ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ದಿನಾಂಕ 11/04/2022 ರಂದು ಪಿರ್ಯಾದಿದಾರರಾದ ಮಹಾದೇವ  ಪ್ರಭು  (53), ತಂದೆ: ದಿ. ನಾರಾಯಣ ಪ್ರಭು  , ವಾಸ: ಶಿವ ಸರ್ನ್ನಿಇ ಮನೆ ಬೆಳ್ಳಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರು  ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆಯಲ್ಲಿರುವ ತನ್ನ ಅಂಗಡಿಯಲ್ಲಿ ಇರುವಾಗ ಬೆಳಿಗ್ಗೆ 09:15 ಗಂಟೆಗೆ ಪೆರ್ಡೂರು ಕಡೆಯಿಂದ ಕೆ ಜಿ ರೋಡ್ ಕಡೆಗೆ KA-20-ES-6652 ನೇ ಮೋಟಾರ್  ಸೈಕಲ್  ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ನಿರ್ಲಕ್ಷ ತನದಿಂದ ಸವಾರಿ ಮಾಡಿಕೊಂಡು ಬಂದು ಒಮ್ಮೆಲೇ ಬ್ರೇಕ್ ಹಾಕಿದ          ಪರಿಣಾಮ ಮೋಟರ್  ಸೈಕಲ್ ಸವಾರ ಹಾಗೂ ಸಹ ಸವಾರ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು  ಪಿರ್ಯಾದಿದಾರರು ಹೋಗಿ ನೋಡಲಾಗಿ ಸಹ ಸವಾರ ಸುಂದರ್ ಕುಲಾಲ್ ರವರಿಗೆ ತಲೆಗೆ ಎಡ ಕಾಲಿಗೆ ಮತ್ತು ಕೈಗಳಿಗೆ ರಕ್ತ ಗಾಯವಾಗಿದ್ದು ಮತ್ತು ಸವಾರ ರಮೇಶ್ ಕುಲಾಲ್ ರವರಿಗೆ ಎದೆ ಮತ್ತು ಎಡ ಕಾಲಿನ ಮಂಡಿಗೆ ರಕ್ತಗಾಯವಾಗಿರುತ್ತದೆ . ಗಾಯಗೊಂಡ ಇಬ್ಬರನ್ನು ಚಿಕಿತ್ದೆ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ  ಆಸ್ಪತ್ರೆಗೆ ಕಳುಹಿಸಿದ್ದು ಸುಂದರ್ ಕುಲಾಲ್ ರವರನ್ನು ಹೆಚ್ಚಿನ ಚಿಕಿತ್ದೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ :279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಧರ್ಣಪ್ಪ (60), ತಂದೆ: ಅಣ್ಣಿ ಶೆಟ್ಟಿ, ವಾಸ: ಆನೆಕೆರೆ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 11/04/2022 ರಂದು KA-20-6445 ನೇ ನೋಂದಣಿ ಸಂಖ್ಯೆಯ ಟಾಟಾ ಕಂಪೆನಿಯ 407 ಟೆಂಪೊದಲ್ಲಿ ಭುವನೇಂದ್ರ ಕಾಲೇಜು ಬಳಿಯ ಟೈಲ್ಸ್ ಅಂಗಡಿಯಿಂದ ಗ್ರಾನೆಟ್ ತುಂಬಿಸಿಕೊಂಡು ಹಿರಿಯಡ್ಕ ಕಡೆಗೆ ಹೊರಟು ಮಧ್ಯಾಹ್ನ 1:45 ಗಂಟೆಗೆ ಕಾರ್ಕಳ ವೆಂಕಟರಮಣ ದೇವಸ್ಥಾನದ ಬಳಿ ತಲುಪುವಾಗ ಪಿರ್ಯಾದಿದಾರರ ಟೆಂಪೋ ಹಿಂದುಗಡೆ KA-19-EH-1943 ಬಜಾಜ್ ಕಂಪನಿಯ ಮೋಟಾರ್ ಸೈಕಲ್ ಸವಾರ ನರಸಿಂಹ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಟೆಂಪೋದ ಎಡಗಡೆ ಚಕ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ಟೆಂಪೋವನ್ನು ನಿಲ್ಲಿಸಿ ಮೋಟಾರ್ ಸೈಕಲ್ ಸವಾರನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ಮೋಟಾರ್ ಸೈಕಲ್ ಸವಾರ ಹೆಲ್ಮೆಟ್ ಧರಿಸಿದ್ದು, ಈ ಅಪಘಾತದಿಂದ ಮೋಟಾರ್ ಸೈಕಲ್ ಸವಾರನಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಸರೋಜಾ (41),  ಗಂಡ: ಅಣ್ಣಪ್ಪ, ವಾಸ: ಗೋಳಿಬೇರು ಮುದ್ರಮಕ್ಕಿ  ಶಿರೂರು ಅಂಚೆ ಮತ್ತು ಗ್ರಾಮ ಬೈಂದೂರು ತಾಲೂಕು ಇವರು ಯಡ್ತರೆ  ಗ್ರಾಮದ  ಕಡ್ಕೆ ಎಂಬಲ್ಲಿನ ವೆಂಕಟರಮಣ ಶೇರುಗಾರರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು,   ತೋಟದಲ್ಲಿ  ಕೂಲಿ ಕೆಲಸ ಮಾಡಿಕೊಂಡು ತೋಟದ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಹಿಮಾಚಲ ಪ್ರದೇಶ ಮೂಲದ ದಿಲ್ಲಿರಾಜ್ ಶರ್ಮ (ಜೀವನ್) (39) ರವರು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11/04/2022 ರಂದು ಬೆಳಿಗ್ಗೆ 8:45 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ಮಧ್ಯಾವಧಿಯಲ್ಲಿ  ತಾನು ವಾಸವಾಗಿರುವ ತೋಟದ ಮನೆಯ ಅಡುಗೆ ಕೋಣೆಯ  ಮಾಡಿಗೆ ಅಳವಡಿಸಿದ  ಕಬ್ಬಿಣದ ಪೈಪಿಗೆ  ಬಿಳಿ ಬಣ್ಣದ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 20/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಗೀತಾ ಪಿ.ಕೆ. (60), ಗಂಡ: ದಿ: ಉಣ್ಣಿಕೃಷ್ಣನ್‌, ವಾಸ :ನಡುಗುಂದ ಹಾಲ್ಕಲ್‌ ಜಡ್ಕಲ್‌ಗ್ರಾಮ ಬೈಂದೂರು ತಾಲೂಕು ಇವರು ಎಂದಿನಂತೆ ಕೊಲ್ಲೂರಿ ನಲ್ಲಿ ಬೇಕರಿ ವ್ಯವಹಾರ ನಡೆಸುತ್ತಿರುವ ತನ್ನ ಮಗ ಮುರುಳಿಧರನಿಗೆ ಮಧ್ಯಾಹ್ನದ ಊಟವನ್ನು ಕೊಡಲು ದಿನಾಂಕ 11/04/2022 ರಂದು ಮಧ್ಯಾಹ್ನ 2:15 ಗಂಟೆಯ ಸಮಯ  ಜಡ್ಕಲ್‌ ಗ್ರಾಮದ ರಾಷ್ಟೀಯ ಹೆದ್ದಾರಿ  ಹಾಲ್ಕಲ್‌ ನಡುಗುಂದ ಎಂಬಲ್ಲಿ ಕೊಲ್ಲೂರು ಕಡೆ  ಹೋಗುವ ಬಸ್ಸಿಗಾಗಿ  ಕಾಯುತ್ತಾ  ನಿಂತಿದ್ದಾಗ ಬೈಂದೂರು  ಕಡೆಯಿಂದ ಹಾಲ್ಕಲ್‌ ಕಡೆಗೆ ಒಂದು ಹಳದಿ ಬಣ್ಣದ ಮೋಟಾರು ಸೈಕಲಿನಲ್ಲಿ ಸುಮಾರು 35 ವರ್ಷ  ಪ್ರಾಯದ ಇಬ್ಬರು ಅಪರಿಚಿತ ವ್ಯಕ್ತಿಗಳು  ಪಿರ್ಯಾಧಿದಾರರ ಬಳಿ ಬಂದು  ಮೋಟಾರು ಸೈಕಲಿನ ಹಿಂಬದಿ  ಕುಳಿತಿದ್ದ  ಅಪರಿಚಿತ ವ್ಯಕ್ತಿ ಎಕಾಎಕಿ ಬಲಾತ್ಕಾರವಾಗಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ  28 ಗ್ರಾಂ ತೂಕದ  ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿರುತ್ತಾರೆ. ಕಸಿದುಕೊಂಡು ಹೋದ ಬಂಗಾರದ ಸರದ  ಮೌಲ್ಯ 1,20,000/- ಆಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2022 ಕಲಂ 392 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 12-04-2022 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080