ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

 • ಮಣಿಪಾಲ: ಪಿರ್ಯಾದಿ ನಳಿನಿ ರಾವ್‌ ಪ್ರಾಯ:74 ವರ್ಷ, ಗಂಡ: ದಿ. ರಮೇಶ್‌ ರಾವ್‌, ವಾಸ: 4-527 ಬಿ , ಹಿಮಾಸುಧಾ ಹೌಸ್‌, ರಾಜೀವ ನಗರ, 80 ಬಡಗುಬೆಟ್ಟು ಇವರು ದಿನಾಂಕ: 11.03.2022 ರಂದು 11:30 ಗಂಟೆಗೆ ತನ್ನ ಚಿಕ್ಕಮ್ಮನ ಮಗಳು ಗೌರಿಯೊಂದಿಗೆ  ಮನೆಯಲ್ಲಿರುವಾಗ ಪಿರ್ಯಾದಿದಾರರ ಪರಿಚಯದ ದಿವಾಕರ ಪೂಜಾರಿ ಎಂಬಾತನು ಬೈಕ್‌ನಲ್ಲಿ ಮನೆಗೆ ಬಂದಿದ್ದು ಆತನನ್ನು ಮನೆಯ ಒಳಗೆ ಕರೆಸಿ ಕುಳಿತುಕೊಳ್ಳಲು ಹೇಳಿರುತ್ತಾರೆ.  ಆರೋಪಿಯು ಪಿರ್ಯಾದಿದಾರರ ಬಳಿ ನಿಮ್ಮಿಂದ ಸಹಾಯ ಬೇಕು ಎಂದು ಕೇಳಿದಾಗ ಪಿರ್ಯಾದಿದಾರರು ನನ್ನ ಬಳಿ ಹಣವಿಲ್ಲ ನನ್ನ ಔಷಧಕ್ಕೆ ಹಣ ಖರ್ಚಾಗಿದೆ ಎಂದು ತಿಳಿಸಿರುತ್ತಾರೆ. ಆ ಸಮಯ  ಚಿಕ್ಕಮ್ಮನ ಮಗಳು ಗೌರಿಯು ಚಹಾ ಮಾಡಲು ಅಡುಗೆ ಮನೆಗೆ ಹೋದಾಗ ಆರೋಪಿಯು ಪಿರ್ಯಾದಿದಾರರ ಬಳಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಹಾಗೂ ಹವಳದ ಸರಕ್ಕೆ ಕೈ ಹಾಕಿದ್ದು ಪಿರ್ಯಾದಿದಾರರು ಸರವನ್ನು ಬಿಗಿಯಾಗಿ ಹಿಡಿದಾಗ ಆತನು ತಲೆಯಿಂದ ಸರವನ್ನು ಎಳೆದುಕೊಂಡು ತಾನು ಬಂದ ಬೈಕಿನಲ್ಲಿ ಪರಾರಿಯಾಗಿರುತ್ತಾನೆ. ಸುಲಿಗೆಯಾದ ಕರಿಮಣಿ 3 ½ ಪವನ್‌ ಹಾಗೂ ಹವಳದ ಸರ 6 ಪವನ್‌ ಆಗಿದ್ದು ಅಂದಾಜು ಮೌಲ್ಯ 3,50,000 ಆಗಬಹುದು. ಈ ಬಗ್ಗೆ  ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 36/2022, ಕಲಂ; 392  ಐ.ಪಿ.ಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಕುಂದಾಪುರ: ಪಿರ್ಯಾದಿ ಎಚ್.ಎಸ್.ಸುರೇಶ ಆಹಾರ ನಿರೀಕ್ಷಕರು, ಕುಂದಾಪುರ ಇವರು ಕುಂದಾಪುರದ ಆಹಾರ ನಿರೀಕ್ಷಕರಾಗಿ ಕುಂದಾಪುರ ತಾಲೂಕು ಕಛೇರಿಯಲ್ಲಿ  ಕರ್ತವ್ಯ ನಿರ್ವಹಿಸಿಕೊಂಡಿರುವಾಗ್ಗೆ  ಅವರಿಗೆ ಈ ದಿನ ದಿನಾಂಕ 11/03/2022 ರಂದು 10:30 ಘಂಟೆಗೆ ತಲ್ಲೂರು ಗ್ರಾಮದ ಪಾರ್ತಿಕಟ್ಟೆಯ ರಸ್ತೆಲ್ಲಿಯರುವ ತಲ್ಲೂರು ನೇರಳಕಟ್ಟೆ ರಸ್ತೆಗೆ ತಾಗಿಕೊಂಡಿರುವ ಮುನಾಫ್ ಗ್ಯಾರೇಜ ಬಳಿ ಒಂದು  ಮನೆಯಲ್ಲಿ ಸರಕಾರದ ಉಚಿತ ಅನ್ನ ಭಾಗ್ಯ ಯೋಜನೆಗೆ ಸಂಬಂದಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟಮಾಡಲು ದಾಸ್ತಾನು ಇರಿಸಿರುವುದಾಗಿ ಖಚಿತ ಮಾಹಿತಿಯ  ಮೇರೆಗೆ ತಲ್ಲೂರು ಗ್ರಾಮ ಕರಣಿಕರಾದ ಹರೀಶ್ ರವರಿಗೆ ಸ್ಥಳಕ್ಕೆ ಬರುವಂತೆ ತಿಳಿಸಿ ಪಿರ್ಯಾದುದಾರರು 11:15 ಗಂಟೆ ಸಮಯಕ್ಕೆ ಹರೀಶ್ ರವರೊಂದಿಗೆ ಹೋಗಿ ನೋಡಲಾಗಿ ಮುನಾಫ್ ಎಂಬುವವರ  ಮನೆಯ ಅಂಗಳದಲ್ಲಿ 24 ಚೀಲಗಳಲ್ಲಿ ಸರಕಾರದ ಅನ್ನಭಾಗ್ಯ ಯೋಜನೆಯ ಕುಚ್ಚಕ್ಕಿ ತಂಬಿಸಿಟ್ಟಿರುವುದು ಕಂಡುಬಂದಿರುತ್ತದೆ.ಅವುಗಳ ಪೈಕಿ ಸರಕಾರದಿಂದ ನೀಡಲಾದ 10 ಗೋಣಿ ಚೀಲದಲ್ಲಿ ಹಾಗೂ 14 ಪ್ಲಾಸ್ಟಿಕ್ ಚೀಲಗಳಲ್ಲಿ ಅಕ್ಕಿ ತುಂಬಿಡಲಾಗಿದೆ ಬಳಿಕ ಸ್ಥಳಕ್ಕೆ ತೂಕದ ಯಂತ್ರವನ್ನು ತರಿಸಿ ತೂಕ ಮಾಡಲಾಗಿ ಒಂದೊಂದು ಚೀಲದಲ್ಲಿ 50 ಕಿಲೋ ಅಕ್ಕಿ ತುಂಬಿಸಿರುವುದು ಕಂಡು ಬಂದಿದ್ದು ಒಟ್ಟು 1200 ಕಿಲೋ ಅಕ್ಕಿ ಇರುತ್ತದೆ ಇದರ ಅಂದಾಜು ಮೌಲ್ಯ 26,400 ರೂ ಆಗಬಹುದು ಸದ್ರಿ ದಾಸ್ತಾನು ಇರಿಸಿದ ಮನೆಗೆ ಬೀಗ ಹಾಕಿದ್ದು ಸದ್ರಿ ಮನೆಯು ಮುನಾಫ ಎಂಬವನಿಗೆ ಸೇರಿದ್ದೆಂದು ತಿಳಿಯಿತು.ಬಳಿಕ ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು ಅವರ ಸಮಾಕ್ಷಮ ಮಹಜರು ಮುಖೇನ ಸದ್ರಿ ಅಕ್ಕಿಯನ್ನು   ಸ್ವಾಧೀನಪಡಿಸಿ ತಲ್ಲೂರಿನ TAPCMS ಗೋದಾಮಿನಲ್ಲಿ ಇರಿಸಲಾಗಿದೆ.ಆಪಾದಿತನು ಸರಕಾರದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿಯನ್ನು  ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ  ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ತಿಳಿದುಬಂದಿರುತ್ತದೆ. ಈ ಬಗ್ಗೆ . ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 29/2022 ಕಲಂ:3,6,7 ಅವಶ್ತಕ ವಸ್ತಗಳ ಅಧಿನಿಯಮ ಕಾಯ್ದೆ 1955 ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಉಡುಪಿ : ಪಿರ್ಯಾದಿ ಆದಂ ಬ್ಯಾರಿ ಪ್ರಾಯ:48 ತಂದೆ:ದಿ. ಖಾದ್ರಿ ಬ್ಯಾರಿ. ವಾಸ: ಮನೆ ನಂಬ್ರ 2-269, ಫಿಶರೀಸ್‌ ಶಾಲೆಯ ಬಳಿ ಬೀಜಾಡಿ, ಇವರಿಗೆ  ದಿನಾಂಕ:18.01.2022 ರಂದು NAAPTOL ONLINE SHOPING SCRATCH & WIN CARD ಅಂಚೆ ಮುಖೇನಾ ಬಂದಿದ್ದು ಅದರಲ್ಲಿ 11,50,000/- ರೂ ಬಹುಮಾನ ಬಂದಿರುವುದಾಗಿ ನಮೂದಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ಕಾರ್ಡ್ ನಲ್ಲಿ ನಮೂದಿಸಿ ದೂರವಾಣಿ ಸಂಖ್ಯೆಯಾದ 8334850744 ನೇದಕ್ಕೆ ಕರೆ ಮಾಡಿದ್ದು ಆ ಸಮಯ ಇನ್ನೊಂದು ಮೊಬೈಲ್‌ ನಂಬ್ರ 8101542763 ನೇದನ್ನು ನೀಡಿ ಸದ್ರಿ ಕಾರ್ಡ್ ನ್ನು ವಾಟ್ಸ್ ಅಪ್‌ ಮಾಡುವಂತೆ ತಿಳಿಸಿದ್ದು ನಂತರದಲ್ಲಿ ತಾನು NAAPTOL ಸಂಸ್ಥೆಯವರು ಎಂಬುದಾಗಿ ಪಿರ್ಯಾದುದಾರರನ್ನು ನಂಬಿಸಿ ಕರೆಯನ್ನು ಮಾಡಿ ಹಾಗೂ ವಾಟ್ಸ್‌ಆಪ್‌ ಮುಖೇನಾ ಟಿ.ಡಿ.ಎಸ್ ಹಾಗೂ ಬೇರೆ ಬೇರೆ ಕಾರಣಗಳಿಂದ  ಹಂತ ಹಂತವಾಗಿ ಪಿರ್ಯಾದಿದಾರರಿಂದ ಒಟ್ಟು ರೂ. 10,71,938/- ನ್ನು ಆರೋಪಿಗಳು ವಿವಿಧ ಬ್ಯಾಂಕ್‌ ಖಾತೆಗಳಿಗೆ ಡಿಪಾಸಿಟ್ ಮಾಡಿಸಿಕೊಂಡು. ಫಿರ್ಯಾದಿದಾರರಿಗೆ  ಬಹುಮಾನದ ಹಣವನ್ನು  ನೀಡದೆ,  ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2022 ಕಲಂ 66(c), 66(d) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಕಲಿಸಲಾಗಿದೆ.
 • ಅಕೆಕಾರು: ಫಿರ್ಯಾದಿ ಗಣೇಶ್ (34) ತಂದೆ:ಓಡಿ ವಾಸ: ಕಟೀಲು ಮನೆ, ಮಲ್ಲಿಗೆ ಅಂಗಡಿ, ನಡುಗೋಡು ಪೋಸ್ಟ್,ಇವರು ತನ್ನ ತಂಗಿ ಮನೆಯಾದ ಕಾರ್ಕಳ ತಾಲೂಕು ಮರ್ಣೆ ಗ್ರಾಮದ, ಗುಡ್ಡಕ್ಕಿಬೆಟ್ಟು ದರ್ಖಾಸ್ತು ಮನೆ ಎಂಬಲ್ಲಿದ್ದ ತನ್ನ ತಾಯಿ ಲೀಲಾ ಎಂಬವರನ್ನು ಕರೆದುಕೊಂಡು ಹೋಗಲು ಈ ದಿನ ದಿನಾಂಕ: 11/03/2022 ರಂದು 19:50 ಗಂಟೆಯ ಸಮಯಕ್ಕೆ  ಮನೆಯ ಅಂಗಳಕ್ಕೆ ಬಂದಾಗ ತನ್ನ ತಂಗಿಯ ಗಂಡ ಹರೀಶ್ ಮತ್ತು ಉಳಿದ ಆರೋಪಿಗಳಾದ ಶ್ರೀಧರ್, ಬಾಲಕೃಷ್ಣ, ಅಮಿತಾ, ಲಕ್ಷ್ಮಿ, ಶ್ರೀಧರ್ ಎಂಬವರುಗಳು ಒಟ್ಟಾಗಿ ಅವಾಚ್ಯ ಶಬ್ದಗಳಿಂದ  ಬೈದು ಎಲ್ಲರೂ ಒಟ್ಟಾಗಿ ಪಿರ್ಯಾದಿದಾರರ ಮೇಲೆ ಕೋಲು, ಕಬ್ಬಿಣದ ರಾಡ್, ಹಾಗೂ ಕತ್ತಿಯನ್ನು ಹಿಡಿದುಕೊಂಡು ಬಂದು ಹಲ್ಲೆ ನಡೆಸಿದ್ದು, ಹೊರಗಡೆ ನಿಂತಿದ್ದ ಪಿರ್ಯಾದಿದಾರರ ತಾಯಿ ಗಲಾಟೆ ನಿಲ್ಲಿಸಲು ಮಧ್ಯೆ ಬಂದಿದ್ದು, ಅಮಿತಾ ರವರು ಕೈಯಲ್ಲಿ ಹಿಡಿದುಕೊಂಡಿದ್ದ ಕತ್ತಿಯು ಪಿರ್ಯಾದುದಾರರ ತಾಯಿಯ ಬಲಮುಂಗೈಗೆ ತಾಗಿ ರಕ್ತಗಾಯವಾಗಿರುತ್ತದೆ. ಈ ಬಗ್ಗೆ  ಅಜೆಕಾರು ಪೊಲೀಸ್‌ಠಾಣಾ  ಅಪರಾಧ ಕ್ರಮಾಂಕ 09/2022 ಕಲಂ 504, 324 RW 149 IPC ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಅಜೆಕಾರು: ಫಿರ್ಯಾದಿ: ಹರೀಶ್  (38) ತಂದೆ: ಓಬ ಪಣಾರ ವಾಸ: ಡ್ಡಕ್ಕಿಬೆಟ್ಟು ದರ್ಖಾಸ್ತು ಮನೆ ಮರ್ಣೆ ಗ್ರಾಮದಕಾರ್ಕಳ ಇವರು ದರ್ಕಾಸು ಮನೆ, ಗುಡ್ಡೆಕ್ಕಿಬೆಟ್ಟು, ಎಣ್ಣೆಹೊಳೆ, ಮರ್ಣೆ ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಅವರ ಹೆಂಡತಿಯ ತಾಯಿಯು ಫಿರ್ಯಧುದಾರರ ಮನೆಯಲ್ಲಿ ಇದ್ದ ಕಾರಣ ಅವರನ್ನು ಕರೆದುಕೊಂಡು ಹೋಗಲು ಈ ದಿನ ದಿನಾಂಕ: 11-03-2022 ರಂದು ಸಂಜೆ 7:30 ಗಂಟೆಯ ಸುಮಾರಿಗೆ ಅವನ ಬಾಬ್ತು ಬೈಕ್ ನಲ್ಲಿ  ಬಂದಿದ್ದು, ಮನೆಯಲ್ಲಿ ಅಂಗಳದಲ್ಲಿ ಬೈಕ್ ನ್ನು ನಿಲ್ಲಿಸಿ ಕೆಳಗಡೆ ಇಳಿದು ತನ್ನ ತಾಯಿಯಲ್ಲಿ ಆಧಾರ್ ಕಾರ್ಡ್ ಹಾಗೂ ರೆಕಾರ್ಡ್ ಗಳನ್ನೆಲ್ಲಾ ತೆಗೆದುಕೊಂಡು ಬಾ ಹೋಗೊಣಾ ಎಂದು ತಿಳಿಸಿರುತ್ತಾನೆ. ಬಳಿಕ ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಯಾಕೆ ಕಂಪ್ಲೇಂಟ್ ಕೊಡಲು ಹೋಗಿದ್ದು, ಎಂಬಿತ್ಯಾದಿಯಾಗಿ ಬೈಯುತ್ತಾ, ಮನೆಯ ಹೆಣ್ಣು ಮಕ್ಕಳುಗಳು ಎಲ್ಲರೂ ಮನೆಯ ಅಂಗಳದಲ್ಲಿ ನಿಂತಿದ್ದ ಸಮಯ ಆರೋಪಿತನು ಅಶ್ಲೀಲವಾಗಿ ನಡೆದುಕೊಂಡಿರುತ್ತಾನೆ. ನಂತರ ಆರೋಪಿತನು ಫಿರ್ಯಾದುದಾರರ ತಾಯಿಯಲ್ಲಿ ನಿನ್ನ ಮಗನನ್ನು ಒಂದು ವಾರದಲ್ಲಿ ಕೊಂದು ಹಾಕುತ್ತೇನೆ ಎಂದು ಜೀವ ಬೇದರಿಕೆ ಹಾಕಿರುತ್ತಾನೆ . ಈ ಬಗ್ಗೆ ಅಜೆಕಾರು ಪೊಲೀಸ್‌ಠಾಣಾ  ಅಪರಾದ ಕ್ರಮಾಂಕ 10/2022 ಕಲಂ 323, 354, 354 (A) 504, 506, 509,  IPC ಯಂತೆ ಪ್ರಕರಣ ದಾಕಲಿಸಲಾಗಿದೆ


ಕಳವು ಪ್ರಕರಣಗಳು

 • ಉಡುಪಿ: ಪಿರ್ಯಾದಿ ದಿಲೀಪ್‌ಸಾಲಿಯಾನ್‌ಪ್ರಾಯ: 31 ವರ್ಷ ತಂದೆ: ಶೇಖರ್‌ಪೂಜಾರಿ ವಿಳಾಸ: 3-31-1, ಸಮೃದ್ದಿ ನಿಲಯ, ಅಂಗಡಿಬೆಟ್ಟು, ಬೊಮ್ಮರಬೆಟ್ಟು ಇವರು ನಿಟ್ಟೂರಿನ ಹುಂಡೈ ಶೋರೂಂನಲ್ಲಿ ಕೆಲಸ ಮಾಡಿಕೊಂಡಿದ್ದು, 4 ವರ್ಷಗಳ ಹಿಂದೆ ಖರೀದಿಸಿದ Maruthi Swift ಕಾರು ನಂಬ್ರ: KA 20 MB 7136 ನೇದನ್ನು ದಿನಾಂಕ 10/03/2022 ರಂದು 18:30 ಗಂಟೆಗೆ ಉಡುಪಿ ತಾಲೂಕು ಪುತ್ತೂರು ಗ್ರಾಮ ನಿಟ್ಟೂರು ಹುಂಡೈ ಶೋರೂಂ ಬಳಿ ಇರುವ ಖಾಲಿ ಜಾಗದಲ್ಲಿ ಪಾರ್ಕ್‌ ಮಾಡಿ ಹೋಗಿದ್ದು, ದಿನಾಂಕ 11/03/2022 ರಂದು ಬೆಳಿಗ್ಗೆ 09:30 ಗಂಟೆಗೆ ಬಂದು ನೋಡಿದಾಗ ಕಾರಿನ 4 ಚಕ್ರಗಳು ಇಲ್ಲದೆ ಇದ್ದು, ಯಾರೋ ಕಳ್ಳರು ಪಿರ್ಯಾದುದಾರರ ಕಾರಿನ 4 ಚಕ್ರಗಳು ಹಾಗೂ ಡಿಸ್ಕ್‌ ನ್ನು ಕಳವು ಮಾಡಿದ್ದು, ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ. 50,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾ ಕ್ರಮಾಂಕ  46/2022, ಕಲಂ: 379  IPC ಯಂತೆ ಪ್ರಕರಣ ದಾಕಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು

 • ಕುಂದಾಪುರ: ಫಿರ್ಯಾದಿ: ಹರಿಪ್ರಸಾದ ಶೆಟ್ಟ (44) ತಂದೆ: ಶಂಕರ ಶೆಟ್ಟಿ ವಾಸ: ಕೊರ್ಗಿಕೊಣಟ್ಟು ಸಾಧಮ್ಮ ನಿಲಯ ಕೊರ್ಗಿ ಗ್ರಾಮ ಇವರ ಚಿಕ್ಕಪ್ಪ ಸುಧಾಕರ ಹೆಗ್ಡೆ (85) ವರ್ಷ ರವರು ದಿನಾಂಕ:11/03/2022 ರಂದು ಬೆಳ್ಳಿಗ್ಗೆ  ಸುಮಾರು 8:30 ಗಂಟೆಯ  ಸಮಯದಲ್ಲಿ ಅಡಿಕೆ ತೋಟಕ್ಕೆ  ನೀರು ಬಿಡಲು ಹೊಗಿದ್ದು  ಅಡಿಕೆ ತೋಟಕ್ಕೆ ನೀರು ಬಿಡಲು ಹೋದವರು ಮನೆಗೆ ವಾಪಾಸು  ಬಾರದೇ ಇದ್ದುದ್ದನ್ನು ನೋಡಿ ನಾನು ಹಾಗೂ  ಅವರ ಹೆಂಡತಿಯಾದ ಚಂದ್ರವತಿ ಹೆಗ್ಡೆ ಯವರು ತೋಟದ ಕಡೆಗೆ ಹೋಗಿ  ಹುಡುಕಾಡುತ್ತಿರುವಾಗ  ಮನೆಯ ಅಡಿಕೆ ತೋಟದ ಬದಿಯಲ್ಲಿ ಇದ್ದ ಪಂಪಸೆಟ್ ಕೆರೆಯಲ್ಲಿ ನನ್ನ ಚಿಕ್ಕಪ್ಪನವರ ಮೃತ ದೇಹ ಸುಮಾರು  ಬೆಳ್ಳಿಗ್ಗೆ 9:30 ಗಂಟೆಗೆ ಸಮಯದಲ್ಲಿ ತೇಲುತ್ತಿದ್ದು ಬಳಿಕ ನೀರಿನಲ್ಲಿ ಮುಳುಗಿರುತ್ತದೆ,  ಆ ಬಳಿಕ ಅಗ್ನಿಶಾಮಕ ದಳದವರು ಮೇಲಕ್ಕೆ ಎತ್ತಿದ್ದು ನನ್ನ ಚಿಕ್ಕಪ್ಪನವರು ಮನೆಯ ಹಿತ್ತಲಿನ ಅಡಿಕೆ ಮರಗಳಿಗೆ ಪಂಪ್ ಸೆಟ್ ಮಖಾಂತರ ನೀರು ಬೀಡಲು  ಹೋದವರು  ಆಕಸ್ಮಿಕವಾಗಿ  ಪಂಪಸೆಟ್ ಬಳಿ ಇದ್ದ ಆವರಣವಿಲ್ಲದ ಕೆರೆಗೆ ಆಕಸ್ಮಿಕ ವಾಗಿ ಕಾಲು ಜಾರಿ ಬಿದ್ದು ಕೆರೆಯ ನೀರಿನಲ್ಲಿ ಮುಳುಗಿ  ಮೃತ ಪಟ್ಟಿರುವುದಾಗಿದೆ.  ಈ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವು್ದಿಲ್ಲ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌‌ ನಂ: 09/2022  ಕಲಂ:  174  ಸಿಆರ್‌ಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 12-03-2022 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080