನ್ನಿಗೆ ನೋವುಂಟಾಗಿದ್ದು, ಅನಿಲ್‌ನಿಗೆ ಎಡ ಕಣ್ಣೆನ ಬಳಿ ರಕ್ತ ಗಾಯವಾಗಿರುತ್ತದೆ. ಹಾಗೂ ಚಾಲಕ ಯತಿರಾಜ್‌ನಿಗೆ ಎಡಕೈ ಮಣಿಗಂಟಿನ ಬಳಿ ಮೂಳೆ ಮುರಿತ ಗಾಯವುಂಟಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ:  ಪಿರ್ಯಾದಿದಾರರಾದ ಮಲ್ಲಿಕಾರ್ಜುನ (33), ತಂದೆ: ಶ್ರೀನಿವಾಸ, ವಾಸ: ಗುಡ್ಡೆಯಂಗಡಿ ಉಗ್ರಾಣಿಕಟ್ಟೆ ಕುಕ್ಕುಜೆ ಗ್ರಾಮ ಕಾರ್ಕಳ ತಾಲೂಕು ಇವರ ತಂದೆ ಶ್ರೀನಿವಾಸ ( 69) ಇವರು ದಿನಾಂಕ 11/05/2021 ರಂದು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಕಾಳಾಯಿ ಎಂಬಲ್ಲಿರುವ ತನ್ನ ಅಣ್ಣ ಚಣಿಲ ರವರ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ತೋಟದಲ್ಲಿರುವ ತೆಂಗಿನ ಮರದಲ್ಲಿರುವ ತೆಂಗಿನ ಕಾಯಿ ಕೊಯ್ಯುವ ಸಲುವಾಗಿ ಏಣಿಯ ಸಹಾಯದಿಂದ ತೆಂಗಿನ ಮರಕ್ಕೆ ಹತ್ತಿ 13 ಅಡಿ ಎತ್ತರದಲ್ಲಿ ದೊಟ್ಟಿಯ ಸಹಾಯದಿಂದ ಬೆಳಿಗ್ಗೆ 11:00  ಗಂಟೆಗೆ ತೆಂಗಿನ ಕಾಯಿ ಕೊಯುತ್ತಿರುವಾಗ ಮರದಿಂದ ಕೊಯ್ದ ತೆಂಗಿನ ಕಾಯಿಯು ಅವರ ತಲೆಯ ಮೇಲೆ ಬಿದ್ದ ಪರಿಣಾಮ ಅವರು ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಕವುಚಿ ಬಿದ್ದ ಪರಿಣಾಮ ಅವರ ಎದೆಗೆ ಮತ್ತು ಹೊಟ್ಟೆಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿದ್ದು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಮದ್ಯಾಹ್ನ 2:50 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕಣಗಳು

 • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ 12/05/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ 11/05/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನ್ ಬಳಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ  06:00 ಗಂಟೆಯಿಂದ 16:00 ಗಂಟೆಯ ಮಧ್ಯಾವಧಿಯಲ್ಲಿ ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1. ರುದ್ರ ಆಚಾರ್, ತಂದೆ: ನಾರಾಯಣ ಆಚಾರ್, ವಾಸ: ಮಠದ ಬೆಟ್ಟು, ಕುಂದಾಫುರ ತಾಲೂಕು, ಉಡುಪಿ ಜಿಲ್ಲೆ ವಾಹನ ಸಂಖ್ಯೆ KA.20.EM . 2610  WEGO SCOOTY , 2.ಸೋಮ ದೇವಾಡಿಗ, ತಂದೆ: ಕೊರಗ ದೇವಾಡಿಗ, ವಾಸ: ನಾಗಶ್ರೀ ನಿಲಯ ಸಹನ ಹಾಲ್ ಬಳಿ ಹಂಗಳೂರು  ಗ್ರಾಮ ಕುಂದಾಫುರ  ತಾಲೂಕು ಉಡುಪಿ  ಜಿಲ್ಲೆ ವಾಹನ ಸಂಖ್ಯೆ : KA.20. EK. 5397  HERO HONDA SPLENDRE   ದ್ವಿಚಕ್ರ ವಾಹನ, 3.    ಮಿಥುನ್, ತಂದೆ ಮಹಾಬಲ, ವಾಸ: ಹಂಗಳೂರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA.20.ES.3606  HONDA DIO ದ್ವಿಚಕ್ರ ವಾಹನ , 4.    ಅರ್ಷಾಕ್ ಪ್ರಾಯ 28 ವರ್ಷ, ತಂದೆ: ಸುಲೈಮಾನ್ ವಾಸ: ಜನತಾ ಕಾಲೋನಿ ಮೂಡುಗೋಪಾಡಿ ಗ್ರಾಮ ಕುಂದಾಪುರ ತಾಲೂಕು ವಾಹನ ಸಂಖ್ಯೆ : KA.20 ED.8283, HONDA EXTREEM ದ್ವಿಚಕ್ರ ವಾಹನ, 5.    ವೀರ ಮಣಿ,  ವಾಹನ ಸಂಖ್ಯೆ: KA.20 EF.6923, HONDA DREAM ದ್ವಿಚಕ್ರ ವಾಹನ, 6.ರವಿ ಪ್ರಾಯ 35 ವರ್ಷ, ತಂದೆ: ಶೇಖರಪ್ಪ, ವಾಸ: ವಿನಾಯಕ ನಗರ ಆನೆಗುಡ್ಡೆ ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಮೊಬೈಲ್ ನಂಬ್ರ 9731910854. ವಾಹನ ಸಂಖ್ಯೆ : KA.20 EK.3919 BAJAJ PULSOR   ದ್ವಿಚಕ್ರ ವಾಹನ, 7.    ದಿನೇಶ್ ಪ್ರಾಯ 48 ವರ್ಷ, ತಂದೆ ಗೋವಿಂದ, ವಾಸ: ಗಾಣಿಗರಬೆಟ್ಟು, ಆನಗಳ್ಳಿ ಗ್ರಾಮ ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ವಾಹನ ಸಂಖ್ಯೆ : KA.20 W.8891  TVS PEP   ದ್ವಿಚಕ್ರ ವಾಹನ, 8.ದೇವರಾಜ್  ಪ್ರಾಯ 40 ವರ್ಷ, ತಂದೆ ಮಹಾಬಲ ಮೊಗವೀರ, ವಾಸ: ಮೆಟ್ರೋ ಪ್ಯಾಲೇಸ್ ಹೊಟೇಲ್ ಬಳಿ, ಸಂಗಮ್  ಜಂಕ್ಷನ್ ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಉಡುಪಿ  ಜಿಲ್ಲೆ ವಾಹನ ಸಂಖ್ಯೆ : KA.19 EK.7686  HERO MESTRO    ದ್ವಿಚಕ್ರ ವಾಹನ, 9.    ರೋಬರ್ಟ್ ಡಿ’ಸೋಜಾ ಪ್ರಾಯ 64 ವರ್ಷ, ದಿವಂಗತ.ಜೋನ್ ಡಿ’ಸೋಜಾ ವಾಸ: ದೇವರ ಅನುಗ್ರಹ, ಕಳಂಜೆ ಆನಗಳ್ಳಿ ಗ್ರಾಮ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA.20 B 2558 BAJAJ AUTO RIKSHWA ವಾಹನ, 10.    ನವೀನ ಪ್ರಾಯ 43 ವರ್ಷ, ವಾಸ: ಖಾರ್ವಿ ಮೇಲ್ಕೇರಿ,  ಖಾರ್ವಿಕೇರಿ ಕಸಬಾ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA.20 EV 3626  HONDA ACTIVA  ದ್ವಿಚಕ್ರ ವಾಹನ, 11.    ಜೈನುಲ್ಲಾಬ್ದೀನ್ ತಂದೆ  ಮೊಹಿದ್ದೀನ್, ವಾಸ: ಮಧ್ಯೆ ಕೋಡಿ, ಕೋಡಿ  ಕಸಬಾ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ವಾಹನ ಸಂಖ್ಯೆ : KA.20 EV 2218  HONDA ACTIVA  ದ್ವಿಚಕ್ರ ವಾಹನ  ಮೇಲ್ಕಂಡ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಕುಂದಾಪುರ: ದಿನಾಂಕ: 11/05/2021 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ ಇವರು  ರೌಂಡ್ಸ್ ಕರ್ತವ್ಯದಲ್ಲಿರುವಾಗ 18:30 ಗಂಟೆ ಸಮಯಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದ ಬಳಿ  ಇರುವ ಗೋಪಿ ಕೋಲ್ಡ್ ಡ್ರಿಂಕ್ಸ್  ಎಂಬ ಬೇಕರಿ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ತೆರೆದು ಮಾರಾಟ ವಹಿವಾಟು ನಡೆಸುತ್ತಿರುವುದು ಕಂಡುಬಂದಿರುತ್ತದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹೊರಡಿಸಿದ ಮಾರ್ಗ ಸೂಚಿಗಳು ಹಾಗೂ ಮಾನ್ಯ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ 27/04/2021 ರಿಂದ 12/05/2021 ರ ತನಕ  ಕೆಲವೊಂದು ಸಾರ್ವಜನಿಕ  ಚಟುವಟಿಕೆಗಳನ್ನು ನಿರ್ಬಂಧಿಸಿ ಹೊರಡಿಸಿರುವ, ಆದೇಶದನ್ವಯ ಈ ಅವಧಿಯಲ್ಲಿ  ಬೇಕರಿ  ಮಾರಾಟದ ಅಂಗಡಿಯನ್ನು ಬೆಳಿಗ್ಗೆ 10.00 ಗಂಟೆಯ ಬಳಿಕ ಮುಚ್ಚುವಂತೆ ಆದೇಶ ಇರುತ್ತದೆ. ಆದರೂ ಅಂಗಡಿಯ ಮಾಲಕರಾದ ರಘುವೀರ್ ಭಟ್ (47), ತಂದೆ: ದಿ. ಗೋಪಾಲಕೃಷ್ಣ ಭಟ್, ವಾಸ: ಬೆನಗಲ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಗೋಪಿ ಕೋಲ್ಡ್ ಡ್ರಿಂಕ್ಸ್ ಎಂಬ ಬೇಕರಿ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಸಂಜೆ 6.30 ಗಂಟೆಗೆ ತೆರೆದು ಮಾರಾಟ ವಹಿವಾಟು ನಡೆಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ 12/05/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ 11/05/2021 ರಂದು ಸುದರ್ಶನ್ ಬಿ.ಎನ್, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಸಂಚಾರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕುಂದಾಪುರ ಕಸಬಾ ಗ್ರಾಮದ ಚರ್ಚ್ ರಸ್ತೆಯಲ್ಲಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ  11:00  ಗಂಟೆಯಿಂದ  19.00 ಗಂಟೆಯ ಮದ್ಯಾವಧಿಯಲ್ಲಿ ಚರ್ಚ್ ರಸ್ತೆ ಮಾರ್ಗವಾಗಿ ಈ ಕೆಳಕಂಡ ವಾಹನಗಳನ್ನು ಅದರ ಸವಾರರು ಚಲಾಯಿಸಿಕೊಂಡು ಬರುತ್ತಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ  ವಾಹನಗಳನ್ನು ಅದರ ವಾಹನ ಸವಾರರು ಚಲಾಯಿಸಿಕೊಂಡು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1) KA 19 EE 3020, ವಿಶಾಲ್ (23), ತಂದೆ: ವಿವೇಕ್, ವಾಸ: ಚಿಕ್ಕನ್ ಸಾಲ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು, 2) KA12 S 7118,  ಪ್ರಿನ್ಸೆಸ್ , ಪ್ರಾಯ: 24 ವರ್ಷ, ತಂದೆ: ಆಂತೋನಿ, ಚರ್ಚ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021  ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 12-05-2021 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080