ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 10/02/2023 ರಂದು ಪಿರ್ಯಾದಿದಾರರಾದ ಜಯಶೀಲ ಶೆಟ್ಟಿ (53), ತಂದೆ: ದಿ. ನಾಗಯ್ಯ ಶೆಟ್ಟಿ, ವಾಸ: ನಾರ್ಕಳಿ, ಗುಡುಮನೆ, ಕುಂದಾಪುರ ತಾಲೂಕು ಇವರು ಸಂಬಂಧಿಕರ ಮನೆಯಾದ ಹಳ್ಳಿ  ಆಲೂರಿಗೆ ಹೋಗಿದ್ದು, ವಾಪಾಸು ಕಾರಿನಲ್ಲಿ ಆಲೂರಿನಿಂದ ಮುಳ್ಳಿಕಟ್ಟೆಗೆ ಆಲೂರು–ಮುಳ್ಳಿಕಟ್ಟೆ ರಸ್ತೆಯಲ್ಲಿ ಮನೆಗೆ ಹೋಗುತ್ತಿರುವಾಗ ಹರ್ಕೂರು ಮೂರುಕೈಯಿಂದ ಸ್ವಲ್ಪ ಮುಂದೆ ತಲುಪುವಾಗ ರಾತ್ರಿ 10:30 ಗಂಟೆಗೆ ಪಿರ್ಯಾದಿದಾರರ ಮುಂದಿನಿಂದ ಆಲೂರು ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ KA-20-AA-1850 ನೇ ನಂಬ್ರದ ಆಟೋರಿ ರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ರಸ್ತೆಯ ತಿರುವಿನಲ್ಲಿ ಆಟೋರಿಕ್ಷಾವು ಚಾಲಕನ ಹತೋಟಿ ತಪ್ಪಿ ಸ್ಕಿಡ್‌ಆಗಿ ರಸ್ತೆಯ ಬಲ ಬದಿಗೆ ಬಲ ಮಗ್ಗುಲಾಗಿ ಬಿದ್ದ ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಗಿರಿಜಮ್ಮ ಶೆಡ್ತಿ ಯವರ ಬಲ ಭುಜಕ್ಕೆ ಮತ್ತು ಮುಖಕ್ಕೆ ತರಚಿದ ಗಾಯ, ಬೇಬಿ ಶೆಡ್ತಿ ಯವರಿಗೆ ಮುಖಕ್ಕೆ ಹಾಗೂ ತಲೆಗೆ ಪೆಟ್ಟಾಗಿದ್ದು,  ಸಿಂಗಾರಿ ಶೆಡ್ತಿ ಯವರಿಗೆ ಕಾಲು, ಬೆನ್ನಿಗೆ ಮುಖಕ್ಕೆ ತರಚಿದ ಗಾಯವಾಗಿದ್ದು, ಸುಧಾಕರ ರವರಿಗೆ ಸಣ್ಣಪುಟ್ಟ ಗಾಯ ಮತ್ತು ಅರುಣ ರವರ ಹಣೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ನರಸಿಂಹ ಪೂಜಾರಿ  (48), ತಂದೆ: ವಿ. ಸದಿಯ ಪೂಜಾರಿ, ವಾಸ: ಶ್ರೀ ದುರ್ಗಾ, ಹೊರ್ಲಾಳಿ, ೩೪ ನೇ ಕುದಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಸ್ಕೂಟರ್‌ನಲ್ಲಿ ಹೊರ್ಲಾಳಿಯಿಂದ ಕೊಕ್ಕರ್ಣೆಯಲ್ಲಿರುವ ತನ್ನ ಹೋಟೆಲ್‌ಗೆ ಹೋಗಲು ಸ್ಕೂಟರ್‌ನ್ನು ಸವಾರಿ ಮಾಡಿಕೊಂಡು ಹೋಗುತ್ತಾ ಸಂಜೆ 6:00 ಗಂಟೆಗೆ 34 ನೇ ಕುದಿ ಗ್ರಾಮದ ನುಕ್ಕೂರು ಎಂಬಲ್ಲಿ ತಲುಪುವಾಗ ಪಿರ್ಯಾದಿದಾರರ ಎದುರಿನಿಂದ ಕೊಕ್ಕರ್ಣೆ ಕಡೆಯಿಂದ ಹೊರ್ಲಾಳಿ ಕಡೆಗೆ ಆರೋಪಿ ಅಶೋಕ ಶೆಟ್ಟಿ ತನ್ನ KA-20-U-8680 ನೇ ಟಿವಿಎಸ್‌ ಸ್ಕೂಟಿ ಪೆಪ್ ಸ್ಕೂಟರ್‌ ನಲ್ಲಿ ಹರಿಣಿ ಶೆಟ್ಟಿ (52) ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಾ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ನಾಯಿಯೊಂದು ಅಡ್ಡ ಬಂದಾಗ ತಪ್ಪಿಸಲು ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ಸವಾರನ ಹತೋಟಿ ತಪ್ಪಿ ಸ್ಕೂಟರ್‌ ಸವಾರ ಹಾಗೂ ಸವಾರಿಣಿ ಸ್ಕೂಟರ್‌ ಸಮೇತ ರಸ್ತೆ ಮೇಲೆ ಬಿದ್ದ ಪರಿಣಾಮ ಹರಿಣಿ ಶೆಟ್ಟಿಯವರಿಗೆ ತಲೆಯ ಹಿಂಭಾಗ ತೀವ್ರ ರಕ್ತಗಾಯ, ಹಣೆಗೆ, ಬಲಭುಜ, ಬೆನ್ನಿಗೆ ಅಲ್ಲಲ್ಲಿ ಗಾಯವಾಗಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023 : ಕಲಂ 279,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಪಿರ್ಯಾದಿದಾರರಾದ ಕರ್ಣನ್ (36), ತಂದೆ: ದಿ. ಗಣೇಶ್, ವಾಸ: 4/1384ಎ, ಮಿಡಲ್‌ಸ್ಟ್ರೀಟ್, ತಿರುವರೂರು ಜಿಲ್ಲೆ, ತಮಿಳುನಾಡು ರಾಜ್ಯ ಇವರು ದಿನಾಂಕ 11/02/2023 ರಂದು ಬೆಳಿಗ್ಗೆ 11:40 ಗಂಟೆಗೆ MH-46-BB-9863 ನೇ ಟ್ಯಾಂಕರಿನಲ್ಲಿ LPG ಗ್ಯಾಸ್ ಲೋಡಿ ಮಾಡಿಕೊಂಡು ಮಂಳೂರು ಕಡೆಯಿಂದ ಗೋವಾಕ್ಕೆ ಸಾಗಿಸುತ್ತಿರುವಾಗ ಪುತ್ತೂರು ಗ್ರಾಮದ ನಿಟ್ಟೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅದೇ ದಿಕ್ಕಿನಿಂದ ಕರಾವಳಿ ಕಡೆಯಿಂದ ಅಂಬಾಗಿಲು ಕಡೆಗೆ ಬರುತ್ತಿದ್ದ KA-20-MB-9264 ನೇ ಕಾರಿನ ಚಾಲಕ ಬಿ. ತಂಬುರ  ತಾನು ಚಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ. ಈ ಅಫಘಾತದಲ್ಲಿ ಯಾರಿಗೂ ಪೆಟ್ಟಾಗಿರುವುದಿಲ್ಲ.  ಹಾಗೂ ಅಪಘಾತ ರಭಸಕ್ಕೆ ರಾಷ್ಟ್ರೀಯ ಹೆದ್ದಾರಿ 66 ರ ಮದ್ಯ ಡಿವೈಡರ್ ನಲ್ಲಿದ್ದ ಸೋಲಾರ್ ಬ್ಲಾಂಕರ್ ಕಂಬಕ್ಕೆ ಹಾನಿಯಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 11/02/2023 ರಂದು ಸಂಜೆ 5:00 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಹಾದು ಹೋಗುವ, ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ  ಕೆ. ಗಣರಾಜ (45) , ತಂದೆ: ಆರ್. ಜನಾರ್ಧನ, ವಾಸ: ಸರರಾಮ ನಿವಾಸ, ಕಾಂಜ್ಞಂಗಾಡ್ ನರ್ಸಿಂಗ್ ಹೋಂ ಬಳಿ, ಕಾಂಜ್ಞಂಗಾಡ್ ಅಮಚೆ, ಕಾಸರಗೋಡುಜಿಲ್ಲೆ, ಕೇರಳ ರಾಜ್ಯ ಇವರು ಕಾರು ನಂಬ್ರ KL-60-R-2761 ನೇಯದರಲ್ಲಿ ಗೆಳೆಯರಾದ ಪಿ.ಕೆ. ಸತೀಶನ್, ಬಿಜುಕೃಷ್ಣ, ಕೆ.ಸಿ. ಅಮಿತ್ ಇವರ ಜೊತೆಯಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಪ್ರಯಾಣಿಸಿಕೊಂಡು ಹೋಗುತ್ತಿರುವಾಗ, ಪಿರ್ಯಾದುದಾರರ ವಿರುದ್ದ ದಿಕ್ಕಿನಲ್ಲಿ ಕಾರ್ಕಳ ಕಡೆಗೆ ಕಾರು ನಂಬ್ರ MH-12-Q-Y9928 ನೇಯದರ ಚಾಲಕನು ಆತನ ಕಾರನ್ನು ಅತಿವೇಗವಾಗಿ ಹಾಗೂ ನಿರ್ಲಕ್ಷತನದಿಂದ ಆತನ ತೀರಾ ಬಲಭಾಗದಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ನಂಬ್ರ KL-60-R-2761 ನೇಯದರ ಚಾಲಕ ಬಿಜುಕೃಷ್ಣ ಸಹಿತ ಎರಡೂ ಕಾರಿನಲ್ಲಿದ್ದವರಿಗೆ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಪಡುಬಿದ್ರಿ: ಪಿರ್ಯಾದಿದಾರರಾದ ಜಗನ್ನಾಥ ಪೂಜಾರಿ (53), ತಂದೆ: ದಿ. ಜಾರು ಪೂಜಾರಿ, ವಾಸ: ಪಾದೂರು ಪಾಲಮೆ ಮನೆ, ಪಾದೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಕಳೆದ 04 ವರ್ಷಗಳಿಂದ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಕಲ್ಯಾಣಿ ಬಾರ್‌‌ನಲ್ಲಿ ವೈಟರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 11/02/2023 ರಂದು ಬಾರ್‌‌ನಲ್ಲಿ ಕೆಲಸದಲ್ಲಿರುವ ಸಮಯ 21:30 ಗಂಟೆಯ ವೇಳೆಗೆ ಬಾರಿನ ಎದುರು ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಯಾವುದೋ ಅಪರಿಚಿತ ವಾಹನದ ಚಾಲಕನು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರದ ರಸ್ತೆಯಲ್ಲಿ ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಅಂಚಿನಲ್ಲಿ ನಿಂತಿದ್ದ ಅದಮಾರಿನ ದಯಾನಂದ ಎಂಬುವವರಿಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೇ ಅಲ್ಲಿಂದ ಹೋಗಿರುತ್ತಾನೆ. ಅಪಘಾತದಿಂದ ದಯಾನಂದ ರವರು ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಉಡುಪಿಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023, ಕಲಂ: 279, 338 ಐಪಿಸಿ,  134 (ಎ) (ಬಿ) ಜೊತೆಗೆ 187 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಶುಭಾಂಕರ ಮೊಂಡೆಲ್ (20), ತಂದೆ: ಮುರಾರಿ ಮೊಂಡಲ್, ವಾಸ: ಗಝಾಲಿಯ ಗ್ರಾಮ, ಘೋಶ್ ಪುರ್ ಅಂಚೆ, ನಾರ್ತ 24 ಪರಗಣ ಜಿಲ್ಲೆ , ಕಲ್ಕತ್ತಾ , ಬೆಂಗಾಳ ರಾಜ್ಯ ,  ಹಾಲಿ ವಾಸ: ಕಂಚಿನಡ್ಕ, ನಡ್ಸಾಲು ಗ್ರಾಮ , ಕಾಪು ತಾಲೂಕು  ನಡ್ಸಾಲು ಗ್ರಾಮ ಕಂಚಿನಡ್ಕ ಇವರು ಪಡುಬಿದ್ರಿಯ ಮಹಾಗಣಪತಿ ಟ್ರೇಡರ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಪಿರ್ಯಾದಿದಾರರ ತಂದೆ ಮುರಾರಿ ಮೊಂಡೆಲ್ ರವರು 6 ತಿಂಗಳಿನಿಂದ ಆರೋಪಿತರಾದ ಪುಂಡಲೀಕ ಬಂಡಾರ್ಕರ್ ರವರ KA-20-AA-3983 ನೇ ಪಿಕ್ ಅಪ್ ವಾಹನದಲ್ಲಿ  ಖಾಯಂ ಆಗಿ ಲೋಡ್ ಮತ್ತು ಅನ್ ಲೋಡ್ ಮಾಡುವ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಂದೆ ಮುರಾರಿ ಮೊಂಡೆಲ್ ರವರನ್ನು   ದಿನಾಂಕ 08/02/2023 ರಂದು  ಆರೋಪಿತರು ತನ್ನ KA-20-AA-3983 ನೇ ಪಿಕ್ ಅಪ್ ವಾಹನದಲ್ಲಿದ್ದ  ದೀನಸಿ ವಸ್ತುಗಳನ್ನು ಪಡುಬಿದ್ರಿ ಮಹಾಗಣಪತಿ ಟ್ರೇಡರ್ಸ್ ಗೆ ಅನ್ ಲೋಡ್ ಮಾಡಲು ಬರುವಂತೆ ತಿಳಿಸಿದ ಮೇರೆಗೆ ಮುರಾರಿ ಮೊಂಡೆಲ್ ಬೆಳಗ್ಗೆ  8:30 ಗಂಟೆಗೆ ಕೆಲಸಕ್ಕೆ ಹೋಗಿ  ಪಾದಬೆಟ್ಟು  ಗ್ರಾಮದ  ಪಡುಬಿದ್ರಿ  ಮಾಹಾಗಣಪತಿ ಟ್ರೇಡರ್ಸ್ ಬಳಿ  KA-20-AA-3983 ನೇ ಪಿಕ್ ಅಪ್ ವಾಹನದಿಂದ ದೀನಸಿ ಸಾಮಾಗ್ರಿಗಳನ್ನು ಅನ್ ಲೋಡ ಮಾಡುತ್ತಿದ್ದು ಮುರಾರಿ ಮೊಂಡೆಲ್ ರವರೊಬ್ಬರೇ ಮೈದಾ ಮೂಟೆಯನ್ನು ಈ ಮೇಲಿನ ವಾಹದಿಂದ ತಲೆಯಲ್ಲಿ ಹೊತ್ತುಕೊಳ್ಳುತ್ತಿದ್ದಂತೆ ಬೆಳಗ್ಗೆ 9:00 ಗಂಟೆಗೆ ಮೂಟೆ ಜಾರಿ ಕುಸಿದು ಮುರಾರಿ ಮೊಂಡೆಲ್ ರವರ ಕುತ್ತಿಗೆ ಹಾಗೂ  ಬೆನ್ನಿನ ಮೇಲೆ ಬಿದ್ದು ,ಕೆಳಗೆ ಬಿದ್ದ ಮುರಾರಿ ಮೊಂಡೆಲ್ ರವರನ್ನು  ಎತ್ತಿ,  ಉಪಚರಿಸಿದಾಗ ಮುರಾರಿ ಮೊಂಡೆಲ್ ಪ್ರಜ್ಜಾಹೀನರಾಗಿದ್ದು ಅವರನ್ನು ರಘುರಾಮ ಪೈ ರವರ ಕಾರಿನಲ್ಲಿ , ಚಿಕಿತ್ಸೆಯ ಕುರಿತು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು,ಅಲ್ಲಿ ತೀವೃ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಮುರಾರಿ ಮೊಂಡೆಲ್ ರವರ  ಕುತ್ತಿಗೆಯ ಹಾಗೂ ಬೆನ್ನು ಮೂಳೆ ಮುರಿತವಾಗಿರುತ್ತದೆ. KA-20-AA-3983 ನೇ ಪಿಕ್ ಅಪ್ ವಾಹನದ ಮಾಲಕ ಹಾಗೂ ಚಾಲಕರಾಗಿರುವ ಪುಂಡಲೀಕ ಭಂಡಾರ್ಕರ್  ರವರು ಮೂಟೆಯನ್ನು ಹೊರಲು ಬೇರೆ ಸಹಾಯಕರನ್ನು ನೇಮಿಸದೆ  ಅಥವಾ ಅವರು ಕೂಡ ಮುರಾರಿ ಮೊಂಡೆಲ್ ರವರಿಗೆ  ಸಹಕರಿಸದೆ ನಿರ್ಲಕ್ಷತನದಿಂದ KA-20-AA-3983 ಪಿಕ್ ಅಪ್ ವಾಹನದಿಂದ ಮೂಟೆ ಹೊರಿಸಿರುವುದರಿಂದ ಮೈದಾ ಮೂಟೆಯು ಮುರಾರಿ ಮೊಂಡೆಲ್ ಮೈ ಮೇಲೆ ಬೀಳಲು ಕಾರಣವಾಗಿರುತ್ತದೆ. ಪುಂಡಲೀಕ ಭಂಡಾರ್ಕರ್  ರವರು ಈ ವರೆಗಿನ ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಭರಿಸಿದ್ದು ,ಮುಂದಿನ ಖರ್ಚು ವೆಚ್ಚಳನ್ನು ನೀಡುವುದಾಗಿ ತಿಳಿಸಿ ನಂತರ ಭರಿಸಲು ನಿರಾಕರಿಸಿರುವುದರಿಂದ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023, ಕಲಂ: 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬೈಂದೂರು:  ದಿನಾಂಕ 11/02/2023  ರಂದು ನಿರಂಜನ್ ಗೌಡ ಬಿ ಎಸ್ , ಪೊಲೀಸ್ ಉಪನಿರೀಕ್ಷಕರು,  ಬೈಂದೂರು ಪೊಲೀಸ್ ಠಾಣೆ ಇವರು ಬೈಂದೂರು ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದ ಬೈಂದೂರು ಸರಕಾರಿ ಬಸ್ಸು ನಿಲ್ದಾಣದ ಬಳಿ ರೌಂಡ್ಸ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿತ ವಿಶಾಲ್(22) ಎಂಬಾತನನ್ನು ವಶಕ್ಕೆ ಪಡೆದು  ವೈದ್ಯಕೀಯ ತಪಾಸಣೆಯ ಬಗ್ಗೆ  ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ವಿಶಾಲ್  ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023 ಕಲಂ: 27 (ಬಿ)  ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.    
  • ಕುಂದಾಪುರ:  ದಿನಾಂಕ 11/02/2023 ರಂದು ಪ್ರಸಾದ್ ಕುಮಾರ್ ಕೆ, ಪೊಲೀಸ್‌ ಉಪನಿರೀಕ್ಷಕರು (ತನಿಖೆ), ಕುಂದಾಪುರ ಪೊಲೀಸ್ ಠಾಣೆ ಇವರಿಗೆ  ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಹಳೆ ಅಳಿವೆ ಜಂಕ್ಷನ್ ಬಳಿ  ಸಾರ್ವಜನಿಕ ಜಾಗದಲ್ಲಿ  ಓರ್ವನು  ಕುಳಿತುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂಬುದಾಗಿ ಬಂದ ಮಾಹಿತಿಯಂತೆ  ಹಳೆ ಅಳಿವೆ ಜಂಕ್ಷನ್  ಸಾರ್ವಜನಿಕ ಜಾಗದ ಬಳಿ ತಲುಪಿ ಸುಮಂತ್ ಮೋಗವೀರ ಎಂಬಾತ ಕುಳಿತುಕೊಂಡು ಗ್ಲಾಸಿನಲ್ಲಿ ಮದ್ಯಪಾನವನ್ನು ಹಾಕಿಕೊಂಡು ಕುಡಿಯುತ್ತಿರುವುದು ಕಂಡು ಬಂದು ನೋಡುವಾಗ  ಅವನ ಬಳಿ ಹೋದಾಗ  ಅಲ್ಲಿ 180 ML ನ Old Tavern   whisky ಟೆಟ್ರಾ ಪ್ಯಾಕೇಟ್-2, ಒಂದು  ನೀರಿನ ಬಾಟಲ್ ಹಾಗೂ ಒಂದು  ಪ್ಲಾಸ್ಟಿಕ್ ಗ್ಲಾಸ್‌ಇರುವುದು ಕಂಡುಬಂದಿರುತ್ತದೆ.   ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-02-2023 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080