ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿ: ಶಶಿಧರ ಎಲ್. ಶೇರ್ವೆಗಾರ ಪ್ರಾಯ : 49 ವರ್ಷ  ತಂದೆ : ದಿ. ಲಕ್ಷ್ಮಣ ಶೇರ್ವೆಗಾರ ವಾಸ : ಮನೆ ನಂಬ್ರ 237/2 ಕೊಂಬಗುಡ್ಡೆ, ಮಲ್ಲಾರು ಗ್ರಾಮ ಕಾಪು ತಾಲ್ಲೂಕು ಇವರು ದಿನಾಂಕ: 11/03/2023 ರಂದು ಮನೆಯಿಂದ ಹಳೇ ಮಾರಿಗುಡಿಯ ಸಮೀಪದ ಸೈಟ್‌ನೋಡಲು ಹೊರಟಿ ರಾ ಹೆ 66 ರಸ್ತೆಯ ಬಳಿ ತಲುಪಿದಾಗ ರಾ ಹೆ 66 ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗಿದ ಹೆದ್ದಾರಿಯ ರಸ್ತೆಯಲ್ಲಿ ದ್ವಿಮುಖದಲ್ಲಿ ವಾಹನಗಳು ಸಾಗುತ್ತಿದ್ದು, ಪಿರ್ಯಾದಿದಾರರು ಉಡುಪಿ ಮಂಗಳೂರು ಕಡೆಗೆ ಸಾಗಿದ ಹೆದ್ದಾರಿಯ ಏಕಮುಖ ರಸ್ತೆಯನ್ನು ದಾಟಿ ಇನ್ನೊಂದು ಬದಿಯ ಹೆದ್ದಾರಿಯನ್ನು ದಾಟಲು ನಿಂತುಕೊಂಡಿದ್ದ ಸಮಯ ಮಂದಾರ ಹೋಟೆಲ್‌ನ ಮುಂಭಾಗ ಉಡುಪಿಯಿಂದ ಮಂಗಳೂರು ಕಡೆಗೆ ಸಾಗಿದ ಹೆದ್ದಾರಿಯಲ್ಲಿ ಹಲವಾರು ಮಂದಿ ರಸ್ತೆ ದಾಟುವರೇ ನಿಂತುಕೊಂಡಿದ್ದು, ಆಗಾ ಸಮಯ ಸುಮಾರು 08.25 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆ.ಎ. 20 ಎ.ಎ. 7033 ನೇ ಬಸ್ಸಿನ ಚಾಲಕ ಶಾಹೀದ್‌‌ನು ತನ್ನ ಬಾಬ್ತು ಬಸ್ಸನ್ನು ಹೆದ್ದಾರಿಯಲ್ಲಿ ನಿರ್ಲಕ್ಷತನದಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು, ಮಂದಾರ ಹೋಟೆಲ್‌‌ನ ಮುಂಭಾಗ ಹೆದ್ದಾರಿಯನ್ನು ದಾಟಲು ನಿಂತಿದ್ದವರ ಪೈಕಿ ಶಾಲಾ ವಿದ್ಯಾರ್ಥಿನಿ ವರ್ಷಿತಾಳಿಗೆ ಢಿಕ್ಕಿ ಹೊಡೆದು ಅಪಘಾತ ಪಡಿಸಿದನು ಪರಿಣಾಮ ವರ್ಷಿತಾಳು ರಸ್ತೆಗೆ ಬಿದ್ದಿದ್ದು, ಢಿಕ್ಕಿ ಹೊಡೆದು ಬಸ್ಸನ್ನು ಅದರ ಚಾಲಕನು ಮುಂದಕ್ಕೆ ಚಾಲಾಯಿಸಿ ನಿಲ್ಲಿಸಿ ಸ್ಥಳಕ್ಕೆ ಬಂದನು. ಇದನ್ನು ಕಂಡ ಪಿರ್ಯಾದಿದಾರು ಹಾಗೂ ಆಸುಪಾಸಿನವರು ಸ್ಥಳಕ್ಕೆ ತೆರಳಿ ನೋಡಲಾಗಿ ವರ್ಷಿತಾಳ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಸ್ಥಳಕ್ಕೆ 108 ಅಂಬುಲೇನ್ಸ್ ನಲ್ಲಿ ಉಡುಪಿ ಸರಕಾರಿ ಆಸ್ಪತ್ರೆ ಕರೆದುಕೊಂಡು ಹೋದರು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವರ್ಷಿತಾಳು ದಾರಿ ಮಧ್ಯ ಮೃತ ಪಟ್ಟಿರುತ್ತಾಳೆಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 41/2023 ಕಲಂ 279, 304(A) ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ದಿನಾಂಕ 10/03/2023 ರಂದು 17:10 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಕೆಮ್ಮಣ್ಣು ದ್ವಾರದ ಬಳಿ ಹಾದುಹೋಗುವ  ಪಡುಬಿದ್ರೆ-ಕಾರ್ಕಳ ರಾಜ್ಯ ಹೆದ್ಧಾರಿಯಲ್ಲಿ KA20S2366 ನೇ ನಂಬ್ರದ ಬೈಕ್ ಸವಾರ ರಮೇಶ್ ಶೆಟ್ಟಿ ಎಂಬಾತನು ತನ್ನ ಬೈಕ್ ನ್ನು ನಿಟ್ಟೆ ಕಡೆಯಿಂದ ಹಾಳೆಕಟ್ಟೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಹತೋಟಿ ತಪ್ಪಿ ಓಮ್ಮೇಲೆ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ರಮೇಶ್ ಶೆಟ್ಟಿರವರ ತಲೆಗೆ, ಕೈಕಾಲುಗಳಿಗೆ ರಕ್ತ ಗಾಯವಾಗಿದ್ದು,  ಚಿಕಿತ್ಸೆ ಬಗ್ಗೆ ನಿಟ್ಟೆ ಪ್ರಾಥಮಿಕ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದು,ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ   ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆ ಅಪರಾಧ ಕ್ರಮಾಂಕ 33/2023 ಕಲಂ 279,337   ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ: ಪಿರ್ಯಾದಿ: ಪ್ರತಾಪ,ಪ್ರಾಯ:32ವರ್ಷ, ತಂದೆ: ಸದಾಶಿವ ನಾಯರಿ, ವಾಸ: ಮಾತೃಶ್ರಿ, ವಾರಂಬಳ್ಳಿ ಗ್ರಾಮ ಇವರು ದಿನಾಂಕ:11.03.2023ರಂದು ತನ್ನ ಟೆಂಪೊವನ್ನು ಚಲಾಯಿಸಿಕೊಂಡು ಉಪ್ಪಿನಕೋಟೆ ಕಡೆಯಿಂದ ಬ್ರಹ್ಮಾವರ ಕಡೆಗೆ ರಾ.ಹೆ 66ರಲ್ಲಿ ಬರುತ್ತಿರುವಾಗ ಸಮಯ ಸುಮಾರು ಸಂಜೆ 3:00ಗಂಟೆಗೆ ಬ್ರಹ್ಮಾವರ ಧರ್ಮವರಂ ಆಡಿಟೋರಿಯಮ್‌ಎದುರು ತಲುಪುವಾಗ ಒಬ್ಬ ಸೈಕಲ್‌ಸವಾರನು ಧರ್ಮವರಂ ಆಡಿಟೋರಿಯಮ್‌ಕಡೆಯಿಂದ ಯೂಟರ್ನ್‌ಬಳಿ ತನ್ನ ಸೈಕಲ್‌ನ್ನು ತಳ್ಳಿಕೊಂಡು ರಾ.ಹೆ 66ನ್ನು ದಾಟುತ್ತಿರುವಾಗ ಪಿರ್ಯಾದಿದಾರರ ಎದುರಿನಲ್ಲಿ ಕೆಎ 20 ಈವೈ 3039ನೇ ಮೋಟಾರ್‌ಸೈಕಲ್‌‌ನ್ನು ಅದರ ಸವಾರನು ಅತೀ ವೇಗವಾಗಿ ಸವಾರಿ ಮಾಡಿಕೊಂಡು ಬಂದು ಸೈಕಲ್‌ತಳ್ಳಿಕೊಂಡು ರಸ್ತೆ ದಾಟುತ್ತಿದ್ದ ಗೋವಿಂದ ಎಂಬವರಿಗೆ ಢಿಕ್ಕಿ ಹೊಡೆದನು. ಪರಿಣಾಮ ಸೈಕಲ್‌ಸವಾರ ಗೋವಿಂದ ಹಾಗೂ ಮೋಟಾರ್‌ಸೈಕಲ್‌ಸವಾರ ಇಲಿಯಾಸ್‌ಎಂಬವರು ರಸ್ತೆಗೆ ಬಿದ್ದು, ಸೈಕಲ್‌ಸವಾರ ಗೋವಿಂದರವರಿಗೆ ತಲೆಯ ಹಿಂಬದಿಗೆ ರಕ್ತಗಾಯವಾಗಿ, ಬಲಕೈ ಮೊಣಗಂಟಿಗೆ ಒಳಜಖಂ ಉಂಟಾಗಿ, ಎಡಕಾಲಿನ ಮೊಣಗಂಟಿನ ಹಿಂಬದಿ ತೀವ್ರ ತರದ ರಕ್ತಗಾಯವಾಗಿರುತ್ತದೆ. ಹಾಗೂ ಮೋಟಾರ್ ಸೈಕಲ್‌ಸವಾರ ಇಲಿಯಾಸ್‌‌ರವರಿಗೆ ಕೈ ಹಾಗೂ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಅವರಿಬ್ಬರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 39/2023 : ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ: ಪಿರ್ಯಾದಿ: ಪ್ರಣತಿ  ಪ್ರಾಯ 29 ವರ್ಷ ಗಂಡ, ಪ್ರದೀಪ  ಶೆಟ್ಟಿ ವಾಸ, ತೊಂಬತ್ತು  ಚಾವಡಿ ಮನೆ ಹೆಂಗವಳ್ಳಿ ಗ್ರಾಮ ಇವರು ದಿನಾಂಕ 10.03.2023 ರಂದು ಕೆಎ.35 ಎನ್. 9511 ನೇ ನಂಬ್ರದ ಕಾರಿನಲ್ಲಿ ಕುಂದಾಪುರ  ತಾಲೂಕಿನ 28 ಹಾಲಾಡಿ ಗ್ರಾಮದ ಹಾಲಾಡಿ ಮಧುಧರ್ಶಿನಿ ಬಾರ್ ಬಳಿ  ಹಾಲಾಡಿ ಕಡೆಯಿಂದ  ಕೊಟೇಶ್ವರ  ಕಡೆಗೆ  ಹೋಗುತ್ತಿರುವಾಗ  ಆರೋಪಿಯು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ  ಪರಿಣಾಮ ಕಾರು ಆರೋಪಿಯ ಹತೋಟಿ  ತಪ್ಪಿ ರಸ್ತೆಯ ಬದಿಯ ಹಲಸಿನ ಮರಕ್ಕೆ ಡಿಕ್ಕಿ  ಹೊಡೆದಿರುತ್ತದೆ, ಇದರ ಪರಿಣಾಮ  ಸದ್ರಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಫಿರ್ಯಾಧುದಾರರ ಎಡಕೈ ಗಂಟಿಗೆ ಗುದ್ದಿದ ಒಳ ನೋವು ಉಂಟಾಗಿರುತ್ತದೆ, ಹಾಗೂ ಕಾರಿನಲ್ಲಿ ಇದ್ದ  ಕು.ಅವನಿಗೆ ಎಡಕಾಲಿಗೆ ಮೂಳೆ ಮುರಿತದ ಹಾಗೂ ಎಡ ಕಣ್ಣಿಗೆ   ಪೆಟ್ಟಾಗಿರುತ್ತದೆ, ಹಾಗೂ ಆರವ್ ಈತನ ಮುಖಕ್ಕೆ  ಮತ್ತು   ಹೊಟ್ಟೆಗೆ ತರಚಿದ ಗಾಯವಾಗಿರುತ್ತದೆ, ಮತ್ತು  ಕಾರು  ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 22/2023 ಕಲಂ:279,337,338 .ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
 • ಶಿರ್ವ: ಪಿರ್ಯಾದಿ: ದಿವಾನ ಸಾಬ  ಮೆಹಬೂಬ ಸಾಬ ಘೂಡನೂರವರ, (20) ತಂದೆ: ಮೆಹಬೂಬ ಸಾಬ ಘೂಡನೂರವರ ಹಾಲಿ ವಾಸ: ಅಕ್ಬರ್ ರವರ ಬಾಡಿಗೆ ಮನೆ, ಕಾಳಿಕಾಂಬ ದೇವಸ್ಥಾನದ ಹತ್ತಿರ, ಅಗ್ರಹಾರ, ಏಣಗುಡ್ಡೆ,ಕಟಪಾಡಿಇವರು ದಿನಾಂಕ:11.03.2023 ರಂದು KA19AD4634ನೇ  ಟಿಪ್ಪರ್ ಗೆ  ಕೊಡ್ಯಡ್ಕ ದಲ್ಲಿ ಕೆಂಪು ಕಲ್ಲನ್ನು ಲೋಡ್ ಮಾಡಿಕೊಂಡು ಹೊರಟಿದ್ದು ಆ ಸಮಯದಲ್ಲಿ ಟಿಪ್ಪರ್ ನ್ನು ಕುಪ್ಪಣ್ಣ ಪಿ ಮಾದರ ರವರು ಚಲಾಯಿಸುತ್ತಿದ್ದು ಟಿಪ್ಪರ್ ನಲ್ಲಿ ಪಿರ್ಯಾದಿದಾರರು ಎದುರುಗಡೆ ಕುಳಿತು ಪ್ರಯಾಣಿಸುತ್ತಿದ್ದರು. ಟಿಪ್ಪರ್ ನ್ನು ಕುಪ್ಪಣ್ಣ ಮಾದರ ರವರು ಚಲಾಯಿಸುತ್ತಾ  ಬೆಳ್ಮಣ್-ಶಿರ್ವಾ ಮಾರ್ಗವಾಗಿ ಉಡುಪಿ  ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 10.45 ಗಂಟೆಗೆ ಅರಸೀಕಟ್ಟೆ ಬಸ್ ನಿಲ್ದಾಣದ ಬಳಿ ತಲುಪುವಾಗ ಸಾರ್ವಜನಿಕ ರಸ್ತೆಯಲ್ಲಿ ವೇಗದಲ್ಲಿದ್ದ ಟಿಪ್ಪರ್ ಅವರ ಹತೋಟಿ ತಪ್ಪಿ  ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಟಿಪ್ಪರ್  ಪಲ್ಟಿಯಾಗಿ ಸಾರ್ವಜನಿಕ ರಸ್ತೆಯ ಬಲಭಾಗಕ್ಕೆ ಬಿತ್ತು.  ಈ ಅಫಘಾತದಿಂದ ನನಗಾಗಲೀ ಚಾಲಕ ಕುಪ್ಪಣ್ಣನವರಿಗಾಗಲೀ ಯಾವುದೇ ಗಾಯ/ನೋವು ಆಗಿರುವುದಿಲ್ಲ. ಟಿಪ್ಪರ್ ಸಂಪೂರ್ಣ ಜಖಂ ಆಗಿರುತ್ತದೆ. ಆದ್ದರಿಂದ ಈ ಅಫಘಾತಕ್ಕೆ ಕುಪ್ಪಣ್ಣ ಪಿ ಮಾದರವರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/23 ಕಲಂ 279   ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಪಡುಬಿದ್ರಿ: ಪಿರ್ಯಾದಿ: ಸೂರಜ್, ಪ್ರಾಯ: 22 ವರ್ಷ, ತಂದೆ: ರಮೇಶ್, ವಾಸ: ಶಿವಾನುಗ್ರಹ, ಕುಂಜೂರು, ಎಲ್ಲೂರು ಗ್ರಾಮ, ಇವರ ತಂದೆ ರಮೇಶ್ ಎಂಬುವರು ನಿನ್ನೆ ದಿನ ದಿನಾಂಕ:10.03.2023 ರಂದು ಅವರ ಬಾಬ್ತು KA-19-EA-9114 ನೇ ಟಿವಿಎಸ್‌ ಲೂನಾ ದಲ್ಲಿ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದಲ್ಲಿರುವ ಬುದಗಿ ಪೆಟ್ರೋಲ್ ಪಂಪಿಗೆ ಬಂದು ಪೆಟ್ರೋಲ್ ತುಂಬಿಸಿಕೊಂಡು ವಾಪಾಸ್ಸು ಉಚ್ಚಿಲ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೊರಟು ಸಮಯ ಸುಮಾರು 09:40 ಗಂಟೆಗೆ ಪೆಟ್ರೋಲ್ ಪಂಪಿನಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ  ಅದೇ ರಸ್ತೆಯಲ್ಲಿ KA-19-HE-2679 ನೇ ನಂಬ್ರದ  ಮೋಟಾರ್ ಸೈಕಲ್ ಸವಾರ ಜೋಯ್ಸನ್ ಎಂಬಾತನು ತನ್ನ ಮೋಟಾರ್‌‌ಸೈಕಲ್ಲನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಯು ಚಲಾಯಿಸಿಕೊಂಡು ಹೋಗುತ್ತಿದ್ದ ಟಿವಿಎಸ್‌ಲೂನಾದ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದು, ಸದ್ರಿ ಸಮಯ ಪಿರ್ಯಾದಿದಾರರ ತಂದೆ ಹಾಗೂ ಎದ್ರಿ ಮೋಟಾರ್‌‌ಸೈಕಲ್ ಸವಾರ ಲೂನಾ ಹಾಗೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ ಅಪಘಾತದಿಂದ ಪಿರ್ಯಾದಿದಾರರ ತಂದೆ ರಮೇಶ್ ರವರ ಬಲಕಾಲಿಗೆ ಮೂಳೆ ಮುರಿತದ ತೀವ್ರ ಗಾಯ ಹಾಗೂ ಎದ್ರಿ ಮೋಟಾರ್ ಸೈಕಲ್ ಸವಾರ ಜೋಯ್ಸನ್‌ರವರ ಕೈಕಾಲುಗಳಿಗೆ ಗಾಯಗಳಾಗಿರುತ್ತವೆ. ನಂತರ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ಗಾಯಾಳುವಿನ ಆರೈಕೆಯಲ್ಲಿದ್ದುದರಿಂದ ಪಿರ್ಯಾದು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2023, ಕಲಂ: 279, 338 ಐಪಿಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.   

ಹಲ್ಲೆ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿ: ಪದ್ಮನಾಭ ನಾಯ್ಕ್(73) ತಂದೆ: ಸುಕುಡು ನಾಯ್ಕ್ ವಾಸ: ಮೂಡು ಅಂಜಾರು, ಬಾವಿಕಟ್ಟೆ, ಮನೆ,ಹಿರಿಯಡ್ಕ ಅಂಚೆ ಇವರು ದಿನಾಂಕ: 10/03/2023 ರಂದು ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ತಮ್ಮ ಮನೆಯ ಸಮೀಪದಲ್ಲಿನ ಗದ್ದೆಯಲ್ಲಿ ಕಟ್ಟಿದ್ದ ದನಗಳನ್ನು ಕೊಟ್ಟಿಗೆಗೆ ತರಲು ಹೋಗಿದ್ದಾಗ ಅವರ ಅಣ್ಣನ ಮಗ ಯಾದವ ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರನ್ನು ಅಡ್ಡಗಟ್ಟಿ ನಿಲ್ಲಿಸಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ  ಬೈದು ಆತನ ಕೈಯಲ್ಲಿದ್ದ ಕೋಲಿನಿಂದ ಮೈ  ಕೈ ಕಾಲಿಗೆ , ಹೊಡೆದು ಬಲವಾಗಿ ಕೈಯಿಂದ ತಳ್ಳಿರುತ್ತಾನೆ. ಹಲ್ಲೆನಡೆಸಿದ ಪರಿಣಾಮಪಿರ್ಯಾದಿದಾರರ ಮೈಕೈ ಹಾಗೂ ಕಾಲಿಗೆಗಾಯ ಉಂಟಾಗಿದ್ದು ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ, ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ . 13/2023    ಕಲಂ: 341,504, 323, 324  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಸುಲಿಗೆ ಪ್ರಕರಣ

 • ಕಾರ್ಕಳ: ಪಿರ್ಯಾದಿ: ಶ್ರೀಮತಿ  ಕೆ ಗಾಯತ್ರಿ ಕಾಮತ್, ಪ್ರಾಯ 64 ವರ್ಷ ಗಂಡ ಕೆ ಗೋಕುಲ್‌ದಾಸ್  ಕಾಮತ್,  ವಾಸ ಶ್ರೀನಿವಾಸ ನಿಲಯ, ಎಮ್‌ಐಜಿ 2, ಮನೆ ನಂಬ್ರ 27 ,ಕುಕ್ಕುಂದೂರು ಗ್ರಾಮ ಇವರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ MIG-II ಮನೆ ನಂಬ್ರ-27 ಶ್ರೀನಿವಾಸ ನಿಲಯ ಎಂಬಲ್ಲಿ ಗಂಡನೊಂದಿಗೆ ವಾಸವಾಗಿದ್ದು, ದಿನಾಂಕ 10-03-2023 ರಂದು ಕಾರ್ಕಳ ಮಾರಿಗುಡಿಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ  ಬಗ್ಗೆ ಸಂಜೆ 16-00 ಗಂಟೆಗೆ ಮನೆಯಿಂದ ಗಂಡನೊಂದಿಗೆ ಹೊರಟು  ವೆಂಕಟರಮಣ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ  ಭಾಗವಹಿಸಿ ದೇವಸ್ಥಾನದ ಕಾರ್ಯಕ್ರಮ  ಮತ್ತು ನಾಟಕ ಮುಗಿದ ನಂತರ ರಾತ್ರಿ 22-30 ಗಂಟೆಗೆ ಗಂಡನ ದ್ವಿಚಕ್ರ  ವಾಹನದಲ್ಲಿ ಮನೆಗೆ ಹೊರಟು ಮನೆಗೆ ಬಂದು  ಫಿರ್ಯಾದುದಾರರ  ಗಂಡ ಅಂಗಳದಲ್ಲಿ ಸ್ಕೂಟರ್  ನಿಲ್ಲಿಸಿ ರಾತ್ರಿ 22-50 ಗಂಟೆಗೆ  ಮನೆಯ ಬೀಗ ತೆಗೆಯುತ್ತಿರುವ ಸಮಯ ಫಿರ್ಯಾದುದಾರರು ಮನೆಯ ಗೇಟು ಹಾಕಿದ್ದು ಆ ಸಮಯ ಒಂದು ಮೋಟಾರ್ ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದು ಫಿರ್ಯಾದುದಾರರ  ಮನೆಯ ಸ್ವಲ್ಪ ಮುಂದೆ ಹೋಗಿ ವಾಪಾಸು ತಿರುಗಿಸಿ ಬಂದು ಮನೆಯ  ಹತ್ತಿರ ಮೋಟಾರ್ ಸೈಕಲ್ ನಿಲ್ಲಿಸಿ ಹಿಂಬದಿ ಕುಳಿತಿದ್ದ  ವ್ಯಕ್ತಿ ಬೈಕಿನಿಂದ ಇಳಿದು ಗೇಟಿನ ಬಳಿ ಬಂದು  ‘33 ನಂಬ್ರ  ಮಂಗಮ್ಮನ ಮನೆ ಎಲ್ಲಿ’  ಎಂದು ಕೇಳಿ ಗೇಟನ್ನು  ದೂಡಿಕೊಂಡು  ಬಂದು ಫಿರ್ಯಾದುದಾರರ  ಕುತ್ತಿಗೆಗೆ  ಕೈಹಾಕಿ ಬಲವಂತವಾಗಿ ತಳ್ಳಿ ಬೀಳಿಸಿ  ಕುತ್ತಿಗೆಯಲ್ಲಿದ್ದ  ನಾಲ್ಕುವರೆ ಪವನ್ ತೂಕದ, ಚಿನ್ನದಗುಂಡು, 2 ಹವಳ ಮತ್ತು 2 ಲಕ್ಷ್ಮಿ ತಾಳಿ ಇರುವ  ಚಿನ್ನದ  ಕರಿಮಣಿ ಸರ  ಮತ್ತು  ಐದೂವರೆ ಪವನ್ ತೂಕದ ಚಿನ್ನದ  ತಾಳಿ ಇರುವ ಹವಳದ ಚಿನ್ನದ ಮಾಂಗಲ್ಯ ಸರಗಳನ್ನು ಅಪಾದಿತರು ಸುಲಿಗೆ ಮಾಡಿಕೊಂಡು  ಹೋಗಿದ್ದು, ಸುಲಿಗೆ ಮಾಡಿದ 2 ಸರಗಳ ಅಂದಾಜು ಮೌಲ್ಯ 2 ಲಕ್ಷ ರೂ  ಆಗುಬಹುದು . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 26/2023 ಕಲಂ 392,323 R/W 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿ: ರಾಘವೇಂದ್ರ 47ವರ್ಷ(ಟ್ರಾಕ್ ಮೆಂಟೇನರ್ )  ತಂದೆ ಶ್ಯಾಮರಾಯ ಆಚಾರ್ , ವಾಸ ಕಾಳಾವರ ಸಳ್ವಾಡಿ ಅಂಚೆ ಇವರು ರೈಲ್ವೆ ಇಲಾಖೆಯಲ್ಲಿ T.S.M (TRACK MAINTAINER) ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಅವರು ಈ ದಿನ ಕರ್ತವ್ಯದಲ್ಲಿದ್ದಾಗ  ಬೆಳಿಗ್ಗೆ 10:10 ಗಂಟೆ ಸುಮಾರಿಗೆ ಉಡುಪಿ ರೈಲ್ವೆ ಸ್ಟೇಷನ್ ಮಾಸ್ಟರ್ ಟ್ರಾಕ್ ಮೆನ್ ನಾಗರಾಜ ಅವರಿಗೆ ಕರೆ ಮಾಡಿ ಉಪ್ಪೂರು ಗ್ರಾಮದ ನರ್ನಾಡು ಎಂಬಲ್ಲಿ ರೈಲ್ವೆ ಟ್ರಾಕ್ ಸಂಖ್ಯೆ 684/6-7 ರ ಮಧ್ಯೆ ಮಡ್‌ಗಾಂವ್ ಮಂಗಳೂರು ಮೆಮೋ ಟ್ರೈನಿಗೆ ಬೆಳಿಗ್ಗೆ 10:05 ಗಂಟೆ ಸುಮಾರಿಗೆ ಗಂಡಸೊಬ್ಬನು ರೈಲಿಗೆ ಅಡ್ಡ ಬಂದು ಡಿಕ್ಕಿಯಾಗಿ ಎಸೆಯಲ್ಪಟ್ಟು ಟ್ರ್ಯಾಕ್ ನ ಬದಿಯಲ್ಲಿ ಬಿದ್ದಿರುವ ಬಗ್ಗೆ ರೈಲಿನ ಚಾಲಕರು ಹೇಳಿರುವಂತೆ, ನಾಗರಾಜ ರವರು ಪಿರ್ಯಾದಿದಾರರಿಗೆ ತಿಳಿಸಿರುವ ಮೇರೆಗೆ ಪಿರ್ಯಾದಿದಾರರು ಬೆಳಿಗ್ಗ 10.45 ಗಂಟೆಯ ಸುಮಾರಿಗೆ ಸದ್ರಿ ಜಾಗಕ್ಕೆ ಬಂದು ನೋಡಿದಾಗ ಸುಮಾರು 40 ರಿಂದ 45 ವರ್ಷದ ಅಪರಿಚಿತ ಗಂಡಸಿನ ಮೃತ ಶರೀರ ರೈಲ್ವೆ ಟ್ರಾಕ್ ನ ಬದಿಯಲ್ಲಿ ಬಿದ್ದುಕೊಂಡಿದ್ದು , ಮೃತ ದೇಹದ ಕೈ, ಕಾಲು, ತಲೆ, ದೇಹ ಸಂಪೂರ್ಣ ಜಜ್ಜಿ ಹೋಗಿ, ಮೃತರ ತಲೆ ಮತ್ತು ದೇಹ ಬೇರ್ಪಟ್ಟಿರುತ್ತದೆ. ಸದ್ರಿ ವ್ಯಕ್ತಿಯು ರೈಲಿಗೆ ಅಡ್ಡ ಬಂದು ರೈಲು ತಾಗಿ ಎಸೆಯಲ್ಪಟ್ಟು ಆದ ಗಾಯದಿಂದ ಮೃತ ಪಟ್ಟಿರುವುದಾಗಿದೆ.ಈ  ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 18/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕಾರ್ಕಳ: ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ  ವಾಸವಾಗಿರುವ  ಪಿರ್ಯಾದಿ: ಗಿರೀಶ್ (42) ತಂದೆ: ಉಮೇಶ್ ಪಿ. ವಾಸ: ಪವಿತ್ರ ನಿಲಯ ಪರಪ್ಪು ಕುಕ್ಕುಂದೂರು ಅಂಚೆ   ಮತ್ತು ಗ್ರಾಮ  ಇವರ ತಂಗಿ ಶ್ರೀಮತಿ ಪಲ್ಲವಿ  ಪ್ರಾಯ 32 ವರ್ಷ, ಇವರಿಗೆ ಜೋಡುರಸ್ತೆಯ ಸಂದೀಪ್ ರಾವ್ ಎಂಬವರೊಂದಿಗೆ 3 ವರ್ಷದ ಹಿಂದೆ  ಮದುವೆಯಾಗಿದ್ದು, ಅವಳಿಗೆ ಮದ್ಯ ಸೇವಿಸುವ ಚಟ ಇದ್ದು ಅವಳ ತಂದೆ ತಾಯಿ ಕೂಡ ಇಲ್ಲವೆಂದು ಹಾಗೂ ಅಣ್ಣಂದಿರಿಗೆ  ಮದುವೆಯಾಗಿಲ್ಲ ಎಂದು ಜೀವನದಲ್ಲಿ ಮಾನಸಿಕವಾಗಿ ನೊಂದು ದಿನಾಂಕ 10/03/2023  ರಂದು ರಾತ್ರಿ 10:20 ಗಂಟೆಗೆ ಮನೆಯ ರೂಮ್ ನ ಫ್ಯಾನ್ ಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ  ಬಗ್ಗೆ  ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 17/2023 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-03-2023 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080