ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕೃಷ್ಣ  ನಾಯ್ಕ (40), ತಂದೆ: ರಾಮ ನಾಯ್ಕ, ವಾಸ:ಗೋಳಿಯಂಗಡಿ, ಹಿಳಿಯಾಣ ಗ್ರಾಮ  ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 10/04/2023 ರಂದು  ಬೆಳಿಗ್ಗೆ  10:25 ಗಂಟೆಗೆ ಸೆಂಟ್ರಿಂಗ್ ಕೆಲಸದ ಬಗ್ಗೆ  ಗೋಳಿಯಂಗಡಿಯಿಂದ 11 ನೇ  ಉಳ್ಳೂರಿಗೆ ಅವರ ಮೋಟಾರ್ ಸೈಕಲ್ ನಂಬ್ರ KA-20-EN-4116ನೇದರಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ಎದುರು ಪೂರ್ವ ಬದಿಯ ರಸ್ತೆಯಿಂದ KA-20-AB-5408 ನೇ ಗೂಡ್ಸ್ ರಿಕ್ಷಾವನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ನಾವುಂದ ಗ್ರಾಮದ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿಯ ಯು ಟರ್ನ ನಲ್ಲಿ ಯಾವುದೇ ಸೂಚನೆ ನೀಡದೇ  ರಿಕ್ಷಾವನ್ನು ಯೂ ಟರ್ನ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಪಶ್ಚಿಮ ಬದಿಯ ರಸ್ತೆಯಲ್ಲಿ ಬರುತ್ತಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲ್ ರಿಕ್ಷಾದ ಹಿಂಬದಿಗೆ ತಾಗಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದಿದ್ದು, ಪಿರ್ಯಾದಿದಾರರ ಎಡಕಾಲಿನ ಮೊಣಗಂಟಿಗೆ  ಒಳ ಜಖಂಗೊಂಡು ಮೂಳೆ ಮುರಿತ, ಎರಡೂ ಕಾಲಿನ ಮುಂಗಾಲಿನ ಗಂಟಿಗೆ ತರಚಿದ ಗಾಯ ಹಾಗೂ ಬಲ ಭುಜಕ್ಕೆ ಒಳ ಜಖಂ  ಉಂಟಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಅಲ್ಲಿನ  ಸ್ಥಳೀಯರು ಉಪಚರಿಸಿ ಅಂಬುಲೆನ್ಸ್ ವಾಹನದಲ್ಲಿ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023 ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 09/04/2023 ರಂದು ಪಿರ್ಯಾದಿದಾರರಾದ ಗುಲಾಬಿ ಕುಲಾಲ್ತಿ (55), ಗಂಡ: ಜೋಗು ಕುಲಾಲ್‌, ವಾಸ: ಶ್ರೀ ಮಂಜುನಾಥ ಕೃಪಾ, ಹವರಾಲು ಕಾವಡಿ, ಕಾವಡಿ ಅಂಚೆ & ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಗಂಡ ಆರೋಪಿ ಜೋಗು ಕುಲಾಲ್‌ ರವರು ಸವಾರಿ ಮಾಡುತ್ತಿದ್ದ KA-20-EU-8640  ನೇ ಹೊಂಡ ಆಕ್ಟೀವಾ ಸ್ಕೂಟರ್‌ ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಸಾಸ್ತಾನದಿಂದ ಬೆಣ್ಣೆ ಕುದ್ರು – ಬಾರ್ಕೂರು ಮಾರ್ಗವಾಗಿ ಮನೆಗೆ ಹೋಗುತ್ತಾ  ಮಧ್ಯಾಹ್ನ 4:30 ಗಂಟೆಗೆ ಹೊಸಾಳ ಗ್ರಾಮದ ಬದನಗೋಳಿ ಕ್ರಾಸ್‌ ಬಳಿ  ತಲುಪುವಾಗ ಜೋಗು ಕುಲಾಲ್‌ ರವರು ಸ್ಕೂಟರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆಯ ಹಂಪ್‌ ಅನ್ನು ದಾಟಲು ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌ ನಿಂದ ರಸ್ತೆಗೆ ಬಿದ್ದ ಪರಿಣಾಮ ಅವರ ಬಲ ಕೈ ತೋಳಿನ ಬಳಿ ತೀವ್ರ ತರದ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರಸಾದ್ (49), ತಂದೆ: ರಾಗು ಬಂಗೇರ, ವಾಸ: ರಾಜೀವ ನಗರ, ಪಲಿಮಾರು ಅಂಚೆ, ನಂದಿಕೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ವ್ಯಾಪಾರ ವೃತ್ತಿ ಮಾಡಿಕೊಂಡಿದ್ದು,  ದಿನಾಂಕ 10/04/2023 ರಂದು ಅವರ ಮೋಟಾರ್‌‌ಸೈಕಲ್ಲಿನಲ್ಲಿ ಕಾಪುವಿಗೆ ಹೋಗಿ ವಾಪಾಸ್ಸು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಪಡುಬಿದ್ರಿ ಕಡೆಗೆ ಬರುತ್ತಾ 18:00 ಗಂಟೆಯ ವೇಳೆಗೆ ಕಾಪು ತಾಲೂಕು ಪಾದೆಬೆಟ್ಟು ಗ್ರಾಮದ ಕಲ್ಸಂಕ ಸೇತುವೆ ಬಳಿ ತಲುಪಿದಾಗ KA-20-D-9376 ನೇ ನಂಬ್ರದ  ಬೊಲೆರೋ ಪಿಕಪ್ ವಾಹನದ ಚಾಲಕ ಸದಾನಂದ ಪಾದೆಬೆಟ್ಟು ತನ್ನ ವಾಹನವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ಸೈಕಲ್ಲನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಿ ಎದುರು ಹೋಗುತ್ತಿದ್ದ KA-20-EZ-8100 ನೇ ನಂಬ್ರದ ಆಕ್ಟಿವಾ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಪರಿಚಯದ ಸ್ಕೂಟಿ ಸವಾರ ಪಲಿಮಾರು ಗ್ರಾಮದ ವಿಜಯ ಪೂಜಾರಿ(68) ಎಂಬುವವರು ರಸ್ತೆಗೆ ಎಸೆಯಲ್ಪಟ್ಟು, ಅವರ ತಲೆಗೆ, ಕುತ್ತಿಗೆಗೆ ಹಾಗೂ ಎಡಭುಜಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಪ್ರಜ್ಞಾಹೀನರಾಗಿರುತ್ತಾರೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ದಿನಾಂಕ  11/04/2023  ರಂದು  ಬೆಳಿಗ್ಗೆ  ಪಿರ್ಯಾದಿದಾರರಾದ ರಾಕೀಬ್(20)‌, ತಂದೆ: ರಶೀದ್‌, ವಾಸ: ಹೂಡೆ, ಪಡುತೋನ್ಸೆ ಗ್ರಾಮ ಇವರ ಚಿಕಿಪ್ಪನ ಮಗ ಮುಜಾಮಿಲ್ ಪಿರ್ಯಾದಿದಾರರಿಗೆ  ಪೋನ್  ಮಾಡಿ  ಹೂಡೆ ಜದೀದ್   ಮಸೀದಿ ಬಳಿ  ಮೈದಾನದಲ್ಲಿ ಕ್ರಿಕೇಟ್  ಆಡುವ  ಸಮಯ ಆಟದ ವಿಚಾರದಲ್ಲಿ ತನಗೆ ಹಾಗೂ  ಬಶೀರ್ ರವರ ಮಗ ನಿಗೆ  ಗಲಾಟೆ ಆದ  ಬಗ್ಗೆ  ತಿಳಿಸಿದ್ದು‌, ಪಿರ್ಯಾದಿದಾರರು ಆಟದ   ಮೈದಾನಕ್ಕೆ  ಬಂದು  ಬಶೀರ್ ರವರ ಮಗನಿಗೆ   ಯಾಕೆ  ಗಲಾಟೆ  ಮಾಡಿದ್ದು ಎಂದು ಬೈದು ಆತನನ್ನು  ದೂಡಿದ್ದು  , ಬಳಿಕ   ಬೆಳಿಗ್ಗೆ 07:45  ಗಂಟೆಗೆ  ಪಿರ್ಯಾದಿದಾರರ ತಾಯಿ  ಪೋನ್  ಮಾಡಿ  ಬಶೀರ್  ಮನೆ  ಬಳಿ ಬಂದು  ಬೈದು  ಹೋಗಿರುವುದಾಗಿ  ತಿಳಿಸಿರುತ್ತಾರೆ.   ಬೆಳಿಗ್ಗೆ 8:45  ಗಂಟೆಗೆ  ಪಿರ್ಯಾದಿದಾರರು ಹೂಡೆ ಇಸ್ಲಾಮಿಕ್  ಲೈಬ್ರೆರಿ  ಬಳಿ  ಇರುವಾಗ  ಬಶೀರ್ ಅಲ್ಲಿಗೆ ತನ್ನ  ಮಗನಿಗೆ  ಯಾಕೆ ಹೊಡೆದಿರುತ್ತಿ ಎಂದು  ಕೇಳಿ ಕಬ್ಬಿಣದ  ರಾಡ್ ನಿಂದ  ಪಿರ್ಯಾದಿದಾರರ  ತಲೆಯ ಹಿಂಬದಿಗೆ  ಹೊಡೆದ  ಪರಿಣಾಮ  ರಕ್ತಗಾಯ ಆಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ: 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 11/04/2023 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಸಲ್ಮಾ (38), ಗಂಡ: ಬಶೀರ್‌,ವಾಸ: ಜದಿದ್‌ ಜಾಮೀಯ ಮಸೀದಿ ಹತ್ತಿರ ಹೂಡೆ ಪಡುತೋನ್ಸೆ ಗ್ರಾಮ ಇವರ ಮಗ  ಮನೆ ಸಮೀಪ ಇತರ ಮಕ್ಕಳೊಂದಿಗೆ  ಕ್ರಿಕೇಟ್  ಆಟ ಆಡಲು  ಹೋಗಿದ್ದು, ಬೆಳಿಗ್ಗೆ  7:30  ಗಂಟೆಗೆ  ಪಿರ್ಯಾದಿದಾರರ ಮಗ  ಅರ್ಶಾದ್  ಕೂಗುವುದನ್ನು ಕೇಳಿ  ಪಿರ್ಯಾದಿದಾರರು ಹೋದಾಗ  ಪಿರ್ಯಾದಿದಾರರ ಮಗನಿಗೆ ರಾಕೀಬ್ ಕೆನ್ನಗೆ , ಎದೆಗೆ ,  ಕೋಲಿನಲ್ಲಿ ಹೊಡೆದಿದ್ದು, ಈ  ಬಗ್ಗೆ ಯಾಕೆ  ಹೊಡೆದಿದ್ದು ಎಂದು  ಕೇಳಿದಕ್ಕೆ  ರಾಕೀಬ್ ಪಿರ್ಯಾದಿದಾರರಿಗೆ  ಹಾಗೂ ಅವರ ಮಗನಿಗೆ ಅವಾಚ್ಯ ಶಬ್ದಗಳಿಂದ   ಬೈದು  ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023, ಕಲಂ:  324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಮಹಾಂತೇಶ್ (41),  ತಂದೆ: ಬಸವರಾಜ್,  ವಾಸ; ವಾಸ 18/24 ಎ, ಬಂಗ್ಲೆಗುಡ್ಡೆ, ಕಸಬಾ ಗ್ರಾಮ, ಕಾರ್ಕಳ , ಕಾರ್ಕಳ ತಾಲೂಕು ಇವರು  ದಿನಾಂಕ 11/04/2023 ರಂದು ಮನೆಯ ಬಳಿ ಬಾತ್‌ರೂಮು ಹೊಂಡ ತೆಗೆಯುತ್ತಿದ್ದಾಗ ಆಸುಪಾಸಿನವರು  ಆಕ್ಷೇಪಿಸಿದ್ದು ನಂತರ ಸಂಜೆ 17:00 ಗಂಟೆಗೆ  ಪಿರ್ಯಾದಿದಾರರು ತನ್ನ ಹೆಂಡತಿ ಮಮತಾರೊಂದಿಗೆ ಬಾತ್‌ರೂಮು ಹೊಂಡ ತೆಗೆಯುವ  ಸ್ಥಳದ ಬಳಿ ನಿಂತುಕೊಂಡಿರುವಾಗ ಅಪಾದಿತರಾದ ಸಂತೋಷ, ರಮೇಶ, ಪ್ರಸನ್ನ, ಪ್ರತಾಪ, ಪುಟ್ಟಮ್ಮ, ವಿಶಾಲ, ಅಶ್ವಿನಿ, ಶ್ಯಾಮ, ಕವಿತಾ(ಬಕ್ಕು) ಮತ್ತು ಅಶ್ವಿನಿ ರವರು  ಅಕ್ರಮ ಕೂಟ ಸೇರಿಕೊಂಡು ಬಂದು ಬಾತ್‌ರೂಮ್ ಹೊಂಡ ತೆಗೆಯದಂತೆ ಆಕ್ಷೇಪಿಸಿ ರಮೇಶ ಮತ್ತು ಸಂತೋಷ ರವರು ಪಿರ್ಯಾದಿದಾರರ ಹೆಂಡತಿಗೆ  ಕೈಯಿಂದ ಹೊಡೆದು, ಮುಖಕ್ಕೆ ಗುದ್ದಿದ್ದು, ಪ್ರಸನ್ನ ಮತ್ತು ಪ್ರತಾಪ ಸೇರಿ ಮಮತಾರ ವರಿಗೆ ಹಲ್ಲೆ ಮಾಡಿದ್ದು, ಹಾಗೂ ಅಪಾದಿತರಾದ ಪುಟ್ಟಮ್ಮ, ವಿಶಾಲ, ಅಶ್ವಿನಿ, ಶ್ಯಾಮ, ಕವಿತಾ(ಬಕ್ಕು) ಅಶ್ವಿನಿ, ರವರು    ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ  ಬೈದು ಪಿರ್ಯಾದಿದಾರರ  ಹೆಂಡತಿಗೆ ಕೈಯಿಂದ  ತೋರುಬೆರಳಿಗೆ  ಹೊಡೆದಿರುತ್ತಾರೆ ಹಾಗೂ  ಮುಖಕ್ಕೆ ಕಲ್ಲಿನಿಂದ  ಗುದ್ದಿರುತ್ತಾರೆ  ಗಾಯಗೊಂಡ  ಮಮತ ರವರು ಕಾರ್ಕಳ ಸರಕಾರಿ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  45/2023  ಕಲಂ: 143,147,148, 354, 323,324, 504,506 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಕಾರ್ಕಳ: ದಿನಾಂಕ 11/04/2023 ರಂದು ಸಂಜೆ 5:00 ಗಂಟೆಗೆ ಕಾರ್ಕಳ ತಾಲೂಕು ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಮಟನ್‌ಸ್ಟಾಲ್‌ ಬಳಿ ಪಿರ್ಯಾದಿದಾರರಾದ ಪುಟ್ಟಮ್ಮ (65),  ಗಂಡ: ದೇವು, ವಾಸ: ಮಟನ್‌ಸ್ಟಾಲ್‌ಬಳಿ, ಬಂಗ್ಲೆಗುಡ್ಡೆ, ಕಾರ್ಕಳ ಕಸಬಾ ಗ್ರಾಮ, ಕಾರ್ಕಳ ಇವರು  ನಡೆದುಕೊಂಡು ಹೋಗುವ  ದಾರಿಯಲ್ಲಿ ಆಪಾದಿತರಾದ 1) ಮಹಾಂತೇಶ, 2) ಮಮತಾ ಇವರು ಟಾಯ್ಲೆಟ್ ಹೊಂಡ ತೆಗೆಯುತ್ತಿರುವ ಬಗ್ಗೆ  ಮಾತನಾಡಿದಾಗ, ಆಪಾದಿತರಾದ 1 ಮತ್ತು 2 ನೇಯವರು  ಪಿರ್ಯಾದಿದಾರರ ಮೇಲೆ ಹಲ್ಲೆ ನಡೆಸಿ ಈ ಬಗ್ಗೆ ಪಿರ್ಯಾದಿದಾರರ ಮಗ ಸಂತೋಷ್ ಮತ್ತು ಮಗಳು ವಿಶಾಲ ರವರು ಕೇಳಲು ಹೋದಾಗ    ಅವರ ಮೇಲೆ ಕೂಡಾ ಕೈಯಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023  ಕಲಂ: 323, 354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 10/04/2023 ರಂದು ಸುಮಾ ಬಿ, ಪೊಲೀಸ್‌ ಉಪನಿರೀಕ್ಷಕರು (ಕಾ&ಸು), ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕಾಪು ತಾಲೂಕು, ಮಲ್ಲಾರು ಗ್ರಾಮದ ಮಲ್ಲಾರು ಗ್ರಾಮ ಪಂಚಾಯತ್ ಕಛೇರಿಯ ಬಳಿ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿಲಾಗಿ ಆತನ ಹೆಸರು ರಶ್ವೀದ್ (20) ಎಂಬುದಾಗಿ ತಿಳಿಸಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ  ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿಸಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 11/04/2023 ರಂದು ರಶ್ವೀದ್  ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2023 ಕಲಂ: 27 (b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-04-2023 10:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080