ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ: ಬಾಲಕೃಷ್ಣ ಪ್ರಾಯ: 34 ವರ್ಷ, ತಂದೆ: ಶ್ಯಾಮ ಆಚಾರಿ, ವಾಸ: ಜನನಿ ಬಡಾಕೇರಿ ಶಿರಿಯಾರ ಗ್ರಾಮ  ಇವರು ದಿನಾಂಕ  10/03/2023 ರಂದು 20:30 ಗಂಟೆಗೆ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಮನೆಗೆ ಹೋಗುವರೇ ಹಾಗೂ ಅವರ ಜೊತೆಗೆ ಗೆಳೆಯನಾದ ಪ್ರಕಾಶ ತನ್ನ KA-20-EF-7251 ನೇ ಬಜಾಜ್ ಪಲ್ಸರ್ ಬೈಕ್ ‌‌‌ನಲ್ಲಿ  ಹಿಂಬದಿ ಸವಾರನಾಗಿ ಸುದರ್ಶನ್ ರವರನ್ನು ಕುಳ್ಳಿರಿಸಿಕೊಂಡು ಶಿರಿಯಾರ ಗ್ರಾಮದ ಕುದ್ರಿಕಟ್ಟೆ ಜಂಕ್ಷನ್ ಬಳಿ ಬರುವಾಗ ಪ್ರಕಾಶ ರವರು ಬೈಕ್ ಅನ್ನು ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿದ್ದು ಆಗ ಬೈಕು ಆಯತಪ್ಪಿ ರಸ್ತೆಯಲ್ಲಿ ಸ್ಕಿಡ್ ಆಗಿರುತ್ತದೆ ಪರಿಣಾಮ ಪ್ರಕಾಶ್ ಹಾಗೂ ಸುದರ್ಶನ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಪ್ರಕಾಶ ರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ ಹಾಗೂ ಸುದರ್ಶನ್ ರವರಿಗೆ ಎಡಕಾಲಿನ ಕೋಲು ಕಾಲಿನ ಮದ್ಯದ ಮೂಳೆ ಮುರಿತದ ತೀವ್ರತರದ ಗಾಯ ಹಾಗೂ ಮೈಕೈಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  41/2023  ಕಲಂ: 279, 338   IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ: 11/03/2023 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 12/03/2023 ರ ಬೆಳಿಗ್ಗೆ 06:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕಲಂಬಾಡಿ ಪದವು ಎಂಬಲ್ಲಿ ಇರುವ ಪಿರ್ಯಾದಿ:  ಸಂತೋಷ ಭಂಡಾರಿ (50),ತಂದೆ: ದಿ/ ಆನಂದ ಭಂಡಾರಿ ವಾಸ: ಚಾಮುಂಡೇಶ್ವರೀ ಕಲಂಬಾಡಿ ಪದವು ನಿಟ್ಟೆ ಅಂಚೆ, ಮತ್ತು  ಗ್ರಾಮ, ಇವರ ಮನೆಯ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಬಲತ್ಕಾರದಿಂದ  ತೆರದು  ಮನೆಯ ಒಳಗಡೆ ಪ್ರವೇಶಿಸಿ ಪಿರ್ಯಾದುದಾರರ ಮನೆಯ ಕೊಠಡಿಯಲ್ಲಿ ಮರದ ಕಪಾಟಿನಲ್ಲಿಟ್ಟಿದ್ದ  ಸುಮಾರು 95,000/- ರೂ ಮೌಲ್ಯದ ಸುಮಾರು 6 ಪವನ್ ತೂಕದ ಬಂಗಾರದ ಒಡವೆಗಳನ್ನು ಹಾಗೂ ನಗದು ಹಣ 50,000  ರೂಪಾಯಿಗಳನ್ನು   ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ . ಈ ಬಗ್ಗೆ ಕಾರ್ಕಳ ಗ್ರಮಾಂತರ ಠಾಣಾ ಅಪರಾಧ ಕ್ರಮಾಂಕ  34/2023 ಕಲಂ:457,  380  ಭಾದಸಂ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಪಿರ್ಯಾದಿ: ಶ್ರೀಧರ, ಪ್ರಾಯ: 50 ವರ್ಷ, ತಂದೆ; ದಿ. ಅಚ್ಚಣ್ಣ ಹಾಂಡ, ವಾಸ; ಎಲಿಯಾಳ, ದರ್ಖಾಸ್ ಮನೆ,  ಗುಂಡ್ಯಡ್ಕ, ಕೌಡೂರು  ಗ್ರಾಮ  ಇವರ ತಾಯಿ ಶ್ರೀಮತಿ ಬಡ್ಡು ಹಾಂಡ್ತಿ ಪ್ರಾಯ 73 ವರ್ಷ ರವರಿಗೆ ಸರಿಯಾಗಿ ಕಣ್ಣು ಕಾಣದೆ ಇದ್ದು, ಸುಮಾರು ಸಮಯದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಉಡುಪಿ ಬಾಳಿಗಾ ಆಸ್ಪತ್ರೆಯಿಂದ ಔಷಧಿಯನ್ನು ಮಾಡುತ್ತಿರುವುದಾಗಿದೆ. ದಿನಾಂಕ 11.03.2023 ರಂದು ಬೆಳಿಗ್ಗೆ ಎಲಿಯಾಳದಲ್ಲಿರುವ ಪಿರ್ಯಾದಿದಾರರ ಮನೆಯ ಪಕ್ಕದ ಮನೆಯ ನಿವಾಸಿ ಶ್ರೀಮತಿ ಸೆಲಿನಾ ಪಿಂಟೋ ರವರು ಪಿರ್ಯಾದಿದಾರರಿಗೆ ಪೋನ್ ಮಾಡಿ, ತಾಯಿ ಬಡ್ಡು ಹಾಂಡ್ತಿರವರ ಮನೆಗೆ ದಿನಾಂಕ 10.03.2023 ರಂದು ರಾತ್ರಿ 8:30 ಗಂಟೆಗೆ ಹೋಗಿ ಊಟ ಮತ್ತು ಔಷಧಿ ಕೊಡಲು ಹೋಗಿದ್ದು ಬೆಳಿಗ್ಗೆ ಮೇಯಲು ಬಿಟ್ಟಿದ್ದ ದನ ವಾಪಾಸು ಹಟ್ಟಿಗೆ ಬಂದಿಲ್ಲವೆಂದು ತಿಳಿಸಿದ್ದು ತಾನು ಊಟ ಮತ್ತು ಔಷಧಿ ಕೊಟ್ಟು ಬಂದಿದ್ದು ದಿನಾಂಕ 11.03.2023 ರಂದು ಬೆಳಿಗ್ಗೆ 09:15 ಗಂಟೆಗೆ ಅವರ ಮನೆ ಬಳಿ ಹೋದಾಗ ಮನೆಗೆ ಬೀಗ ಹಾಕಿದ್ದು, ಎಲ್ಲಿ ಹೋದರೆಂದು ಗೊತ್ತಿಲ್ಲವಾಗಿ ಪಿರ್ಯಾದಿದಾರರಲ್ಲಿ ತಿಳಿಸಿದ್ದು, ದಿನಾಂಕ 11.03.2023 ರಂದು ಸಂಜೆ 6:30 ಗಂಟೆಗೆ ಪಿರ್ಯಾದಿದಾರರು ಬ್ರಹ್ಮಾವರದಿಂದ ಸಂಜೆ ಕೆಲಸ ಮುಗಿಸಿ ಎಲಿಯಾಳದಲ್ಲಿರುವ ತನ್ನ ಮನೆಗೆ ಬಂದು ಸಂಬಂಧಿಕರ ಮನೆಯಲ್ಲಿ  ವಿಚಾರಿಸಿದಲ್ಲಿ  ಹಾಗೂ ಆಸುಪಾಸು ಹುಡುಕಾಡಿದಲ್ಲಿ ತಾಯಿಯವರು ಪತ್ತೆಯಾಗಿರುವುದಿಲ್ಲ.  ದಿನಾಂಕ 12.03.2023 ರಂದು ಬೆಳಿಗ್ಗೆ 08:00 ಗಂಟೆಗೆ  ಕುಂಟಾಡಿ  ಪಳ್ಳಿ ಗ್ರಾಮದ ಆಸುಪಾಸು ಹುಡುಕಾಡಿದಲ್ಲಿ ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂ ನಲ್ಲಿ ಹೆಂಗಸಿನ ಹೆಣ ತೇಲುತ್ತಿರುವುದು ಕಂಡು ಬಂದಿದ್ದು, ಕೂಡಲೇ ಹತ್ತಿರಕ್ಕೆ ಹೋಗಿ  ಮೃತದೇಹವನ್ನು ನೋಡಿದಾಗ ಪಿರ್ಯಾದಿದಾರರ ತಾಯಿ ಶ್ರೀಮತಿ ಬಡ್ಡು ಹಾಂಡ್ತಿರವರ ಮೃತದೇಹವಾಗಿರುತ್ತದೆ.  ಶ್ರೀಮತಿ ಬಡ್ಡು ಹಾಂಡ್ತಿರವರು ದಿನಾಂಕ 10.03.2023 ರಂದು ರಾತ್ರಿ 8:30 ಗಂಟೆಯಿಂದ  ಈ ದಿನ ದಿನಾಂಕ 12.03.2023 ರಂದು ಬೆಳಿಗ್ಗೆ  08:00 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂಗೆ ಆಕಸ್ಮಿಕವಾಗಿ  ಬಿದ್ದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌10/2023ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು : ಪಿರ್ಯಾದಿ: ಶ್ರೀಮತಿ ಪದ್ಮಾವತಿ ಪ್ರಾಯ:36 ವರ್ಷ ಸ್ಟೇಷನ್ ಮಾಸ್ಟರ್, ಶಿರೂರುರೈಲ್ವೇ   ಸ್ಟೇಷನ್ ಇವರು ಶಿರೂರು ರೈಲ್ವೆ  ಸ್ಟೇಷನ್ ನಲ್ಲಿ ಸ್ಟೇಷನ್ ಮಾಸ್ಟರ್ ಆಗಿ  ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 11/03/2023 ರಂದು ರಾತ್ರಿ 11:20 ಗಂಟೆಗೆ ಕರ್ತವ್ಯದಲ್ಲಿರುವಾಗ ಸುರತ್ಕಲ್  ನಿಂದ ಲೋಕ ಮಾನ್ಯ ತಿಲಕ್ ಟರ್ಮಿನಲ್ ಸ್ಪೆಷಲ್ ಟ್ರೈನ್ 01454UP ನೇದರ ಲೋಕೋ  ಪೈಲೆಟ್ ರವರು  ರಿಟನ್ ಮೆಮೋ ನೀಡಿದ್ದು ಅದರಲ್ಲಿ  ಬೈಂದೂರು  ಬಳಿ  ಕಿ ಮಿ ನಂಬ್ರ 626/9 ರಿಂದ 626/8  ರ ಬಿಜೂರು- ಶಿರೂರು ರೈಲ್ವೆ ಹಳಿಯ ಮದ್ಯದಲ್ಲಿ  ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸು ರೈಲ್ವೆ ಹಳಿ ಮೇಲೆ ಮಲಗಿ ಕೊಂಡಿದ್ದು  ಆತನ ಮೇಲೆ  ರೈಲು  ಚಲಿಸಿ ಬಂದಿರುವುದಾಗಿ ಮಾಹಿತಿಯನ್ನು ನೀಡಿದ್ದು  ಈ ಮಾಹಿತಿಯನ್ನು  ಫಿರ್ಯಾದಿದಾರರು  ಬೈಂದೂರು ಪೊಲೀಸ್ ಠಾಣೆಗೆ ತಿಳಿಸಿರುತ್ತಾರೆ. ನಂತರ  ಪೊಲೀಸರು ಸ್ಥಳಕ್ಕೆ  ಹೋಗಿ  ನೋಡಿದಲ್ಲಿ ಬೈಂದೂರು ಗ್ರಾಮದ ವಿದ್ಯಾನಗರ ಬಳಿ ರೈಲ್ವೆ ಹಳಿಯಲ್ಲಿ  ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಗಂಡಸು ಮೃತಪಟ್ಟಿರುವುದು ಕಂಡುಬಂದಿದ್ದು ಮೃತನು  ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ರೈಲ್ವೆ ಹಳಿಯ ಮೇಲೆ ಮಲಗಿಕೊಂಡಿದ್ದು  ಆತನ  ಮೇಲೆ ರೈಲುಚಲಿಸಿ ಮೃತಪಟ್ಟಿರುವುದಾಗಿದೆ. ಈ  ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಆರ್  15/2023 ಕಲಂ 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-03-2023 07:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080