ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 11/03/2021 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿದಾರರಾದ ಧೀರಜ್ (26), ತಂದೆ: ಶೇಖರ್, ವಾಸ: ಕೃಷ್ಣ ನಿಲಯ, ಸಂಪಿಗೆ ನಗರ ಉಡುಪಿ ಉದ್ಯಾವರ ಅಂಚೆ ಮತ್ತು ಗ್ರಾಮ ಇವರು ತನ್ನ ಮೋಟಾರು ಸೈಕಲ್ ನಂಬ್ರ KA-20-EM-3193 ನೇ ಮೋಟಾರು ಸೈಕಲಿನಲ್ಲಿ ಮಹಿಮಾ ಎಂಬುವವರನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಮಲ್ಪೆ ಕಡೆಯಿಂದ ಕಡಿಯಾಳಿ ಕಡೆಗೆ ಹೋಗುತ್ತಿರುವಾಗ ಅಂಬಲಪಾಡಿ ಗ್ರಾಮದ ಪಂದು ಬೆಟ್ಟು ವಿಲೇಜ್ ಇನ್ ಬಾರ್ ಎದುರುಗಡೆ ರಾಷ್ಟ್ರೀ ಹೆದ್ದಾರಿ 169(ಎ) ತಲುಪುವಾಗ KA-20-EF-3499 ನೇ ಸ್ಕೂಟರ್  ಸವಾರ ಶೇಖ್ ಸಲೀಂ ತನ್ನ ಸ್ಕೂಟರನ್ನು  ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರಳಾದ ಮಹಿಮಾ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಮುಖಕ್ಕೆ ಗಾಯವಾಗಿದ್ದು, ಬಲಕೈ ಮೂಳೆ ಮುರಿತ ಹಾಗೂ 2 ಹಲ್ಲುಗಳು ಕಿತ್ತು ಹೋಗಿರುತ್ತದೆ. ಮಹಿಮಾಳಿಗೆ ಮುಖಕ್ಕೆ, ತಲೆಗೆ, ಎಡಕಾಲಿಗೆ ತರಚಿದ ಗಾಯವಾಗಿರುತ್ತದೆ . KA-20-EF-3499    ನೇ ಸ್ಕೂಟರ್ ಸವಾರ ಶೇಖ್ ಸಲೀಂ ರವರಿಗೂ ಎಡಕಾಲಿಗೆ ಗುದ್ದಿದ ನೋವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021  ಕಲಂ:  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       
  • ಕೋಟ: ಪಿರ್ಯಾದಿದಾರರಾದ ಬಿ.ವಾಸುದೇವ ಶೆಟ್ಟಿ (82), ತಂದೆ: ದಿ:ಪದ್ಮಯ್ಯ ಶೆಟ್ಟಿ,  ವಾಸ:ಸಿಂಗಾರಿ, ದೇವಸ್ಥಾನ ಬೆಟ್ಟು, ಬೇಳೂರು ಗ್ರಾಮ ಕುಂದಾಪುರ ತಾಲೂಕು,ಉಡುಪಿ ಇವರು  ದಿನಾಂಕ 11/03/2021 ರಂದು ಕೆಲಸದ ನಿಮಿತ್ತ ತನ್ನ KA-20-EF-3887 ನೇ ನಂಬ್ರದ ಸ್ಕೂಟಿಯಲ್ಲಿ ಮಲ್ಯಾಡಿ ರಸ್ತೆ ಮೂಲಕ ತೆಕ್ಕಟ್ಟೆ ಜಂಕ್ಷನ್ ಗೆ ಬಂದು ಕುಂದಾಪುರ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ  ಉಡುಪಿ  ಏಕಮುಖ ಡಾಮಾರು ರಸ್ತೆಯನ್ನು ದಾಟಿ ಉಡುಪಿಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಡಾಮಾರು ರಸ್ತೆಗೆ ಬಂದು ಕುಂದಾಪುರ ಕಡೆಗೆ ಹೋಗುವಾಗ ಸಂಜೆ 5:45 ಗಂಟೆಗೆ ಉಡುಪಿ ಯಿಂದ ಕುಂದಾಪುರ ಕಡೆಗೆ KA-20-EV-0926 ನೇ ನಂಬ್ರ ದ ಬುಲೇಟ್ ಸವಾರ ಸಾಜಿದ್  ತನ್ನ  ಬುಲೇಟ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿ  ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದರಿಂದ ಎಡ ಕಾಲಿನ ಪಾದದ ಗಂಟಿನ ಬಳಿ  ಮೂಳೆ ಮುರಿತವಾಗಿದ್ದು ಬಲ ಭುಜ, ಮತ್ತು ಹಣೆಗೆ ರಕ್ತ ಗಾಯವಾಗಿರುತ್ತದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ನೀಲಾ (30), ತಂದೆ: ಅನಂತ ಮರಾಠಿ, ವಾಸ: ಗಂಗನಾಡು, ತೋಗ್ತಿ, ಬೈಂದೂರು ಗ್ರಾಮ  ಬೈಂದೂರು ತಾಲೂಕು ಇವರ ಅಜ್ಜಿ ಪುಟ್ಟಿ ಮರಾಠಿ(85) ರವರು  15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕುಂದಾಪುರ ಶ್ರೀಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ದಿನಾಂಕ 09/03/2021  ರಂದು ಮಧ್ಯಾಹ್ನ 01:00 ಗಂಟೆಗೆ ಪುಟ್ಟಿ ಮರಾಠಿಯವರು  ಮನೆಯಲ್ಲಿದ್ದು ನಂತರ ಮನೆಯಲ್ಲಿರದೆ ಕಾಣೆಯಾಗಿದ್ದು, ಪತ್ತೆಯ ಬಗ್ಗೆ ಪಿರ್ಯಾದಿದಾರರು  ಮನೆಯ ಸುತ್ತಮುತ್ತ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವುದಿಲ್ಲ. ದಿನಾಂಕ 11/03/2021 ರಂದು ಬೆಳಗ್ಗೆ 07:30 ಗಂಟೆಗೆ ಪಿರ್ಯಾದಿದಾರರು ಅವರ ಮನೆಯ ಹೊಳೆಯ ಹತ್ತಿರ ಹೋಗಿ ಹುಡುಕಾಡುವಾಗ ಪುಟ್ಟಿ ಮರಾಠಿಯವರು ಹೊಳೆಯ ಮಧ್ಯದಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು  ಪುಟ್ಟಿ ಮರಾಠಿಯವರು ಮೊದಲಿನಿಂದಲೂ ಮಾನಸಿಕ ಖಾಯಿಲೆಯಿಂದ ಬಳುಲುತ್ತಿದ್ದ ಪರಿಣಾಮ ಹೊಳೆಯನ್ನು ದಾಟಿಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜ್ಯಾರಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಮನಷ್ಯ ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದುದಾರರಾದ ಶಶಿಕಲಾ ಉದಯ ಗುಡಿಗಾರ್ (58), ತಂದೆ: ಉದಯ ಗುಡಿಗಾರ್, ವಾಸ: ಅಮ್ಮುಂಜೆ ಸಾಲ್ಮಾರ , ತೆಂಕಬೆಟ್ಟು ಅಂಚೆ, ಉಡುಪಿ ಇವರ ಮಗ ನವೀನ ಉದಯ ಗುಡಿಗಾರ್‌ (33) ಇವರು ಉಡುಪಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ 4 ನೇ ಅಡ್ಡ ರಸ್ತೆಯಲ್ಲಿರುವ MEDOWS APARTMENT ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು ಕೆಲಸ ಮುಗಿಸಿದ ಬಳಿಕ ಪ್ರತಿ ದಿನ ಮನೆಗೆ ಬಂದು ಹೋಗುತ್ತಿದ್ದವರು ದಿನಾಂಕ 08/03/2021 ರಂದು ಬೆಳಿಗ್ಗೆ 07:00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬರಬೇಕಾದವರು ವಾಪಾಸ್ಸು ಮನೆಗೆ ಬಾರದೇ  ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 10/03/2021  ರಂದು ಸಂತೋಷ್ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ವೃತ್ತ ಇವರು ರೌಂಡ್ಸ ಕರ್ತವ್ಯದಲ್ಲಿರುವಾಗ ಬೈಂದೂರು ತಾಲೂಕು ಶಿರೂರು ಗ್ರಾಮದ ಕರಿಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ  ಸಮೀಪ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್  ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ 1] ಮಾಸ್ತಿ ಸಂಕಯ್ಯ ಗೊಂಡ (55), ತಂದೆ; ಸಂಕಯ್ಯ ಗೊಂಡ, ವಾಸ; ಹೆಜೆಲೇ, ಹೊಸಮನೆ, ಮಾರುಕೇರಿ ಅಂಚೆ ಮತ್ತು ಗ್ರಾಮ, ಭಟ್ಕಳ ತಾಲೂಕು,  2] ಮಹೇಶ ರಾಮ ನಾಯ್ಕ (32), ತಂದೆ; ರಾಮ ನಾಯ್ಕ, ವಾಸ; ಪಟೇಲರ ಮನೆ, ಹೊನ್ನೆಮಡೆ, ಬೆಳ್ಕೆ ಗ್ರಾಮ, ಭಟ್ಕಳ ತಾಲೂಕು, 3] ಮಂಜುನಾಥ ಗೊಂಡ (28), ತಂದೆ; ತಿಮ್ಮಪ್ಪ ಗೊಂಡ, ವಾಸ; ಮಂಜುನಾಥ ನಿಲಯ, ಬಸ್ಥಿ, ಮುರುಡೇಶ್ವರ, ಹೆರಡೆ ಕ್ರಾಸ್, ಮುರುಡೇಶ್ವರ ಗ್ರಾಮ, ಭಟ್ಕಳ ತಾಲೂಕು, 4] ಗಣೇಶ ರಾಘವೇಂದ್ರ ನಾಯ್ಕ (32), ತಂದೆ; ರಾಘವೇಂದ್ರ ನಾಯ್ಕ, ವಾಸ; ಕೋಟೆಮನೆ, ಚಂದ್ರಹಿತ್ಲು, ಚರ್ಚ ಕ್ರಾಸ್ , ಮುರುಡೇಶ್ವರ ಗ್ರಾಮ, ಭಟ್ಕಳ ತಾಲೂಕು, 5] ರವಿ ಲಚ್ಮಯ್ಯು ನಾಯ್ಕ(38), ತಂದೆ; ಲಚ್ಮಯ್ಯ ನಾಯ್ಕ, ವಾಸ; ಕಲಗೊಂಡು ಮನೆ, ಹಡಿನ್, ಸರ್ಪನಕಟ್ಟೆ, ಹಡಿನ ಗ್ರಾಮ,ಭಟ್ಕಳ ತಾಲೂಕು ಇವರನ್ನು ವಶಕ್ಕೆ ಪಡೆದು, ಆಟಕ್ಕೆ ಬಳಸಿದ 1) 52 ಇಸ್ವೀಟ್ ಎಲೆಗಳು, 2) ಸ್ವಲ್ಪ ಹುರಿದ ಮೇಣದ ಬತ್ತಿ-2, 3) ನಗದು ರೂಪಾಯಿ 6900/- ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 87 ಕರ್ನಾಟಕ ಪೊಲೀಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಉಡುಪಿ: ದಿನಾಂಕ 11/03/2021 ರಂದು 17:00 ಗಂಟೆಯಿಂದ 19:30 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿ ಇರುವ ರಾಜ್ ಟವರ್ಸ್ ಸಮೀಪ ಉಡುಪಿ – ಮಣಿಪಾಲ ಟಾರು ರಸ್ತೆಯ ಬದಿಯಲ್ಲಿ ಪಿರ್ಯಾದುದಾರರಾದ ರಕ್ಷಾ ಯು (26), ತಂದೆ: ರಮಾನಂದ ಮೂರ್ತಿ ಬಿ, ವಾಸ: ಸಾನಿಧ್ಯ  ವಿಷ್ಣುಮೂರ್ತಿ ದೇವಸ್ದಾನದ ಹತ್ತಿರ ಕೊರಂಗ್ರಪಾಡಿ ಇವರು ನಿಲ್ಲಿಸಿದ್ದ ಮಾರುತಿ  ಸುಜುಕಿ ಸ್ಟೀಫ್ ಕಾರು ನಂಬ್ರ KA-20-MA- 6615 ನೇದರ ಹಿಂಭಾಗದ ಎಡಬದಿಯ ಬಾಗಿಲಿನ ಗ್ಲಾಸ್ ನ್ನು ಯಾರೋ ಕಳ್ಳರು ಒಡೆದು ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಎಸರ್ ಕಂಪೆನಿಯ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋದ ಲ್ಯಾಪ್ ಟಾಪ್ ನ  ಮೌಲ್ಯ ರೂಪಾಯಿ 25,000/- ಆಗಿದ್ದು , ಕಾರಿನ ಗ್ಲಾಸ್ ಒಡೆದ ಪರಿಣಾಮ  ರೂಪಾಯಿ 4,000/- ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ:  379, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 11/03/2021 ರಂದು 19:20 ಗಂಟೆಯಿಂದ 19:40 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಉಡುಪಿ ಬೃಂದಾವನ ಸರ್ಕಲ್  ಬಳಿ ಇರುವ  ಉಡುಪಿ ಗ್ಲಾಸ್ ಹೌಸ್ ಎದುರಿಗೆ ರಸ್ತೆಯ  ಬದಿಯಲ್ಲಿ ಪಿರ್ಯಾದಿದಾರರಾದ ಡಾ. ನಮನ್ ಅಗಾರ್ವಾಲ್(30),  ತಂದೆ: ದಿನೇಶ್ ಅಗಾರ್ವಾಲ್, ವಾಸ: Department of Urology ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ಇವರು ನಿಲ್ಲಿಸಿದ್ದ ಬಲೇನೋ ಕಾರು ನಂಬ್ರ DL-8C-AC- 6293  ನೇದರ ಹಿಂಭಾಗದ ಎಡಬದಿಯ ಬಾಗಿಲಿನ ಗ್ಲಾಸ್ ನ್ನು ಯಾರೋ ಕಳ್ಳರು ಒಡೆದು ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಪಿರ್ಯಾದಿದಾರರಿಗೆ ಮಣಿಪಾಲ ಮಾಹೆಯವರು ನೀಡಿದ್ದ ಲೇನೋವ ಕಂಪೆನಿಯ ಲ್ಯಾಪ್ ಟಾಪ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋದ ಲ್ಯಾಪ್ ಟಾಪ್ ನ ಮೌಲ್ಯ ರೂಪಾಯಿ 70,000/- ಆಗಿದ್ದು, ಕಾರಿನ ಗ್ಲಾಸ್ ಒಡೆದ ಪರಿಣಾಮ  ರೂಪಾಯಿ 20,000/- ನಷ್ಟ ಉಂಟಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 379, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 10/03/2021 ರಂದು ಸಂಜೆ 6:00 ಗಂಟೆಗೆ ಅಮೀರ್ ಹಂಝಾ ಮತ್ತು  ನಜೀರ್ ಎಂಬುವವರು ಪಿರ್ಯಾದಿದಾರರಾದ ಅಬ್ದುಲ್ ರಝಾಕ್ (43), ತಂದೆ : ಕೆ. ಖಾದರ್, ವಾಸ : ರಮ್ಲತ್ ಮಂಜಿಲ್ ಊಳಿಯಾರಗೋಳಿ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ಗ್ಯಾರೇಜ್‌ ಹತ್ತಿರ ಮೋಟಾರು ಸೈಕಲ್ ನಲ್ಲಿ ಬಂದು ಮೋಟಾರು ಸೈಕಲ್‌ ನಿಲ್ಲಿಸಿ ಅಮೀರ್ ಹಂಝಾನು ಪಿರ್ಯಾದಿದಾರರ ಬಳಿ ಬಂದು ಗ್ಯಾರೇಜ್‌ನ ಎದುರು ರಿಪೇರಿಯ ಬಗ್ಗೆ ನಿಲ್ಲಿಸಲಾಗಿದ್ದ ದ್ವಿ ಚಕ್ರ  ವಾಹನಗಳನ್ನು ನೀನು ತೆಗೆಯಬೇಕು ಇಲ್ಲದೇ ಇದ್ದರೆ ನನಗೆ ವ್ಯಯಕ್ತಿಕ ಹಣ ನೀಡಬೇಕು ಇಲ್ಲವಾದಲ್ಲಿ ನಿನ್ನ ಅಂಗಡಿ ಮುಂದೆ ನಿಲ್ಲಿಸಲಾಗಿದ್ದ ದ್ವಿ ಚಕ್ರ  ವಾಹನಗಳನ್ನು ಜೆ.ಸಿ.ಬಿ. ಮೂಲಕ ಹೊತ್ತುಕೊಂಡು ಹೋಗುವುದಾಗಿ ಬೆದರಿಸಿರುತ್ತಾರೆ. ಆಗ ಪಿರ್ಯಾದಿದಾರರು ಮಸೀದಿಗೆ ಪ್ರತಿ ತಿಂಗಳು ಬಾಡಿಗೆ ಹಣ ನೀಡುತ್ತಿದ್ದೆನೆ ಏಕೆ ಹಣ ನೀಡಬೇಕು. ವಾಹನಗಳನ್ನು ಏಕೆ ತೆಗೆಯಬೇಕು ಎಂದು ಕೇಳಿದಾಗ ಅಮೀರ್ ಹಂಝಾನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದು ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಕಬ್ಬಿಣದ  ರಾಡ್‌ನಿಂದ ಪಿರ್ಯಾದಿದಾರರ ಸೊಂಟಕ್ಕೆ ಹೊಡೆದು ಕೈಯಿಂದ ದೂಡಿದ್ದು, ಪಿರ್ಯಾದಿದಾರರು ಬೊಬ್ಬೆ ಹೊಡೆದು ಬಿದ್ದಿದ್ದು,  ಆ ಸಮಯ ಅಲ್ಲೆಗೆ ಬಂದ ಪಿರ್ಯಾದಾರರ ಕೆಲಸದವರಾದ ಇಮ್ತಿಯಾಜ್ ಮತ್ತು ಹುಸೇನ್‌ರವರು ಬಿಡಿಸಲು ಬಂದಾಗ ಅಮೀರ್ ಹಂಝಾನು ಇಮ್ತಿಯಾಜ್ ರವರ ಎಡಕಾಲಿನ ಕೋಲು ಕಾಲಿಗೆ ಕಬ್ಬಿಣದ ರಾಡ್‌ನಿಂದ ಹೊಡೆದ್ದಿದ್ದು, ಇಮ್ತಿಯಾಜ್ ರವರು ಅಲ್ಲಿಯೇ ಕುಸಿದು ಬಿದ್ದದ್ದು, ನಜೀರ್‌ರವರು ಹುಸೇನ್‌ರವರನ್ನು ಕೈಯಲ್ಲಿ   ಹಿಡಿದು ಬೆನ್ನಿಗೆ  ಮತ್ತು  ಕೆನ್ನೆಗೆ ಕೈಗಳಿಂದ ಹೊಡೆದು ದೂಡಿದ್ದರಿಂದ ಜೋರಾಗಿ ಬೊಬ್ಬೆ ಹೊಡೆದಿದ್ದು, ಜನರು ಬರುತ್ತಿರುವುದನ್ನು ಕಂಡು ಅಮೀರ್ ಹಂಝಾನು  ಕಬ್ಬಿಣದ ರಾಡನ್ನು ಅಲ್ಲಿಯೇ  ಬಿಸಾಡಿ ತಾನು ಬಂದಿದ್ದ ಮೋಟಾರು ಸೈಕಲ್‌ಹತ್ತಿ ನಜೀರ್ ರವರನ್ನು ಕುಳ್ಳರಿಸಿ ಮೋಟಾರು ಚಲಾಯಿಸಿಕೊಂಡು ಹೋಗಿರುತ್ತಾನೆ. ಹೋಗುವಾಗ ಬೆದರಿಕೆ ಹೋಗಿರುತ್ತಾನೆ. ಪಿರ್ಯಾದಿದಾರರಿಗೆ ಅಮೀರ್ ಹಂಝಾನು ರಾಡ್‌ನಿಂದ  ಹೊಡೆದ ಪರಿಣಾಮ ಸೊಂಟಕ್ಕೆ ಮತ್ತು  ಎದೆಗೆ ತೀವೃವಾದ ನೋವಾಗಿದ್ದು, ಇಮ್ತಿಯಾಜ್ ರವರನ್ನು ಎಡಕಾಲಿನ ಕೋಲುಕಾಲಿಗೆ ತೀವೃವಾದ ಒಳ ಜಖಂ ಆಗಿದ್ದು. ಹುಸೇನ್‌ರವರಿಗೂ ಬೆನ್ನಿಗೆ ಮತ್ತು ಕೆನ್ನೆಗೆ ನೋವಾಗಿರುವುದಾಗಿದೆ. ಅಲ್ಲಿ ಸೇರಿದ ಜನರು ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಯ ವೈದ್ಯರಲ್ಲಿ ತೋರಿಸಿದಾಗ ಪರೀಕ್ಷಿಸಿ ಪಿರ್ಯಾದಿದಾರರಿಗೆ ಮತ್ತು ಇಮ್ತಿಯಾಜ್ ರವರಿಗೆ ಒಳರೋಗಿಯನ್ನಾಗಿ ದಾಖಲಿಸಿ ಹಾಗೂ ಹುಸೇನ್ ರವರನ್ನು  ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 10/03/2021 ರಂದು ಮಸೀದಿಯ ವಠಾರದಲ್ಲಿ ಜೆ.ಸಿ.ಬಿ. ಮುಖಾಂತರ ಕಾಮಗಾರಿ ನಡೆಯುತ್ತಿದ್ದು, ಬೆಳಗ್ಗೆ ಜೆ.ಸಿ.ಬಿ ಬಂದಾಗ ಮಸೀದಿಯ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಚರಣೆ ಮಾಡುವ ಕೆ.ಎಮ್.ರಜಾಕ್ ಎಂಬುವವರು ರಿಪೇರಿಗೆ ಬಂದ  75 ರಿಂದ 100 ಬೈಕುಗಳು ಕಾಮಗಾರಿಕೆಗೆ ಅಡಚಣೆ ಮಾಡುವ ರೀತಿಯಲ್ಲಿ ಇಟ್ಟಿರುವುದರಿಂದ ಪಿರ್ಯಾದಿದಾರರಾದ ಅಮೀರ್ ಹಂಝಾ (49), ತಂದೆ : ರಜಬ್ ಬ್ಯಾರಿ, ವಾಸ : ಭರತ ನಗರ ಊಳಿಯಾರಗೋಳಿ ಗ್ರಾಮ ಕಾಪು ಇವರು ರಜಾಕ್ ಎಂಬುವವರೊಂದಿಗೆ ಬೈಕುಗಳನ್ನು ತೆರವುಗೊಳಿಸಲು ತಿಳಿಸಿದ್ದು, ರಜಾಕ್ ಮಧ್ಯಾಹ್ನ ತನಕ  ಬೈಕುಗಳನ್ನು ತೆರವುಗೊಳಿಸಿರುವುದಿಲ್ಲ. ಪಿರ್ಯಾದಿದಾರರು ಮಧ್ಯಾಹ್ನ ಬೈಕುಗಳನ್ನು ತೆರವುಗೊಳಿಸಲು ತಿಳಿಸಿದ್ದು, ಸಂಜೆಯವರೆಗೂ ತೆರವುಗೊಳಿಸದೇ ಇದುದರಿಂದ ಈ ಬಗ್ಗೆ ಸಂಜೆ 6:00 ಗಂಟೆಗೆ ಪಿರ್ಯಾದಿದಾರರು ಮತ್ತು ಶೇಕ್ ನಜೀರ್ ರವರು ರಜಾಕ್‌ರವರು ಬೈಕ್ ಇಟ್ಟ ಜಾಗಕ್ಕೆ ಹೋಗಿ ವಿಚಾರಿಸಿದಾಗ ಪಿರ್ಯಾದಿದಾರರೊಂದಿಗೆ ಉಡಾಫೆ ಮಾತನಾಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದು,  ಅದೇ ಸಮಯದಲ್ಲಿ ರಜಾಕ ರವರ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಇಮ್ತಿಯಾಜ್ ಮತ್ತು  ಇತರ ಇಬ್ಬರು ಬೈಕಿನ ಶಾಕ್ ಅಬ್ಜರ್ಬೆರ್ ರಾಡನ್ನು ಹಿಡಿದುಕೊಂಡು ಬಂದು ನಾಲ್ಕು ಮಂದಿ ಸೇರಿ ಪಿರ್ಯಾದಿದಾರರಿಗೆ ಬಿಗಿಯಾಗಿ ಹಿಡಿದು ರಾಡ್‌ ಮುಖಾಂತರ ಬಲಕೈ ಹೊಡೆದು ನಂತರ ಕೈಗಳಿಂದ ಎದೆಗೆ ಗುದ್ದಿದ್ದು,  ಪರಿಣಾಮ ಬಲಕೈಗೆ ಒಳನೋವಾಗಿದ್ದು, ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಅವರು ರಾಡನ್ನು ಬಿಸಾಡಿ ಓಡಿ ಹೋಗಿದ್ದು, ಹೋಗುವಾಗ ಪಿರ್ಯಾದಿದಾರರಿಗೆ ಮುಂದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೋಗಿರುವುದಾಗಿದೆ. ದಿನಾಂಕ 10/03/2021 ರಂದು ಪಿರ್ಯಾದಿದಾರರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 12-03-2021 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080