ಅಭಿಪ್ರಾಯ / ಸಲಹೆಗಳು

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 11/04/2021 ರಂದು ಭೀಮಾಶಂಕರ ಸಿನ್ನೂರ ಸಂಗಣ್ಣ, ಪೊಲೀಸ್ ಉಪನಿರೀಕ್ಷಕರು ಗಂಗೊಳ್ಳಿ ಠಾಣೆ ಇವರಿಗೆ  ದೊರೆತ ಮಾಹಿತಿಯಂತೆ  ಮರವಂತೆಯ ವರಹಮಹಾಸ್ವಾಮಿ ದೇವಸ್ಥಾನದ ಬಳಿ ಬೀಚ್‌ ನಲ್ಲಿ ಸಾರ್ವಜನಿಕ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ಮಟ್ಕಾ ಜುಗಾರಿ ನಡೆಸುತ್ತಿದ್ದ ವಿಜಯ ಕಾಂಚನ್ (45), ತಂದೆ; ಹೆರಿಯ ಕಾಂಚನ್, ವಾಸ: ಮಾರಸ್ವಾಮಿ, ಮರವಂತೆ ಗ್ರಾಮ, ಬೈಂದೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಮಟ್ಕಾ ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 610/-ರೂ ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ: KARNATAKA POLICE ACT, 1963 , ಕಲಂ:78(I),78(III)) ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರಾದ ಶ್ರೀ ಜಿ.ಎ. ಜಗದೀಶ ಐಎಎಸ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಉಡುಪಿ ಜಿಲ್ಲೆ, ಉಡುಪಿ ಇವರು G Jagadeesh Malalagadde ಎಂಬ ಫೇಸ್ ಬುಕ್ ಖಾತೆಯನ್ನು ಹೊಂದಿರುತ್ತಾರೆ. ದಿನಾಂಕ 11/04/2021 ರಂದು ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಹೆಸರಿನಲ್ಲಿ G Jagadeesh Malalagadde ಎಂಬ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿ, ಅದರ ಫ್ರೋಫೈಲ್ ಗೆ  ಪಿರ್ಯಾದಿದಾರರ ಫೋಟೋವನ್ನು ದುರ್ಬಳಕೆ ಮಾಡಿ, ಇವರ ವೈಯಕ್ತಿಕ ಗೌರವಕ್ಕೆ ದಕ್ಕೆ ಉಂಟು ಮಾಡುವ ಉದ್ದೇಶದಿಂದ  ಫೇಸ್ ಬುಕ್ ಖಾತೆಯನ್ನು ತೆರೆದು ಹಣವನ್ನು ಕೇಳುತ್ತಿರುವ ಆರೋಪಿಗಳ ವಿರುದ್ದ  ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021  ಕಲಂ: 66(c), 66(d)  ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 11/04/2021 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ 12/04/2021 ರ ಬೆಳಿಗ್ಗೆ 09.00 ಗಂಟೆಯ ಮದ್ಯಾವದಿಯಲ್ಲಿ ಪಿರ್ಯಾದಿದಾರರಾದ ದಿನೇಶ (30), ತಂದೆ: ಲಕ್ಷ್ಮಣ,ವಾಸ: ಗುಬ್ಯಾಡಿ ಮೂಡುಬಗೆ ಅಂಪಾರು ಗ್ರಾಮ  ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಲಕ್ಷ್ಮಣ (58) ರವರು ಆಕಸ್ಮಿಕವಾಗಿ ಕಲ್ಲು ಹೊಳೆಯ ನೀರಿನಲ್ಲಿ ಮುಳುಗಿ ಮೃತ  ಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ:  174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ಕೃಷ್ಣ ಶೇರಿಗಾರ್(61) ಪ್ರಾಯದ ವರು  ಪ್ರತಿದಿನ ಮಧ್ಯಪಾನ ಮಾಡಿಕೊಂಡು ಬಂದು ಮನೆಯಲ್ಲಿ ಇರುತ್ತಿದ್ದರು .ನಿನ್ನೆ ದಿನಾಂಕ 11/04/2021 ರಂದು   ಸಂಜೆ  7:30 ಗಂಟೆಗೆ ಮಧ್ಯಪಾನ ಮಾಡಿಕೊಂಡು ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಾಸ್ ಬಾರದೆ ಇದ್ದು ಈ ದಿನ   ದಿನಾಂಕ 12/04/2021 ರಂದು   ಬೆಳಿಗ್ಗೆ  ಹುಡುಕಾಡಿದ್ದಲ್ಲಿ ಸಿಕ್ಕಿರುವುದಿಲ್ಲ ನಂತರ ಬೆ 9:00 ಗಂಟೆಗೆ ಮನೆಯ   ಸಮೀಪದ  ಪುಮ್ಮಯ್ಯ ಅಡಿಗರ  ಜಾಗದಲ್ಲಿನ ನಾಗಬನದ ಹತ್ತಿ ರ ಇರುವ ಗದ್ದೆಯಲ್ಲಿ ಮಧ್ಯಪಾನದ ಬಾಟಲಿಗೆ  ಯಾವುದೋ ಕೀಟನಾಶಕ  ಔಷದವನ್ನು ಸೇವಿಸಿ     ಮೃತಪಟ್ಟಿದ್ದಾಗಿದ್ದು  ಮೃತರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ದಿನಾಂಕ 11/04/2021 ರಂದು ಸಂಜೆ  7:30 ಗಂಟೆಯಿಂದ  ದಿನಾಂಕ 12/04/2021 ರಂದು   ಬೆ 9:00 ಗಂಟೆಯ ಮಧ್ಯಾವಧಿಯಲ್ಲಿ ಮೃತರು ವಿಪರೀತ ಮದ್ಯ ಸೇವಿಸುವ  ಚಟ ಇದ್ದು ಇದೇ ಕಾರಣ ದಿಂದ  ಜೀವನದಲ್ಲಿ ಜಿಗುಪ್ಸೆ ಗೊಂಡು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ  ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ:  174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬೈಂದೂರು : ಸುರೇಶ ಪೂಜಾರಿ ಪ್ರಾಯ:48 ವರ್ಷ ರವರು ವಿಪರೀತ ಮಧ್ಯ ಸೇವನೆ ಮಾಡುವ ಚಟ ಹೊಂದಿವರಾಗಿದ್ದು ಸುಮಾರು 12 ವರ್ಷಗಳಿಂದ ಸಂಸಾರದಲ್ಲಿ ಸರಿ ಹೊಂದದೇ ಹೆಂಡತಿ ಮಕ್ಕಳಿಂದ  ದೂರ ಇದ್ದು ಬೈಂದೂರು ಉಪ್ಪುಂದ ಕಡೆಗಳಲ್ಲಿ ಇರುತ್ತಿದ್ದು ವಿಪರೀತ ಮಧ್ಯ ಸೇವನೆ ಮಾಡಿ ರಸ್ತೆ ಬದಿಗಳಲ್ಲಿ ಮಲಗುತ್ತಿದ್ದು ದಿನಾಂಕ:11/04/2021 ರಂದು ಸಂಜೆ 7:00 ಗಂಟೆಯಿಂದ ದಿನಾಂಕ 12/04/2021 ರ ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಬೈಂದೂರು ತಾಲೂಕು  ಕಂಬದ ಕೋಣೆ  ಗ್ರಾಮದ  ಹಳೆ ಸಿನಿಮಾ ಟಾಕೀಸ್ ಹಿಂಬದಿ ಶೆಡ್ ನಲ್ಲಿ ಮೃತ ಪಟ್ಟಿರುತ್ತಾರೆ.ಸುರೇಶ ಪೂಜಾರಿರವರು ವಿಪರೀತ ಮಧ್ಯ ಸೇವನೆ ಮಾಡುವ ಚಟ ಹೊಂದಿದ್ದು ಅಲ್ಲದೇ ಸರಿಯಾಗಿ ಅನ್ನ, ನೀರನ್ನು ಸೇವಿಸದೇ ಮೃತ ಪಟ್ಟಿರುವುದಾಗಿದೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ:  174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 12-04-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080