ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ವಸಂತ  ಶೆಟ್ಟಿ (40), ತಂದೆ  ಶೇಖರ  ಶೆಟ್ಟಿ,  ದೇವಸ,  ಮಣೂರು ಗ್ರಾಮ  ಮತ್ತು  ಅಂಚೆ,  ಬ್ರಹ್ಮಾವರ  ತಾಲೂಕು ಇವರು ದಿನಾಂಕ  10/02/2023  ರಂದು  20:45  ಗಂಟೆಗೆ  ಮಣೂರು  ಗ್ರಾಮದ  ನಂದಿಕೇಶ್ವರ  ದೇವಸ್ಥಾನದ  ಜಂಕ್ಷನ್‌‌‌‌ನಲ್ಲಿ  ನಿಂತುಕೊಂಡಿರುವಾಗ ಅವರ ಪರಿಚಯದ ರಾಘವೇಂದ್ರ ಮೋಟಾರು  ಬೈಕ್‌ ‌‌‌‌‌‌KA-20-X-3902 ರಲ್ಲಿ  ತೆಕ್ಕಟ್ಟೆ  ಕಡೆಯಿಂದ  ಸವಾರಿ  ಮಾಡಿಕೊಂಡು  ಬಂದು  ಮಣೂರು  ಗ್ರಾಮದ  ಇಂದ್ರಪ್ರಸ್ಥ  ಹೋಟೇಲ್‌‌‌‌‌‌‌ಬಳಿ  ಜಂಕ್ಷನ್‌‌‌‌ನ  ಯು-ಟರ್ನ್‌ನಲ್ಲಿ  ತಿರುಗಿಸಿ  ತೆಕ್ಕಟ್ಟೆ  ಕಡೆಗೆ ಹೋಗಲು ಯುಟರ್ನ್‌ನಲ್ಲಿ  ನಿಂತುಕೊಂಡಿರುವಾಗ  ತೆಕ್ಕಟ್ಟೆ  ಕಡೆಯಿಂದ  ಮಣೂರು  ಕಡೆಗೆ  ಅತೀವೇಗ  ಹಾಗೂ  ನಿರ್ಲಕ್ಷತನದಿಂದ  ಸವಾರಿ  ಮಾಡಿಕೊಂಡು  ಬಂದ ಮೋಟಾರು  ಸೈಕಲ್‌ ‌‌‌‌‌‌KA-19-HJ-1741 ರ  ಸವಾರ  ಜಂಕ್ಷನ್‌‌‌‌ನಲ್ಲಿ  ನಿಂತುಕೊಂಡಿದ್ದ  ಬೈಕ್‌‌ ‌‌‌‌‌KA-20-X-3902 ಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ  ಎರಡೂ  ಮೋಟಾರು  ಸೈಕಲ್‌ ‌‌‌‌‌‌ಸವಾರರು ರಸ್ತೆಗೆ  ಬಿದ್ದ  ಪರಿಣಾಮ  ಎದುರು ಮೋಟಾರು  ಸೈಕಲ್‌ ‌‌‌‌‌ಸವಾರ ರಾಘವೇಂದ್ರ ರವರಿಗೆ  ಭುಜಕ್ಕೆ,  ಕಾಲುಗಳಿಗೆ  ತೀವ್ರ  ತರದ  ಗಾಯವಾಗಿದ್ದು,  ಡಿಕ್ಕಿ  ಹೊಡೆದ  ಮೋಟಾರು ಸೈಕಲ್‌‌‌‌‌‌ಸವಾರ  ರೂಪೇಶ ರವರಿಗೂ  ಸಣ್ಣಪುಟ್ಟ  ಗಾಯವಾಗಿದ್ದು,  ಬೈಕ್‌‌‌‌ನ  ಸಹಸವಾರ  ಹೃತಿಕ್‌‌‌‌‌‌‌ ರವರಿಗೂ  ತೀವ್ರ  ತರದ  ಗಾಯವಾಗಿರುತ್ತದೆ.  ರಾಘವೇಂದ್ರ  ಮತ್ತು  ಹೃತಿಕ್‌‌‌‌‌‌‌ರವರನ್ನು  ಚಿಕಿತ್ಸೆಯ  ಬಗ್ಗೆ  ಮಣಿಪಾಲ  ಕೆ.ಎಂ.ಸಿ. ಆಸ್ಪತ್ರೆಗೆ  ದಾಖಲಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ರಂಜನ್‌ ಕುಮಾರ್‌ ಶೆಟ್ಟಿ (32), ತಂದೆ: ಚಂದ್ರಶೇಖರ್‌ ಶೆಟ್ಟಿ, ವಾಸ: ಅರೆಕಲ್ಲುಮನೆ, ಕೆದೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 10/02/2023 ರಂದು ರಾತ್ರಿ ಕೆಲಸ ಮುಗಿಸಿ ತೆಕ್ಕಟ್ಟೆ - ಕೆದೂರು ರಸ್ತೆಯಲ್ಲಿ ತೆಕ್ಕಟ್ಟೆ ಕಡೆಯಿಂದ ಕೆದೂರು ಕಡೆಗೆ ಹೋಗುತ್ತಿದ್ದವರು ರಾತ್ರಿ 9:15 ಗಂಟೆಗೆ ಕೆದೂರು ತೆಂಕಬೆಟ್ಟು ಕಲ್ಲುಕುಟಿಗ ದೇವಸ್ಥಾನದ ಬಳಿ ಹೋಗುವಾಗ, ಕೆದೂರು ಕಡೆಯಿಂದ ಚಾಲಕ ಬಸವರಾಜ ರವರು KA-21-C-3247 ನೇ ಟಿಪ್ಪರ್‌ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ತನ್ನ ಬಲಬದಿಗೆ ಚಲಾಯಿಸಿ ಎದುರಿನಿಂದ ಅಂದರೆ ತೆಕ್ಕಟ್ಟೆಯಿಂದ ಕೆದೂರು ಕಡೆಗೆ ಹೋಗುತ್ತಿದ್ದ  KA-20-ED-3316 ನೇ ಹೊಂಡಾ ಶೈನ್‌ ಬೈಕ್‌ಸವಾರ ಹರ್ಷವರ್ಧನ್‌ ಶೆಟ್ಟಿ ಯವರಿಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಗಾಯಾಳು ಬೈಕ್‌ ಸವಾರ ಬೈಕ್‌ ಸಮೇತ ಕೆಳಗೆ ಬಿದ್ದು ಮುಖಕ್ಕೆ ತೀವ್ರ ಸ್ವರೂಪದ ರಕ್ತಗಾಯಗೊಂಡು ಚಿಕಿತ್ಸೆಯ ಬಗ್ಗೆ ಕೋಟೇಶ್ವರ ಎನ್‌.ಆರ್‌. ಆಚಾರ್ಯ ಆಸ್ಪತ್ರೆಗೂ ಹಾಗೂ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಆದರೆ ಅಪಘಾತಪಡಿಸಿದ ಲಾರಿ ಚಾಲಕನು ಅಪಘಾತದ ಮಾಹಿತಿಯನ್ನು ಠಾಣೆಗೂ ತಿಳಿಸದೇ, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೂ ಸಾಗಿಸದೇ ಸ್ಥಳದಿಂದ ಲಾರಿಯೊಂದಿಗೆ ಪರಾರಿಯಾಗಿರುತ್ತಾನೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2023  ಕಲಂ: 279, 338 ಐಪಿಸಿ & 134 (A) & (B) R/w 187 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಹರೀಶ್ಎಸ್.(55) ರವರು ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಎಸ್.ಬಿ.ಐ. ಬ್ಯಾಂಕ್ ಉಡುಪಿ ಟ್ರಜರಿ ಬ್ರಾಂಚ್ ನಲ್ಲಿ ಎಸ್.ಬಿ. ಖಾತೆ ಹೊಂದಿರುತ್ತಾರೆ. ಪಿರ್ಯಾದಿದಾರರಿಗೆ ಅವರ ಇಲಾಖೆಯ ಕೆ.ಜಿ.ಐ.ಡಿ. ಹಣ ಬ್ಯಾಂಕ್ ಗೆ ಜಮೆಗೊಂಡಿರುವುದನ್ನು ಗಮನಿಸಿದ ಯಾರೋ ಅಪರಿಚಿತ ವ್ಯಕ್ತಿಗಳು ದಿನಾಂಕ 11/02/2023 ರಂದು ಪಿರ್ಯಾದಿದಾರರ ಮೊಬೈಲ್ ಗೆ ಲಿಂಕ್ ಕಳುಹಿಸಿ ಬ್ಯಾಂಕ್ ವಿವರವನ್ನು ಪಡೆದು ಖಾತೆಯಿಂದ ಕ್ರಮವಾಗಿ ರೂಪಾಯಿ 1499/- ಮತ್ತು ರೂಪಾಯಿ 98,500/- ಹಣವನ್ನು ಒಟ್ಟು ರೂಪಾಯಿ 99,999/- ಆನ್ ಲೈನ್ ಮುಖೇನ ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 ಕಲಂ: 66(c), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-02-2023 04:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080