ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 11/01/2023  ರಂದು  ಮಧ್ಯಾಹ್ನ 3:30 ಗಂಟೆಗೆ  ಪಿರ್ಯಾದಿದಾರರಾದ ಪ್ರಭಾಕರ ಶೆಟ್ಟಿ (50), ತಂದೆ: ನರಸಿಂಹ ಶೆಟ್ಟಿ, ವಾಸ: ಪ್ರಥ್ವಿ ನಿಲಯ, ಊಳ್ಳೂರು ಗ್ರಾಮ ಬೈಂದೂರು  ತಾಲೂಕು ಇವರು  ನಾಗೂರು ಪಯಾಜ್ ಸಾಹೇಬರ ಅಂಗಡಿಯಲ್ಲಿ ಚಿಕನ್ ಖರೀದಿಸಲು ನಿಂತುಕೊಂಡಿರುವಾಗ ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿಯ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯ ಪಶ್ಚಿಮ ಅಂಚಿನಲ್ಲಿ ಅಣ್ಣಪ್ಪ ಪೂಜಾರಿ ರವರು ಅವರ KA-20-EC 7882 ನೇ ಮೋಟಾರು ಸೈಕಲ್ ನಲ್ಲಿ ಬಲಬದಿಯ ಇಂಡಿಕೆಟರ್ ಹಾಕಿಕೊಂಡು ಉಪ್ರಳ್ಳಿ ಕಡೆಗೆ ಹೋಗಲು ನಿಲ್ಲಿಸಿ ಕೊಂಡಿರುವಾಗ ಕಂದಾಪುರ ಕಡೆಯಿಂದ ಬೈಂದೂರು ಕಡೆಗೆ KA-20-ET 3908  ನೇ ಮೋಟಾರು ಸೈಕಲ್ ಸವಾರ  ಗಣೇಶ್ ಆಚಾರ್  ಮೋಟಾರು  ಸೈಕಲನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಅಂಚಿನಲ್ಲಿ ನಿಲ್ಲಿಸಿಕೊಂಡಿದ್ದ ಅಣ್ಣಪ್ಪ ಪೂಜಾರಿ ರವರ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಎರಡು  ಮೋಟಾರು ಸೈಕಲ್ ಸವಾರರು  ರಸ್ತೆಗೆ  ಬಿದ್ದಿದ್ದು, ಪಿರ್ಯಾದಿದಾರರು ಹಾಗೂ ಸಾರ್ವಜನಿಕರು ಸೇರಿ ಇಬ್ಬರನ್ನು  ಎತ್ತಿ ಉಪಚರಿಸಿದ್ದು ಅಣ್ಣಪ್ಪ ಪೂಜಾರಿ  ರವರ ತಲೆಗೆ ರಕ್ತಗಾಯವಾಗಿರುತ್ತದೆ. ಆರೋಪಿ ಗಣೇಶ್ ಆಚಾರ್ ರವರಿಗೆ ಎಡ ಗೈ ಮಣಿಗಂಟಿಗೆ ತರಚಿದ ಗಾಯ ಹಾಗೂ ಎಡ ಭುಜ ಹಾಗೂ ಎಡಗಾಲಿಗೆ ಗುದ್ದಿದ ಒಳನೋವು ಉಂಟಾಗಿರುತ್ತದೆ. ತಲೆಗೆ ಗಾಯಗೊಂಡ ಅಣ್ಣಪ್ಪ ಪೂಜಾರಿ ರವರನ್ನು ಚಿಕಿತ್ಸೆಯ  ಬಗ್ಗೆ  ಒಂದು ವಾಹನದಲ್ಲಿ ಕುಂದಾಪುರ  ಚಿನ್ಮಯಿ  ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಯ  ಬಗ್ಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದ ಅಣ್ಣಪ್ಪ ಪೂಜಾರಿಯವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ  8:03 ಗಂಟೆಗೆ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಗಂಗೊಳ್ಳಿ: ದಿನಾಂಕ 11/01/2023 ರಂದು ಪಿರ್ಯಾದಿದಾರರಾದ ಹರೀಶ್ ಪೂಜಾರಿ (30), ತಂದೆ: ದಿ. ಸೂರ ಪೂಜಾರಿ, ವಾಸ: ಬಗ್ವಾಡಿಬೆಟ್ಟು, ನಿರೋಣಿ ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ಬೈಂದೂರಿಗೆ ಹೋಗಲು ಬೈಂದೂರು ತಾಲೂಕು, ಮರವಂತೆ ಗ್ರಾಮದ ನಿರೋಣಿ ಎಂಬಲ್ಲಿ ನಿಂತುಕೊಂಡಿರುವಾಗ  ಶಾಲಾ ಹುಡುಗ ಪ್ರತಾಪ ಎಂಬಾತನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ -66 ಏಕಮುಖ ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ಬೆಳಿಗ್ಗೆ 8:00 ಗಂಟೆಗೆ ನಡೆದುಕೊಂಡು ಮರವಂತೆ ಮನ್ಸೂರ್ ಎಂಬುವವರ ಮನೆಯ ಎದುರುಗಡೆ ಹೋಗುತ್ತಿರುವಾಗ ವಿರುದ್ಧ ದಿಕ್ಕಿನಲ್ಲಿ ನಾವುಂದ ಕಡೆಯಿಂದ ತ್ರಾಸಿ ಕಡೆಗೆ KA-19-EA-4384 ನೇ ಮೋಟಾರ್‌ ಸೈಕಲ್‌ ಸವಾರನಾದ ಕಾರ್ತಿಕ್ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಮೋಟಾರ್‌ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರತಾಪ್ ನಿಗೆ ಢಿಕ್ಕಿ ಹೊಡೆದ ಪರಿಣಾಮ ಪ್ರತಾಪನು ರಸ್ತೆಗೆ ಬಿದ್ದು  ತಲೆಗೆ, ಎಡ ಕಣ್ಣಿನ ಬಳಿ, ಎಡ ಕೈ ಹಾಗೂ ಎರಡೂ ಕಾಲಿನ ಮುಂಗಾಲಿಗೆ ತರಚಿದ ಗಾಯವಾಗಿದ್ದು, ಹಲ್ಲಿಗೆ ತೀವೃ ಸ್ವರೂಪದ ಜಖಂ ಉಂಟಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 12-01-2023 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080