ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

 • ಕುಂದಾಪುರ: ಪಿರ್ಯಾದಿ ಶಾಂತಾ ನಾಯರ್ ಇವರು KA 03 MR 0273 ವ್ಯಾಗನರ್ ಕಾರಿನಲ್ಲಿ ಚಾಲಕ  ಮಧುಸೂದನ್ ಎಂಬಾತನೊಂದಿಗೆ ಕೊಲ್ಲೂರಿಗೆ ಬಂದು ಅಲ್ಲಿಂದ ದಿನಾಂಕ 11-03-2021 ರಂದು 14:00 ಗಂಟೆಗೆ ಕುಂದಾಪುರ ಶರೋನ್ ಹೋಟೇಲಿಗೆ ಬಂದು ಕಾರು ಪಾರ್ಕ್ ಮಾಡಿ ವಿಶ್ರಾಂತಿಯಲ್ಲಿದ್ದು, ರಾತ್ರಿ ಸುಮಾರು 23:30 ಗಂಟೆ ವೇಳೆಗೆ ಕಾರಿನ ಚಾಲಕನು ಪಾರ್ಕಿಂಗ್ ಮಾಡಿದ ಜಾಗದಲ್ಲಿ ಕಾರು ಇಲ್ಲದೇ ಇರುವುದಾಗಿ ತಿಳಿಸಿದ್ದು, ಸದ್ರಿ ಕಾರನ್ನು ಯಾರೋ ಕಳ್ಳರು ದಿನಾಂಕ: 11/03/2021 ರಂದು 21:30 ಗಂಟೆಯಿಂದ 23:30 ಗಂಟೆಯ ಮಧ್ಯಾವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಕಾರಿನ ಮೌಲ್ಯ 1,00,000 ರೂಗಳಾಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿ ಬಿ ಎಸ್ ಪ್ರವೀಣ್ ಕುಮಾರ್  ಇವರು ಪ್ರವಾಸದ ಬಗ್ಗೆ ದಿನಾಂಕ 07-02-2021  ರಂದು ಟಿಟಿ ವಾಹನವನ್ನು ಮಾಡಿಕೊಂಡು  ರಾತ್ರಿ ಮೈಸೂರಿನಿಂದ ತನ್ನ ಹೆಂಡತಿ ರಂಜಿತಾ, ಮಗ ದೃತಿಕ್, ಅತ್ತೆ –ವಿನೋದ , ಮಾವ ಶಂಕರೇ ಗೌಡ, ಷಡ್ಕಾ – ಭರತ್ ,ನಾದಿನಿ ವಜ್ರೇಶ್ವರಿ ಹಾಗೂ ಸಂಬಂಧಿಕರೊಂದಿಗೆ ಹೊರಟು ಹೊರನಾಡು, ಶೃಂಗೇರಿ,ಕೊಲ್ಲೂರು, ಸಿಗಂದೂರು, ಮುರ್ಡೆಶ್ವರಕ್ಕೆ ಹೋಗಿ ದಿನಾಂಕ 09-02-2021 ರಂದು ಮಧ್ಯಾಹ್ನ 03:00 ಗಂಟೆಗೆ ಮಲ್ಪೆ ಬೀಚ್ ಗೆ ಬಂದು ವಾಹನವನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಎಲ್ಲರೂ ಮಲ್ಪೆ ಬೀಚ್ ನೋಡಲು ಹೋಗಿದ್ದು ಪಿರ್ಯಾದುದಾರರ ಅತ್ತೆಯವರಿಗೆ ಮಂಡಿ ನೋವು ಇದ್ದ ಕಾರಣ ಅವರು ನೀರಿಗೆ  ಇಳಿಯದೆ ಮೇಲುಗಡೆ ಕುಳಿತುಕೊಂಡಿದ್ದು  , ಅವರಲ್ಲಿ   ಪಿರ್ಯಾದಿದಾರರ ಬಾಬ್ತು 1  ಚಿನ್ನದ 9 ಬಿಳಿ ಹರಳಿನ ಉಂಗುರು-10ಗ್ರಾಂ,  1 ಚಿನ್ನದ ಯಾಪಲ್ ಕಟ್  ಡಿಸೈನ್ ನ ಚಿನ್ನದ ಚೈನ್ -15 ಗ್ರಾಂ,  ಪಿರ್ಯಾದುದಾರರ ಪತ್ನಿ  ರಂಜಿತಾಳ ಬಾಬ್ತು  ಕರಿಮಣಿ ಸರ -10 ಗ್ರಾಮ್ , 2 ಚಿನ್ನದ ಉಂಗುರು-08 ಗ್ರಾಮ್, ನಾದಿನಿಯ 1 ಚಿನ್ನದ ಉಂಗುರು - 5 .5 ಗ್ರಾಮ್ ಎಲ್ಲಾ ಒಡವೆಗಳು ಸೇರಿ ಒಟ್ಟು 48.5 ಗ್ರಾಂ ಅಂದಾಜು ಮೌಲ್ಯ 2 ಲಕ್ಷದ 50 ಸಾವಿರ  ಆಗಿದ್ದು ಸದ್ರಿ ಎಲ್ಲಾ ಚಿನ್ನಾಭರಣಗಳನ್ನು  1 ಹ್ಯಾಂಡ್ ಪರ್ಸ್ ನಲ್ಲಿ ಹಾಕಿ ಪಿರ್ಯಾದಿದಾರರ ಅತ್ತೆಯ ಕೈಯಲ್ಲಿ ಕೊಟ್ಟು  ಬೀಚ್ ನಲ್ಲಿ ಆಟ ಆಡಲು ಹೋಗಿದ್ದು  ನಂತರ ಸಂಜೆ  ಎಲ್ಲರೂ ಸ್ನಾನ ಮಾಡಿ ಬಂದು ಸಮಯ ಸುಮಾರು 06:30 ಗಂಟೆಗೆ ನೋಡಲಾಗಿ ಹ್ಯಾಂಡ್  ಪರ್ಸ ನಲ್ಲಿ ಮೇಲ್ಕಾಣಿಸಿದ ಯಾವುದೇ ಒಡವೆಗಳು ಇರದೆ ಇದ್ದು  ಈ ಬಗ್ಗೆ ಅತ್ತೆಯಲ್ಲಿ ವಿಚಾರಿಸಿದಾಗ  ತನಗೆ 5-10 ನಿಮಿಷ  ನಿದ್ದೆ  ಬಂದಿರುವುದಾಗಿ ತಿಳಿಸಿದ್ದು  ಸದ್ರಿ ಸಮಯ  ಯಾರೋ ಕಳ್ಳರು  ಚಿನ್ನದ ಒಡವೆಗಳನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

 • ಉಡುಪಿ: ದಿನಾಂಕ: 11/03/2021 ರಂದು ಪಿ.ಎಸ್.ಐ ವಾಸಪ್ಪ ನಾಯ್ಕ್ ಅಪರಾಧ ವಿಭಾಗ , ಉಡುಪಿ ನಗರ ಪೊಲೀಸ್ ಠಾಣೆ ಇವ ರು ಇಲಾಖಾ ವಾಹನದಲ್ಲಿ ಸಿಬ್ಬಂದಿ ಕಿರಣ್ ರವರೊಂದಿಗೆ ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ದಿನಾಂಕ: 12.03.2021 ರಂದು ಮುಂಜಾನೆ 04:00 ಗಂಟೆಗೆ ಮಾನ್ಯ ನ್ಯಾಯಾಲಯದ ವ್ಯಾಪ್ತಿಯ ಉಡುಪಿ ನಗರ ಠಾಣಾ ಸರಹದ್ದಿನ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ ನಿಲ್ದಾಣದ ಬೃಂದಾವನ ಲಾಡ್ಜ್ ಬಳಿ ಕತ್ತಲೆಯಲ್ಲಿ ಗೋಡೆ ಬದಿ ಓರ್ವನು ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಯಾವುದೋ ಬೇವಾರಂಟು ತಕ್ಷೀರು ಎಸಗುವ ಇರಾದೆಯುಳ್ಳವನಾಗಿ ಬಲವಾದ ಸಂಶಯ ಆಧಾರದ ಮೇರೆಗೆ ಬೆಳಿಗ್ಗೆ 04:30 ಗಂಟೆಗೆ ಅಮಿತ್ ನಾಗನೂರು (21) ತಂದೆ: ಶಾಂತಪ್ಪ ನಾಗನೂರು ವಾಸ: ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯ ಬಳಿ, ಅತರ್ಗ ಗ್ರಾಮ , ವಿಜಯಪುರರವರನ್ನು ವಶಕ್ಕೆ ಪಡೆದಿದ್ದು, ಆತನು ಸಮರ್ಪಕವಾದ ಉತ್ತರ ನೀಡದೆ ಇದ್ದು ಯಾವುದೋ ಬೇವಾರಂಟು ತಕ್ಷೀರು ಎಸಗುವ ಸಂಶಯ ಬಂದಿರುವುದರಿಂದ ಈ ಬಗ್ಗೆ ಉಡುಪಿ ನಗರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 96(B) K P ACT ನಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣಗಳು

 • ಉಡುಪಿ:  ಉಡುಪಿ ತಾಲೂಕು  ಪುತ್ತೂರು  ಗ್ರಾಮದ  ಗೋಪಾಲಪುರ 1ನೇ ಮುಖ್ಯರಸ್ತೆಯ  2ನೇ ಅಡ್ಡರಸ್ತೆಯ  ದಿವ್ಯಾಕಿರಣ್‌ ಅಪಾರ್ಟ್‌‌ಮೆಂಟಿನ ಫ್ಲ್ಯಾಟ್‌ ನಂ: 002ರಲ್ಲಿ  ಫಿರ್ಯಾದುದಾರರೊಂದಿಗೆ  ವಾಸವಿದ್ದ  ಫಿರ್ಯಾದುದಾರರ ಗಂಡನಾದ ಅರುಣ್ ಶೆಟ್ಟಿ , ಪ್ರಾಯ: 74 ವರ್ಷರವರು  ಕಳೆದ  ಮೂರು  ವರ್ಷಗಳಿಂದ ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದವರು, ಇದೇ  ಕಾರಣದಿಂದ  ಜೀವನದಲ್ಲಿ  ಜಿಗುಪ್ಸೆಹೊಂದಿ  ನಿನ್ನೆ  ದಿನ ದಿನಾಂಕ: 11/03/2021ರಂದು ರಾತ್ರಿ 10:30 ಗಂಟೆಯಿಂದ  ಈ ದಿನ ಬೆಳಿಗ್ಗೆ  6:15  ಗಂಟೆಯ  ಮಧ್ಯಾವಧಿಯಲ್ಲಿ ಅಪಾರ್ಟ್‌ಮೆಂಟಿನಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಕಮಲಾ ಪೂಜಾರ್ತಿ (60 ವರ್ಷ) ಇವರು ಸುಮಾರು 15 ವರ್ಷಗಳ ಹಿಂದೆ ಚಾರಾ ಗ್ರಾಮದ ಹುತುರ್ಕೆ ಎಂಬಲ್ಲಿ ಮನೆಯನ್ನು ಕಟ್ಟಿ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದು. ಅವರಿಗೆ ಮದುವೆಯಾಗಿರುವುದಿಲ್ಲ. ಈ ದಿನ ದಿನಾಂಕ: 12/03/2021 ರಂದು ಬೆಳಿಗ್ಗೆ 11-30 ಗಂಟೆಗೆ ಕಮಲಾ ಪೂಜಾರ್ತಿ ರವರ ಮನೆಯ ಒಳಗೆ ವಾಸನೆ ಬರುತ್ತಿರುವುದನ್ನು ಕಂಡು ಸ್ಥಳೀಯರು ಸದ್ರಿ ಮನೆಗೆ ಹೋಗಿ ನೋಡಿದಾಗ ಕಮಲಾ ಪೂಜಾರಿ ರವರ ಮೃತದೇಹವು ಮನೆಯ ಒಳಗೆ ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿ ಸಂಪೂರ್ಣ ಕೊಳತು ಹೋಗಿರುವ ಸ್ಥಿತಿಯಲ್ಲಿದ್ದು. ಈ ಬಗ್ಗೆ  ಸ್ಥಳೀಯರಲ್ಲಿ ವಿಚಾರಿಸಿದಾಗ ಅವರಿಗೆ ದಿನಾಂಕ: 06/03/2021 ರಂದು ಮದ್ಯಾಹ್ನ 12-00 ಗಂಟೆಗೆ ಸ್ಥಳೀಯರು ಊಟವನ್ನು ನೀಡಿರುವ ವಿಚಾರ ತಿಳಿಯಿತು. ಮೃತರು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು ಅವರು ಸುಮಾರು 5-6 ದಿನಗಳ ಹಿಂದೆ ಮನೆಯ ಒಳಗೆ ಮಂಚದಲ್ಲಿ ಮಲಗಿದವರು ಅನ್ನಾಹಾರವಿಲ್ಲದೇ ಅರೋಗ್ಯದಲ್ಲಿ ಏರುಪೇರು ಉಂಟಾಗಿ ಅಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-03-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080