ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 10/02/2022 ರಂದು  ಬೆಳ್ಳಿಗ್ಗೆ 08:00  ಗಂಟೆಗೆ ಕುಂದಾಪುರ  ತಾಲೂಕಿನ, ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಜಂಕ್ಷನ ಹತ್ತೀರ ಮಾವಿನಕಟ್ಟೆ-ಗುಲ್ವಾಡಿ  ರಸ್ತೆಯಲ್ಲಿ ಪಿರ್ಯಾದಿದಾರರಾದ ಸುಮಂತ್ ಕುಮಾರ (26) ತಂದೆ: ಸುಬ್ಬಯ್ಯ ಪೂಜಾರಿ ವಾಸ: ಶ್ರೀ ಜನನಿ ಮಾವಿನಕೆರೆ ಕೆಂಚನೂರು ಗ್ರಾಮ ಕುಂದಾಪುರ ಇವರು ತನ್ನ ಮೋಟಾರ್ ಸೈಕಲ್ ನಂಬ್ರ KA-20 EW-0121 ನೇದರಲ್ಲಿ ಸವಾರಿ ಮಾಡಿಕೊಂಡು ಗುಲ್ವಾಡಿ ಕಡೆಯಿಂದ ಮಾವಿನಕಟ್ಟೆ ಕಡೆಗೆ ಹೋಗುವಾಗ ಆಪಾದಿತ ಶರಣಪ್ಪ ಎನ್ನುವರು KA-25 AA-6033 ನೇ  ಟಿಪ್ಪರ್ ಲಾರಿಯನ್ನು  ಮಾವಿನಕಟ್ಟೆ ಕಡೆಯಿಂದ ಗುಲ್ವಾಡಿ ಕಡೆಗೆ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ ಮೋಟರ್ ಸೈಕಲಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್  ಸಮೇತ ರಸ್ತೆಗೆ  ಬಿದ್ದು ಬಲ ಕೈ ಬೆರಳು ,ಬಲ ಕಾಲು ಬೆರಳು,ಕುತ್ತಿಗೆ,ಎದೆ ಬೆನ್ನಿಗೆ ಒಳನೋವಾಗಿದ್ದು ಚಿಕಿತ್ಸೆ ಬಗ್ಗೆ ವಿನಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಅವರ ಅಜ್ಜಿ ಸಾವನ್ನಪ್ಪಿದ ಕಾರಣ ಆಸ್ಪತ್ರೆಯಿಂದ ಬಿಡುಗಡೆಗೊಂಡು ನಂತರ ನೋವು ಜಾಸ್ತಿ ಆದ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 11/02/2022 ರಂದು ಸಂಜೆ 5:40 ಗಂಟೆಗೆ ಇಂದ್ರಾಳಿಯಲ್ಲಿನ ಮಣಿಪಾಲ ನ್ಯೂ ಬಜಾರ್‌ ಮುಂಭಾಗದಲ್ಲಿ ಹಾದು ಹೋಗಿರುವ ರಾ .ಹೆ 169(ಎ) ಮಣಿಪಾಲ – ಉಡುಪಿ ಏಕಮುಖ ರಸ್ತೆಯಲ್ಲಿ  KA-20 EH-5224 ನೇ ಸ್ಕೂಟರನ್ನು ಅದರ ಸವಾರನಾದ ಎ.ಪದ್ಮನಾಭ ಭಟ್‌ ‌ಉಡುಪಿ ಕಡೆಯಿಂದ ಮಣಿಪಾಲದ ಕಡೆಗೆ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬಂದು ಸದರಿ ಏಕಮುಖ ರಸ್ತೆಯ ಬಲಭಾಗದಲ್ಲಿ  ಉಡುಪಿ ಕಡೆಗೆ ಹೋಗುತ್ತಿದ್ದ KA-64 2484 ನೇ ಕಾರ್‌‌ನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎ.ಪದ್ಮನಾಭ ಭಟ್‌‌ ಕಾರ್‌‌ನ ಮೇಲೆ ಬಿದ್ದು ನಂತರ ನೆಲಕ್ಕೆ ಬಿದ್ದು ಆತನ ತಲೆ, ಸೊಂಟ ಮತ್ತು ಕಾಲುಗಳಿಗೆ ತೀವ್ರ ಸ್ವರೂಪದ ಗಾಯ ಹಾಗೂ ಎರಡೂ ವಾಹನಗಳೂ ಜಖಂಗೊಂಡಿರುತ್ತವೆ. ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ, ಎಂಬುದಾಗಿ ವಿಠಲ ಪ್ರಾಯ: 25 ತಂದೆ: ಮಲ್ಲಪ್ಪ ವಾಸ: ಮಾಣಿಬೆಟ್ಟು ಪರ್ಕಳ ಹೆರ್ಗಾ ಗ್ರಾಮ, ಉಡುಪಿ ತಾಲೂಕು ಖಾಯ ವಿಳಾಸ: ಸೂಳೆಕೆರೆ ಬಾದಮಿ ತಾಲೂಕು ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 10/01/2022 ರಂದು ಸಮಯ ಸುಮಾರು ಮದ್ಯಾಹ್ನ 3:30 ಗಂಟೆಗೆ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಪೂಜಾ ಟೈಲ್ಸ್ ನ ಎದುರು ಹಾದು ಹೋದ ರಾ.ಹೆ 66 ರ ಉಡುಪಿ ಕುಂದಾಪುರ ಏಕಮುಖ ಸಂಚಾರ ರಸ್ತೆಯಲ್ಲಿ, ದೂರುದಾರರ ತಂದೆ ಖಾಜಿ ಉಸ್ಮಾನ್ ಉಮ್ಮರ್ ರವರು  ಸ್ಕೂಟರ ನಂಬ್ರ  KA-01 EZ-6416  ನೇದನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತಿರುವಾಗ ಆಪಾದಿತ ಶಶಿಧರ ಶೆಟ್ಟಿ ರವರು ತನ್ನ ಕಾರು KA-20 MA-1358  ನೇದನ್ನು ಯಾವುದೇ ಮೂನ್ಸೂಚನೆ  ನೀಡದೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ರಾ.ಹೆ 66 ಜಂಕ್ಷನಲ್ಲಿ ಪೂರ್ವ ಬದಿಯ ರಸ್ತೆಯಿಂದ ಪಶ್ಚಿಮ ಬದಿಯ ರಸ್ತೆಗೆ ಚಲಾಯಿಸಿಕೊಂಡು ಸ್ಕೂಟರ್ ಗೆ ಅಡ್ಡ ಬಂದ ಪರಿಣಾಮ ಸ್ಕೂಟರ್ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯಗೊಂಡು ಎನ್ ಆರ್ ಆಚಾರ್ಯ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ  ಪಡೆದು  ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಣಿಪಾಲ  ಕೆ. ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಎಂಬುದಾಗಿ ಕಾಜಿ ಇರ್ಷಾದ್‌  (41) ತಂದೆ: ಕಾಜಿ ಉಸ್ಮಾನ್‌ ಉಮ್ಮರ್‌  ವಾಸ: ಜೆ ಎಂ ರೋಡ್‌ ಕಂಡ್ಲೂರು ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ನಾಗೇಶ್ ಖಾರ್ವಿ (27) ತಂದೆ: ಗೋವಿಂದ ಖಾರ್ವಿ ವಾಸ: ಕಟ್ಟನಮನೆ, ಕೊಡೇರಿ,ಕಿರಿಮಂಜೇಶ್ವರ ಗ್ರಾಮ ಬೈಂದೂರು ಇವರು ದಿನಾಂಕ 11/02/2022 ರಂದು  ಬೆಳಿಗ್ಗೆ 7:30 ಗಂಟೆಗೆ  ಮೀನುಗಾರಿಕೆ ಕೆಲಸ ಮುಗಿಸಿ ಅವರ ಮೋಟಾರು ಸೈಕಲ್ ನಲ್ಲಿ ನಾಗೂರು ಕಡೆಗೆ  ರಾ ಹೆ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಹೋಗುತ್ತಿರುವಾಗ ನಾವುಂದ ಗ್ರಾಮದ ಅರೆಹೊಳೆ ಕ್ರಾಸ್ ಬಳಿಯ ಮೀನಾಕ್ಷಿ ಹೊಟೇಲ್  ಎದುರು ತಲುಪಿದಾಗ KA-04 MC-4503 ನೇ ಓಮಿನಿ ಕಾರು ಚಾಲಕ ನು ಆತನ ಓಮಿನಿ ಕಾರನ್ನು  ಕಿರಿಮಂಜೇಶ್ವರ ಕಡೆಯಿಂದ ಅರೆಹೊಳೆ ಕ್ರಾಸ್ ಕಡೆಗೆ ರಾ ಹೆ 66 ರ ಪೂರ್ವ ಬದಿಯ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ಮುಂದಿನಿಂದ ಹೋಗುತ್ತಿದ್ದ KA-20 EH-7771 ನೇ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ  ಹಾಗೂ ಸಹ ಸವಾರಳು ರಸ್ತೆಗೆ ಬಿದ್ದಿದ್ದು, ಮೋಟಾರು ಸೈಕಲ್ ಸವಾರ ರಾಘವೇಂದ್ರ ರವರಿಗೆ ತಲೆಗೆ ಹೊಟ್ಟೆಗೆ ಕಾಲಿಗೆ ಮತ್ತು ಕೈ ಗೆ ರಕ್ತ ಗಾಯವಾಗಿದ್ದು ಸಹ ಸವಾರಳಾದ ಪಾರ್ವತಿರವರಿಗೆ ಸೊಂಟಕ್ಕೆ ಗುದ್ದಿದ ಒಳನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಪುಷ್ಪ ಮೂಲ್ಯ (47) ಗಂಡ: ವಿಠಲ ಮೂಲ್ಯ ,ವಾಸ: ಹೊಸ್ಮರು ಮನೆ ಶಿವ ಕೃಪಾ,ಹಲಸಿನ ಕಟ್ಟೆ ಪೋಸ್ಟ್, ಪಿಲಾರು ಗ್ರಾಮ ಕಾಪು ತಾಲೂಕು ಇವರ ಗಂಡನಾದ ವಿಠಲ ಮೂಲ್ಯ (52) ಎಂಬವರು ಕೂಲಿ ಕೆಲಸ ಮಾಡುತ್ತಿದ್ದು, ಸದ್ರಿಯವರು ಬಿಪಿ ಖಾಯಿಲೆಯಿಂದ ಬಳಲುತ್ತಿದ್ದು, ಅಲ್ಲದೇ ವೀಪರೀತ ಕುಡಿತದ ಚಟವನ್ನು ಹೊಂದಿದ್ದು, ಇದೇ ವೇದನೆಯಿಂದ ಹಾಗೂ ಬೇರೆ ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11/02/2022 ರಂದು ಬೆಳಿಗ್ಗೆ 06:00 ಗಂಟೆಯಿಂದ ಬೆಳಿಗ್ಗೆ 07:00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಾದ ಪಿಲಾರು ಗ್ರಾಮದ ಹೊಸ್ಮಾರು ಎಂಬಲ್ಲಿರುವ ಮನೆಯ ಚಾವಡಿಯ ಮಾಡಿನ ಜಂತಿಗೆ ಉಲ್ಲಾನ್ ಶಾಲು ಬಿಗಿದು ಇನ್ನೊಂದು ತುದಿಯನ್ನು ಕುತ್ತಿಗೆಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸದ್ರಿಯವರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ, ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2022 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ಪಿರ್ಯಾದಿದಾರರಾಧ ಜಗದೀಶ (34) ತಂದೆ: ಬಸವ ತಿಂಗಳಾಯ ವಾಸ: ಹೊಳೆಕಟ್ಟು ಮನೆ ಶ್ರೀದೇವಿ ಚಿಕ್ಕು ನಿಲಯ ಕುಂಭಾಶಿ ಗ್ರಾಮ ಕುಂದಾಪುರ ಇವರು ದಿನಾಂಕ 11/೦2/022ರಂದು ಬೆಳಗಿನ ಜಾವ ಹೆಮ್ಮಾಡಿಯಿಂದ  ಕುಂಭಾಶಿಗೆ ತನ್ನ ಮೋಟಾರ್ ಸೈಕಲಿನಲ್ಲಿ ರಾಷ್ರೀಯ ಹೆದ್ದಾರಿ 66ರ ಪ್ಲೈ ಓವರ್‌ಮೇಲೆ ಕುಂದಾಪುರ–ಉಡುಪಿ ರಸ್ತೆಯಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ ಸಮಯ 04:30 ಗಂಟೆ ಸುಮಾರಿಗೆ ವಡೇರಹೋಬಳಿ ಗ್ರಾಮದ ನೆಹರು ಮೈದಾನದ ಎದುರುಗಡೆ ತಲುಪುವಾಗ ರಸ್ತೆಯ ತೀರಾ ಬಲಬದಿಯಲ್ಲಿ ಓರ್ವ ವ್ಯಕ್ತಿಯು ದಕ್ಷಿಣಕ್ಕೆ ತಲೆ ಇರುವ ಹಾಗೆ ಕವುಚಿ ಬಿದ್ದುಕೊಂಡಿದ್ದನ್ನು ನೋಡಲಾಗಿ  ಆತನ ಮುಖದ ಭಾಗದಲ್ಲಿ ಹಾಗೂ ಕೈ ಬೆರಳುಗಳಲ್ಲಿ ರಕ್ತಗಾಯವಾಗಿ ರಕ್ತ ಬರುತ್ತಿದ್ದು ಹಾಗೂ ಜೋರಾಗಿ ಉಸಿರಾಡುತ್ತಿದ್ದು ಆತನನ್ನು ಕೂಡಲೇ 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಅಲ್ಲಿಂದ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 11/02/2022ರಂದು ಬೆಳಿಗ್ಗೆ 08:30 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2022 ಕಲಂ 174(ಸಿ) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 12-02-2022 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080