ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಕಾರ್ತಿಕ ದೇವಾಡಿಗ (18), ತಂದೆ: ವಸಂತ ದೇವಾಡಿಗ, ವಾಸ:  ಶ್ರೀ ದುರ್ಗಾ ನಿಲಯ, ಕುಂಜೂರು, ಎಲ್ಲೂರು ಗ್ರಾಮ, ಕಾಪು ತಾಲೂಕು ಇವರ ತಂದೆ ವಸಂತ ದೇವಾಡಿಗ (52) ಎಂಬುವವರು ಅದಮಾರು ಪೂರ್ಣ ಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ 11/04/2021 ರಂದು ರಾತ್ರಿ 21:50 ಗಂಟೆಯ ವೇಳೆಗೆ ಕಾಪು ತಾಲೂಕು ತೆಂಕ ಎರ್ಮಾಳ್ ಗ್ರಾಮದ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಬಳಿ ಇರುವ ಗುಣಪಾಲ ಶೆಟ್ಟಿ ಎಂಬುವವರ ಮನೆಯ ಎದುರು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯ ಬದಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ KA-12-S-6978 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಶಂಕರ ತನ್ನ ಮೋಟಾರ್‌ ಸೈಕಲನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಹೆದ್ದಾರಿ-66 ರ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಸಂತ ದೇವಾಡಿಗ ರವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ವಸಂತ ದೇವಾಡಿಗ ರವರ ಎರಡೂ ಕಾಲುಗಳ ಮೊಣಗಂಟಿಗೆ ತೀವ್ರ ತರಹದ ಗಾಯ ಹಾಗೂ ಮೋಟಾರ್ ಸೈಕಲ್ ಸವಾರನಿಗೆ ಸಾಮಾನ್ಯ ಸ್ವರೂಪದ ಗಾಯಗಳುಂಟಾಗಿರುತ್ತದೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ವೈದ್ಯಾಧಿಕಾರಿಯವರು ಪರೀಕ್ಷಿಸಿ ಗಾಯಾಳು ವಸಂತ ದೇವಾಡಿಗರವರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೋಟಾರ್ ಸೈಕಲ್ ಸವಾರ ಶಂಕರ ರವರು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: 279,  337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ನಿತ್ಯಾನಂದ ಕಾಂಚನ್, ತಂದೆ: ದಿ|| ನಾರಾಯಣ ಕುಂದರ್, ವಾಸ: ಗಣೇಶ್ ಉದ್ಭವ್ , ಪಾಂಡೇಶ್ವರ, ಸಾಸ್ತಾನ ಗ್ರಾಮ, ಬ್ರಹ್ಮಾವರ ಉಡುಪಿ ಇವರ ಅಣ್ಣ ರಮೇಶ್‌ ಕಾಂಚನ್‌ (50) ರವರು ಕಳೆದ ಮೂರು ವರ್ಷಗಳಿಂದ  ಮಾನಸಿಕ ಖಾಯಿಲೆಯಿಂದ  ಬಳಲುತ್ತಿದ್ದವರು ದಿನಾಂಕ 09/04/2021ರಂದು ಸಂಜೆ 5:30  ಗಂಟೆಯಿಂದ ದಿನಾಂಕ 11/04/2021 ರಂದು ಬೆಳಿಗ್ಗೆ  8:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ  ಬಳಿಯ ಸುವರ್ಣ ನದಿಯ  ನೀರಿಗೆ ಆಕಸ್ಮಿಕವಾಗಿ  ಕಾಲು ಜಾರಿ ಬಿದ್ದೋ  ಅಥವಾ ಆತ್ಮಹತ್ಯೆಯ ಸಲುವಾಗಿ ನದಿಯ  ನೀರಿಗೆ ಹಾರಿ ನೀರಿನಲ್ಲಿ  ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಲ್ಪೆ: ದಿನಾಂಕ 11/04/2021  ರಂದು  ಪಿರ್ಯಾದಿದಾರರಾದ ಸುಶಾಲ್  (19), ತಂದೆ: ರಘು ತಿಂಗಳಾಯ,  ವಾಸ: ವೈಷ್ಣವಿ  ಲೇ ಹೌಟ್ ಕೊಡವೂರು ಗ್ರಾಮ ಇವರು  ಕೊಡವೂರು  ಶಂಕರನಾರಾಯಣ  ದೇವಸ್ಥಾನದ ಬಳಿ ಗದ್ದೆಯಲ್ಲಿ  ನಡೆದ  ನಮೃತ್ ಎಂಬುವವರು ಆಯೋಜಿಸಿದ  ಎಸ್.ಎನ್ ಎಫ್ ಟ್ರೋಫಿ  ಕ್ರೀಕೆಟ್  ಪಂದ್ಯಾಟದಲ್ಲಿ  ಅಂಪಯರಿಂಗ್ ಮಾಡುತ್ತಿದ್ದು,  ಮಲ್ಪೆ ಕೊಳದ ಯಂಗ್ ಸ್ಟಾರ್  ತಂಡ  ಮತ್ತು  ಮಲ್ಪೆಯ ಇನ್ನೊಂದು ತಂಡ  ಪೈನಲ್ಗೆ ಬಂದಿತ್ತು . ಸಂಜೆ 4:30 ಗಂಟೆಗೆ ಪಿರ್ಯಾದಿದಾರರು  ಪೈನಲ್  ಪಂದ್ಯಾಟದ  ಅಂಪಯರ್ ಆಗಿದ್ದಾಗ  ಯಂಗ್ ಸ್ಟಾರ್  ತಂಡದ  ಆಟಗಾರರು  ಪಿರ್ಯಾದಿದಾರರಲ್ಲಿ  ನೀನು ಅಂಪಯರಿಂಗ್  ಮಾಡುವುದು ಬೇಡ  ನೀನು  ಮೋಸ ಮಾಡುತ್ತಿ  ಎಂದು  ಹೇಳಿದಕ್ಕೆ  ಪಿರ್ಯಾದಿದಾರರು  ಪಂದ್ಯಾಟ ಆಡಲು ಇದ್ದರೆ ಆಟ ಆಡಿ  ಇಲ್ಲದಿದ್ದರೆ ಬೇಡ ಎಂದು ಹೇಳಿದ್ದು  ಆ ಸಮಯ  ಯಂಗ್  ಸ್ಟಾರ್ ತಂಡದ ಬೆಂಬಲಿಗರಾದ  ಪಿರ್ಯಾದಿದಾರರ  ಪರಿಚಯಯದ   ಪ್ರತೀಕ್ , ಲೋಹಿತ್  ಮತ್ತು  ಅಕ್ಷತ್  ಸೇರಿ  ಬೈಯ್ಯುತ್ತ  ಪಿರ್ಯಾದಿದಾರರ ಬಳಿಗೆ  ಬಂದು  ಅವರಲ್ಲಿ ಪ್ರತೀಕನು  ಪಿರ್ಯಾದಿದಾರರ  ಕುತ್ತಿಗೆ ಹಿಡಿದು  ಜೋರಾಗಿ ದೂಡಿದ್ದು,  ಲೋಹಿತನ್ನು  ಕ್ರೀಕೆಟ್  ಬ್ಯಾಟನ್ನು  ಹಿಡಿದು ಕೊಲ್ಲದೆ  ಬಿಡುವುದಿಲ್ಲ  ಎಂದು ಹೇಳುತ್ತ ಪಿರ್ಯಾದಿದಾರರ  ತಲೆಯ  ಹಿಂಭಾಗಕ್ಕೆ   ಹಾಗೂ ಬಲಭುಜಕ್ಕೆ  ಹೊಡೆದನು . ಅಕ್ಷತ್   ಕೈಯಿಂದ  ಮೂಗಿಗೆ   ಹಾಗೂ ಎಡ ಕಣ್ಣಿಗೆ  ಗುದ್ದಿದನು. ಆದೇ  ಸಮಯ  ಇತರ 4-5 ಜನರು ಅವರೊಂದಿಗೆ  ಸೇರಿ  ಪಿರ್ಯಾದಿದಾರರನ್ನು ಬಗ್ಗಿಸಿ  ಹಿಡಿದರು ಅವರಲ್ಲಿ  ಕೆಲವರು ಕೈಯಿಂದ  ಹೊಡೆದು ಕಾಲಿನಿಂದ  ತುಳಿದು  ಅವಾಚ್ಯ ಶಬ್ದಗಳಿಂದ ಬೈದು  ಜೀವ  ಸಹಿತ ಬಿಡುವುದಿಲ್ಲ ಎಂದು ಕೊಲೆ  ಬೆದರಿಕೆ  ಹಾಕಿರುತ್ತಾರೆ. ಪಿರ್ಯಾದಿದಾರರು ಗಾಯಗೊಂಡು  ಉಡುಪಿ ಸರಕಾರಿ  ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ:  323, 324, 504, 506, 143 147 ಜೊತೆಗೆ  149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
       

ಇತ್ತೀಚಿನ ನವೀಕರಣ​ : 12-04-2021 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080