ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 11/02/2022 ರಂದು 13:30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಕೊಡ್ಸನ ಬೇರು ಎಂಬಲ್ಲಿನ ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕಾರು ನಂಬ್ರ  KA-20 N-8149 ನೇ ಕಾರು ಚಾಲಕ ಆರೋಪಿತ  ಕೃಷ್ಣ  ಎಂಬವರು ತಾನು ಚಲಾಯಿಸುತ್ತಿದ್ದ ಚಲಾಯಿಸುತ್ತಿದ್ದ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತನ್ನತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶರತ್‌‌ (32) ತಂದೆ, ರಘುರಾಮ ವಾಸ, ಕಲ್ಮಕ್ಕಿ  ತೊಂಬಟ್ಟು ಮಚ್ಚಟ್ಟು ಗ್ರಾಮ ಹಂಚಿಕಟ್ಟೆ ಅಂಚೆ ಕುಂದಾಪುರ ತಾಲೂಕು ಉಡುಪಿ ಇವರು ಸವಾರಿ ಮಾಡಿಕೊಂಡು ಹೂಗುತ್ತಿದ್ದ ಮೋಟಾರು  ಸೈಕಲ್‌ ನಂಬ್ರ KA-03 HY-1269ಗೆ ಡಿಕ್ಕಿ ಹೊಡದ ಪರಿಣಾಮ  ಮೊಟಾರು ಸೈಕಲ್‌‌ ಸವಾರ  ಪಿರ್ಯಾದಿದಾರರು ಮೊಟಾರು ಸೈಕಲ್‌ ಸಮೇತ ಬಿದ್ದು ಅವರ  ಬಲ ಕಾಲಿನ ಹೆಬ್ಬರಳಿಗೆ ಮೂಳೆ ಮುರಿತದ ಗಾಯ ಮತ್ತು ಬಲ ಮುಂಗೈ ಬಳಿ ರಕ್ತ ಗಾಯ ಮತ್ತು ಬಲ ಭುಜ ಮತ್ತು ಸೊಂಟಕ್ಕೆ ಗುದ್ದಿದ್ದ ಒಳ ನೋವು ಆಗಿ ಕುಂದಾಪುರ ಚಿನ್ಮಯೀ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಘಟನೆ ಬಳಿಕ ಕುಟುಂಬ ಪರಿವಾರದರೊಂದಿಗೆ ಚರ್ಚಿಸಿ ಈ ದೂರು ನೀಡಿರುವುದರಿಂದ ವಿಳಂಭವಾಗಿರುತ್ತದೆ ಈ ಅಪಘಾತಕ್ಕೆ ಮೇಲ್ಕಾಣಿಸಿದ ಕಾರು ಚಾಲಕರ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2022 ಕಲಂ:279,338 ಐ.ಪಿಸಿ ಮತ್ತು ಕಲಂ:134 (a) ಮತ್ತು (bi) ಐಎಮ್‌‌ವಿ ಕಾಯ್ದೆಯಂತೆ ಪ್ರಕರಣನ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸುನೀಲ್ (38)  ತಂದೆ : ದಿ. ಸುಂದರ ವಾಸ : ಚೊಕ್ಕಾಡಿ ಮಹಾಲಿಂಗೇಶ್ವರ  ದೇವಸ್ಥಾನದ ಬಳಿ ಏಣಗುಡ್ಡೆ ಗ್ರಾಮ ಕಟಪಾಡಿ ಕಾಪು ತಾಲೂಕು ಉಡುಪಿ ಇವರ ಮನೆಯ ಹಿಂಭಾಗದಲ್ಲಿ ಇವರ ಅತ್ತೆ ಬೇಬಿಯವರ ಮನೆಯಿದ್ದು, ಅವರ ಮನೆಯಲ್ಲಿ 15-20 ಕೋಳಿಗಳಿದ್ದು, ಈ ಕೋಳಿಗಳು ಬೆಳಗ್ಗೆ ಗೂಡಿನಿಂದ ಬಿಟ್ಟ ಕೂಡಲೇ ಇವರ ಮನೆಯ ಕಂಪೌಂಡ ಹಾರಿ ಮನೆಯ ಜಾಗಕ್ಕೆ ಬಂದು ಅವರು ನೆಟ್ಟಿದ ತರಕಾರಿ ಗಿಡ ಹಾಗೂ ಬೀಜಗಳನ್ನು ಚಲ್ಲಾಪಿಲ್ಲಿ ಮಾಡುತ್ತಿದ್ದು,  ಹಾಗೂ ಮನೆಯ ಸುತ್ತಲಿ ಜಾಗದಲ್ಲಿ ನೆಟ್ಟ ತೆಂಗಿನ ಮರಗಳ ಬುಡದಲ್ಲಿರುವ ಕೆಸರನ್ನು ಕೋಳಿಗಳು ಕಾಲಿನಿಂದ ಕೆದರಿ ಮನೆಯ ಸುತ್ತ ಗಲೀಜು ಮಾಡುತ್ತಿದ್ದು, ಈ ಬಗ್ಗೆ ದಿನಾಂಕ 11/02/2022 ರಂದು  ಮಧ್ಯಾಹ್ನ 2:00 ಗಂಟೆಯ ಸಮಯಕ್ಕೆ ಕೋಳಿಗಳನ್ನು ಜಾಗೃತಿ ಮಾಡುವಂತೆ ಬೇಬಿ ರವರಲ್ಲಿ ತಿಳಿಸಿದ್ದು, ಬಳಿಕ ಸಂಜೆ 4:00 ಗಂಟೆ ಸುಮಾರಿಗೆ ಸುನೀಲ್‌ ರವರ ಮನೆಯಲ್ಲಿ ಮಲಗಿರುವಾಗ ಇವರ ಅತ್ತೆಯ ಮಗ ಭರತನು ಕೂಗಾಡುತ್ತಾ ಇವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಸುನಿಲ್‌ ಇವರನ್ನು ಕರೆದು “ ತಾಯಿಯಲ್ಲಿ  ಏನು ಹೇಳುವುದು, ನನ್ನ ಹತ್ತಿರ ಮಾತನಾಡಿ” ಎಂದು ಹೇಳಿ ಇವರ ಮನೆಯ ಕಂಪೌಂಡ ಮೇಲಿದ್ದ ಹಂಚಿನಿಂದ ಸುನಿಲ್‌ ರವರ ತಲೆಯ ಹಿಂಭಾಗಕ್ಕೆ ಹೊಡೆದ, ಪರಿಣಾಮ ತಲೆಯ ಹಿಂಬದಿ ರಕ್ತಗಾಯವಾಗಿದ್ದು, ಇವರು ಉಡುಪಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2022 ಕಲಂ: 447, 324 ಐಪಿಸಿಯಂತೆ ಪ್ರಕರನ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 12-02-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080